ಮಾಹೇಶ್ವರನ ಜ್ಞಾನಿಸ್ಥಲ - ಪರಸ್ತ್ರೀ
ನೋಡಲಾಗದು ನುಡಿಸಲಾಗದು ಪರಸ್ತ್ರೀಯ, ಬೇಡ ಕಾಣಿರೋ!
ತಗರ ಬೆನ್ನಲಿ ಹರಿವ ಸೊಣಗನಂತೆ, ಬೇಡ ಕಾಣಿರೋ!
ಒಂದಾಸೆಗೆ ಸಾವಿರ ವರುಷ ನರಕದೊಳದ್ದುವ
ಕೂಡಲಸಂಗಮದೇವ!
Transliteration Nōḍalāgadu nuḍisalāgadu parastriya, bēḍa kāṇirō!
Tagara bennali hariva soṇaganante, bēḍa kāṇirō!
Ondāsege sāvira varuṣa narakadaladduva
kūḍalasaṅgamadēva!
Manuscript
English Translation 2 Look you ! refuse
to give the gld eye to another's wife,
Or even to speak to her :
It is,look you ,as if a dog
Running after a weather
Lord Kūḍala Saṅgama
Will for a single wish plunge you into hell
For a thousand years!
Translated by: L M A Menezes, S M Angadi
Hindi Translation पर स्त्री को मत देखो, उससे बातें मत करो;
भेड का पीछा करनेवाले श्वान सा मत दौडो!
एक आशा के लिए सहस्र वर्ष
नरक में डुबा देंगे कूडलसंगमदेव ॥
Translated by: Banakara K Gowdappa
Telugu Translation పరికింపకు; పలుకరింపకు పరస్త్రీల చేరకురా
గొట్టె వెంట నడచు కుక్కరీతి వెంటాడకురా
ఒక యాశకు వెయ్యేండ్ల నరకము తప్పదురా
కూడల సంగమదేవా!
Translated by: Dr. Badala Ramaiah
Tamil Translation பிறன்மனையைக் காணலாகாது, பேசலாகாது காணீரோ
தகரத்தின்மீது செல்லும் நாயனைய வேண்டாம் காணீரோ
ஒரு ஆசைக்கு ஆயிரமாண்டுகள் நரகத்தில்
அமிழ்த்துவான் கூடல சங்கமதேவன்.
Translated by: Smt. Kalyani Venkataraman, Chennai
Marathi Translation
विकारी दृष्टी, पाही पर नारी
निंद्य तैसी परी, बोलण्याची
लांडग्याचे पाठी, श्वानाची ती धाव
कामुक स्वभाव, तैशा परी
कूडलसंगमदेवा ! एका क्षणपाई
कोटी वर्षे राही, नरकात
अर्थ - विकारी दुष्टिने स्त्रियांकडे पाहणे व विकारी मनाने परस्त्रीशी बोलणे हे दोन्ही पाप आहे. असल्या विकारी लोकांची स्थिती त्या लांडग्या कुत्र्याप्रमाणेच होय जे क्षुद्र व क्षणिक आशा व वासनेच्या पाठीमागे लागून आपले मौलिक जीवन व्यर्थ घालवितात. माझा कूडलसंगम देव (परशिव) अशा क्षणिक व क्षणिक वासनेच्या पाठीमागे लागणाऱ्या जीवास कोटी वर्षे नरकात ठेवतो. अशांना जन्म मरणाच्या फेऱ्यातून कधीच मुक्त करीत नाही.
Translated by Rajendra Jirobe, Published by V B Patil, Hirabaug, Chembur, Mumbai, 1983
पाहू नये, बोलू नये परस्त्रीबरोबर, योग्य नाही पहा!
बकऱ्याचा पाठलाग करणाऱ्या कुत्र्यासम होणे बरे नाही.
क्षणिक आशेसाठी हजारो वर्षाचा नरक देई कूडलसंगमदेव !
Translated by Shalini Sreeshaila Doddamani
ಶಬ್ದಾರ್ಥಗಳು ತಗರ = ; ನರಕ = ; ಸಾಸಿರ = ; ಸೊಣಗ = ; ಹರಿವ = ;
ಕನ್ನಡ ವ್ಯಾಖ್ಯಾನ ನಿನ್ನವಳಲ್ಲದ ಹೆಣ್ಣನ್ನು ಆಸೆಗಣ್ಣಿಂದ ನೋಡಬೇಡ, ನುಡಿಸಬೇಡ-ಮನವೊಲಿಸಿಕೊಳ್ಳಲು ಅವಳ ಹಿಂದೆ ಹಿಂದೆಯೇ ಅಲೆಯಬೇಡ-ಎಂಬ ಈ ಮಾತು ಎಲ್ಲ ನೀತಿ ಮಾತಿನಂತೆ ಒಂದು ಒಣಮಾತಾಗಿರದೆ- “ತಗರ ಬೆನ್ನಲ್ಲಿ ಹರಿವ ಸೊಣಗನಂತೆ” ಎಂಬ ಉಪಮೆಯೊಂದನ್ನು ಜೊತೆ ಮಾಡಿಕೊಂಡು-ಮೊನಚಾದ ಅಲಗು ತಗುಲಿಸಿದ ಬಿದುರು ಕಡ್ಡಿಯಂತೆ-ಹೃದಯವನ್ನು ನಾಟುವ ಬಾಣವಾಗಿದೆ.
ಕಾಮಿಯನ್ನು ನಾಯಿಗೂ, ಕಾಮಿನಿಯನ್ನು ಟಗರಿಗೂ ಹೋಲಿಸಿರುವಲ್ಲಿ-ನಾಯಿ ತನ್ನ ನಾಯ್ತನದಿಂದ ಟಗರಿನ ಬೆನ್ನುಹತ್ತಿ ಕೊಸೆಯಲೂ ಹವಣಿಸಬಹುದು-ಆದರೆ ಆ ಟಗರು ಹಿಂತಿರುಗಿ ಒಮ್ಮೆ ಗುಮ್ಮಿತೆಂದರೆ –ಆ ನಾಯ ತಲೆ ಅಜಿಗುಜ್ಜಿಯಾಗದಿರದು. ಇಡುವ ಒಂದು ತಪ್ಪುಹೆಜ್ಜೆಯಿಂದ ಒದಗಲಿರುವ ದುರಂತದ ಕಲ್ಪನೆ ಹೊಳೆದರೆ –ಆ ಹೊಳೆದ ತಲೆಗೇ ಕ್ಷೇಮವೆಂಬುದು ಈ ವಚನೋಕ್ತಿಯ ಧಾಟಿ.
ಪರಸ್ತ್ರೀ ಸ್ತ್ರೀಯಲ್ಲ ಮೃತ್ಯುವೆಂಬುದನ್ನು ಧ್ವನಿಸಲಿಕ್ಕಾಗಿಯೇ ನಾಯೊಂದು ಬೆದೆಹತ್ತಿ-(ಕುರಿಯ ಮೇಲಲ್ಲ) ಟಗರಿನ ಮೇಲೆ ಹತ್ತಲು ಹೋಗುವುದನ್ನಿಲ್ಲಿ ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪನೆಯಿಂದ-ಕಾಮವನ್ನು ಕೊರಳ ಹಗ್ಗ ಬಿಚ್ಚಿಬಿಟ್ಟರೆ –ಎಷ್ಟೊಂದು ವಿಕೃತವಾಗಬಲ್ಲುದೆಂಬುದೂ ಕಣ್ಣಿಗೆ ಕಟ್ಟುವುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು