•  
  •  
  •  
  •  
Index   ವಚನ - 636    Search  
 
ತೊತ್ತಿನ ಕೊರಳಲ್ಲಿ ಹೊಂಬಿತ್ತಾಳೆಯ ಸಿಂಗಾರವ ಮಾಡಿದಂತೆ ಕು(ಚ್ಚಿ)ತರ ಸಂಗ, ಸುಸಂಗಿಗೆ ಸಂಗಡವಲ್ಲ ! ಗುರುಗುಂಜಿ ಮಾಣಿಕಕ್ಕೆ ಸರಿಯಪ್ಪುದೆ, ಕೂಡಲಸಂಗಮದೇವಾ?
Transliteration Tottina koraḷalli hombittāḷeya siṅgārava māḍidante ku(cci)tara saṅga, susaṅgige saṅgaḍavalla! Gurugun̄ji māṇikakke sariyappude, kūḍalasaṅgamadēvā?
Manuscript
English Translation 2 Like pewter trinkets that you put Around the neck of a servant-maid, The association of the vile and noble Is not a wholesome thing ! Can a red berry match a ruby, Lord Kūḍala saṅgama ? Translated by: L M A Menezes, S M Angadi
Hindi Translation दासी कंठ को सुनहले पीतल से अलंकृत करने के समान , कुत्सितों का संग सज्जनों को योग्य नहीं है। घुँघची माणिक्य के सम हो सकती है कूडलसंगमदेव? Translated by: Banakara K Gowdappa
Telugu Translation దాసి మెడలో కాకి బంగారము పెట్టినట్లయ్యా కుచ్చితుల మైత్రి సజ్జనునకు స్నేహము కాదు! గురిగింజ సరియౌనే మాణిక్యమునకు? కూడల సంగమదేవా Translated by: Dr. Badala Ramaiah
Tamil Translation பணிமகளின் கழுத்தை பூச்சுநகை அணிசெய்வதனைய கீழோர்தம் தொடர்பு நல்லோருக்கு ஈடு ஆகுமோ? குந்துமணி மாணிக்கத்திற்கு ஈடுஆகுமோ கூடல சங்கமதேவனே. Translated by: Smt. Kalyani Venkataraman, Chennai
Marathi Translation दासीच्या गळ्यातील मुलाम्याच्या पितळी दागिण्यासम दुर्जनांचा संग सुसंगाला योग्य नाही. गुलगुंजी माणिक्यासम होतो कूडलसंगमदेवा ? Translated by Shalini Sreeshaila Doddamani
ಶಬ್ದಾರ್ಥಗಳು ಕುಜಿತ = ; ಕೊರಳು = ; ತೊತ್ತು = ; ಬೊಂಬು = ; ಮಾಣಿಕ್ಯ = ; ಸಂಗ = ; ಸಿಂಗಾರ = ; ಸುಸಂಗಿ = ;
ಕನ್ನಡ ವ್ಯಾಖ್ಯಾನ ಕುತ್ಸಿತರ ಸಂಗವು ಸತ್ಸಂಗಿಗಳಿಗೆ ತರವಲ್ಲವೆನ್ನತ್ತ –ಆ ಸತ್ಸಂಗಿಗಳನ್ನು ತೊತ್ತಿನ ಕೊರಳ ಹೊಂಬತ್ತಾಳೆಯ ಆಭರಣಗಳಿಗೆ ಹೋಲಿಸಿರುವುದರಿಂದ-ಈ “ಹೊಂಬಿತ್ತಾಳೆ”ಯೆಂಬುದು ಒಳ್ಳೆಯ ಹೊನ್ನು ಎಂಬ ಅರ್ಥವುಳ್ಳುದಾಗಿರಬೇಕು. (ಹಾಗೆ ಅರ್ಥೈಸಲಾಗದಿದ್ದರೆ ಹೊಂಬಿತ್ತಾಳೆಯೆಂಬಲ್ಲಿ ಪಾಠಕ್ಲೇಶವಿದೆಯೆಂದು ಹೇಳಬೇಕಾದೀತು.) ಅದು ಹೇಗೇ ಇರಲಿ -ಹೊನ್ನಾಭರಣವು ತೊತ್ತಿನ ಕೊರಳ ಸಂಗದೋಷದಿಂದ ಕೇವಲ ಹಿತ್ತಾಳೆಯಾಭರಣವೆಂಬ ಸಂಶಯಕ್ಕೆ ಆಸ್ಪದಕೊಡುವುದಂತೂ ನಿಶ್ಚಯ. ಆದ್ದರಿಂದ ದುರ್ಜನರ ಸಹವಾಸ ಮಾಡಿದರೆ ಸಜ್ಜನರು ತಮ್ಮ ಮೌಲ್ಯವನ್ನೇ ಸಂಶಯಾಸ್ಪದ ಮಾಡಿಕೊಳ್ಳುವರೆಂಬುದಭಿಪ್ರಾಯ. ಆದ್ದರಿಂದ ಸಜ್ಜನರಂತೆ ಗೌರವಾಸ್ಪದರೆನಿಸಿ ಜನರನ್ನು ಮೋಸಗೊಳಿಸಲು ದುರ್ಜನರು ಸಜ್ಜನರ ಬಳಿ ಸೇರಿಕೊಂಡಾಗ-ಸಜ್ಜನರು ಆ ದುರ್ಜನರನ್ನು ದೂರಮಾಡಬೇಕು –ಇಲ್ಲದಿದ್ದರೆ ಗುಲುಗಂಜಿಯೂ ಮಾಣಿಕ್ಯವೆನಿಸಿದಾಗಳಂತೆ –ಜನರು ಮೋಸಹೋಗುವರೆಂದು ಎಚ್ಚರಿಸುತ್ತಿರುವರು ಬಸವಣ್ಣನವರು ತಮ್ಮ ಭಕ್ತರನ್ನು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು