•  
  •  
  •  
  •  
Index   ವಚನ - 626    Search  
 
ಮಾಹೇಶ್ವರನ ಜ್ಞಾನಿಸ್ಥಲ - ಶರಣರ ಸಂಗ
ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿ, ಆಕಳ ಹಾಲನೆರೆದು, ಜೇನುತುಪ್ಪವ ಹೊಯ್ದರೆ, ಸಿಹಿಯಾಗಬಲ್ಲುದೆ, ಕಹಿಯಹುದಲ್ಲದೆ? ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು, ಕೂಡಲಸಂಗಮದೇವಾ.
Transliteration Bēvina bīja bitti, bellada kaṭṭeya kaṭṭi, ākaḷa hālaneredu, tārakava hoydare, sihiyāgaballude, kahiyahudallade? Śivabhaktaralladavara kūḍe nuḍiyalāgadu, kūḍalasaṅgamadēvā.
Manuscript
Music Courtesy: Provided to YouTube by [Simca] Sangeeth Sagar Singer: Lavanya Dinesh, Vachana Chandana ℗ 2000 Sagar Music Released on: 2000-12-21
English Translation 2 If you sow a seed of neem And make it a bank of jaggery, Pour honey and cow's milk, Will it from bitter become sweet? One must not speak With, such are not Śiva's devotees, O Lord Kūḍala Saṅgama! Translated by: L M A Menezes, S M Angadi
Hindi Translation नीम का बीज बोकर गुड की क्यारी बनाकर गोक्षीर और मधु से सींचने से वह कडुआ ना तो मीठा होगा? शिवभक्ति हीनों से बोलना नहीं चाहिए कूडलसंगमदेव ॥ Translated by: Banakara K Gowdappa
Telugu Translation కర్త నెఱుగనివాడు విప్రుడై ననేమి? చతుర్వేదిjైున నేమి? కూటికై జగదిచ్ఛనే పలికి ప్రవర్తించునయ్యా! భవి వండువంటకము దెచ్చి లింగమున కల్పించు కష్టాత్ముల జూచిన నా మనసు సిగ్గగునయ్యా! సంగని శరణుల ప్రసాదమంది అన్య మాచరింపగ తప్పయ్యె సూకరిని శుచిర్భూత ప్రాణి యన్నట్లేయగు. Translated by: Dr. Badala Ramaiah
Tamil Translation வேம்பின் விதையை விதைத்து, வெல்லப்பாத்தியைக் கட்டி பசுக்களின் பாலை இறைத்து, தேனைச் சேர்ப்பின் கசக்காமல் இனிக்கவல்லதோ? சிவபக்தரல்லாதாருடன் பேசுதல் கூடாது கூடலசங்கமதேவனே Translated by: Smt. Kalyani Venkataraman, Chennai
Marathi Translation कडूनिंबाचे बी पेरुन, गुळाचा चबुतरा घातला. गायीचे दूध, मधाचे सिंचन त्याला केले. ते काय गोड होईल? कडूपणा नष्ट होईल? सद्भक्ताविना कोणा बरोबरही बसून अनुभाव करता येत नाही कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಹೊಯ್ಧುಡೆ = ;
ಕನ್ನಡ ವ್ಯಾಖ್ಯಾನ ಶಿವಭಕ್ತರಾಗಲೊಲ್ಲದವರ ಕೂಡ ವಾದ ಮಾಡುವುದನ್ನು ಬಸವಣ್ಣನವರು ನಿಷ್ಪ್ರಯೋಜಕವೆಂದು ಭಾವಿಸಿದ್ದರು. ಅವರೊಬ್ಬ ಮಹಾನ್ ಮತಾಚಾರ್ಯರೇ ಆದರೂ ಮಿಕ್ಕ ಮತಾಚಾರ್ಯರಂತೆ ಭಿನ್ನ ಮತೀಯರೊಡನೆ ಖಂಡನಾತ್ಮಕವಾಗಿ ಮಾತನ್ನು ಮಚಾಯಿಸುವ ಹವ್ಯಾಸ ಅವರದಲ್ಲ. ಬಸವಣ್ಣನವರು ಮೊದಮೊದಲಿಗೆ ಮೀಮಾಂಸಕ(ಮುಂತಾದವ)ರೊಡನೆ ವಾದ ಮಾಡಿದ್ದಕ್ಕೆ ಸಾಕ್ಷಿ ಅವರ ವಚನ (531, 747)ಗಳಲ್ಲಿದೆಯಾದರೂ-ಆ ವಾದಕಾಂಡವನ್ನು ಮುಂದುವರಿಸಲು ಅವರಿಗೆ ಆಸಕ್ತಿಯಿರಲಿಲ್ಲ (ನೋಡಿ : ವಚನ 447,578). ಅವರ ಮಾರ್ಗ ಖಂಡನಮಂಡನಾತ್ಮಕವಾದುದಾಗಿರದೆ ಅನುಭಾವಿಕ ಜೀವನಾತ್ಮಕವಾದುದಾಗಿತ್ತು. ಆದುದರಿಂದಲೇ ಅವರು ಮಾತನ್ನು ತಮ್ಮ ಬೋಧನೆಯ ಮಾಧ್ಯಮ ಮಾಡಿಕೊಳ್ಳದೆ-ಜೀವಿಸಿ ಪ್ರಭಾವಿಸುವುದನ್ನು ಮಾಧ್ಯಮ ಮಾಡಿಕೊಂಡಿದ್ದರು. ಅವರ ಕ್ಷೇತ್ರ-ವೇದಿಕೆಯಲ್ಲ, ಆಯುಧ-ನಾಲಗೆಯಲ್ಲ, ಜಯ-ಇತರರ ಬಾಯನ್ನು ಮುಚ್ಚಿಸುವುದಲ್ಲ. ಆದುದರಿಂದಲೇ ಅವರು ವಿಪರೀತವಾದಿಗಳೊಡನೆ ವಾದಿಸಬಾರದೆಂದು ತಮ್ಮ ಶಿಷ್ಯವರ್ಗಕ್ಕೆ ಬುದ್ಧಿ ಹೇಳುತ್ತಿರುವರು. ಬೇವಿನ ಬೀಜವನ್ನು ಮಾವಿನ ಮರವಾಗಿ ಬೆಳೆಸುವೆನೆಂಬುದು-ಆ ಮೂಲಕ ಬೆಲ್ಲ ಹಾಲು ಜೇನುತುಪ್ಪವನ್ನು ವ್ಯಯಿಸುವುದು ಹುಂಬತನವೆಂಬುದು ಅವರ ಅಭಿಪ್ರಾಯ. ಇದೇ ಸಂದರ್ಭದಲ್ಲಿ ಸ್ಮರಿಸಬೇಕಾದ ಒಂದು ಎಚ್ಚರಿಕೆಯ ಮಾತೆಂದರೆ-ಕೆಲವು ಮತಾಚಾರ್ಯರಂತೆ ಬಸವಣ್ಣನವರು ಸಮಾಜದ ಯಾವ ಒಂದು ನಿಮ್ನವರ್ಗದವರನ್ನೂ ಅಭವ್ಯರೆಂದಾಗಲಿ ನಿತ್ಯನಾರಕಿಗಳೆಂದಾಗಲಿ ತಿರಸ್ಕರಿಸಲಿಲ್ಲ. ಅವರ ಪ್ರಕಾರ ಎಲ್ಲರೂ ಭವ್ಯರೇ, ಎಲ್ಲರೂ ಮುಕ್ತಿಯೋಗ್ಯರೇ, ಎಲ್ಲರೂ ದಿವ್ಯಜೀವನವನ್ನು ನಡೆಸಬಲ್ಲ ಅಧಿಕಾರದವರೇ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು