ಮಾಹೇಶ್ವರನ ಜ್ಞಾನಿಸ್ಥಲ - ಭಾವಶುದ್ಧಿ
ಸತ್ಯ ಶೌಚ ನಿತ್ಯ ನೇಮವ ತಪ್ಪದೆ ಮಾಡಬಲ್ಲರೆ ಅದು ಲೇಸು.
ಮತ್ಸ್ಯ ಕೂರ್ಮ ಮಂಡೂಕ ಜಲದೊಳಗಿದ್ದಲ್ಲಿ ಫಲವೇನು?
'ಚಿತ್ತಮಂತರ್ಗತಂ ದೃಷ್ಟ್ವಾ |ತೀರ್ಥಸ್ನಾನೇನ ಶುಧ್ಯತೀ||
ಶತಕುಂಭಜಲೇ ಶೌಚಂ| ಸುರಾಭಾಂಡಮಿವಾಶುಚಿಃ||
ಆಗಡವ ಮಾಡಿ ಮಾಗುಡವ ಮಿಂದರೆ,
ತಾ ಕೊಡಬಲ್ಲನೆ ಕೂಡಲಸಂಗಮದೇವ?
Transliteration Satya śauca nityanēmava tappade māḍaballare adu lēsu.
Matsya kūrma maṇḍūka jaladoḷagirda phalavēnu?
'Cittamantargataṁ dr̥ṣṭvā |tīrthasnānēna śudhyatī||
śatakumbhajalē śaucaṁ| surābhāṇḍamivāśuciḥ||
āgaḍava māḍi maguḍava mindare,
tākoḍaballane kūḍalasaṅgamadēva?
Manuscript
English Translation 2 It's good to practice, unfailingly,
Both truth and cleanliness
As well daily rites:
What boots it to the fish,
The tortoise and frog
To live in water?
When the heart is impure the holy bath
Can not purify; even taking a bath
With a hundred pots of water leaves it as impure
As a toddy-pot"...
If you do what should not be done
And bathe yourself in a reputed stream,
Does Lord Kūḍala Saṅgama,
Pray, give Himself to you?
Translated by: L M A Menezes, S M Angadi
Hindi Translation सत्य शुचि, नित्य नियम का
अचूक आचरण अच्छा है ।
मत्स्य, कूर्म, मंडूक के जल में रहने से क्या लाभ है?
“चित्तमंतर्गतं दृष्ट्वा तीर्थस्नानेन शुध्यति
शतकुंभजले शौचं सुराभांडमिवाशुचिः॥“
अनुचित काम कर महातीर्थों में नहाने से
कूडलसंगमदेव की कृपा होगी?
Translated by: Banakara K Gowdappa
Telugu Translation సత్య శౌచవ్రతముల విడక నిత్యమనుష్టించిన శుభమగు
మత్స్య కూర్మ మండూకములు నీట నుండిన ఫలమేమి?
‘‘చిత్త మంతర్గతం దృష్ట్వా తీర్థ స్నానేన శుధ్యతే
శతకుంభ జలే శౌచం సురాభాండమివాశుచిః’
చెడుగులు జేసి మడుగుల మునుగిన
మడుగేమి సేయురా? సంగడేమీయగలడురా?
Translated by: Dr. Badala Ramaiah
Tamil Translation உண்மை, தூய்மையோடு நாள்தோறும் நியமத்தைத்
தவறாமல் செய்யவியன்றால் அது நல்லது
மீன், ஆமை, தவளை நீரினுள்ளே இருப்பின் பயனென்ன
“சித்தமந்தர்கதம் த்ருஷ்டம் தீர்த்தஸ்னான்ன சுப்யதி
சதகும்ப ஜலே சௌசம் ஸுராபாண்டமிவாசுசி”
தீச்செயலைச் செய்து நதியிலே நீந்தின்
கூடல சங்கமதேவன்தான் அளிக்கவல்லனோ?
Translated by: Smt. Kalyani Venkataraman, Chennai
Marathi Translation
सत्य, शौच, नित्य, नेम न चुकता करणे योग्य आहे.
मत्स्य, कूर्म मंडूक जलात राहिले तर काय उपयोग ?
चित्तमंतगरतं दृष्टवातीर्थस्नानेन शुध्यति ।
शतकुंभजले शौचं सुराभांडमिा शुचिः।
कुकर्म करुन तीर्थस्नान केल्याने
प्रसन्न कसा होईल कूडलसंगमदेव ?
Translated by Shalini Sreeshaila Doddamani
ಶಬ್ದಾರ್ಥಗಳು ಅಂತರ್ಗತ = ಒಳಗೆ; ಆಗಡ = ಅಲ್ಲದ ಅಥವಾ ಒಲ್ಲದ ಕೆಲಸ; ಕುಂಭಜ = ; ಕೂರ್ಮ = ; ಚಿತ್ತ = ; ತೀರ್ಥ = ; ದೃಷ್ಟ್ವಾ = ; ನೇಮ = ; ಬಾಂಡ = ; ಮಂಡೂಕ = ; ಮತ್ಸ್ಯ = ; ಮಾಗುಡ = ; ಮಿಂದು = ; ಲೇಸು = ; ಶೌಚ = ; ಸುರ = ;
ಕನ್ನಡ ವ್ಯಾಖ್ಯಾನ ಸತ್ಯವನು ನುಡಿಯಬೇಕು. (ಶೌಚವೆಂದರೆ) ಬ್ರಹ್ಮಚರ್ಯವನ್ನು ಪಾಲಿಸಬೇಕು., (ನಿತ್ಯನೇಮವೆಂದರೆ) ಅರ್ಥಪೂರ್ಣವಾದ ಆಚರಣೆಯನ್ನು ನಿರಂತರವಾಗಿ ನಡೆಸಬೇಕು. ಇದೇ ಎಲ್ಲ ಧರ್ಮಗಳ ಸಾರಸಂಗ್ರಹವಾದ ಮೂರು ಮಾತು. ಇದೊಂದನ್ನೂ ಮಾಡದೆ-ಸ್ನಾನವೆಂದು ಮಡಿಯೆಂದು ಮೀನಂತೆ ಆಮೆಯಂತೆ ಕಪ್ಪೆಯಂತೆ ನೀರೊಳಗೇ ಇದ್ದರು ತಾನೆ ಪ್ರಯೋಜನವೇನು ? ಆ ಮೀನು ಆಮೆ ಕಪ್ಪೆಗಿಂತ ಅವನು ಹೇಗೆ ತಾನೆ ಮೇಲು ?
ಪುಣ್ಯತೀರ್ಥಗಳಲ್ಲಿ ಮುಳುಗಿದವನು ಶುದ್ಧವಾಗುವುದಿಲ್ಲ-ಚಿತ್ರದಲ್ಲಿ ಅಂತರ್ಗತವಾದ ಪಾಪವನ್ನು ತೀರ್ಥಸ್ಥಾನವು ತೊಳೆಯುವುದಿಲ್ಲ-ಹೆಂಡದ ಮಡಕೆಯನ್ನು ಹೊರಹೊರಗೇ ನೂರು ಗಿಡಗೆ ನೀರಿನಿಂದ ತೊಳೆದರೇನು-ಅದೆಂದಿಗೂ ತನ್ನ ದುರ್ವಾಸನೆಯನ್ನು ಬಿಡುವುದಿಲ್ಲವಲ್ಲವೆ ? (ನೋಡಿ ವಚನ 105)
ಹಾಗೆಯೇ ಮಾಡಬಾರದ್ದನ್ನು ಮಾಡಿ ತೀರ್ಥಕುಂಡದಲ್ಲಿ ಸ್ನಾನ ಮಾಡಿದರೆ ಶಿವನೆಂದಿಗಾದರೂ ಪ್ರಸನ್ನವಾದಾನೇನು ? ಇಲ್ಲ. (ಆಗಡ : ಉಪದ್ರವ, ಮಾಗುಡ : ಮಹಾಕುಂಡ.)
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು