ಮಾಹೇಶ್ವರನ ಜ್ಞಾನಿಸ್ಥಲ - ಸದಾಚಾರ
ಅಷ್ಟಮಿ ನವಮಿ ಎಂಬ ಕಲ್ಪಿತವೇಕೋ ಶರಣಂಗೆ?
ತಪ್ಪಿತ್ತು ಗಣಪದವಿ! ಲಿಂಗಕ್ಕೆ ದೂರ, ಜಂಗಮಕ್ಕೆ ದೂರ!!
ಒಬ್ಬರಿಗಾಳಾಗಿ, ಒಬ್ಬರನೋಲೈಸುವ
ನಿರ್ಬುದ್ಧಿ ಮನುಜರನೇನೆಂಬೆ, ಕೂಡಲಸಂಗಮದೇವಾ?
Transliteration Aṣṭami navami emba kalpitavēkō śaraṇaṅge?
Tappittu gaṇapadavi! Liṅgakke dūra, jaṅgamakke dūra!!
Obbarigāḷāgi, obbaranōlaisuva
nirbud'dhi manujaranēnembe, kūḍalasaṅgamadēvā?
Manuscript
English Translation 2 What business have the Śaraṇās
With due observances
Upon the eighth day or the ninth?
Your rank as Śaraṇās is lost!
You are far removed
From Liṅga and from Jaṅgama !
O Kūḍala Saṅgama Lord,
I call them imbeciles
Who, being one man's servants, wait
Upon another lord!
Translated by: L M A Menezes, S M Angadi
Hindi Translation शरण को अष्टमी, नवमी, की कल्पना क्यों?
गणपद छूट जाता है, लिंग से दूर, जंगम से दूर होता है।
एक का सेवक रहकर दूसरे की सेवा करनेवाले
मूर्ख मनुजों को क्या कहूँ कूडलसंगमदेव?
Translated by: Banakara K Gowdappa
Telugu Translation అష్టమి నవములనుకల్పనలే టికో శరణునకు?
తప్పె గణపదవి! దూరమై పోతి లింగజంగమునకు!
ఒకనికి భటుడై ఒకని సేవించు నిర్బుద్ది మనుజుల
నేమందునయ్యా? కూడల సంగమదేవా!
Translated by: Dr. Badala Ramaiah
Tamil Translation சரணனுக்கு அஷ்டமி, நவமி எனும் கல்பிதம் எதற்கோ?
கணபதவி கிட்டாது, இலிங்கத்திற்கும் தொலைவு
ஒருவருக்கு ஆளாகி, ஒருவரை ஆளும்
அறிவற்ற மனிதர்களை என்னென்பேன்
கூடல சங்கமதேவனே.
Translated by: Smt. Kalyani Venkataraman, Chennai
Marathi Translation
अष्टमी नवमी या कल्पना शरणाला कशाला?
त्यामुळे गणपदवी मिळणार नाही,
लिंगापासून दूर. एकाचा सेवक होऊन,
दुसऱ्याला खूष करणाऱ्या निर्बुध्द मानवाला
काय म्हणू कूडलसंगमदेवा ?
Translated by Shalini Sreeshaila Doddamani
ಶಬ್ದಾರ್ಥಗಳು ಓಲೈಸು = ; ಕಲ್ಪಿತ = ; ಗಣಪದವಿ = ; ನಿರ್ಬುದ್ಧಿ = ;
ಕನ್ನಡ ವ್ಯಾಖ್ಯಾನ ಕೃಷ್ಣಾಷ್ಟಮಿ ಮತ್ತು ರಾಮನವಮಿಗಳ ಪ್ರಾಶಸ್ತ್ಯವನ್ನು ದಿಕ್ಕರಿಸುವುದಕ್ಕಾಗಿ ಈ ವಚನವನ್ನು ಪ್ರಕ್ಷೇಪಿಸಿರುವಂತಿದೆ ರಾಮಕೃಷ್ಣದ್ವೇಷಿಯೊಬ್ಬನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು