•  
  •  
  •  
  •  
Index   ವಚನ - 640    Search  
 
ಮಾಹೇಶ್ವರನ ಜ್ಞಾನಿಸ್ಥಲ - ಸತ್ವಪರೀಕ್ಷೆ
ಲಿಂಗ ಜಂಗಮ ಒಂದೆ ಎಂದು ನಂಬಿದ ಬಳಿಕ ಅವರಂಗನೆಯರು ಲಿಂಗದ ರಾಣಿವಾಸ: ಅಲ್ಲಿಯೂ ಮೇಳ, ಇಲ್ಲಿಯೂ ಮೇಳ, ಚೌಡೇಶ್ವರಿಯಲ್ಲಿಯೂ ಮೇಳ! (ಮಾತೆ)ಯೆಂಬ ಭಾವ ತಪ್ಪಿ ಅಪ್ಪಿದವರ ತಲೆಯ ಕೊಂಬ ಕೂಡಲಸಂಗಮದೇವ.
Transliteration Liṅga jaṅgama onde endu nambida baḷika avaraṅganeyaru liṅgada rāṇivāsa: Alliyū mēḷa, illiyū mēḷa, cauḍēśvariyalliyū mēḷa! (Māte)emba bhāva tappi appidavara taleya komba kūḍalasaṅgamadēva.
Manuscript
English Translation 2 Once they believe That Liṅga and Jaṅgama are one, Their wives become God's royal wives: Both here and there they are the same- In Cauḍēśvari , the same. If you forget The honour due to breasts you sucked And take them in your arms, Lord Kūḍala Saṅgama Will take away your head! Translated by: L M A Menezes, S M Angadi
Hindi Translation लिंगजंगम को एक मानें- तो उनकी पत्नियाँ लिंग के रनिवास की होंगी । वहाँ भी मिलन, यहाँ भी मिलन, ‘चौडेश्वरी’ में भी मिलन है। स्तन्य पान भाव छोड आलिंगन करनेवालों का कूडलसंगमदेव सिर काटेंगे ॥ Translated by: Banakara K Gowdappa
Telugu Translation లింగ జంగము లొకటేయని నమ్మిన వెనుక వారి యంగనలు శివుని రాణివాసమయ్యా అటనూమేళ మిటనూ మేళము చౌడేశ్వరి యందునూ మేళము తల్లి యనుతలపు తప్పిన తలగొట్టునయ్యా సంగయ్య: Translated by: Dr. Badala Ramaiah
Tamil Translation இலிங்க ஜங்கமர் ஒன்று என நம்பியபின் அவர் இல்ல மகளிர் இலிங்கத்தின் அந்தப்புறத்தினர் அங்கும் பொருத்தம், இங்கும் பொருத்தம் சௌடேச்வரியிடமும் பொருத்தமா? வேறு விதமான எண்ணம் வெளிப்படின் தலையைக் கொய்வான் கூடல சங்கமதேவன். Translated by: Smt. Kalyani Venkataraman, Chennai
Marathi Translation लिंगजंगम एक, ऐसे समजता पत्नि पतिव्रता, पार्वती ती जंगमाची पत्नी, ती पार्वती माता दुर्भाव ठेविता, भस्म व्हाल अंधदुराचारी, भोगाची लालसा कळे तया कैसा, शरण मार्ग कूडलसंगमदेवा ! करील तो दंड वागता उदंड, मुंड कापी अर्थ - लिंग - जंगम समजणाऱ्यांनी जंगम पत्नीस निश्चित पार्वतीच मानले पाहिजे. तिथे कसलीही कुवासना त्यांना भस्म केल्याखेरीज राहणार नाही. हे कूडलसंगमदेवा (परशिवा) तुला न जाणता भोगाची लालसा धरून अनाचार केल्यास तु तशांना कडक शासन केल्याशिवाय राहणार नाही. Translated by Rajendra Jirobe, Published by V B Patil, Hirabaug, Chembur, Mumbai, 1983 लिंग-जंगम यांना एक मानल्यानंतर त्यांच्या सती पार्वतीसमान होतात. तिथे मिलन, इथे मिलन, चौडेश्वरीतही मिलन ? मातृभाव सोडून आलिंगन दिले तर शिर कापेल कूडलसंगमदेव. Translated by Shalini Sreeshaila Doddamani
ಶಬ್ದಾರ್ಥಗಳು ಅಂಗನೆ = ಸ್ರ್ರೀ, ಮಹಿಳೆ; ಕೊಂಬ = ; ಜಂಗಮ = ; ಭಾವ = ; ಮೇಳ = ;
ಕನ್ನಡ ವ್ಯಾಖ್ಯಾನ ಈ ವಚನ ಬಸವಣ್ಣನವರ ನಿಜವಚನವಲ್ಲ. ಇದರಲ್ಲಿ ಪ್ರಯೋಗವಾಗಿರುವ ಪದಗಳೂ ಭಾವಗಳೂ ಬಸವಣ್ಣನವರ ಸಿದ್ಧಾಂತಕ್ಕೆ ಮತ್ತು ಆಚರಣೆಗೆ ವ್ಯತಿರೇಕವಾಗಿರುವವು. (1) ಕ.ವಿ.ವಿ. ಬಸವಣ್ಣನವರ ಟೀಕಿನ ವಚನಗಳು ಎಂಬ ಗ್ರಂಥದನುಸಾರ ಮೊದಲನೇ ಟೀಕೆಯಲ್ಲಿ –“ಅಲ್ಲಿಯೂ ಮೇಳ, ಇಲ್ಲಿಯೂ ಮೇಳ, ಚೌಡೇಶ್ವರಿಯಲ್ಲಿಯೂ ಮೇಳ”ವೆಂಬ ವಚನಭಾಗಕ್ಕೆ ಟೀಕೆಯೇ ಇಲ್ಲ. ಮಿಕ್ಕ ಟೀಕೆಗಳನುಸಾರ -ಬಸವಣ್ಣನವರಿಗೆ ಚೌಡೇಶ್ವರಿಯೆಂಬ ಗ್ರಾಮದೇವತೆಯ ಬಗ್ಗೆ ಭಯಭಕ್ತಿಯಿತ್ತೆಂದು ತೀರ್ಮಾನಿಸಬೇಕಾಗುವುದು. (2) ಈ ವಚನದ “ಮೊಲೆಯುಂಬ ಭಾವ” ಎಂಬುದೇ ಎಲ್ಲ ಮೂಲಗಳಲ್ಲಿಯು ದೊರೆಯುವ ಸಾಮಾನ್ಯ ಪಾಠವಾಗಿದೆ. ಇದಕ್ಕೆ “ತಾಯೆಂಬ ಭಾವ” ಎಂಬ ಅರ್ಥವನ್ನು ಆರೋಪಿಸುವುದು ಎಳೆದಾಡಿದಲ್ಲದೆ ಆಗದು. (3) ಮತ್ತು “ಲಿಂಗ ಜಂಗಮ ಒಂದೇ ಎಂದು” ಎಂಬ ಪಾಠಸಂದರ್ಭದಲ್ಲಿ -ಲಿಂಗಜಂಗಮವೆಂಬುದು ಲಿಂಗ ಮತ್ತು ಜಂಗಮ ಎಂಬ ಅರ್ಥವುಳ್ಳುದಾಗಿ ಪ್ರಯೋಗಗೊಂಡಿದೆ. ಅದನ್ನೇ ಅನುಸರಿಸಿ ಮುಂದುವರಿದರೆ-“ಅವರಂಗನೆಯರು ಲಿಂಗದ ರಾಣಿವಾಸ” ಎಂಬಲ್ಲಿ ಲಿಂಗವೆಂಬುದು ಲಿಂಗ-ಜಂಗಮವೆಂಬೆರಡಕ್ಕಿಂತಲೂ ಪ್ರತ್ಯೇಕವಾಗಿ (ಅಥವಾ ಮತ್ತೊಂದಾಗಿ) ನಿಲ್ಲುತ್ತದೆ. ಬಸವಣ್ಣನವರು ಹಲವೆಡೆ ಬಳಸಿರುವ “ಲಿಂಗಜಂಗಮ” ಎಂಬ ಪದವನ್ನು ಪ್ರಯೋಗಿಸುವಲ್ಲಿ ಈ ಪ್ರಕ್ಷಿಪ್ತಕಾರನು ತಪ್ಪಿದ್ದಾನೆ. ಬಸವಣ್ಣನವರ ಪ್ರಕಾರ “ಲಿಂಗಜಂಗಮ”ವೆಂದರೆ (ಲಿಂಗ ಮತ್ತು ಜಂಗಮವೆಂದಲ್ಲ) ಲಿಂಗಸ್ವರೂಪಿಯಾದ ಜಂಗಮವೆಂದರ್ಥ (ನೋಡಿ ವಚನ 186, 189, 475). ಈ ಪ್ರಯೋಗಸೂಕ್ಷ್ಮವನ್ನು ತಿಳಿಯದೆ ಕೂಡಲಸಂಗಮಾಂಕಿತದಲ್ಲಿ ಈ ವಚನವನ್ನು ಬರೆದು ಸೇರಿಸಿದವನು ಈಗ ಸಿಕ್ಕಿಬಿದ್ದಿದ್ದಾನೆ. (ಹಿಂದೆಯೇ ಅನ್ಯ ಕಾರಣಗಳಿಗಾಗಿ ಪ್ರಕ್ಷಿಪ್ತವೆಂದು ನಿರ್ಣಯಿಸಲಾಗಿರುವ 425ನೇ ವಚನದಲ್ಲಿಯೂ ಈ “ಲಿಂಗ-ಜಂಗಮ”ಪದವನ್ನು ತಪ್ಪಾಗಿಯೇ ಬಳಸಿರುವುದನ್ನು ಗಮನಿಸಿರಿ. ಅಂದರೆ ಆ 425ನೇ ಮತ್ತು ಈ 641ನೇ ವಚನಗಳೆರಡನ್ನೂ ಒಬ್ಬನೇ ಪ್ರಕ್ಷೇಪಕಾರ ಬರೆದು ಸೇರಿಸಿದನೆಂದೆನ್ನಲೂ ಬಹುದು). ಈ ಸಾಹಸವನ್ನು ಆ ಪ್ರಕ್ಷೇಪಕಾರನು ಮಾಡಿದ್ದಾದರೂ ಏಕೆಂದರೆ –ಜಂಗಮವೆಂದರೆ ಮದುವೆಯಾಗದ ಸನ್ಯಾಸಿಯೇ ಅಲ್ಲ -ಸಂಸಾರಿಯೂ ಆಗಬಹುದೆಂಬಂತೆ ಮಾಡಿ –ಜಾತಿಜಂಗಮ ಪದ್ದತಿಯನ್ನು ಬಸವಣ್ಣನವರದೆಂದು ಆರೋಪಿಸುವುದೇ ಆಗಿದೆ. ಪರಸ್ತ್ರೀಯರನ್ನು ಕಾಮಿಸಬಾರದೆಂಬುದನ್ನು ವಿಧಿಸುವ ಬಸವಣ್ಣನವರ ನಿಜವಚನ ಇನ್ನೂ ವ್ಯಾಪಕವಾದ ಧ್ವನ್ಯರ್ಥವನ್ನು ಒಳಗೊಂಡಿದೆ-ನೋಡಿ ಮುಂದಿನ 642ನೇ ವಚನವನ್ನು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು