ಮಾಹೇಶ್ವರನ ಜ್ಞಾನಿಸ್ಥಲ - ವಂಚನೆ
ಕರ್ತನನರಿಯದವನು ವಿಪ್ರನಾದರೇನು? ಚತುರ್ವೇದಿಯಾದರೇನು?
ಭುಕ್ತಿಕಾರಣ ಲೋಕದ ಇಚ್ಛೆಗೆ ನುಡಿದು ನಡೆವರಯ್ಯಾ!
ಭವಿ ಮಾಡಿದ ಪಾಕವ ತಂದು, ಲಿಂಗಕ್ಕರ್ಪಿಸುವ ಕಷ್ಟರ ಕಂಡು
ನಾಚಿತ್ತೆನ್ನ ಮನ!
ಕೂಡಲಸಂಗನ ಶರಣರ ಒಕ್ಕುದ ಕೊಂಡು
ಅನ್ಯವನಾಚರಿಸಿದೊಡೆ ತಪ್ಪದು-
ಸೂಕರನ ಶುಚಿರ್ಭೂತತೆಯ ಪ್ರಾಣಿಯಂತೆ!
Transliteration Kartananariyadavanu vipranādarēnu? Caturvēdiyādarēnu?
Bhuktikāraṇa lōkada icchege nuḍidu naḍevarayyā!
Bhāvimāḍida pākava tandu, liṅgakkarpisuva kaṣṭa kaṇḍu
nācittenna mana!
Kūḍalasaṅgana śaraṇara okkuda koṇḍu
an'yavanācarisidoḍe tappadu-
sūkarana śucirbhūtateya prāṇiyante!
Manuscript
English Translation 2 What if he be a priest or know the four Vēdas
If he know not his Maker?
They act and speak to the people's tune
For their enjoyment's sake
My mind is ashamed to see
The wretch who offers to Liṅga
The food a worldiling cooked!
If you receive the offerings
Of Kūḍala Saṅga 's Śaraṇās
And serve them to another one,
It's, surely, as if you made
A hog into a cleanly beast!
Translated by: L M A Menezes, S M Angadi
Hindi Translation कर्तार को नहीं जाननेवाला
विप्र हो तो क्या या चतुर्वेदी?
भक्त्यर्थ लोक के इच्छानुसार
बोलते हैं और आचरण करते हैं ।
भवि का पकाया भोजन लाकर
लिंगार्पित करनेवाले दुष्टों को देख
मेरा मन लज्जित होता है ।
कूडलसंगमेश के शरणों का प्रसाद पाकर
अन्यथा आचरण करो, तो
वह सूकर को स्वच्छ करने के समान है ॥
Translated by: Banakara K Gowdappa
Telugu Translation కుడిచి కట్టుటలో కట్టుచెడె నందురు;
ఇచ్చి పుచ్చుకొనుటలో కులము నెంతురు;
భక్తులను టెట్లయ్యా? వారిని యుక్తులను టెట్లయ్యా?
సంగా వినవయ్యా ముట్టుత శుచిజలముల మునిగినట్లయ్యెనయ్యా!
Translated by: Dr. Badala Ramaiah
Tamil Translation கடவுளையறியாதவன், வேதியனாயினென்ன
நான் மறையை உணர்ந்தவனாயினென்ன
உணவிற்காக பிறர்தம் விருப்பத்திற்கு
ஏற்பக் கூறுவர் ஐயனே, நெறியிலி செய்த
உணவைத் தந்து, இலிங்கத்திற்கு ஈயும்
கீழோரைக் கண்டு அடியாரின் திருவமுதைப் பெற்று
மற்றதை ஏற்பின் பன்றியின் அழுக்கில்
முகம் விட்டதனையதாம் ஐயனே
Translated by: Smt. Kalyani Venkataraman, Chennai
Marathi Translation
कर्त्याला न जाणणारे विप्र असो वा चतुर्वेदी असो ?
पोटासाठी लोक इच्छेनुसार बोलतील आणि करतील.
संसारीने शिजविलेले अन्न लिंगार्पण
करताना पाहून माझे मन लाजले.
कूडलसंगाच्या शरणाचा शेष प्रसाद
घेऊन अन्य आचरण करणे
डुकराला धुवून शूचिर्भूत करण्यासारखे आहे.
Translated by Shalini Sreeshaila Doddamani
ಶಬ್ದಾರ್ಥಗಳು ಅರ್ಪಿಸು = ಸಮರ್ಪಿಸು; ಒಕ್ಕುದ = ; ಕರ್ತ = ; ಚತುರ್ವೇದಿ = ; ಪಾಕ = ; ಭವಿ = ; ಭುಕ್ತಿ = ; ವಿಪ್ರ = ; ಶುಚಿರ್ಭೂತ = ; ಸೂಕರ = ;
ಕನ್ನಡ ವ್ಯಾಖ್ಯಾನ ಈ ವಚನದಲ್ಲಿ ಮೂರು ಉಕ್ತಿಗಳಿವೆ :
(1) ಶಿವಜ್ಞಾನ(ಲಿಂಗಧಾರಣ)ವಿಲ್ಲದವನು ಜಾತಿಯಲ್ಲಿ ಬ್ರಾಹ್ಮಣನಾಗಿ ಹುಟ್ಟಿದ್ದರೇನು, ನಾಲ್ಕೂ ವೇದಗಳನ್ನು ವಾಚೋವಿಧೇಯ ಮಾಡಿಕೊಂಡಿದ್ದರೇನು-ಅವನು ಹೊಟ್ಟೆಪಾಡಿಗಾಗಿ ಸಿಕ್ಕಿದವರನ್ನು ಅನುಸರಿಸಲು ಸಿದ್ಧವಾಗಿರುವನು-ಇದು ಒಂದನೇ ಉಕ್ತಿ.
(2) ಭವಿಗಳು ಮಾಡಿದ ಅಡಿಗೆಯನ್ನು ಲಿಂಗಕ್ಕೆ ಅರ್ಪಿಸುವ ತುಚ್ಛರನ್ನು ಕಂಡು ನನಗೆ ನಾಚಿಕೆಯಾಗಿದೆ-ಇದು ಎರಡನೇ ಉಕ್ತಿ.
(3) ಶಿವಶರಣರು ಉಂಡು ಚೆಲ್ಲಿದ್ದನ್ನು ಒಮ್ಮೆ ಸ್ವೀಕರಿಸಿದ ಮೇಲೆ ಅನ್ಯವೇನನ್ನೂ ಮುಟ್ಟಲಾಗದು. ಮುಟ್ಟಿದ್ದೇ ಆದರೆ-ಮೈತೊಳೆಸಿಕೊಂಡ ಹಂದಿ ಮರಳಿ ಹೇಸಿಗೆಯಲ್ಲಿ ಮುಸುಡಿಯೂರಿದಂತಾಗುವುದು-ಇದು ಮೂರನೇ ಉಕ್ತಿ.
ಈ ಮೂರು ಉಕ್ತಿಗಳಲ್ಲಿ ಮೊದಲ ಮತ್ತು ಕೊನೆಯ ಉಕ್ತಿಗಳನ್ನು ಕುರಿತುದೇ ಆಗಿದೆ 607ನೇ ವಚನ. ಅದಕ್ಕೆ ಎರಡನೇ ಉಕ್ತಿಯೊಂದನ್ನು ಸೇರಿಸಿ ಈ 628ನೇ ವಚನ ರೂಪಗೊಂಡಿದೆ.
ಇದು ಬಸವಣ್ಣನವರ ನಿಜವಚನವಲ್ಲ. ಪ್ರಕ್ಷೇಪಕಾರರು ಮೂಲಕರ್ತೃವಿನ ಕೆಲವು ಪ್ರಿಯವಾದ ಪದಗಳನ್ನು ಮುಂದೆ ನುಗ್ಗಿಸಿ -ಹಿಂದೆ ತಮ್ಮ ಕಳ್ಳಮಾಲನ್ನು ಸಾಗಿಸುವುದು ಪ್ರಸಿದ್ಧವೇ ಇದೆ. ಕರ್ತ-ವಿಪ್ರ-ಚತುರ್ವೇದಿ-ಕಷ್ಟರು ಮುಂತಾದುವು ಬಸವಣ್ಣನವರ(ಮರಳಿ ಮರಳಿ ಬಳಸುವ) ಪದಗಳೇ ಆಗಿವೆ-ಆದರೆ ಇಡಿಯಾಗಿ ರಚನೆ ಅವರದಲ್ಲ.
ಈ ವಚನದಲ್ಲಿ ಮೂರು ಉಕ್ತಿಗಳಿವೆ :

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು