ಮುನ್ನಿನ ಆದ್ಯರ ಪಂಥಗಳು ಇನ್ನಾರಿಗೆಯೂ ಅಳವಡದು, ನೋಡಾ!
ಬಲ್ಲೆನಾಗಿ ಒಲ್ಲೆನು- ಅವರು ಸಲ್ಲರು ಶಿವಪಥಕ್ಕೆ,
ಒಳ್ಳಿಹ ಮೈಲಾರನ ಸಿಂಗಾರದಂತೆ,
ವೇಶಿಯ ಬಾಯಂಜಲ ತಿಂಬ ದಾಸಿಯ ಸಂಸಾರದಂತೆ-
ಕೂಡಲಸಂಗನ ಶರಣರನರಿಯದ ಉಳಿದ ಭಂಗಿತರ!
Transliteration Munnina ādyara panthagaḷu innārigeyū aḷavaḍadu, nōḍā!
Ballenāgi ollenu- avaru sallaru śivapathakke,
oḷḷiha mailārana siṅgāradante,
vēśiya bāyan̄jala timba dāsiya sansāradante-
kūḍalasaṅgana śaraṇaranariyada uḷida bhaṅgitara!
Manuscript
English Translation 2 Behold, none else can gain
The paths of the pioneer of old!
I know the others who have quit
Not knowing Kūḍala Saṅgana Śaraṇas.
And therefore disapprove of them-
They were not worthy of the Śiva path:
Their beauty was the beauty of
A scarecrow dressed to look a god;
Their life, a maid’s
Eating a harlot’s crumbs!
Translated by: L M A Menezes, S M Angadi
Hindi Translation देखो, प्राचीन महापुरुषों के पंथ
किसी और के लिए साध्य नहीं हो सकते ।
सुंदर मैलार के श्रुंगार सा,
वेश्या की जूठन खानेवाली दासी के जीवन सा,
कूडलसंग के शरणों से अनभिज्ञ भग्नों को,
मैं उन्हें जानता हूँ, उन्हें नहीं चाहता, वे शिवपथ के योग्य नहीं हैं ॥
Translated by: Banakara K Gowdappa
Telugu Translation ముందటి ఆద్యులపథ మది యెవ్వనికీ అలవడదయ్యా!
తెలిసితి కాన మెచ్చలేను; వారు శివపథమునకు చెల్లరు
మెరుగు మైలారుని సింగారమువలే; లంజ నోటి
తమ్మ నములుదాసి సంసారమువలె; శరణుల
తెలియని భంగవ్రతులు శివపథమునకు చెల్లరయ్యా!
Translated by: Dr. Badala Ramaiah
Tamil Translation முன்னோரின் வழிகள் இனி
எவருக்கும் பொருந்தாது காணாய்
அறிந்துள்ளதால் அவர்களை ஏற்பதற்கில்லை
சிவநெறியிலே செல்லார்
ஒளிரும் மயிலாரு இலிங்க ஒப்பனையனையதாம்
பரத்தையின் வாய் மிச்சிலை உண்ணும்
அடிமையின் வாழ்வனையதாம்
கூடல சங்கனின் அடியாரை அறியாது
எஞ்சியுள்ள முறையற்றோருக்கு ஐயனே.
Translated by: Smt. Kalyani Venkataraman, Chennai
Marathi Translation
आद्यांचा पथ अन्य लोकांना साध्य होणार नाही
हे जाणल्यावर ज्यांना आपले म्हणणार नाही.
ते शिवपथासाठी योग्य नाहीत.
चमकणाऱ्या मैलाराच्या शृंगारासारखे,
वेश्यांचे उष्टे खाणाऱ्या दासीसारखे जीवन आहेत.
कूडलसंगाच्या शरणांना न जाणून जगणाऱ्यांचे जीवन.
Translated by Shalini Sreeshaila Doddamani
ಶಬ್ದಾರ್ಥಗಳು ಅಳವಡು = ಹೊಂದಿಕೊಳ್ಳು, ಸರಿಯಾಗು; ಆದ್ಯರು = ಪುರಾತನರು, ಶಿವಶರಣರು; ಎಂಜಲು = ; ದಾಸಿ = ; ಪಥ = ; ಭಂಗಿ = ; ಮುನ್ನ = ; ಶಿವಪಥ = ; ಸಿಂಗಾರ = ;
ಕನ್ನಡ ವ್ಯಾಖ್ಯಾನ ಪುರಾತನ ಶಿವಶರಣರ ಮಾರ್ಗವನ್ನು ಅನುಸರಿಸುವುದು (ಇನ್ನು) ಯಾರಿಗೂ ಸಾಧ್ಯವಿಲ್ಲ. (ಹೀಗೆ ಪುರಾತನರ ಮಾರ್ಗದಲ್ಲಿ ನಡೆಯಲಾರದವರನ್ನು) ಶಿವನು ಬಲ್ಲನು. ಅವರನ್ನು ಶಿವನು ಅನುಗ್ರಹಿಸಲೊಲ್ಲನು. ಇಂಥ ಭಂಗಿತರು ಮೈಲಾರನ ಪ್ರತಿಮೆಯಂತೆ ಮೇಲೆ ಮೇಲೆ ರಂಗಾಗಿ ಕಂಡರೂ ಒಳಗೆಲ್ಲಾ ಟೊಳ್ಳು. ಸೂಳೆಯ ಎಂಜಲನ್ನು ತಿಂದು ಬದುಕುವ ಅವಳ ದಾಸಿಯ ಬಾಳಿನಂತೆ ಹೇಯವಾದುದು -ಶರಣರನ್ನು ಹಿಂಬಾಲಿಸದ ಜನರ ಬಾಳು.
ಎಂದು ಮುಂತಾಗಿ ರಕ್ಷಣಾತ್ಮಕವಾಗಿ ವ್ಯಾಖ್ಯಾನ ಬರೆಯಬಹುದಾದರೂ –ಈ ವಚನ ನಿಜವಾಗಿಯೂ ಒಂದು ಪ್ರಕ್ಷಿಪ್ತ ವಚನ-ಬಸವಣ್ಣನವರ ನಿಜವಚನವಲ್ಲ. “ಮುನ್ನಿನ ಅದ್ಯರ” ಎಂದು ಮುಂತಾದ ಪದ ಪ್ರಯೋಗ ಬಸವಣ್ಣನವರದಲ್ಲ-ನೋಡಿ ವಚನ 172, 292, 314, 603, 844, ವಾಸ್ತವವಾಗಿ 844ನೇ ವಚನವೇ ಈ ಪ್ರಕ್ಷಿಪ್ತವಚನಕ್ಕೆ ಪ್ರೇರಣೆ ಕೊಟ್ಟಿರುವಂತಿದೆ. ಈ ಪ್ರಕ್ಷೇಪಕಾರನು ಬಸವಣ್ಣನವರ 282ನೇ ವಚನವನ್ನೂ ಆಂಶಿಕವಾಗಿ ಬಳಸಿಕೊಂಡಿರುವನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು