•  
  •  
  •  
  •  
Index   ವಚನ - 638    Search  
 
ಮಾಹೇಶ್ವರನ ಜ್ಞಾನಿಸ್ಥಲ - ಅಹಂಕಾರ
ಆನೆಯನೇರಿಕೊಂಡು ಹೋದಿರೆ ನೀವು, ಕುದುರೆಯನೇರಿಕೊಂಡು ಹೋದಿರೆ ನೀವು, ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರೆ ಅಣ್ಣಾ ! ಸತ್ಯದ ನಿಲವನರಿಯದೆ ಹೋದಿರಲ್ಲಾ! ಸದ್ಗುಣವೆಂಬ ಫಲವ ಬಿತ್ತಿ ಬೆಳೆಯದೆ ಹೋದಿರಲ್ಲಾ! ಅಹಂಕಾರವೆಂಬ ಸದಮದಗಜವೇರಿ ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ ! ನಮ್ಮ ಕೂಡಲಸಂಗಮದೇವರನರಿಯದೆ ನರಕಕ್ಕೆ ಭಾಜನವಾದಿರಲ್ಲಾ !
Transliteration Āneyanērikoṇḍu hōdire nīvu, kudureyanērikoṇḍu hōdire nīvu, kuṅkuma kastūriya pūsikoṇḍu hōdire aṇṇā! Satyada nilavanariyade hōdirallā! Sadguṇavemba phalava bitti beḷeyade hōdirallā! Ahaṅkāravemba sadamadagajavēri vidhige guriyāgi nīnu hōdirallā! Nam'ma kūḍalasaṅgamadēvanariyade narakakke bhājanavādirallā!
Manuscript
Music Courtesy: Album Name: Vachana Darshana Singers: G. V. Atri, Music: G. V. Atri Label: Jhankar Music
English Translation 2 You went riding elephants. You went riding horses. You covered yourself with vermilion and musk. O brother, but you went without the truth, you went without sowing and reaping the good. Riding rutting elephants of pride, you turned easy target to fate. You went without knowing our lord of the meeting rivers. You qualified for hell.

Translated by: A K Ramanujan
Book Name: Speaking Of Siva
Publisher: Penguin Books
----------------------------------
Brothers, you strut upon an elephant, Or preen yourselves upon a horse, Or flaunt in saffron and in musk: And yet, alas! as you go around, You're ignorant of the Truth. You have forgot to sow and grow The fruit of Virtue! Mounted upon the crazy elephant Of your gigantic pride, You're riding straight Into the snare of Doom! Not knowing our Lord Kūḍala Saṅgama, you only qualify For hell! Translated by: L M A Menezes, S M Angadi

Hindi Translation भाइयो, तुम गजारूढ होकर गये, अश्वारूढ होकर गये, कुंकुम कस्तूरी रमाकर गये, किंतु सत्य की स्थिति न जान सके ! सद्गुण बोकर फल पैदा न कर सके । अहंकार रूपी मत्तगज पर आरूढ तुम विधि के वश हो गये न ! मम कूडलसंगमदेव को न जानकर तुम नरकभाजन बन गये न -। Translated by: Banakara K Gowdappa
Telugu Translation గజారోహణముల బడిపోతిరె మీరు అశ్వారోహణముల బడిపోతిరె మీరు కస్తూరీ కుంకుమ మలదుకొంచు బోతిరే మీరు అన్నలారా! సత్యపు నెలవు తెలియకపోతిరే మీరు అహంకారమను మదగజము నెక్కి విధికి గురియౌచుపోతిరే మీరు సంగమదేవుని తెలియక నరకమున బడిపోతిరి కదయ్యా మీరెల్లా! Translated by: Dr. Badala Ramaiah
Tamil Translation நீவிர் யானைமீது ஏறிச் சென்றீர் நீவிர் குதிரைமீது ஏறிச் சென்றீர் குங்குமம், கஸ்தூரியைப் பூசிக் கொண்டு சென்றீர் உண்மையின் நிலையையறியாது சென்றீரன்றோ நல்லியல்பு எனும் பழத்தை விதைத்து விளையாமலே சென்றீரன்றோ செருக்கு எனும் மதயானை மீது ஏறி விதிக்குக் குறியாகி நீவிர் சென்றீரன்றோ நம் கூடல சங்கமதேவனை அறியாமல் நரகத்திற்கு அருகதையானீரன்றோ. Translated by: Smt. Kalyani Venkataraman, Chennai
Marathi Translation हत्तीवरी स्वार, होऊनिया जाता घोड्यावरी बसता, डोलाने त्या केशर कुंकुम लेपन, सदैव करिता जाण सत्याचे दर्शन झाले नाही सद्गुण बीज, न पेरता कैसे फळ रसाळसे, प्राप्तवाल मदोन्मत्त हत्ती, तैसा अंहकार चढूनि तयावर काय जाता ? नेमाचार विधी, नित्य तो पाळिता स्वैराचारी होता, ज्ञानहीन कूडलसंगमदेवा ! ओळखल्या विण नरक भागी जाण, व्हाल तुम्ही अर्थ - सत्याची जाणीव न करून घेता अहंकाररूपी मदोन्मत्त हत्ती घोड्यावर बगून डोलने जाता ! सद्गुण सदाचार विरहीत तुम्ही केशर, कस्तुरी, कुंकूम कपाळी लेपन करून व्यर्थ नेमाचार विधीतच अडकून राहता. अशाने मोक्षाचे अधिकारी होत नाही. माझ्या कूडलसंगमदेवास न जाणता अधोगतीस का जाता ? अशाने तुम्ही नरकाचे भागीदार व्हाल. Translated by Rajendra Jirobe, Published by V B Patil, Hirabaug, Chembur, Mumbai, 1983 हत्तीवर चढून जात आहात तुम्ही, घोड्यावर चढून जात आहात तुम्ही, कुंकुम-कस्तुरी लेपन करुन जात आहात तुम्ही ! सत्याचे स्वरुप जाणल्याविना जात आहात तुम्ही, सद्गुणरुपी फळ न पेरता, न वाढविता जात आहात ! अहंकाररुपी मदोन्मत हत्तीवर चढून, विधीलिखिताची शिकार तुम्ही झाला. आमच्या कूडलसंगाला जाणल्या विना नरकाचे भागीदार झाला तुम्ही ! Translated by Shalini Sreeshaila Doddamani
Urdu Translation تم کبھی فیل پہ یا اسپِ جواں پرنکلے جسم پرکوکم وکستوری لگا کرنکلے منزلِ صدق کی پہچان میں ناکام رہے بیج بویا تھا مگرکاٹی نہ فصلِ سیرت کوڈلا سنگما دیوا سے بچاکر نظریں فخرسے نازسے تم بیٹھ کر ہاتھی پہ چلے حیف تو یہ ہےکہ خود جاکےجہنم میں گِرے Translated by: Hameed Almas
ಶಬ್ದಾರ್ಥಗಳು ಅಹಂಕಾರ = ನಾನು ಎಂಬ ಮದ; ಕಸ್ತೂರಿ = ; ನಿಲುವು = ; ಪೂಸಿ = ; ಮದಗಜ = ; ವಿಧಿ = ; ಸದ = ; ಸದ್ಗುಣ = ;
ಕನ್ನಡ ವ್ಯಾಖ್ಯಾನ ಹುಟ್ಟಲೇ ಇಲ್ಲವೆಂದರೆ –ಅದು ನೇತ್ಯಾತ್ಮಕವಾದೊಂದು ಸಿದ್ಧಿಯಾದೀತು. ಹುಟ್ಟಿಯೂ ತನ್ನ ಜೀವಿತಾವಧಿಯನ್ನೆಲ್ಲಾ ಕೇವಲ ಬಡಾಯಿಗಾಗಿ ಭೋಗಲಾಂಪಟ್ಯಕ್ಕಾಗಿ ಬಳಸಿದ್ದೇ ಆದರೆ-ಆ ಜೀವ ಜೀವಿಸಿದ್ದು ಜೀವನವಲ್ಲ-ಸಾವಿನ ಮುಖವನ್ನೂ ಬಿಳಿಚುವಂತೆ ಮಾಡುವ ಪೈಶಾಚಿಕ ವಿಡಂಬನೆ. ಸತ್ಯಕ್ಕೆ ನೇರವಾಗಿ ನಡೆಯಬೇಕು, ಪರಿಸರಕ್ಕೆ ಉಪದ್ರವವಾಗದಂತೆ ತೋಬೆಚ್ಚಗೆ ತಂಪಾಗಿ ಕಮ್ಮಗೆ ಬದುಕಬೇಕು. ನಮ್ಮ ಪರೋಕ್ಷದಲ್ಲಿ ನಾವು ನಡೆದು ತೋರಿದ ಈ ನಡೆವಳಿಗಳು ಬರುವ ತಲೆಮಾರಿನ ಮೆಚ್ಚುಗೆಯನ್ನು ಸೂರೆಗೊಂಡು –ಅವರಿಗೆ ಅದು ಸಾರತಃ ಅನುಕರಣೀಯವಾಗುವಷ್ಟು ಘನತೆಯುಳ್ಳದ್ದಾಗಿರಬೇಕು. ಹೀಗೆ ಜೀವಿಸಿದ ಜೀವದೊಂದು ನಡೆ ಪದ್ಧತಿಯಾಗಿ, ಪದ್ಧತಿಯು ಪಂಥವಾಗಿ, ಪಂಥವು ಪಂಗಡವಾಗದೆ ಎಲ್ಲರಿಗೂ ಸಂಗಡವಾಗಬೇಕು. ಹಾಗಲ್ಲದೆ ಆಕಸ್ಮಿಕವಾಗಿ ಬಂದ ಐಶ್ವರ್ಯದಿಂದ ಅಧಿಕಾರದಿಂದ ಕೀರ್ತಿಯಿಂದ ಮದವೇರಿ ರಭಸಮತಿಯಾಗಿ ಜನರನ್ನು ಕ್ಷುದ್ರೀಕರಿಸುವ ಹಿಂಸಿಸುವ ಪ್ರವೃತ್ತಿಯವನಾದರೆ ಅವನಿಗಾಗಿ ಹೊಸ ನರಕಗಳು ಸೃಷ್ಟಿಯಾಗಬೇಕಾದೀತು, ದೌಷ್ಟ್ಯ ದಮನ ದುಃಖಗಳ ಪರಂಪರೆ ದಾಂಗುಡಿಯಿಡುವುದು ಹೀಗೆಯೇ. ಬೇಜವಾಬ್ದಾರಿಯ ಈ ಪರಂಪರೆ ಮುಂದುವರಿದೀತೆಂಬ ಮತ್ತು ಹಾಗಾಗಬಾರದೆಂಬ ವಿಷಾದ ಮತ್ತು ವಿವೇಕ ಬಸವಣ್ಣನವರದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು