MusicCourtesy:Album Name - Vachana Dhare Vol -1 Singer : B.S.Mallikarjuna, B.R.Chaya Music : M.S. Maruthi Label : Ashwini audio
English Translation 2What you call Māri or Masaṇi,
Mark you, does no belong
To another world! If your eyes
Look, or your tongue speak
Amiss, that is Māri
It's Māri again if you forget
Our Kūḍala Saṅga's name!
Translated by: L M A Menezes, S M Angadi
Hindi Translationदेखो, मारी मसणी कोई और नहीं !
मारी क्या है?
आँखें अनुचित देखें तो ‘मारी’ है,
जीभ अनुचित बोले तो ‘मारी’ है,
भूल से देखना ‘मारी’ है,
भूल से बोलना ‘मारी’ है,
मम कूडलसंगमदेव का नामस्मरण भूल जाय तो ‘मारी’ है ॥
Translated by: Banakara K Gowdappa
Tamil Translationமாரி என்பது வேறு இல்லை காணீர்
மாரி என்பது என்ன?
கண்கள் தவறாகக் காணின் மாரி
நாக்கு தவறாகக் கூறின் மாரி
நம் கூடல சங்கம தேவனின் நினைவை
மறப்பின் அதுவே மாரியாகும்.
Translated by: Smt. Kalyani Venkataraman, Chennai
Marathi Translationमेंसाई मरिआई, अन्य नोहे जाण
कुद्रुष्टी दर्शन, तो मेसाई
अभद्र उच्चारण, अपशब्द ते जाग
परिआई म्हणवून, समजावी
कूडलसंगमदेव ! शरण विस्मरण
जाणावी प्रधान, मरिआई
अर्थ - मेसाई अरियाई सारख्या क्षुद्रदेवी-देवता अन्य नसून ते आपल्यातील विकारच होत. दुषित द्दष्टीसच मेसाई व अभद्र वाणीसच मरीआई समजावे. त्याचप्रमाणे कूडलसंगमदेवाचे (परशिवाचे) विस्मरण म्हणजेच मरिभाई व मेसाई होय.
Translated by Rajendra Jirobe, Published by V B Patil, Hirabaug, Chembur, Mumbai, 1983मारी-मसणी दुसरे काहीही नाही. पहा हो!
मारी म्हणजे काय ? वाईट दृष्टीने पाहणे म्हणजे मारी.
वाईट तोंडाने बोलणे म्हणजे मारी.
आमच्या कूडलसंगमदेवाचे स्मरण विसरणे ही मारी आहे.
Translated by Shalini Sreeshaila Doddamani
Urdu Translationنہیں ہےفرق کوئی ماری اورمَسنی میں
سنو ! میں تم کو بتاتا ہوں کون ہے مَسنی
بُری نظرسےجو دیکھے وہی تومَسنی ہے
اوراپنے کوڈلا سنگا کوجونہ یاد کرے
وہی ہے بس وہی ماری ہےاورکوئی نہیں
Translated by: Hameed Almas
ಶಬ್ದಾರ್ಥಗಳುಕಂಗಳು = ; ನೆನೆಪ = ; ಮಸಣಿ = ; ಮಾರಿ = ;
ಕನ್ನಡ ವ್ಯಾಖ್ಯಾನನಮಗೆ ಕೇಡಾಗುವುದು ಮಾರಿಯಿಂದ ಮಸಣಿಯಿಂದ –ಎಂದು ಜನ ಭಾವಿಸುವುದುಂಟು. ಆ ಮೂಢ ಭಾವನೆಯಿಂದಲೇ ಅವರು ಊರಿನಲ್ಲಿ ಮಷಾಣದಲ್ಲಿ ನಟ್ಟಿರುವ, ಮಾರಿಮಸಣಿ ಕಲ್ಲುಗಳಿಗೆ ಹರಸಿಕೊಳ್ಳುವರು, ಪೂಜೆ ಸಲ್ಲಿಸುವರು. ಕೋಳಿಕುರಿಗಳನ್ನು ಬಲಿಯಿಡುವರು –ಅಷ್ಟೇ ಅಲ್ಲ ಕಣ್ಣನ್ನೂ ಮೀಟಿ ಕೊಡುವರು, ನಾಲಗೆಯನ್ನೂ ಕತ್ತರಿಸಿಕೊಡುವರು. ಅದಕ್ಕೆ ಬದಲಾಗಿ ಅವರು ತಮ್ಮ ಕಣ್ಣಿನ ಮೇಲೆ ನಾಲಗೆಯ ಮೇಲೆ ನಿಯಂತ್ರಣವನ್ನು ಇಟ್ಟುಕೊಂಡಿದ್ದರೆ –ಅವರಿಗೆ ಯಾವ ಮಾರಿಮಸಣಿಯರೂ ಏನೂ ಕೇಡನ್ನು ಮಾಡಲಾಗುತ್ತಿರಲಿಲ್ಲ.
ಕೇಡುಗಳು ನಮ್ಮ ಮೇಲೆ ದಾಳಿ ಮಾಡುವುದು ನಮ್ಮವೇ ಆದ ಕಣ್ಣು ನಾಲಗೆಯ ಮೂಲಕವೇ ಹೊರತು, ಪರಕೀಯವಾದ ಕಲ್ಲು ಮಣ್ಣಿನ ಮುಖಾಂತರವಲ್ಲ. ಭದ್ರವಾದ ಕೋಟೆಬಾಗಿಲಿದ್ದರೆ ಶತ್ರುವಿಗೆ ಲಗ್ಗೆಹತ್ತುವುದು ಹೇಗೆ ಸಾಧ್ಯವಾಗುವುದಿಲ್ಲವೋ ಹಾಗೆ-ನಮ್ಮ ಕಣ್ಣು ನಮ್ಮ ನಾಲಗೆ ಭದ್ರ(ವೆಂದರೆ ಶುಭ)ವಾಗಿದ್ದರೆ ನಾವು ದುಷ್ಟಶಕ್ತಿಗಳ ಮುತ್ತಿಗೆಗೊಳಗಾಗುವುದಿಲ್ಲ, ನಮ್ಮ ಆತ್ಮೈಶ್ವರ್ಯ ಸೂರೆಯಾಗುವುದಿಲ್ಲ.
ಆದ್ದರಿಂದ ಬಸವಣ್ಣನವರು ಹೇಳುತ್ತಾರೆ –ಕಂಗಳು ತಪ್ಪಿನೋಡಿದರೆ ಮಾರಿ, ನಾಲಗೆ ತಪ್ಪಿ ನುಡಿದರೆ ಮಾರಿ ಎಂದು, ಕಣ್ಣು ತಾಯನ್ನು ಹೆತ್ತತಾಯಂತೆ ಕಾಣಬೇಕು, ಹೆಂಡತಿಯನ್ನು ಪ್ರಿಯತಮೆಯಂತೆ ಕಾಣಬೇಕು, ಪರಸ್ತ್ರೀಯನ್ನು ಪಾರ್ವತೀದೇವಿಯಂತೆ ಕಾಣಬೇಕು. ಒಟ್ಟಿನಲ್ಲಿ ಕಾಣುವ ಕಣ್ಣಿನಲ್ಲಿ ಮಾನವೀಯತೆಯ ಜ್ಯೋತಿ ಉರಿಯುತ್ತಿರಬೇಕು-ತಾಮಸದ ಕಾವಳ ಕವಿಯಿತೋ ಬೀಳುವೆವು ಅಗಾಧ ಗರ್ತಕ್ಕೆ. ಹಾಗೆಯೇ ನಾಲಗೆಯು ಸತ್ಯವನ್ನು ನುಡಿಯಬೇಕು, ಭ್ರಾತೃತ್ವವನ್ನು ನುಡಿಯಬೇಕು. ಇಲ್ಲವೋ ನಾವು ಕಾಲಭೈರವನ ಕೈಯ ಕಬಳವಾಗುತ್ತೇವೆ.
ಹಾಗಾದರೆ ಈ ಕಣ್ಣು ಮತ್ತು ನಾಲಗೆಯನ್ನು ಅಧೀನದಲ್ಲಿಟ್ಟು ಸುಭದ್ರಪಡಿಸುವುದು ಹೇಗೆಂದರೆ –ದೇವರನ್ನು ಧ್ಯಾನಮಾಡುವುದರ ಮೂಲಕ ಮನವನ್ನು ಸ್ವಾಧೀನದಲ್ಲಿರಿಸಿಕೊಳ್ಳುವುದೆನ್ನುತ್ತಾರೆ ಬಸವಣ್ಣನವರು.
ಬಸವಣ್ಣನವರ ಮತ್ತು ಇತರ ಶಿವಶರಣರ ಸಂದೇಶಗಳನ್ನು ತನ್ನ ತ್ರಿಪದಿಗಳ ಮೂಲಕ 16ನೇ ಶತಮಾನದುದ್ದಕ್ಕೂ ಪ್ರಚುರಪಡಿಸಿದ ಸರ್ವಜ್ಞನ ಈ ಮುಂದಿನ ಸುಭಾಷಿತವನ್ನೂ ನೋಡಿರಿ :
ಕಣ್ಣು ನಾಲಗೆ ಮನವು ತನ್ನದೆಂದೆನಬೇಡ
ಅನ್ಯರು ಕೊಂದರೆನಬೇಡ | ಇವು ಮೂರು
ತನ್ನನೇ ಕೊಲುಗು ಪರಮಾರ್ಥ.
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.