•  
  •  
  •  
  •  
Index   ವಚನ - 623    Search  
 
ಮಾಹೇಶ್ವರನ ಜ್ಞಾನಿಸ್ಥಲ - ಪುರಾಣ
ಎಚ್ಚು ವಾಲಿಯ ಕೊಂದ, ಕಟ್ಟಿದನು ಶರಧಿಯನು; ಹತ್ತು ತಲೆಯ ರಾವಣನ ಒಂದೆ ಅಂಬಿನಲಿ ಮಡುಹಿದ; ಛಲದಿಂದ ಲಂಕಾದ್ವೀಪವ ನೆಲವಣ್ಣವ ಮಾಡಿದ, ಕಲಿ ವಿಭೀಷಣಂಗೆ ಪಟ್ಟವ ಕಟ್ಟಿದ: ರಾಮನ ತೋರೌ! ಮಾಯದ ಸಂಸಾರವ ನಚ್ಚಿ, ವಾಯಕ್ಕೆ ಕೆಟ್ಟು ಬರುದೊರೆವೊಗಬೇಡ, ಕರ್ತು ಕೂಡಲಸಂಗಯ್ಯಂಗೆ ಶರಣೆನ್ನಿರಯ್ಯಾ!
Transliteration Eccu vāliya konda, kaṭṭidanu śaradhiyanu; hattu taleya rāvaḷana onde ambinalli maḍida; chaladinda laṅkādvīpava nelavaṇṇava māḍida, kali vibhīṣaṇaṅge paṭṭava kaṭṭida: Rāmana tōrau! Māyada sansārava nacci, vāyakke keṭṭu barudorevogabēḍa, kartu kūḍalasaṅgayyaṅge śaraṇennirayyā!
Manuscript
English Translation 2 Show me the Rāma Who shot Vāli to death, Spanned the sea, killed Ten-headed Rāvaṇa With a single shaft; Razed Laṅkā isle to the ground With stubborn will, and placed The crown on Vibhūṣaṇa's head... Doting upon this illusive world, Do not be lost in vain, nor step Into a dried-up stream. Say Hail to the Maker, Lord Kūḍala Saṅgama! Translated by: L M A Menezes, S M Angadi
Hindi Translation उस राम को दिखाओ जिसने बालि को बाण से मारा, समुद्र पर पुल बाँधा, दस सिरवाले रावण को एक ही बाण से मारा, छल से लंकाद्वीप को मटियामेट किया, वीर विभीषण को राजगद्दी पर बिठाया । इस मायावी संसार पर भरोसा करते हुए व्यर्थ नष्ट होकर शुष्क नदी में प्रवेश मत कर; कर्ता कूडलसंगमेश की शरण में जाओ ॥ Translated by: Banakara K Gowdappa
Telugu Translation మేటి వాలిని చంపి మించు వారధి గట్టి పది తలలవానిని బాణముల గొట్టి చలమున లంకాద్వీపమును నేలమట్టము చేసి వీర వి;óషణునికి పట్టముగట్టిన రాముడేడయ్యా? మాయా సంసారమును నమ్మి మాయలోబడి పలువర చెడబొగడకురా; సంగని చేరి శరణనురా! Translated by: Dr. Badala Ramaiah
Tamil Translation அம்பு விட்டு வாலியைக் கொன்றனன், அம்பினால் கட்டினன் பத்துத்தலை இராவணனை ஒரே அம்பில் வீழ்த்தினன் உறுதியுடன் இலங்கைத் தீவைத் தரைமட்ட மாக்கினன் வீரன் விபீஷணனுக்குப் பட்டம் கட்டிய இராமனைக் காட்டுவாய்! மாய வாழ்வை நம்பி, வரிதே கெட்டு பயனற்றுச் செல்லாதிருப்பாய் உடையன் கூடல சங்கமனுக்குத் தஞ்சம் என்பீரையனே Translated by: Smt. Kalyani Venkataraman, Chennai
Marathi Translation कपट बाणाद्वारे, बालीसी मारिले सेतू बंधन केले, सागरात एके बाणे केले, नष्ट लंकाधिश राज्य विभिषणास देता झाला लंका द्विप सारे भूईसपाट केले मायामय झाले, जीवन ते दाखवाल काय? ऐसिया रामास उद्धराया खास, उणा पडे मायामय संसार, जाणोनिया पूर्ण धरा शरण चरण, उद्धारार्थ कर्ता धर्ता सर्व, कूडलसंगमदेव मायामय स्वभाव, पालटील अर्थ - ज्या रामाने कपटरूपी बाणाने बालीस मारले, समुद्रावर सेतू बांधला, लंकाधिशास बाणाने मारून लंका द्विप भुईसपाट केले आणि विभिषणाल पट्टाधिष्ठित केले अशा रामाने कोणते उद्धार कार्य केले हे दाखवाल काय? झाडामागे लपून कपट व कूतंत्राने वालीचा प्राण घेतला कपटी रामाला पण मरण पत्कारावे लागले. म्हणून मायामय संसाराची अभिलाषा ठेऊन आपले जीवन नष्ट नका करून घेऊ कारस्थानी देवांच्या नादी न लागता एकवेळ माझ्या कूडलसंगम देवास (परशिमास) शरण या. Translated by Rajendra Jirobe, Published by V B Patil, Hirabaug, Chembur, Mumbai, 1983 बाणाने वालीला मारले, सागरावर पुल बांधला. दशानन रावणाला एकाच बाणाने मारले. छलबुध्दीने लंकाद्विप नष्ट केले. घरभेदी बिभिषणाला गादीवर बसविणारा राम. संसारातील मायेवर विश्वास ठेवून, जीवन व्यर्थघालवू नको. कर्ता कूडलसंगमदेवाला शरण जावे. Translated by Shalini Sreeshaila Doddamani
ಶಬ್ದಾರ್ಥಗಳು ಅಂಬು = ನೀರು; ಎಚ್ಚು = ; ಕರ್ತು = ; ಕಲಿ = ; ನಚ್ಚಿ = ನಂಬಿ; ನೆಲವಣ್ಣ = ; ಮಡುಹಿ = ; ವಾಯು = ಗಾಳಿ; ಶರಧಿ = ;
ಕನ್ನಡ ವ್ಯಾಖ್ಯಾನ ಸಾಮಾನ್ಯರ ಮಾತಿರಲಿ -ರಾಮನಂಥ ಅವತಾರಪುರುಷರ ಪಾಡೂ ಈ ಸಂಸಾರಾರಣ್ಯದಲ್ಲಿ ಶೋಚನೀಯವಾಗಿರುವುದೆನ್ನುತ್ತ-ವಾಲಿಯನ್ನು ಕೊಂದು, ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ, ಹತ್ತು ತಲೆಯ ರಾವಣನನ್ನು ಒಂದೇ ಬಾಣದಿಂದ ನೆಲಕ್ಕುರುಳಿಸಿ, ಲಂಕಾದ್ವೀಪವನ್ನೆಲ್ಲ ಶರಣಾಗತಿಹೊಗಿಸಿಕೊಂಡು, ವಿಭೀಷಣನಿಗೆ ಪಟ್ಟಕಟ್ಟಿ ದಿಗ್ವಿಜೇತನಾದ ರಾಮನೇನಾದ ? ಸೆರೆಬಿಡಿಸಿಕೊಂಡು ಕರೆದೊಯ್ದ ಆ ಪತಿವ್ರತಾ ಸತಿಯೊಡನೆ ಅವನು ಸುಖವಾಗಿ ಬಾಳಿದನೆ ? ಆ ಉತ್ತರ ರಾಮಾಯಣವಿನ್ನೊಂದು ಕಣ್ಣೀರಿನ ಕಥೆ. ಇದನ್ನೆಲ್ಲ ಪ್ರಸ್ತಾಪಿಸುತ್ತ ಬಸವಣ್ಣನವರು ಸಂಸಾರದ ಸ್ಥಿತಿಗತಿಯನ್ನು ಅತಿಶಯಿಸುವುದು ಬುದ್ಧಿವಂತಿಕೆಯಲ್ಲವೆನ್ನುತ್ತಿರುವರು. ಇಡಿಯಾಗಿ ಭಾರತೀಯರ ಅಭಿಪ್ರಾಯದಲ್ಲಿ ಸಂಸಾರವೆಂದರೆ ಒಂದು ಕುಟುಂಬಜೀವನವಲ್ಲ –ಕ್ಷಣಭಂಗುರವಾದ ಈ ವ್ಯವಸ್ಥೆಯೆಂದರ್ಥ. ಈ ವಚನದ ಪ್ರಕಾರ-ಬಸವಣ್ಣನವರಿಗೆ ರಾಮಾಯಣದ ಬಗ್ಗೆ ಗಂಭೀರವಾದ ಭಾವನೆಯಿರುವುದನ್ನು ಅವರ ಅನುಯಾಯಿಗಳು ಗಮನಿಸಬೇಕು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು