ಮಾಹೇಶ್ವರನ ಜ್ಞಾನಿಸ್ಥಲ - ವಂಚನೆ
ಹಲವು ಕೊಂಬಿಂಗೆ ಹಾಯಬೇಡ:
ಬರುಕಾಯಕ್ಕೆ ನೀಡಬೇಡ,
ಲೋಗರಿಗೆಡೆಗೊಟ್ಟು ಭ್ರಮಿತನಾಗಿರಬೇಡ!
ಆಚಾರವೆಂಬುದು ಹಾವಸೆಗಲ್ಲು:
ಭಾವತಪ್ಪಿದ ಬಳಿಕ ಏಗೆಯ್ದೊಡಾಗದು.
ಅಂಜದಿರು, ಅಳುಕದಿರು, ಪರದೈವಕ್ಕೆರಗದಿರು:
ಕೂಡಲಸಂಗಯ್ಯನ ಕೈಯಲು ಈಸುವುದೆನ್ನ ಭಾರ!
Transliteration Halavu kombiṅge hāyabēḍa:
Baruvāyakke nīḍabēḍa,
lōgarigeḍegoṭṭu bhramitanāgirabēḍa!
Ācāravembudu hāvasegallu:
Bhāvatappida baḷika ēgeydoḍāgadu.
An̄jadiru, aḷukadiru, paradaivakkeragadiru:
Kūḍalasaṅgayyana kaiyalu īsuvudenna bhāra!
Manuscript
English Translation 2 Do not leap on many boughs:
Do not feed the body alone;
Do not, by giving worldlings scope,
Be a crazy fool!
What you call discipline
Is but a slippery stone:
When love is lacking, whatever you do
Is all a waste.
Without fear, without dread,
Bow not to other gods:
It is for me to see you are rewarded
At Kūḍala Saṅga's hands!
Translated by: L M A Menezes, S M Angadi
Hindi Translation अनेक डालियों पर छलांग मत मार,
केवल शरीर को मत खिला ,
लौकिक लोगों को आश्रय देखकर भ्रमित मत हो,
आचार शैवालशिला है ।-
भाव – भ्रष्ट होने पर कुछ भी नहीं किया जा सकता।
भयभीत मत हो परदैव को प्रणाम न कर,
कूडलसंगमदेव के हाथ से वर दिलाना मेरा भार है ॥
Translated by: Banakara K Gowdappa
Telugu Translation కొమ్మ కొమ్మల నెగబడిపోకురా;
చెడెడి తనువును సాక బోకురా;
లోకులకు చనువిచ్చి భ్రాంతిపడబోకురా;
ఆచారమన్నది పాచిబండ భావముచెడ ఫలములేదు.
జంకకురా; గొంకకురా, పర దేవతల మొక్కకురా
సంగని దయ నీకు దక్కించుటే నా భారము
Translated by: Dr. Badala Ramaiah
Tamil Translation பல கொம்புகளின் மீது தாவ வேண்டாம்
நெறியிலிக்கு ஈய வேண்டாம்
உலகினருக்களித்து மருளடைய வேண்டாம்
நன்னெறி என்பது பாசிக்கல் ஆகும்
எண்ணம் தவறின் முன்னே செல்லவியலாது
அஞ்சாதிரு, நடுங்காதிரு, வேற்று தெய்வத்தை
ஏற்காதிரு, கூடலசங்கமதேவனிடம்
சேர்ப்பிப்பது என் பொறுப்பன்றோ!
Translated by: Smt. Kalyani Venkataraman, Chennai
Marathi Translation
मर्कटा प्रमाणे, फांद्या फांद्यावरी
व्यर्थ कोठवरो, नाचतोसि
नाशवंत देहा, प्रसादाच्या मिसे
पोसू नको ऐसे करू ढोंग
करिसी दान धर्म, घालिसी भोजन
देव करी कल्याण, म्हणू नको
भ्रांतीत राहून, दैवत पूजन
वेदाचार म्हणून, दूर राही
शेवाळले धोंडे, दक्षतेने चाल
वारे घसरशिल, सावधान !
सदाचार नोहे, वाटे तैसा सोपा
सोड खटाटोपा, देवतांच्या
राही तू निर्भय, करितो उपाय
संगा शरणा जाय, पुरे हेचि
कूडलसंगमदेवा ! एक सर्वाधार
मजवरी दे भार, तारी तोचि
अर्थ- मर्कटाने चेष्टा केल्यागत साधनेच्या मार्गाने जाणाऱ्यांनी करू नये. नाशवान शरीराच्या पोषणार्थ प्रसादाच्या मिषाने (निमित्ताने ) अन्न भक्षण करु नये. साधकाने भ्रांतीत पडून देवी देवतापूजनाच्या खटा-टोपात पडू नये. कारण सदाचार हा शेवटल्या घोड्यावरुन जाण्याप्रमाणे कठिण तारेवरील कसरत होय. जागृत न राहून चालत त्यावरून घसरुन पडल्यास जन्मात कुणी त्राता उरणार नाही. म्हणून एकोदेव उपासक बना. ईश्वर चरणी शरण ये. अशांना माझ्या कूडल- संगमदेवाच्या (परशिवाच्या) साहाय्याने मी तुला भवपार करीन.
Translated by Rajendra Jirobe, Published by V B Patil, Hirabaug, Chembur, Mumbai, 1983
अनेक फांद्यावर उड्या मारु नको
फक्त देह इच्छेची तृप्ती करु नको.
अन्य देव पूजेच्या भ्रमात राहू नको,
आचाररुपी शेवाळलेल्या दगडावरुन घरसला तर
सावरण्याचा दुसरा उपाय नाही.
भिऊ नको, घाबरु नको, अन्य देवाला शरण जाऊ नको.
कूडलसंगमदेवाच्या हातून इच्छापूर्ती करण्याची जबाबदारी माझी.
Translated by Shalini Sreeshaila Doddamani
ಶಬ್ದಾರ್ಥಗಳು ಅಂಜು = ಹೆದರು, ಭಯಪಡು; ಅಳುಕು = ಹೆದರಿಕೆ; ಈಸು = ; ಎರಗು = ; ಏಗೆಯ್ಧು = ; ಬರುಕಾಯ = ; ಭಾವ = ; ಭ್ರಮಿತ = ; ಲೋಗರು = ; ಹಾವಸೆ = ;
ಕನ್ನಡ ವ್ಯಾಖ್ಯಾನ ಬಸವಣ್ಣನವರು ಸಾಧಕನಿಗೆ ಇಷ್ಟಾರ್ಥಗಳನ್ನು ಶಿವನಿಂದ ತಾವಾಗಿ ಈಸಿಕೊಡುವುದಾಗಿ ಅಭಯಕೊಡುತ್ತ-ಅದಕ್ಕೆ ಮೂರು ಷರತ್ತುಗಳನ್ನು ಹಾಕಿರುವರು ಈ ವಚನದಲ್ಲಿ : (1) ಕೊಂಬೆಯಿಂದ ಕೊಂಬೆಗೆ ಹಾರುವ ಕೋತಿಯಂತೆ ಚಂಚಲಚಿತ್ತನಾಗಿರಬೇಡ, (2) ಅಂಗದ ಮೇಲೆ ಲಿಂಗವಿಲ್ಲದೆ ಬರೀ ದೇಹವಾದ ಭವಿಗೆ ಊಟ ನೀಡಬೇಡ. (3) ಪಾಮರರಿಗೆ ತಂಗಲು ಮನೆಯಲ್ಲಿ ಜಾಗ ಕೊಡಬೇಡ ಎಂದು. ಈ ಆಚಾರಗಳನ್ನು ನಡೆಸುವುದು ಪಾಚಿಹತ್ತಿದ ಕಲ್ಲಿನ ಮೇಲೆ ನಡೆಯುವಷ್ಟು ಕಷ್ಟವೆನ್ನುತ್ತ-ಆದರೂ ಅವನ್ನು ನಡೆಸುವಲ್ಲಿ ಸದಾ ಎಚ್ಚರವಾಗಿರಬೇಕೆಂದೂ, ಇಲ್ಲದಿದ್ದರೆ ಮಾಡಿದ ಮತ್ತೆಲ್ಲ ಪ್ರಶಸ್ತ ಕಾರ್ಯವೂ ವ್ಯರ್ಥವೆಂದು ಪರಿಚ್ಛೇದಿಸಲಾಗಿದೆ.
ಈ ವಚನದ ಧಾಟಿ ಪೂರ್ವಪಕ್ಷದಲ್ಲಿರುವ ವೈದಿಕರ ಅಸ್ಪೃಶ್ಯತಾಚರಣೆಗಿಂತಲೂ ಹೆಚ್ಚು ಅವಹೇಳನಕಾರಿಯಾಗಿದೆ.
ಹರಿಹರನ ಬಸವರಾಜದೇವರ ರಗಳೆ(ಸ್ಥಳ-9)ಯ ಪ್ರಕಾರ-ಲಿಂಗವಂತ ವೇಷಧಾರಿಗಳಾದ(ನಿಜಲಿಂಗ)ಚಿಕ್ಕ ಮುಂತಾದ ಬಂದಿಕಾರರು ಬಸವಣ್ಣನವರ ಮನೆಗೆ ಅವರನ್ನು ಸೆರೆಹಿಡಿಯಲು ಬಂದಾಗ ಆ ಬಂದವರು ಭವಿಗಳೆಂಬುದನ್ನು ತಿಳಿದ ಮೇಲೂ ಅವರಿಗೆಲ್ಲಾ ಬಸವಣ್ಣನವರು ವಾತ್ಸಲ್ಯದಿಂದಲೇ ಊಟ ಉಪಚಾರಗಳನ್ನು ಮಾಡಿಸಿದ ವೃತ್ತಾಂತ ಪ್ರಸಿದ್ಧವೇ ಇದೆ. ಆ ಬಂದಿಕಾರ ಭವಿಗಳು ಕಟ್ಟಿದ ಬದನೆಕಾಯಿಯು ಲಿಂಗವಾಯಿತೆಂಬ ಪವಾಡವು-ಬಸವಣ್ಣನವರು ಎಲ್ಲ ಜಾತಿಯವರನ್ನೂ ಪ್ರೀತಿಯಿಂದಲೇ ನಡೆಸಿಕೊಂಡರೆಂಬ ವಾಸ್ತವಾಂಶವನ್ನು ಮಸುಕು ಮಾಡಲಾರದು.
ಆದರೂ ಇಂಥ ಭವಿವಿದ್ವೇಷಕ ವಚನಗಳನ್ನು ಬರೆದ ಜಾತಿವಾದಿಗಳು-ನಿರ್ಲಜ್ಜೆಯಿಂದ ಆ ವಚನಗಳು ಬಸವಣ್ಣನವರದೆಂಬಂತೆ ಕೂಡಲಸಂಗಮಾಂಕಿತ ಸೇರಿಸಿದರು.
ವಿ : 212ನೇ ವಚನದ ಹಾವಸೆಗಲ್ಲಿನ ಪ್ರತಿಮೆಯನ್ನು ಇಲ್ಲಿ ಬಳಸಿಕೊಂಡಿರುವುದನ್ನೂ ಗಮನಿಸಿ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು