•  
  •  
  •  
  •  
Index   ವಚನ - 641    Search  
 
ಮಾಹೇಶ್ವರನ ಜ್ಞಾನಿಸ್ಥಲ - ಪರಸ್ತ್ರೀ
ಒಡೆಯರು ತಮ್ಮ ಮನೆಗೆ ಒಡಗೊಂಡು ಹೋದರೆ, ತುಡುಗುಣಿತನದಲ್ಲಿ ಪರವಧುವ ನೋಡುವ ಸರಸ ಬೇಡ, ಕಾಣಿರಣ್ಣಾ ! ಒಡೆಯನರಸಿಯ ಸರಸ ಬೇಡ! ಕೂಳ ಸೊಕ್ಕು ತಲೆಗೇರಿ ರಾಣಿವಾಸದೊಡನೆ ಸರಸ ಬೇಡ; ಕೂಡಲಸಂಗಮದೇವ ಕರ ಸಿತಗನಯ್ಯಾ!
Transliteration Oḍeyaru tam'ma manege ōḍi hōdare, tuḍuguṇitanadalli paravadhuva nōḍuva sarasa bēḍa, kāṇiraṇṇā! Oḍeyanarasiya sarasabēḍa! Kūḷa sokku talegēri rāṇivāsadoḍane sarasa bēḍa; kūḍalasaṅgamadēva kara sitaganayyā!
Manuscript
English Translation 2 If your lords take you home along with them, Do not indulge stealthily In giving the glad eye to their wives: Look you! no fun with married wives! No frolic with the ladies when the food Has mounted to your head and makes you rush: Lord Kūḍala Saṅgama Is a strict avenging judge! Translated by: L M A Menezes, S M Angadi
Hindi Translation प्रभु तुम्हें अपने घर बुला ले जायँ तो चोरी चोरी परनारी को देखने का विनोद न करो; देखो भाई, प्रभु की पत्नी से विनोद न करो! अशन मद में मस्त होकर रनिवास के साथ विनोद न करो; कूडलसंगमदेव अत्यंत क्रूर है ॥ Translated by: Banakara K Gowdappa
Telugu Translation ఒడయులు తమ యింటికి గొనిపోవ; పరకాంతల దుడికి చెడచూడకురా మరుచూపులు ఒడయుని వధువుతో సరసమాడకురా తిని తిమురెక్క రాణివాసముతో సరసమాడకురా! కడు చెడగరిరా సంగమదేవుడు! Translated by: Dr. Badala Ramaiah
Tamil Translation உடையர் தம் இல்லத்திற்கு உடனழைத்துச் சென்றால் திருட்டுத்தனமாக பிறன் மனையை நோக்காதீர் காணீரோ, உடையனின் அரசியை நோக்காதீர் அறிவற்று, செருக்கு தலைக்கேறி அவ்வரசியை நோக்காதீர் கூடல சங்கமதேவன் மிக வண்மையானவனன்றோ. Translated by: Smt. Kalyani Venkataraman, Chennai
Marathi Translation शरणांनी आपल्या घरी बोलविले असता, चोरुन परवधूला पाहण्याचा खेळ योग्य नाही. पहा अण्णा ! शरण सतीबरोबर चेष्टा योग्य नाही! त्यांच्या घरचे खाऊन, मदोन्मत्त होऊन सतीबरोबर प्रणय योग्य नाही. कूडलसंगमदेव निष्ठूर आहे! Translated by Shalini Sreeshaila Doddamani
ಶಬ್ದಾರ್ಥಗಳು ಅರಸಿ = ರಾಣಿ; ಒಡಗೊಂಡು = ; ಕೂಳ = ; ತುಡುರುಣಿ = ; ವಧು = ; ಸರಸ = ; ಸಿತಗ = ; ಸೊಕ್ಕು = ;
ಕನ್ನಡ ವ್ಯಾಖ್ಯಾನ ಒಡೆಯನೆಂದರೆ ರಾಜ, ಒಡೆಯನೆಂದರೆ ಶರಣ, ಅವರ ಹೆಂಡಿರನ್ನು ಕಾಮದ ಕಣ್ಣಿಂದ ನೋಡುವುದು ಲೌಕಿಕವಾಗಿ ಸೇವಕನಿಗಾಗಲಿ, ಧಾರ್ಮಿಕವಾಗಿ ಭಕ್ತನಿಗಾಗಲಿ-ಯಾರಿಗೂ ಶ್ರೇಯಸ್ಕರವಲ್ಲವೆಂಬುದು ವಚನದ ತಾತ್ಪರ್ಯ. ರಾಣಿಯೊಡನೆ ಅನೈತಿಕ ಸಂಬಂಧವಿಟ್ಟುಕೊಂಡ ಪ್ರಜೆಯ ಜೀವನ ಹೇಗೆ ದುರಂತಗೊಳ್ಳುವುದೋ ಅದಕ್ಕಿಂತಲೂ ಹೆಚ್ಚಾಗಿ ದುರಂತಗೊಳ್ಳುವುದು ಶರಣರ ಹೆಂಡಿರೊಡನೆ ಅನೈತಿಕ ಸಂಬಂಧವಿಟ್ಟುಕೊಂಡ ಭಕ್ತನ ಜೀವನ-ಏಕೆಂದರೆ ಒಬ್ಬ ರಾಜನಿಗಿಂತ ಕಡಿಮೆಯಲ್ಲಿ ಶರಣರಕ್ಷಕನಾದ ರುದ್ರಶಿವನು-ಅವನು ಕರಸಿತಗ ಇನ್ನೂ ಭಯಂಕರ,

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು