•  
  •  
  •  
  •  
Index   ವಚನ - 639    Search  
 
ಮಾಹೇಶ್ವರನ ಜ್ಞಾನಿಸ್ಥಲ - ಇಂದ್ರಿಯಗಳು
ಇಂದ್ರಿಯ ನಿಗ್ರಹವ ಮಾಡಿದರೆ ಹೊಂದುವುವು ದೋಷಂಗಳು: ಮುಂದೆ ಬಂದು ಕಾಡುವುವು ಪಂಚೇಂದ್ರಿಯಂಗಳು. ಸತಿಪತಿರತಿಸುಖವ ಬಿಟ್ಟರೆ ಸಿರಿಯಾಳ-ಚಂಗಳೆಯವರು? ಸತಿಪತಿರತಿಸುಖಭೋಗೋಪಭೋಗವಿಳಾಸವ ಬಿಟ್ಟ(ನೆ) ಸಿಂಧುಬಲ್ಲಾಳನು? ನಿಮ್ಮ ಮುಟ್ಟಿ ಪರಧನ-ಪರಸತಿಯರಿಗೆಳಸಿದರೆ ನಿಮ್ಮ ಚರಣಕ್ಕೆ ದೂರ, ಕೂಡಲಸಂಗಮದೇವಾ!
Transliteration Indriya nigrahava māḍidare honduva dōṣagaḷu: Munde bandu kāḍuvuvu pan̄cēndriyaṅgaḷu. Satipatiratisukhava biṭṭare siriyāḷa-caṅgaḷeyavaru? Satipatiratisukhabhōgōpabhōgaviḷāsava biṭṭa(ne) sindhuballāḷanu? Nim'ma muṭṭi paradhana-parasatiyarigeḷasidare nim'ma caraṇakke dūra, kūḍalasaṅgamadēvā!
Manuscript
English Translation 2 Bridling your senses, all you do Is starting maladies: For the five senses come and stand And laugh into your face! Did Siriyāḷa and Caṅgaḷe Give up their nights of love As wedded man and wife? Did Sindhuballāḷa give up His amorous pleasures and dalliance? Before Thee I avow: Should I but covet another's wealth or wife, Let me be banished from Thy feet, O Kūḍala Saṅgama Lord! Translated by: L M A Menezes, S M Angadi
Hindi Translation इंद्रिय निग्रह से दोष उप्तन्न होते हैं। पंचेंद्रिय आगे आकर सताती हैं ! सिरियाळ चंगळे ने सतिपति रतिसुख त्यागा-? सिंधु बल्लाळ ने सतिपति रतिभोगा विलास त्यागा-? तव स्पर्श कर परधन, परस्त्री की कामना करूँ, तो तव चरणों से दूर होऊँगा कूडलसंगमदेव ॥ Translated by: Banakara K Gowdappa
Telugu Translation ఇంద్రియ నిగ్రహము సేయ దోషమయ్యా పంచేంద్రియములు మున్ముందెవచ్చి బాధించునయ్యా సతిపతి రతిసుఖముల వదలిరే సిరియాళచంగళులు? సతిపతి రతిసుఖ భోగోపభోగ విలాసము విడిచెనే సింధు బల్లాళుడు? నిన్ను చేరి పరసతి పర ధనములకు మరగిన మీ పాదములకు దూరమై పోదునయ్యా సంగయ్యా! Translated by: Dr. Badala Ramaiah
Tamil Translation புலனடக்கம் செய்யின் தவறுகள் வரும் பிறகு ஐம்புலன்கள் வந்து வாட்டும் சிறுத்தொண்டன் ஜங்களை புணர்தலை விட்டனரோ? சிந்து வல்லாளன் புணர்தலை விட்டனரோ? உம்மை வணங்கி, பிறர் செல்வம், பிறன்மனையை நயப்பின் உம் நெறிக்குத் தொலைவாம் கூடலசங்கமதேவனே. Translated by: Smt. Kalyani Venkataraman, Chennai
Marathi Translation संसाराहुनि श्रेष्ठ, नव्हे ते साधन इंद्रिय निग्रह जाण, दंभाचार संसारी श्रीयाळ, संसारी चांगुणा चिलया बाळ जाणा, शिवभक्त रति सुख भोगी, तो सिंधू बल्लाळ शिवाचा लडिवाळ, मुक्तभक्त परधन - परनारी, याचा संग करी ऐसा दुराचारी, जाय वाया कूडलसंगमदेवा ! ऐसे होता जाण तुज अंतरेन, वाटे मज. अर्थ :- व्यर्थ संन्यास घेऊन इंद्रिय निग्रहाच्या पाठी न लागता सरळ संसार करीतच परमेश्वराची प्राप्ती करून घेणे इष्ट. इंद्रिय निग्रह हा केवळ दंभाचार होय. श्रीयाळशेट्टी आणि त्यांची पत्नी चांगुणा तसेच राजा सिंधू बल्लाळ हे संसारात राहून शिवभक्ती करून मुक्त झाले. हे कूडलसंगमदेवा ! ( परशिवा) परधन, परनारीच्या नादी लागणे व इंद्रिय निग्रहसारख्या वेडाचाराच्या पाठी लागणे म्हणजे तुला अंतरणे होय. Translated by Rajendra Jirobe, Published by V B Patil, Hirabaug, Chembur, Mumbai, 1983 इंद्रिय निग्रह केल्याने दोष लागतो. पुढे येऊन त्रास देतात पंचेद्रिये. दांपत्य जीवनाचा त्याग सिरियाळ-चांगुणाने केला? दांपत्य सुखोपभोगाचा त्याग सिंधू-बल्लाळाने केला? तुम्हाला आपलेसे केल्यावर परधन, परस्त्रीची इच्छा केली तर तुमच्या चरणापासून दूर होई कूडलसंगमदेवा. Translated by Shalini Sreeshaila Doddamani
Urdu Translation کوئی اپنےحوا سِ خمسہ کو عمربھرجوگرفت میں رکھّے لوگ ہرنقص اس میں ڈھونڈیں گے اورپھرانتقام بھی لیں گے کوچےکوچےمیں ہوگی رسوائی کیاوہ شریال اورچنگےنے اپنی شادی کےبعد دُنیا میں وصل کی لذتیں نہیں لُوٹیں سِندوبلال کی طرف دیکھو تا دمِ زندگی بیاہ کے بعد اس جہاں کی ہراک مسرّت سے کیا وہ محظوظ و بہرہ ورنہ ہوے ہاں اُسے بھول کراگرکوئی دولتِ غیرکی طرف لپکے یا پرائی حسین عورت کو دیکھ کےمن ہی من میں للچائے اے مرے دیوا کوڈلا سنگم دُورہوگا وہ تیری نظروں سے Translated by: Hameed Almas
ಶಬ್ದಾರ್ಥಗಳು ಆಚಾರ = ನಡತೆ; ಉಪಭೋಗ = ; ಎಳಸು = ; ಕಾಡು = ; ದೋಷ = ; ನಿಗ್ರಹ = ; ಭೋಗ = ; ರತಿ = ;
ಕನ್ನಡ ವ್ಯಾಖ್ಯಾನ ಇಂದ್ರಿಯನಿಗ್ರಹವು ದೋಷಯುಕ್ತವಾದುದು. ಅದು ದೈಹಿಕವಲ್ಲದಿದ್ದರೆ –ಮಾನಸಿಕವಾಗಿ ಹಾವಳಿ ಮಾಡುವುದು. ಅಂದರೆ ಸಹಜವಾಗಿ ಅನುಭವಿಸಬೇಕಾದ ಐಂದ್ರಿಯಿಕ ವ್ಯಾಪಾರಗಳನ್ನು ದೈಹಿಕವಾಗಿ ನಿಗ್ರಹಿಸಿದರೆ –ಅದು ವಾಚಿಕವಾಗಿಯೂ, ವಾಚಿಕವಾಗಿ ನಿಗ್ರಹಿಸಿದರೆ-ಅದು ಮಾನಸಿಕವಾಗಿಯೂ ಸ್ಪೋಟಗೊಂಡು ನಮ್ಮ ಜೀವಾಳವಾದ ಅಂತರಂಗವನ್ನೆಲ್ಲ ವಿಕೃತಗೊಳಿಸುವುದು ನಿಶ್ಚಯ –ಎನ್ನುತ್ತ ಬಸವಣ್ಣನವರು ಧರ್ಮದ ಹೆಸರಿನಲ್ಲಿ ಸಂನ್ಯಾಸಾಚರಣೆಯನ್ನು ಸಾರಾಸಗಟಾಗಿ ಕಡ್ಡಾಯ ಮಾಡಿರುವುದನ್ನು ಒಪ್ಪದೆ –ವಿಕೃತ ಸಂನ್ಯಾಸವು ಧರ್ಮವಿರೋಧಿಯೆಂದೂ ಸಹಜಸಂಸಾರವು ಧರ್ಮಸಮ್ಮತವೇ ಆಗಿರುವುದೆಂದೂ ಅಭಿಪ್ರಾಯಪಡುತ್ತಿರುವರು. ಈ ತಮ್ಮ ಅಭಿಪ್ರಾಯಕ್ಕೆ ಪೋಷಕವಾಗಿ -ಶಿವಪಂಥದಲ್ಲಿ ಬಹಳ ಪುರಾತನರೂ ಪ್ರಸಿದ್ಧರೂ ಆದ ಸಿರಿಯಾಳಚೆಂಗಳೆ ದಂಪತಿಗಳ ಮತ್ತು ಸಿಂಧುಬಲ್ಲಾಳನ ನಿದರ್ಶನಗಳನ್ನು ಕೊಡುತ್ತ –ಅವರೆಲ್ಲರೂ ಸಂಸಾರದಲ್ಲಿದ್ದುಕೊಂಡೇ ರತಿಸುಖವನ್ನೂ ಭೋಗೋಪಭೋಗಗಳನ್ನೂ ಅನುಭವಿಸುತ್ತಲೇ ಮಹಿಮಾನ್ವಿತ ಶಿವಾನುಭಾವಿಗಳಾಗಿದ್ದರೆನ್ನುತ್ತ –ಗೃಹಸ್ಥಾಶ್ರಮದಲ್ಲಿದ್ದುಕೊಂಡೇ ಆಧ್ಯಾತ್ಮಿಕ ಸಿದ್ಧಿಯನ್ನು ಪಡೆಯಬಹುದೆಂದು ಅನುಯಾಯಿಗಳಿಗೆ ಮನವರಿಕೆಮಾಡಿಕೊಡುತ್ತಿರುವರು. ಗೃಹಸ್ಥನಾದೊಬ್ಬನು ಪರಸತಿಯರಿಗೆ ಪರಧನಕ್ಕೆ ಅಳುಪದೆ ತನ್ನ ಸತಿಯಲ್ಲಿ ತನ್ನ ಧನದಲ್ಲಿ ತೃಪ್ತಿಯನ್ನು ಪಡೆದರೆ –ಅದೇ ಅತ್ಯುತ್ತಮ ರೀತಿಯ ಬ್ರಹ್ಮಚರ್ಯವೆಂಬ ಬಸವಣ್ಣನವರ ದೃಷ್ಟಿ -ಪ್ರಾಚೀನ ಭಾರತೀಯ ಆಧ್ಯಾತ್ಮಿಕ ಕಲ್ಪನೆಗೆ ಅನುರೂಪವಾಗಿಯೇ ಇದೆ. ಹೀಗೆ ಬಸವಣ್ಣನವರ ಪ್ರಕಾರ –ಕಡ್ಡಾಯ ಸಂನ್ಯಾಸದ ಮಠಸಂಪ್ರದಾಯಕ್ಕಿಂತ ಗೃಹಸ್ಥಾಶ್ರಮದ ಶರಣರ ಮಹಾಮನೆ ಸಂಪ್ರದಾಯವು -ಸ್ವತಃ ಬಸವಣ್ಣನವರೇ ಅನುಸರಿಸಿದ ಸಂಪ್ರದಾಯವಾಗಿದ್ದು -ಪ್ರಶಸ್ತವೆಂಬುದನ್ನು ಮರೆಯಬಾರದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು