•  
  •  
  •  
  •  
Index   ವಚನ - 633    Search  
 
ಮಾಹೇಶ್ವರನ ಜ್ಞಾನಿಸ್ಥಲ - ಅಸಹಾಯಕತೆ
ಸಿಂಗದ ನಡು ಮುರಿಯಲಾ ಸಿಂಗವೇನು ಬಾತೆ? ಸುಂಡಿಲು ಮುರಿದರೆ ಗಜವೇನು ಬಾತೆ? ಸಂಗ್ರಾಮದಲ್ಲಿ ವೀರನುಳಿಯಲದೇನು ಬಾತೆ? ಶೃಂಗಾರದ ಮೂಗು ಹೋದರೆ ಶೃಂಗಾರವೇನು ಬಾತೆ? ನಿಜ ತುಂಬಿದ ಭಕ್ತಿ ತುಳುಕಾಡದವರ ಸಂಗವೇನು ಬಾತೆ, ಕೂಡಲಸಂಗಮದೇವಾ?
Transliteration Siṅgada naḍu muriyalā siṅgavēnu bāte? Suṇḍilu muridare gajavēnu bāte? Saṅgrāmadalli vīranuḷiyaladēnu bāte? Śr̥ṅgārada mūgu hōdare śr̥ṅgāravēnu bāte? Nija tumbida bhakti tuḷukāḍadavara saṅgavēnu bāte, kūḍalasaṅgamadēvā?
Manuscript
English Translation 2 What use a lion with a broken back? What use an elephant with trunk gone limp? What use a craven warrior in the field? What use your ornaments After the nose, your face's ornament, Is gone? What use the fellowship Of those in whom Reality is not Filled full to overflowing, O Kūḍala Saṅgama Lord? Translated by: L M A Menezes, S M Angadi
Hindi Translation कमर टूटने पर सिंह से क्या प्रयोजन? सूँड टूटने पर हाथी से क्या प्रयोजन? संग्राम में वीर के बचने से क्या प्रयोजन? सुंदर नासिका के अभाव में श्रृंगार से क्या प्रयोजन? सत्यपूर्ण भत्कि जिनमें छलकती न हो उनके संग से क्या प्रयोजन कूडलसंगमदेव? Translated by: Banakara K Gowdappa
Telugu Translation నడుమువిఱుగ యిక ఆ సింగ మేటికో ! హస్తము తెగ ఆ హస్తి యిక యేటికో ! వీరుడే మరణింప ఆ విజయమేటికో! చిదికిపోవగ ముక్కుమఱి సింగార మెట్టిదో ! నిజము చెడ ఆ భక్తుని సంగడమిక ఏలయ్యా? కూడల సంగయ్యా! Translated by: Dr. Badala Ramaiah
Tamil Translation சிங்கத்தின் நடுப்பகுதி முறியின் சிங்கத்தால் பயனென்ன? தும்பிக்கை முறியின் யானையால் பயனென்ன? போரில் வீரன் மடியின் வீரத்தால் பயனென்ன? அழகான மூக்கு அகலின் அழகால் பயனென்ன? உண்மை பக்தி ததும்பாதவரின் தொடர்பால் பயனென்ன கூடலசங்கமதேவனே. Translated by: Smt. Kalyani Venkataraman, Chennai
Marathi Translation कंबर मोडलेल्या सिंहाचे काय प्रयोजन? सोंड तुटल्यावर हत्तीचे काय प्रयोजन ? युध्द हारल्यावर सैनिकाचे काय प्रयोजन ? नाक कापल्यावर शृंगाराचे काय प्रयोजन? सत्य नसलेली भक्ती नसलेल्यांच्या संगाचे काय प्रयोजन ? कूडलसंगमदेवा Translated by Shalini Sreeshaila Doddamani
ಶಬ್ದಾರ್ಥಗಳು ಗಜ = ; ಬಾತೆ = ; ಸಂಗ = ; ಸಂಗ್ರಾಮ = ; ಸಿಂಗ = ;
ಕನ್ನಡ ವ್ಯಾಖ್ಯಾನ ಒಬ್ಬನಲ್ಲಿ ಭಕ್ತಿಯು ನೈಜವಾಗಿದ್ದುದಾದರೆ-ಅದು ಅವನ ನಡೆಯಲ್ಲಿ ಸದಾಚರಣೆಯಾಗಿ, ನುಡಿಯಲ್ಲಿ ಮೃದು ಮಧುರ ಸಂಭಾಷಣೆಯಾಗಿ, ಕಣ್ಣಿನಲ್ಲಿ ಅನುಕಂಪೆಯಾಗಿ, ಧರ್ಮದ ನೇರಕ್ಕೆ ದೃಢನಿರ್ಧಾರವಾಗಿ –ಅವನ ರೋಮರೋಮದಲ್ಲೂ ಆನಂದದ ಪುಳಕವಾಗಿ ಹೊಮ್ಮುತ್ತದೆ. ಇದೆಲ್ಲಾ –ಅನುರಾಗವಾದಾಗ ಕೆನ್ನೆ ಕೆಂಪಾಗುವಷ್ಟು, ಭಯವಾದಾಗ ಮೈ ಝಲ್ಲೆನ್ನುವಷ್ಟು ಸಹಜ. ಹೀಗೆ ಸಹಜಭಕ್ತಿಭಾವ ಶರಣನಲ್ಲಿರುವುದಾದರೆ-ಅದು ಆ ಶರಣನ ಅಗ್ಗಳಿಕೆ ಕೂಡ. ನಡುಮುರಿದ ಸಿಂಹದ, ಸೊಂಡಿಲು ಮುರಿದ ಆನೆಯ, ರಣಾಂಗಣದಿಂದ ಹಿಮ್ಮೆಟ್ಟಿದ ಶೂರನ, ಮೂಗು ಕೊಯ್ದ ಮುಖದ ಮಾದರಿ -ನೈಜಭಕ್ತಿಯಿಲ್ಲದವನ ಆಕಾರ ವಿಕಾರ !

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು