ಮಾಹೇಶ್ವರನ ಜ್ಞಾನಿಸ್ಥಲ - ಅಜ್ಞಾನ
ಕೆಂಚ ಕರಿಕನ ನೆನೆದರೆ ಕರಿಕನಾಗಬಲ್ಲನೆ?
ಕರಿಕ ಕೆಂಚನ ನೆನೆದರೆ ಕೆಂಚನಾಗಬಲ್ಲನೆ?
ದರಿದ್ರ ಸಿರಿವಂತನ ನೆನೆದರೆ ಸಿರಿವಂತನಾಗಬಲ್ಲನೆ?
ಸಿರಿವಂತ ದರಿದ್ರನ ನೆನೆದರೆ ದರಿದ್ರನಾಗಬಲ್ಲನೆ?
ಮುನ್ನಿನ ಪುರಾತರ ನೆನೆದು ಧನ್ಯನಾದೆಹೆನೆಂಬ
ಮಾತಿನ ರಂಜಕರನೇನೆಂಬೆ, ಕೂಡಲಸಂಗಮದೇವಾ?
Transliteration Ken̄ca karikana nenedare karikanāgaballane?
Karika ken̄cana nenedare ken̄canāgaballane?
Daridra sirivantana nenedare sirivantanāgaballane?
Sirivanta daridrana nenedare daridranāgaballane?
Munnina purātara nenedu dhan'yanādehenemba
mātina ran̄jakaranēnembe, kūḍalasaṅgamadēvā?
Manuscript
English Translation 2 Does a red man turn dark
By thinking of a dark man, pray?
Does a dark man turn red
By thinking of a red man, pray?
Does a poor man turn rich
By thinking of a rich man, pray?
Does a rich man turn poor
By thinking of a poor man, pray?
O Kūḍala Saṅgama Lord,
What shall I say of those
Who joy in mere words and say
They have been blessed through memory
Of bygone pioneers?
Translated by: L M A Menezes, S M Angadi
Hindi Translation लाल मनुष्य काले का स्मरण करे,
तो वह काला बन सकता है?
काला मनुष्य लाल का स्मरण करे,
तो वह लाल बन सकता है?
दरिद्र धनी के स्मरण से धनी बन सकता है ?
धनी दरिद्र के स्मरण से दरिद्र बन सकता है?
प्राचीन शरणों का स्मरण कर अपने को
धन्य समझनेवाले बात के रसिकों को
क्या कहूँ कूडलसंगमदेव?
Translated by: Banakara K Gowdappa
Telugu Translation ఎఱ్ఱనివాడు కఱ్ఱని దలప కఱ్ఱిగా నేర్చునే?
కట్టి యెఱ్ఱనివాని దలప కెంపరి కానేర్చునే?
పేద భాగ్యవంతుని దలప భాగ్యవంతుడు కానేర్చునే?
భాగ్యవంతుడు పేదను దలప పేద కానేర్చునే!
పురాతనుల దలిచి ధన్యు డెతినను శబ్దరంజకుల
నేమందునయ్యా? కూడల సంగయ్యా!
Translated by: Dr. Badala Ramaiah
Tamil Translation சிகப்பன் கருப்பனை நினையின் கருப்பனாகவியலுமா?
கருப்பன் சிகப்பனை நினையின் சிகப்பனாகவியலுமா?
ஏழை, செல்வந்தனை எண்ணின் செல்வந்தனாகவியலுமா?
செல்வந்தன் ஏழையை எண்ணின் ஏழையாக வியலுமா?
முன்பிருந்த முன்னோரை எண்ணிப் புண்ணிய மெய்தினேன் என வாயினிக்கப் பேசுவோரை
என்னென்பேன் கூடல சங்கமதேவனே.
Translated by: Smt. Kalyani Venkataraman, Chennai
Marathi Translation
गोऱ्याने काळ्याचे स्मरण केल्याने काळा होईल?
काळ्याने गोऱ्याचे स्मरण केल्याने गोरा होईल ?
गरीबाने धनिकाचे स्मरण केल्याने धनिक होईल?
धनिकाने गरीबाचे स्मरण केल्याने गरीब होईल?
पूर्वीच्या पुरातनाच्या स्मरणाने धन्य झालो असे म्हणून
बोलण्याची चालाखी करणाऱ्यांना मानत नाही
कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಕರಿತ = ; ದರಿದ್ರ = ; ಧನ್ಯ = ; ಪುರಾತರು = ; ಮುನ್ನ = ; ರಂಜಕರು = ;
ಕನ್ನಡ ವ್ಯಾಖ್ಯಾನ ನಿರ್ಧನಿಕನೊಬ್ಬನು ಧನಿಕನಾಗಲು ಕೇವಲ ಕನಸುಗಳನ್ನು ಕಂಡರಾಗದು –ಅದಕ್ಕಾಗಿ ಸಂಕಲ್ಪಿಸಬೇಕು, ದುಡಿಯಬೇಕು. ಇಲ್ಲದಿದ್ದರೆ ಸಿರಿವಂತನಾಗಬೇಕೆಂಬ ಆ ದರಿದ್ರನ ಆಕಾಂಕ್ಷೆ –ಕೆಂಪಾಗಬೇಕೆಂಬ ಕರಿಯನೊಬ್ಬನ ಹುಚ್ಚುಕಲ್ಪನೆಯಂತೆ ಬರಿಯ ಭ್ರಮೆಯಾಗುವುದು.
ಸಿರಿವಂತನಾಗುವಂಥ ಒಂದು ಲೌಕಿಕ ಕಾರ್ಯವೂ ಬರಿಯ ಮಾತಿನಿಂದ ನೆರವೇರದೆಂದ ಮೇಲೆ-ಯಾವನಾದರೊಬ್ಬನು ಬರಿಯ ಮಾತಿನಿಂದಲೇ ಬಾಣನಂತೆ ಮಯೂರನಂತೆ ಬಲ್ಲಾಳನಂತೆ ಸಿರಿಯಾಳನಂತೆ ಭಕ್ತಶ್ರೇಷ್ಠರಾಗುತ್ತೇವೆಂಬುದು ಸುಳ್ಳು. ಅಲೌಕಿಕ ಪ್ರಾಪ್ತಿಗಳು ಲೌಕಿಕ ಪ್ರಾಪ್ತಿಗಳಿಗಿಂತ ಹೆಚ್ಚು ದುರ್ಲಭವಾಗಿ ಹೆಚ್ಚಿನ ಸಾಧನೆಯನ್ನೇ ನಿರೀಕ್ಷಿಸುವವು.
ವಿ : ಪ್ರಕ್ಷಿಪ್ತವೆನ್ನಲಾದ 635ನೇ ವಚನದಲ್ಲಿ ಬಳಕೆಯಾಗಿರುವ “ಮುನ್ನಿನ ಆದ್ಯರು” ಎಂಬ ಪ್ರಯೋಗವನ್ನೇ ಹೋಲುವ “ಮುನ್ನಿನ ಪುರಾತನರು” ಎಂಬ ನುಡಿಗಟ್ಟು ಈ ವಚನದಲ್ಲಿಯೂ ಇದ್ದು –ಇದೂ ಒಂದು ಪ್ರಕ್ಷಿಪ್ತ ವಚನವೇ ಇರಬೇಕೆನಿಸುವುದು. ಮತ್ತು ಇದೇ “ಮುನ್ನಿನ ಪುರಾತನರು” ಪ್ರಯೋಗವು ಮರಳಿ ತಲೆದೋರಿರುವ 681ನೇ ವಚನವೂ ಪ್ರಕ್ಷಿಪ್ತವಾಗಿರಬಾರದೇಕೆ ?
ಈ ಪ್ರಕ್ಷೇಪಕಾರನು 148ನೇ ವಚನಕ್ಕೆ ಸಂವಾದಿಯಾಗಿಯೂ ಉತ್ತರರೂಪವಾಗಿಯೂ ಬರೆದ ಮತ್ತೊಂದು ವಚನವೇ ಈ 638ನೇ ವಚನವೆಂಬುದನ್ನು ಗಮನಿಸಿರಿ. ಆ 148ನೇ ವಚನದಲ್ಲಿ ಬಸವಣ್ಣನವರು ಸಿಂಧು ಬಲ್ಲಾಳ ಮುಂತಾದವರನ್ನು ಸರಿಯಾಗಿಯೇ ಮುನ್ನಿನವರು ಎಂದು ಕರೆದಿದ್ದರೆ ಅವರನ್ನು ಈ ಪ್ರಕ್ಷೇಪಕಾರನು “ಮುನ್ನಿನ ಪುರಾತನರು”ಎಂದು ಎಡವಿ ಸಿಕ್ಕಿಬಿದ್ದಿದ್ದಾನೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು