ಮಾಹೇಶ್ವರನ ಜ್ಞಾನಿಸ್ಥಲ - ಪರಸ್ತ್ರೀ
ತೊರೆಯಮೀವ ಅಣ್ಣಗಳಿರಾ, ತೊರೆಯ ಮೀವ ಸ್ವಾಮಿಗಳಿರಾ,
ತೊರೆಯಿಂ ಭೋ, ತೊರೆಯಿಂ ಭೋ
ಪರನಾರಿಯ ಸಂಗವ ತೊರೆಯಿಂ ಭೋ!
ಪರಧನದಾಮಿಷವ ತೊರೆಯಿಂ ಭೋ!
ಇವ ತೊರೆಯದೆ ಹೋಗಿ ತೊರೆಯ ಮಿಂದರೆ,
ಬರುದೊರೆ ಹೋಹುದು, ಕೂಡಲಸಂಗಮದೇವಾ.
Transliteration Toreya mīva aṇṇagaḷirā, toreya mīva svāmigaḷirā,
toreyiṁ bhō, toreyiṁ bhō
paranāriyara saṅgava toreyiṁ bhō!
Paradhanadāmiṣava toreyiṁ bhō!
Iva toreyade hōgi toreya mindare,
barudore hōhudu, kūḍalasaṅgamadēvā.
Manuscript
English Translation 2 O brothers, ye who dip into a stream,
O masters, ye who dip into a stream,
Renounce, renounce, renounce
Relations with another's wife;
Renounce
The lusting for another's goods!
For if you dip into a stream
Without renouncing these,
'T will be as dipping into a stream
That has run dry,
O Kūḍala Saṅgama Lord
Translated by: L M A Menezes, S M Angadi
Hindi Translation नदी में नहानेवाले भाइयों,
नदी में नहानेवाले स्वामियों,
त्याग दो, त्याग दो;
परनारी का संग त्याग दो!
परधनलोभ त्याग दो -
इन्हें बिना त्यागे नदी में नहाना
शुष्क नदी में जाने के समान है, कूडलसंगमदेव ॥
Translated by: Banakara K Gowdappa
Telugu Translation నదులమునుగు అన్నలారా! నదుల మునుగు అన్నలారా!
వదలండోయ్ వదలండోయ్! పరనారీ గమనము
వదలండోయ్ వదలండోయ్ పరధనామిషముల
వదలకవీటిని, యేట మునిగిన ఆ
ఏఱు తన దారి తాబోవునయ్యా కూడల సంగయ్యా
Translated by: Dr. Badala Ramaiah
Tamil Translation துறையில் நீந்தும் அண்ணன்மீர்
துறையில் நீந்தும் சுவாமிகளே.
துறப்பீர், துறப்பீர்
பிற பெண்களின் தொடர்பைத் துறப்பீர்
பிறர் செல்வத்தின் மீதுள்ள ஆசையைத் துறப்பீர்
இவற்றைத் துறக்காது துறையில் சென்று நீந்தினால்
பயனற்றதாம் கூடல சங்கமதேவனே.
Translated by: Smt. Kalyani Venkataraman, Chennai
Marathi Translation
पवित्रतेसाठी, गंगेचे ते स्नान
घडे न दोहन, मनाचे ते
परनारी संग, परधनी आशा
व्यर्थ त्यांची भाषा, पावित्र्याची
कूडलसंगमदेवा, ऐसा दुराचारी
जाता गंगा तिरी , आटे गंगा
अर्थ- गंगानदीत स्नान करणे वाईट नाही. पण सदाचार अथवा पावित्र्य साधण्यासाठी ते स्नान उपयुक्त ठरणार नाही. म्हणून स्नान करण्यापूर्वी परनारी व परधनाची आशा सोडणे अगत्याचे आहे, तसे न करता एखादा दुराचारी पवित्र होण्यासाठी गंगेतीरी गेल्यास ती पवित्र गंगाच आटून जाईल. म्हणजे सदाचाररुपी गंगा त्या दुराचाऱ्यापासून दूर राहिल व त्या दुराचाऱ्याला कधीच आपलेसे करणार नाही.
Translated by Rajendra Jirobe, Published by V B Patil, Hirabaug, Chembur, Mumbai, 1983
नदीत स्नान करणाऱ्या बंधूनों, नदीत स्नान करणाऱ्या स्वामीजीनों,
त्याग करा, त्याग करा ! परस्त्रीचा त्याग करा !
परधनाचा त्याग करा !
हे त्यागल्याविना नदीत स्नान केले तर
व्यर्थ होऊन जाईल कूडलसंगमदेवा.
Translated by Shalini Sreeshaila Doddamani
Urdu Translation بھائیو، سوامیو، ندی میں نہانے والو
چھوڑدو، چھوڑدو، ذہنوں سےمٹادو فوراً
غیرعورت کےتصّورکی ہراک پرچھا ئیں
دولتِ غیرکا لالچ بھی مٹادودل سے
چھوڑدو چھوڑدو ذہنوں سے مٹادوان کو
صرف ندی میں نہانے سے بھلا کیا ہوگا
یہ توبہتی ہے فقط کوڈلا سنگم دیوا
Translated by: Hameed Almas
ಶಬ್ದಾರ್ಥಗಳು ಆಮಿಷ = ಆಶೆ; ತೊರೆ = ; ನಾರಿ = ; ಬರು = ; ಮಿಂದು = ; ಮೀವ = ; ಸಂಗ = ; ಹೋಹುದು = ;
ಕನ್ನಡ ವ್ಯಾಖ್ಯಾನ ಬೆಳಗಾದರೆ ನದೀಸ್ನಾನ ಮಾಡುವ ಅಥವಾ ಯಾತ್ರೆ ಹೊರಟು ಪುಣ್ಯ ನದಿಗಳಲ್ಲಿ ಮುಳುಗುವ ಪ್ರತಿಷ್ಠಿತ ಮಡಿವಂತರನ್ನು ಕುರಿತ ಮಾತಿದು.
ಈ ವಚನದಲ್ಲಿರುವ ಸ್ವಾಮಿಗಳಿರಾ ಎಂಬ ಪದವು ಬಸವಣ್ಣನವರ ಪ್ರಕಾರ ತಮ್ಮ ಕಾಲದ ಮಠಮಾನ್ಯಗಳ (ಜಾತಿಜಂಗಮ) ಸ್ವಾಮಿಗಳನ್ನೇ ಕುರಿತುದಾದರೆ, ಅಣ್ಣಗಳಿರಾ ಎಂಬ ಪದವು ಸಂಸಾರಿಗಳಾಗಿದ್ದು ಶರಣರೆನಿಸಿಕೊಂಡು ಪ್ರತಿಷ್ಠಿತರಾದವರನ್ನೇ ಕುರಿತುವಾಗಿದೆ ಈ ಸಂನ್ಯಾಸೀ ಸಂಸಾರಿಗಳಿಬ್ಬರೂ ಹಾದರಮಾಡಿ ಮನೆಮನೆಯ ನೆಮ್ಮದಿಯನ್ನು ಕದಡುತ್ತಿದ್ದರೆ, ತಮ್ಮ ಸುತ್ತಿನವರೆಲ್ಲರೂ ದಟ್ಟದರಿದ್ರರಾಗುವಷ್ಟು ಧನ ಸಂಗ್ರಹಮಾಡಿ-ಸರ್ವರ ಬದುಕಿನ ಬುನಾದಿಗೆ ತಮ್ಮ ಅಹಂಕಾರದ ಸನ್ನೆಗೋಲನ್ನು ಪೆಟ್ಟಿ ಮೀಟುತ್ತಿದ್ದರೆ ಗತಿಯೇನು ? ಇಂಥ ಕಾಮಲಂಪಟರಿಗೆ ಮತ್ತು ಧನಲಂಪಟರಿಗೆ (ಧರ್ಮವೆಲ್ಲಿಯದು ? ಪವಿತ್ರ ಕ್ಷೇತ್ರವೆಲ್ಲಿಯದು ?) ಪಣ್ಯನದಿಗಳೆಲ್ಲಿಯವು ? ಅವು ಅವರ ಪಾಪಗಳನ್ನು ತೊಳೆಯವು-ಎಂಬುದಭಿಪ್ರಾಯ.
ತೊರೆಯೆಂದರೆ ನದಿಯೆಂದೂ ತ್ಯಜಿಸೆಂದೂ ಎರಡರ್ಥ.
“ತೊರೆಯಲ್ಲಿ ಮೀಯುವ ಅಣ್ಣಂದಿರೇ, ತೊರೆಯಲ್ಲ ಮೀಯುವ ಸ್ವಾಮಿಗಳಿರೇ (ಆ ತೊರೆಯಲ್ಲಿ ಮೀಯುವ ಮುನ್ನ) ಪರನಾರೀಸಂಗವನ್ನು ತೊರೆಯಿರಿ, ಪರಧನದಾಮಿಷವನ್ನು ತೊರೆಯಿರಿ, ಇವೊಂದನ್ನೂ ತೊರೆಯದೆ (ದೂರದೂರ ಯಾತ್ರೆ) ಹೋಗಿ ಪುಣ್ಯ ನದಿಗಳಲ್ಲಿ ಮುಳುಗೆದ್ದರೆ-ಆ ನದಿ ನಿಮ್ಮ ಪಾಪಗಳನ್ನು ನಿಮಗೇ ಬಿಟ್ಟು –ತನಗೆ ತಾನು ಯಾಥಾಪ್ರಕಾರ ಹರಿದುಹೋಗುತ್ತದೆ”-ಎಂಬ ಈ ವಚನದಲ್ಲಿ “ತೊರೆ”ಯೆಂಬುದನ್ನು ನಾಮಪದವಾಗಿ ಕ್ರಿಯಾಪದವಾಗಿ ಅಲ್ಲಲ್ಲಿ ಪುನರಾವರ್ತಿಸಿ ಬಳಸಿ-ಹೊಸಹೊಸ ಅರ್ಥದ ಭಾವದ ಲೋಕಲೋಕಾಂತರಗಳು ಸಚಿತ್ರವಾಗಿ ತೆರೆದುಕೊಳ್ಳುವಂತೆ ಮಾಡುವ ವರ್ಣನೆಯ ಈ ಮೋಡಿ ಬಸವಣ್ಣನವರ ಕಾವ್ಯಶಕ್ತಿಯ ಅಪೂರ್ವ ಲಕ್ಷಣ.
ಅಂತರಂಗವನ್ನು ಶುದ್ಧಿಕರಿಸಿಕೊಳ್ಳದೆ ಬರಿದೆ ನದೀ ಸ್ನಾನ ಮಾಡಿದರೆ ಬರೀನದಿ ಹರಿದುಹೋಗುತ್ತದೆಂಬುದು ನಾವು ಇದುವರಿಗೂ ಕಂಡರಿಯದ ಸಶಕ್ತ ಸಚಿತ್ರ ಉಕ್ತಿ !
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು