•  
  •  
  •  
  •  
Index   ವಚನ - 629    Search  
 
ಮಾಹೇಶ್ವರನ ಜ್ಞಾನಿಸ್ಥಲ - ನಿರಹಂಕಾರ
ಭಕ್ತರನಲ್ಲದೆ ಒಲ್ಲೆನೆಂದೆಂಬಿರಿ: ಭಕ್ತರಿಗಲ್ಲದೆ ಕೈಯಾನೆವೆಂಬಿರಿದೇನ ಮಾಡುವಿರಿ? ಎಲ್ಲಿಗೊಯ್ವಿರಿ? ಪಾವನವಾದುದನು ಲಿಂಗಕೆ ಮಾಡುವುದೆ ಆಚಾರ, ವಿಷಯಕ್ಕೆ ಇಕ್ಕಿ, ಅಸುಗತಿಗಿಳಿಯದಿರಿ, ಕೂಡಲಸಂಗನ ಶರಣರ ಒಡವೆಯ!
Transliteration Bhaktarallade ollenendembiri: Bhaktarigallade kaiyānevembiridēna māḍuviri? Elligoyviri? Pāvanavādudanu liṅgakke māḍuve ācāra, viṣayakke ikki, asugatigiḷiyadiri, kūḍalasaṅgana śaraṇara oḍaveya!
Manuscript
English Translation 2 You say do not love But devotees; You say you do not beg Except from devotees; But what is it you do? Where do you take them to? That is right discipline- To offer Liṅga only that Which has been sanctified Accursed be you, if you Give to your senses what belongs To Kūḍala Saṅga'sŚaraṇās ! Translated by: L M A Menezes, S M Angadi
Hindi Translation कहते हो, भक्तों के सिवा अन्य अभीष्ट नहीं है, कहते हो, भक्तों के सिवा अन्यों के आगे हाथ नहीं पसारते, किंतु तुम करते क्या हो, इसे कहाँ ले जाते हो? जो पावन है, उसे लिंगार्पित करना ही आचार है। कूडलसंगमेश के शरणों की संपत्ति विषयसुख के लिए देकर दुर्गति प्राप्त न करो ॥- Translated by: Banakara K Gowdappa
Telugu Translation భక్తుల దప్ప నొల్లమంటిరి; భక్తులకు గాక కేలూత నీయమంటిరి; ఏమిసేతు రెట కీడ్తురు? పవిత్రమగుదానిని లింగమున కిచ్చుటే ఆచారము విషయములకు చిక్కి సంగని సొమ్ము వమ్ము సేయకుడయ్యా! Translated by: Dr. Badala Ramaiah
Tamil Translation பக்தரன்றி ஏற்பதில்லை என்பீர் பக்தருக்கல்லாது கை குவிப்பதில்லை என்பீர் ஆயின் செய்யும் செயல் என்ன? தூய்மையானதை இலிங்கத்திற்குச் செய்வதே நன்னெறி கூடலசங்கனின் அடியாரின் செல்வம் இது புலனின்பத்தை நாடி, கீழ் நிலையை அடையாதீர் Translated by: Smt. Kalyani Venkataraman, Chennai
Marathi Translation भक्ताविना दूसरे कोणाला आपले म्हणत नाही. भक्ताविना दुसऱ्या कोणासमोर हात पसरणार नाही. काय करणार ? हा पथ कोठे नेतो? पवित्रवस्तू लिंगार्पित करणे हा आचार आहे. कूडलसंगाच्या शरणांची संपत्ती इंद्रियभोगात खर्चुन भ्रष्ट नका होऊ. Translated by Shalini Sreeshaila Doddamani
ಶಬ್ದಾರ್ಥಗಳು ಅಸುಗತಿ = ; ಆಚಾರ = ನಡತೆ; ಕೈಯಾನು = ; ಪಾವನ = ; ವಿಷಯ = ;
ಕನ್ನಡ ವ್ಯಾಖ್ಯಾನ ಪಂಚೇಂದ್ರಿಯಗ್ರಾಹ್ಯವಾದ ವಿಶ್ವವೂ ಶಿವನ(ಶರಣರ) ಸ್ವತ್ತು. ಅದನ್ನೆಲ್ಲ ಇಂದ್ರಿಯಗೋಚರವಾಗುತ್ತಿದ್ದಂತೆಯೇ ಶಿವನಿಗೆ ನಿವೇದಿಸಿ -ಪ್ರಸಾದರೂಪದಲ್ಲಿ ಸ್ವೀಕರಿಸುವುದು ಕ್ರಮ-ಆಧ್ಯಾತ್ಮಿಕ ವಿಕ್ರಮ ಕೂಡ. ಹಾಗಲ್ಲದೆ -ಶಬ್ದ ಗಂಧ ರೂಪ ಸ್ಪರ್ಶ ರಸಲಂಪಟತೆಯಿಂದ ದೆವ್ವ ಹಿಡಿದವರಂತೆ ಆಲಿಸಿದರೆ, ಆಘ್ರಾಣಿಸಿದರೆ, ಕೆಕ್ಕರಿಸಿ ನೋಡಿ ತರುಬಿ ಹಿಡಿದರೆ, ಮುಕ್ಕಿತಿಂದರೆ –ಆ ಮೂಲಕ ಆತ್ಮ ಅಧೋಗತಿಗಿಳಿಯುತ್ತದೆ. ಲಿಂಗವಂತನ ಪ್ರಥಮ ಪ್ರಮುಖ ಆಚರಣೆಯೆಂದರೆ –ಆಕ್ರಮಣವಲ್ಲ ಅರ್ಪಣೆ. ಎಲ್ಲ ವಿಷಯವನ್ನೂ –ಮನಕ್ಕೆ ಬುದ್ಧಿಗೆ ಚಿತ್ತಕ್ಕೆ ಅಹಂಕಾರಕ್ಕೆ ಜ್ಞಾನಕ್ಕೆ ಭಾವಕ್ಕೆ ಶಕ್ತಿಯುತವಾಗಿ ತಟ್ಟಿದುದನ್ನೆಲ್ಲಾ ಭಕ್ತಿಯುತವಾಗಿ ಲಿಂಗಾರ್ಪಣೆ ಮಾಡಿ ಆ ಭೋಗೋಪಭೋಗವನ್ನೆಲ್ಲ ಪ್ರಸಾದರೂಪದಲ್ಲಿ ಸಲಿಸಿಕೊಂಡರೆ –ಇರವೇ ಪರವಾಗಿ ಪರಮಾನಂದವಾಗಿ ಈ ಲೋಕ ಅಲೋಕವಾಗುವುದು. ಇಂಥ ಮಹಾಮಾರ್ಗವನ್ನು ಬಿಟ್ಟು ಯಾರಾದರೂ-“ನಾವು ಏನೆಲ್ಲವನ್ನು ಕೊಡುವುದೂ ಭಕ್ತರಿಗೆ, ಪಡೆಯುವುದೂ ಆ ಭಕ್ತರಿಂದಲೇ -ನಮ್ಮದು ಶಿವಾರ್ಪಿತ ಪ್ರಸಾದಮಾರ್ಗವೆಂದು ಮುಂತಾದ ಡಾಂಬಿಕ ಒಣ ಮಾತುಗಳನ್ನಾಡುತ್ತ –ಇಂದ್ರಿಯಗಳ ಸೆಳವಿಗೆ ಲೋಕವನ್ನು ಬಳಸಿಕೊಂಡರೆ –ಅವರು ಚರ್ಮದಿಂದ ಹಿಡಿದು ಮೂಳೆಯವರೆಗೂ ಭವಬದ್ಧರು. ಆಶಯಕ್ಕೆ ತಕ್ಕ ಆಚರಣೆಯರಿಯದ ಇಂತ ದುರ್ವಿದಗ್ಧಭಕ್ತರನ್ನು ಕುರಿತು ಬಸವಣ್ಣನವರು ಸಾನುಕಂಪೆಯಿಂದ ಬೋಧಿಸುತ್ತಿರುವರು. ತಲುಪಬೇಕಾದ ಊರು ಯಾವ ದಿಕ್ಕಿಗಿದೆಯೋ ಆ ದಿಕ್ಕಿನ ದಾರಿ ಹಿಡಿಯಬೇಕಲ್ಲವೇ ಪಯಣಿಗ ? (ಅಸುಗತಿ : ದುರ್ಗತಿ).

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು