ಮಾಹೇಶ್ವರನ ಜ್ಞಾನಿಸ್ಥಲ - ಭವಿ-ಭಕ್ತ
ಆಯುಧವಿಕ್ಕಿದವಂಗೆ ವೀರದ ಮಾತೇಕೆ?
ಲಿಂಗವನಂತರಿಸಿದವಂಗೆ ಒಳನುಡಿ ಏಕೆ?
ಅಯಿದೆ-ಅಣಚಿಯಿಲ್ಲದವಳಿಗೆ ಸೌಭಾಗ್ಯದ ಹೂವಿನ ಬೊಟ್ಟೇಕೆ?
ಸತ್ಯನಲ್ಲದವಂಗೆ ನಿತ್ಯನೇಮವೇಕೆ?
ಕರ್ತಾರ, ನಿಮ್ಮ ಒಲವಿಲ್ಲದವಂಗೆ ಶಂಭುವಿನ ಬಂಧುಗಳೇಕೆ?
ಕೂಡಲಸಂಗಮದೇವಯ್ಯಾ,
ನೀವಿಲ್ಲದವಂಗೆ ಶಿವಾಚಾರದ ಮಾತೇಕೆ?
Transliteration Āyudhavikkidavaṅge vīrada mātēke?
Liṅgavanantarisidavaṅge oḷanuḍi ēke?
Ayide-aṇaciyilladavaḷige saubhāgyada hūvina boṭṭēke?
Satyanalladavaṅge nityanēmavēke?
Kartāra, nim'ma ōlavilladavaṅge śambhuvina bandhugaḷēke?
Kūḍalasaṅgamadēvayya,
nīvilladavaṅge śivācārada mātēke?
Manuscript
English Translation 2 What means brave talk in one
Who has laid down his arms?
What means this pious talk
In one who has turned his back
On Liṅga ?
What means the flower-mark of a wedded wife
Who has no ornament about her neck?
What means this ritual day after day
In one who has no truth in him?
What means these Śambu's kinsfock
To one who has not Thy love?
What means this talk of Śiva code,
O Kūḍala Saṅgama Lord,
In one who has not Thee in him?
Translated by: L M A Menezes, S M Angadi
Hindi Translation जो शस्त्रत्याग करता है उसे वीरता की बात क्यों- ?
जो लिंगदेव से दूर है उसे मधुर वचन क्यों?
जिसके माँगल्यादि चिन्ह नहीं है, उसे
सौभाग्य सूचक फूलदार बिंदी क्यों?
जो सत्यसंध नहीं उसे नियमित आचार क्यों?
हे कर्तार, जो तव प्रेमपात्र नहीं उसका-
शंभु के संबंधियों से क्या संबंध?
कूडलसंगमदेव जिस के लिए तुम नहीं हो
उसे शिवाचार की बात क्यों?
Translated by: Banakara K Gowdappa
Telugu Translation శస్త్రము వదలినవానికి వీరాలాప మేటికో!
శస్త్రము వదలినవానికి వీరాలాప మేటికో!
శస్త్రము వదలినవానికి వీరాలాప మేటికో!
లింగము లేనివానికి గుట్టుమాట లేటికో!
ఐదవతనము లేనిదానికి పూలుబొట్టు సౌభాగ్యమేటికో !
సత్యము లేనివానికి నిత్యవ్రత మేటికో!
జగత్కారకా, నీ వలపు లేనివానికి శివబంధువులేటికో!
సంగా నీవు లేడను వానికి శివాచార మేటికయ్యా?
Translated by: Dr. Badala Ramaiah
Tamil Translation ஆயுதத்தை விட்டவனுக்கு வீரப்பேச்சு எதற்கு?
இலிங்கத்தை விட்டவனுக்கு அனுபவச் சொல் எதற்கு?
மங்கலமற்றவளுக்கு மங்கலமான பூவும் பொட்டும் எதற்கு?
உண்மையற்றவனுக்கு தினமும் நியமம் எதற்கு?
இறைவன் உம் அருள் அற்றவனுக்கு
சம்புவின் உறவினர் எதற்கு?
கூடல சங்கமதேவனே, சிவனை நினையாதோருக்கு
சிவநெறி குறித்த பேச்சு எதற்கு?
Translated by: Smt. Kalyani Venkataraman, Chennai
Marathi Translation
टाकिला जो शस्त्र, करो विराची भाषा
तोंडी शोभती कैसा ? षंढाच्या त्या
टाकिला जो लिंग, आत्मज्ञानाची भाषा
तोंडी शोभती कैसा ? बुवाबाज
त्यागिला जी पती, लावी कुंकुम भाळी
तिचे सौभाग्याचे वाली विट जाणा
नित्य लबाडा, नित्य नेमाची भाषा
तोंडी शोभतो कैसा? भामटा तो
नास्तिकाच्या तोंडी, शरण बंधुत्वाची भाषा
शोभे माकड जैसा, करंटा तो
कूडलसंगमदेवा ! प्रेम नच तुझ्यावर
शोभेना शिवाचार दांभिक तो
अर्थ – शरण टाकून देऊन हतबल झालेल्यांनी वीरत्वाची भाषा करू नये व त्यांच्या तोंडी शोभणार नाही. लिंग टाकून देऊन आत्मज्ञानाची चर्चा करणे व्यर्थ होय. त्याप्रमाणे पतिस टाकून देऊन कूंकूम पुष्प धारण करणे शोभत नाही. नित्य लबाड बोलणाऱ्यांना व दुराचाऱ्यांना नित्य नेम मुळीच शोभत नाही. नास्तीकास शरणबंधु म्हणणे शोभणार नाही. आणि हे कूडलसंगमदेवा ! तुझ्यावर प्रिती नसणाऱ्यांना शिवाचार कदापि शोभत नाही व साधतहि नाही.
Translated by Rajendra Jirobe, Published by V B Patil, Hirabaug, Chembur, Mumbai, 1983
शस्त्र हाती न घेता पराक्रमाच्या गोष्टी करुन काय उपयोग?
लिंगाला न जाणणाऱ्यांनी प्राणलिंगाचाराच्या गोष्टी करुन काय उपयोग?
विधवेने सौभाग्य शृंगार फूलकुंकू लावून काय उपयोग?
असत्य लोकांनी नित्य नेम करुन काय उपयोग?
सृष्टीकर्ता, तुम्ही नको असणाऱ्यांना तव भक्त कशाला हवे ?
कूडलसंगमदेवय्या तुम्ही नसलेल्यांना शिवाचार कशाला हवा?
Translated by Shalini Sreeshaila Doddamani
ಶಬ್ದಾರ್ಥಗಳು ಅಂತರಿಸಿದ = ; ಅಣಚಿ = ತಾಳಿ; ಆಯಿದೆ = ; ಆಯುಧ = ಶಸ್ತ್ರ; ಒಲವು = ; ಕರ್ತಾರ = ; ನೇಮ = ; ಭಾಗ್ಯ = ; ಶಂಭು = ; ಶಿವಾಚಾರ = ;
ಕನ್ನಡ ವ್ಯಾಖ್ಯಾನ ಆಯುಧಧಾರಿಯಲ್ಲದವನು ಶೌರ್ಯವನ್ನು ತೋರಿಸಲಾಗುವುದಿಲ್ಲ (ಎಂದು ಪ್ರಾರಂಭವಾಗುವ ಈ ವಚನ) ಹಾಗೆಯೇ ಲಿಂಗಧಾರಿಯಲ್ಲದವನು ಒಳ್ಳೆಯ ಮಾತನಾಡಲಾಗುವುದಿಲ್ಲ, ಶರಣರ ಸಂಬಂಧ ಬೆಳೆಸಲಾಗುವುದಿಲ್ಲ, ಶಿವಾಚಾರ ಮಾಡಲಾಗುವುದಿಲ್ಲ ಎಂಬುದನ್ನು ಸಮರ್ಥಿಸುತ್ತಿದೆ. ಈ ಸಮರ್ಥನೆಗೆ ಸಹಾಯಕವಾಗಿ –ಮಾಂಗಲ್ಯವಿಲ್ಲದವಳಿಗೆ ಹೂವಿನ ಸುತ್ತೇಕೆ ಮತ್ತು ಸತ್ಯವಿಲ್ಲದವನಿಗೆ ನಿತ್ಯನೇಮವೇಕೆ ಎಂದು ಪ್ರಶ್ನಿಸುತ್ತಲೂ ಇದೆಯೆನ್ನಬಹುದು.
ಹೀಗೆ ಈ ವಚನವನ್ನು ಓರಣಗೊಳಿಸಿಕೊಂಡು ವಿವರಿಸಬಹುದಾದರೂ –ಮೂಲತಃ ಈ ವಚನ ಬಿಗಿಯಾದ ಬಂಧವಿಲ್ಲದೆ ಚೆಲ್ಲಾಪಿಲ್ಲಿಯಾಗಿ ಕಾಣುತ್ತದೆ.
564ನೇ ವಚನವನ್ನು ಬರೆದಂಥವನೇ ಈ ವಚನವನ್ನೂ ಬಸವಣ್ಣನವರ ಅಂಕಿತದಲ್ಲಿ ಬರೆದು ಪ್ರಕ್ಷೇಪಿಸಿದಂತಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು