ಮಾಹೇಶ್ವರನ ಜ್ಞಾನಿಸ್ಥಲ - ಪಾಪಕರ್ಮ
ಎಲವೊ, ಎಲವೋ ಪಾಪಕರ್ಮವ ಮಾಡಿದವನೇ,
ಎಲವೊ, ಎಲವೋ ಬ್ರಹ್ಮಹತ್ಯವ ಮಾಡಿದವನೇ,
ಒಮ್ಮೆ ʼಶರಣೆʼನ್ನೆಲವೋ.
ಒಮ್ಮೆ ʼಶರಣೆಂದರೆʼ ಪಾಪಕರ್ಮ ಓಡುವವು.
ಸರ್ವಪ್ರಾಯಶ್ಚಿತ್ತಕ್ಕೆ ಹೊನ್ನ ಪರ್ವತಂಗಳೈದವು:
ಓರ್ವಂಗೆ ಶರಣೆನ್ನು, ನಮ್ಮ ಕೂಡಲಸಂಗಮದೇವಂಗೆ!
Transliteration Elavo, elavo pāpakarmava māḍidavanē,
elavo, elavo brahma hatyava māḍidavanē,
om'me ʼśaraṇeʼnnelavō.
Om'me ʼśaraṇendareʼ pāpakarma ōḍuvudu.
Sarvaprāyaścittakke honna parvataṅgaḷaidavu:
Orvaṅge śaraṇennu, nam'ma kūḍalasaṅgamadēvaṅge!
Manuscript
English Translation 2 Man, O man, you who committed the sin,
Man, O man, you who slew the saint,
Do say but once, 'I bow'!...
If you once say, 'I bow',
All sinning flees away!
The golden mountains will not suffice
For atonement of all your sins
Do say, 'I bow' to One
To our Lord Kūḍala Saṅgama!
Translated by: L M A Menezes, S M Angadi
Hindi Translation रे रे पाप कर्म करनेवाले,
रे रे ब्रह्महत्या करनेवाले,
रे एक बार प्रणाम कर
एक बार प्रणाम करने से पाप कर्म भागेंगे ।
सर्व प्रायश्चित्त के लिए स्वर्णपर्वत भी पर्याप्त नहीं-
एक को प्रणाम कर
मम कूडलसंगमदेव को ॥
Translated by: Banakara K Gowdappa
Telugu Translation అరరే, అరరే, పాపకర్మ చేసిన నరుడా,
అరరే, అరరే, బ్రహ్మహత్య చేసిన నరుడా,
శరణని ఒకసారి పలుక పాపకర్మ పరుగిడు;
ఒకసారి శరణను మోయీ;
సకల ప్రాయశ్చిత్తములకు చాలవు మేరుగిరులైన;
ఒకనికి శరణనుమా మా సంగమదేవునకు!
Translated by: Dr. Badala Ramaiah
Tamil Translation ஏய், ஏய், பாவச் செயலைச் செய்தவனே
ஏய், ஏய், அந்தணனைக் கொன்றவனே
ஒருமுறை தஞ்சம் என்பாய்
ஒருமுறை தஞ்சம் எனின் பாவச்செயல் ஓடிவிடும்
ஒருவனுக்குத் தஞ்சம் என்பாய்
நம் கூடலசங்கம தேவனுக்குத் தஞ்சம் என்பாய்
Translated by: Smt. Kalyani Venkataraman, Chennai
Marathi Translation
अरे अरे पापीया, ब्रह्म हत्याऱ्या ये
रे, शरणा शरण ये, एक वेळ
भस्म होती कर्म, शरण संगतीत
त्याहूनि प्रायश्चित, नोहे थोर
पर्वता एवढे अर्पिसी सुवर्ण
प्रायश्चित म्हणून तरी फोल
कूडलसंगमदेवा ! शरण येता क्षणी
पापे जाती जळूनि मुक्त होशी
अर्थ – हे पाप करणाऱ्या मानवा आणि ब्रह्म हत्यारा एकदा तरी तोंडाने शरण म्हण! एकदा मनाने म्हणालास तर तुझे मागील सर्व पाप धुऊन जातील. जर शरणांना शरण आल्यास व त्यांची सत्संगती लाभल्यास हे सकल प्रायश्चितापेक्षा श्रेष्ट दुसरे कोणतेही नाही. पर्वताएवढे सोने देऊनही तुझे पापाचे प्रायश्चित पूर्ण होणार नाही. पण माझ्या कूडलसंगमदेवाच्या शरणांचा सत्संग मात्र तुझ्या पापा- तापाचा नाश करील. आणि तू सुखी-समाधानी व मुक्त होशील.
Translated by Rajendra Jirobe, Published by V B Patil, Hirabaug, Chembur, Mumbai, 1983
अरे, अरे, पापकर्म करणाऱ्यांनो,
अरे, अरे, ब्रह्महत्या करणाऱ्यांनो, एकदा देवाला शरण ये.
एकदा शरण आला तर पापकर्म नष्ट होईल.
प्रायश्चितासाठी सुवर्ण पर्वत दिला तर पापकर्म दूर होणार नाही.
एकदा आमच्या कूडलसंगमदेवाला शरण ये.
Translated by Shalini Sreeshaila Doddamani
Urdu Translation ارے اومعصیت کارو، ضَلالَت کے پرستارو
سنو،جب تم پشیمانی کےعالم میں پکاروگے
کہوگے کون ہے تیرے سوا کوئی نہیں اپنا
تری رحمت کاسایہ ہےپنہ گاہِ گنہ گاراں
توپھرسارے گناہوں سےمعافی مِل ہی جائےگی
جزامیں تم کوکہسارِ طلائی بھی عطاہوں گے
اٹھاؤاپنے اپنے ہاتھ اوردل سے دُعا مانگو
خبربھی ہےتمھیں یہ کوڈلا سنگم تواپنے ہیں
Translated by: Hameed Almas
ಶಬ್ದಾರ್ಥಗಳು ಪಾಪಕರ್ಮ = ; ಪ್ರಾಯಶ್ಚಿತ = ; ಬ್ರಹÀ್ಮಹತ್ಯ = ; ಹೊನ್ನು = ;
ಕನ್ನಡ ವ್ಯಾಖ್ಯಾನ ಮಿಕ್ಕ ಧರ್ಮಗಳಲ್ಲಿ-“ನನ್ನ ಕರ್ಮ ಸವೆದಿಲ್ಲ. ಅದು ಈ ಜನ್ಮದಲ್ಲಿ ಸವೆಯುವುದಿಲ್ಲ. ನಾನು ಪಾಪಿ, ನನಗೆ ಮುಕ್ತಿಯಿಲ್ಲ” ಎಂಬ ಕ್ಲೈಬ್ಯವನ್ನು ಅಪ್ರಜ್ಞಾಪೂರ್ವಕವಾಗಿಯೇ ಪ್ರಜ್ಞೆಯ ಆಳಕ್ಕೆ ಲಂಗರು ಹಾಕಿ ನಿಲ್ಲಿಸುವ ಆತ್ಮಹಿಂಸಾಧೋರಣೆ ದಟ್ಟವಾಗಿತ್ತು. ಆದರೆ ಬಸವಣ್ಣನವರು ಬೋಧಿಸಿದ ಧರ್ಮ ಪಾಮರ ಜನರ ಆ ಪಾಪಿಪ್ರಜ್ಞೆಯನ್ನು ನಿರ್ಮೂಲನ ಮಾಡುವದೇ ಆಗಿತ್ತು-“ ಹಿಂದಣ ಜನನವೇನಾದರಾಗಲಿ ಇಂದಿನ ಭೋಗವು ಕೈಯ ಮೇಲೆ-ಕೂಡಲ ಸಂಗಮದೇವಯ್ಯ ನಿಮ್ಮ ಪೂಜಿಸಿದ ಫಲ ಕೈಯ ಮೇಲೆ (ವಚನ 171) ಎಂದು ಇಹಪರಗಳೆರಡನ್ನೂ ಒಂದುಗೂಡಿಸಿ ಸಾಂಪ್ರತವನ್ನು ದುಡಿಸಿಕೊಳ್ಳ ಹೇಳಿದರು ಬಸವಣ್ಣನವರು.
ಆದುದರಿಂದಲೇ ಅವರು ಮನುಷ್ಯನಿಗೆ ಹಿಂದಿನದನ್ನು ಚಿಂತಿಸಿ ಮುದುಡಿಕೊಳ್ಳದೆ-ಒಂದು ಸಲ ಶಿವನಿಗೆ ಶರಣೆಂದರೆ ಸಾಕು-ಪ್ರಾಯಶ್ಚಿತ್ತಕ್ಕಾಗಿ ಯೆಂದು ಬೆಟ್ಟದಷ್ಟು ಚಿನ್ನವನ್ನು ದಾನಮಾಡಿದರೂ ಕಳೆದುಕೊಳ್ಳಲಾರದಷ್ಟು ಪೂರ್ವ ಪಾಪಗಳಿಂದ ಬಿಡುಗಡೆ ಪಡೆಯುವನೆಂದು ಬಸವಣ್ಣನವರು ಧೈರ್ಯ ಹೇಳಿದರು.
ಬಸವಣ್ಣನವರ ಪ್ರಕಾರ-ಜೀವನು ನಿಷ್ಪಾಪನಾಗುವುದು ಪ್ರಾಯಶ್ಚಿತ್ತಾದಿಗಳಿಂದ ಅಲ್ಲ-ಅಧ್ಯಾತ್ಮಿಕ ನಿಲವು ಒಲವುಗಳಿಂದ. ಹಿರಣ್ಯದಾನಾದಿಗಳಿಂದ-ಮಾಡಿದ ಪಾಪಗಳನ್ನು ಕಳೆದುಕೊಳ್ಳಬಹುದೆಂಬ ಪುರೋಹಿತಷಾಹಿಯ ಆಶ್ವಾಸನೆ-ಸ್ವಾರ್ಥಪ್ರೇರಿತವಾಗಿದ್ದು-ಅದು ಶ್ರೀಸಾಮಾನ್ಯನ ಜೀವನಭರವಸೆಯನ್ನೇ ಬಲಿ ತೆಗೆದುಕೊಳ್ಳುವಂಥದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು