ಮಾಹೇಶ್ವರನ ಜ್ಞಾನಿಸ್ಥಲ - ಅಜ್ಞಾನ
ಇರುಳೆಂದೇನೋ ಕುರುಡಂಗೆ, ಹಗಲೆಂದೇನೋ ಕುರುಡಂಗೆ?
ತಾಳವ ಬಾರಿಸಿದರೇನೊ,
ಪಂಚಮಹಾಶಬ್ದವ ಬಾರಿಸಿದರೇನೋ ಕಿವುಡಂಗೆ-
ಕೂಡಲಸಂಗಯ್ಯನ ಪಥವಿನ್ನಾವುದೆಂದರಿಯದವಂಗೆ?
Transliteration Iruḷendēnō kuruḍaṅge, hagalendēnō kuruḍaṅge?
Tāḷavabārisidarēno,
pan̄camahāśabdava bārisidarenō kivuḍaṅge-
kūḍalasaṅgayyana pathavinnāvudendariyadavaṅge?
Manuscript
English Translation 2 For one who’s blind
What means or night or day?
For one who’s deaf
What means the cymbal clash
Or the five major sounds?
What means whatever to the man
Who does not know
Kūḍala Saṅga’s path?
Translated by: L M A Menezes, S M Angadi
Hindi Translation रात क्या, दिन क्या, अंधे के लिए?
झांझ या पंचवाद्य बजाने से क्या बधिर के लिए?
कूडलसंगमदेव का पथ नहीं जाननेवाले के लिए?
Translated by: Banakara K Gowdappa
Telugu Translation చీకటి యేమో! పగలేమో! చీకునకు?
తాళమేమో; పంచమహా శబ్దమేమో చెవిటికి?
నంగా; నీ పథమేమో తెలియనివానికి ఏది ఏమోనయ్యా!
Translated by: Dr. Badala Ramaiah
Tamil Translation குருடனுக்கு இருள் என்றால் என்ன?
குருடனுக்கு பகல் என்றால் என்ன?
செவிடனுக்குத் தாளத்தை வாசித்தால் என்ன?
ஐம்பெரும் ஒலிகளை வாசித்தால் என்ன?
கூடல சங்கமதேவனை அடையும் வழி
என்ன என்று அறியாதவனுக்கு?
Translated by: Smt. Kalyani Venkataraman, Chennai
Marathi Translation
आंधळ्यासि दिन, रात्र तो समान
बहिऱ्यासि तान, ताल काय
पंचमहावाद्य, व्यर्थ तया पुढे
शिवपथ न जोडे, ज्ञानाविण
अंध बधिरा पुढे, तुझी चर्चा व्यर्थ
कूडलसंगमसार्थ, कळेचिना
अर्थ :- आंधळ्याला दिवस आणि रात्र सारखेच, कारण त्याला दिसत नसते. आणि बहिऱ्याला तान तालादि पंचमहावाद्य ऐकू येत नसतात तसेच शिवपथ न जाणणाऱ्यापुढे हे कूडलसंगमदेवा तुझी चर्चा व्यर्थ होय.
Translated by Rajendra Jirobe, Published by V B Patil, Hirabaug, Chembur, Mumbai, 1983
रात्र असली आणि दिवस असला तरी काय आंधळ्याला ?
टाळ वाजविला तरी काय ? पंचमहावाद्ये वाजविली तरी काय बहिऱ्याला?
कूडलसंगाला जाणण्याचा पथ न जाणणाऱ्यांना काय उपयोग ?
Translated by Shalini Sreeshaila Doddamani
ಶಬ್ದಾರ್ಥಗಳು ಇರುಳು = ; ತಾಳ = ; ಪದವಿ = ;
ಕನ್ನಡ ವ್ಯಾಖ್ಯಾನ ಈ ವಚನದಲ್ಲಿ “ಇರುಳೆಂದೇನೋ ಕುರುಡಂಗೆ” ಎಂಬ, ಮತ್ತು “ಹಗಲೆಂದೇನೋ ಕುರುಡಂಗೆ” ಎಂಬ ಮಾತುಗಳಿಲ್ಲದೇ ಹೋಗಿದ್ದರೆ –“ಶಿವನನ್ನು ಕುರಿತು ಪದ(ಗೀತ)ವೊಂದನ್ನು ಸುಶ್ರಾವ್ಯವಾಗಿ ಹಾಡಲು ಬರದವನಿಗೆ ಪಕ್ಕವಾದ್ಯ ವಾಗಿ ತಾಳಬಾರಿಸಿದರೇನು ಪ್ರಯೋಜನ, ಕೊಂಬು ತಮಟೆ ಶಂಖ ಭೇರಿ ಜಾಗಟೆ ಎಂಬ ಪಂಚಮಹಾವಾದ್ಯಗಳನ್ನು ಬಾರಿಸಿದರೆ ತಾನೇ ಏನು ಪ್ರಯೋಜನ ಎಂದು ಅರ್ಥೈಸಬಹುದಾಗಿತ್ತು.
ಈಗ ಇರುವ ರೀತಿಯಲ್ಲಿಯೇ ಈ ವಚನವನ್ನು ಅರ್ಥೈಸಬೇಕಾದರೆ-“ಕುರುಡನಿಗೆ ಇರುಳುಹಗಲು ಯಾವಾಗಲೂ ಕತ್ತಲೆಯೇ ! ಕಿವುಡನಿಗೆ ಯಾವ ವಾದ್ಯ ಬಾರಿಸಿದರೇನು –ಒಂದೂ ಕೇಳಿಸುವುದಿಲ್ಲ. ಹಾಗೆ ಶಿವಮಾರ್ಗವನ್ನು ಅರಿಯದವನಿಗೆ” ಎಂಬಲ್ಲಿಗೆ ವಚನವೇ ಮುಗಿದು ಹೋಗುತ್ತದೆ.
ಆದ್ದರಿಂದ ಈ ವಚನದ ಪಾಠ ಅಸಮಗ್ರವಾಗಿದೆಯೆಂದಾಗಲಿ ಅಥವಾ ಈ ವಚನವನ್ನು ಯಾವನೋ ಪ್ರಕ್ಷೇಪ ಮಾಡಿದ್ದಾನೆ ಎಂದಾಗಲಿ, ಇದು ಬಸವಣ್ಣನವರ ನಿಜವಚನವಲ್ಲವೆಂದಾಗಲಿ ಹೇಳಲು ಧೈರ್ಯ ಸಾಲದಿದ್ದರೆ “ಶಿವಮಾರ್ಗವನ್ನು ಅರಿಯದವನಿಗೆ ಏನು ಹೇಳಿದರೂ ಪ್ರಯೋಜನವಿಲ್ಲ” ಎಂಬಿತ್ಯಾದಿಯಾಗಿ ಕಲ್ಪಿಸಿಕೊಳ್ಳಬೇಕು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು