•  
  •  
  •  
  •  
Index   ವಚನ - 635    Search  
 
ಗೀಜಗನ ಗೂಡು, ಕೋಡಗದಣಲ ಸಂಚ, ಬಾದುಮೆಯ ಮದುವೆ, ಬಾವುಲ ಬಿದ್ದಿನಂತೆ, ಜೂಜುಗಾರನ ಮಾತು, ಬೀದಿಯ ಗುಂಡನ ಸೊಬಗು, ಓಡಿನೊಳಗಗೆಯ ಹೊಯ್ದಂತೆ, ಕಾಣಿರೋ! ಶಿವನಾದಿಯಂತವನರಿಯದವನ ಭಕ್ತಿ ಸುಖಶೋಧನೆಗೆ ಮದ್ದ ಕೊಂಡಂತೆ, ಕೂಡಲಸಂಗಮದೇವಾ?
Transliteration Gījagana gūḍu, kōḍagadaṇala san̄ca, bādumeya maduve, bāvula biddinante, jūjugārana mātu, bīdiya guṇḍana sobagu, ōḍinoḷagageya hoydante, kāṇirō! Śivanādiyantavanariyadavana bhakti sukhaśōdhanege madda koṇḍante, kūḍalasaṅgamadēvā?
Manuscript
English Translation 2 Look you, it’s like the nest of a bottle-bird, The morsel in a monkey’s maw, The marriage of a doll, The feeding habits of a bat, A gambler’s word, The pious daubings of a street singer A seed thrown in an earthen pan! The piety of one who does not know The alpha and the omega of Śiva Is like the elixir that one takes In quest of happiness, O KudalaSangama Lord ! Translated by: L M A Menezes, S M Angadi
Hindi Translation खंजन को नीड़, मर्कटमुख को ग्रास-, गुडिया के विवाह, चमगीदड के भोज की भाँति है, जुआरी की बात, बाजारू बाँक की बानक श्रृंगार, तवे पर बीज बिखेरने की भाँति है, शिव का आदिअंत्य नहीं जाननेवाले की भक्ति सुख – शोधनार्थ औषध लेने की भाँति है, कूडलसंगमदेव ॥ Translated by: Banakara K Gowdappa
Telugu Translation గిజగాని గూడు; కోతి దొడల సంచి; బొమ్మ పెండ్లి; గబ్బిలము గూడు; జూదరి మాట; నడివీధి దేవర కల్లు సొగసు; పెంచుపై నారు పోసినట్లే కదరా! శివుని తుది మొదలు తెలియనివారి భక్తి సుఖోదయమునకు మందు కొనిన బ్లేనయ్యా! సంగయ్యా! Translated by: Dr. Badala Ramaiah
Tamil Translation கீச்சான் எனும் பறவையின் கூடு குரங்கின் தாடைப்பை, பொம்மைக் கல்யாணம், விருந்தனையதாம் சூதாடுவோனின் சொல்லும், வீதியில் குண்டரின் ஆரவாரம், ஓட்டினுள்ளே விதையை விதைப்பதனையதாம் காணீர், சிவனின் இயல்பை அறியாதவன் பக்தி, இன்பமெய்த ஊக்க மருந்தைக் கொள்வதனையதாம் கூடல சங்கமதேவனே. Translated by: Smt. Kalyani Venkataraman, Chennai
Marathi Translation विणकर पक्षाचे घर, माकडाची व्यर्थ हालचाल, बाहुलीचे लग्न, उलट्या वटवाघुळासम द्युताचे बोल, रस्त्यावरील प्रियकराचे सौंदर्य, ओढ्यात लावलेल्या रोमट्यासम आहे पहा. शिवस्वरूप न जाणणाऱ्यांची भाषा म्हणजे सुख शोधासाठी घेतलेल्या औषधासम होते कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಆಗೆಯ = ; ಕೋಡಗ = ; ಗೀಜುಗ = ಪಕ್ಷಿ; ಮದ್ದು = ; ಸಂಚ = ; ಸೊಬಗು = ;
ಕನ್ನಡ ವ್ಯಾಖ್ಯಾನ ಗೀಜಗನಗೂಡೆಂಬುದು ಮನೆಮಠ ಮಾಡುವುದಕ್ಕೆ. ಆಹಾರ ಗಿಡಿದ ಕೋತಿಯ ದವಡೆಯ ಚೀಲವೆಂಬುದು ಧನಸಂಗ್ರಹಚಟಕ್ಕೆ, ಬಾದುಮ(-ಬಾದಬ್ಬೆ)ದೇವತೆಗಳ ಮದುವೆಯೆಂಬುದು ಕಾಮಕ್ಕೆ ಸಂಕೇತವಾಗಿದೆ. ಈ ಚಟುವಟಿಕೆಗಳೆಲ್ಲಾ ಶಿವಾರ್ಪಿತವಾಗದೆ ಸ್ವಾರ್ಥಪರ್ಯವಸಾನವಾಗಿ –ತಿಂದುದನ್ನು ಮಲವಾಗಿ ಬಾಯಲ್ಲೇ ಕಕ್ಕುವ ಬಾವುಲಹಕ್ಕಿಯ ಹೇಸಿಗೆಯಂತೆ ಅಸಹ್ಯಕರ. ಮತ್ತು ಆ ಶಿಶ್ನೋದರ ಪರಾಯಣರಾದವರ ದೊಡ್ಡ ದೊಡ್ಡ ಮಾತುಗಳೆಲ್ಲಾ ಜೂಜುಗಾರನ ಮಾತಿನಂತೆ ಕೇವಲ ಶಬ್ದಾಡಂಬರ, ಮತ್ತು ಅವರ ವೇಷ ಪ್ರಸಾಧನವೆಲ್ಲಾ ಬೀದಿಯ ಕಾಮಣ್ಣನ ಸೊಬಗಿನಂತೆ ಕೇವಲ ರೂಪಾಡಂಬರ. ಇಂಥ ಜೀವನ ಇಹದಲ್ಲಾಗಲಿ ಪರದಲ್ಲಾಗಲಿ ನಿಲ್ಲದು ನಿಲುಕದು –ಮಡಕೆಯ ಮುಚ್ಚಳದಲ್ಲಿ ಬೆಳೆಸಿದ ಅಗೆಯಂತೆ ಬೇರೂ ಬಿಡದೆ ಹಣ್ಣೂ ಕೊಡದೆ ವ್ಯರ್ಥವಾಗುವುದು, ಮಾನವನ ಕಾರ್ಯಕಲಾಪ ಸಾರ್ಥಕವಾಗುವುದು ಶಿವಜ್ಞಾನಸಹಿತವಾದಾಗ ಮಾತ್ರ. ಶಿವಜ್ಞಾನವಿಲ್ಲದೆ ವಿಜೃಂಭಿಸುವ ಭಕ್ತನು ಹಾಸ್ಯಾಸ್ಪದ-ಗಂಡಸುತನವಿಲ್ಲದವನು ಏನೇ ಮದನಮಸ್ತಿ ಮದ್ದನ್ನು ಮೆದ್ದರೂ ಹಾಸ್ಯಾಸ್ಪದವಾಗುವಂತೆ.ಭಕ್ತನಿಗೆ ಶಿವಭಕ್ತಿಯೆಂಬುದು ಗಂಡಸಿಗೆ ಗಂಡು ತನದಂತೆ, ಹೆಂಗಸಿಗೆ ಹೆಣ್ಣುತನದಂತೆ !

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು