•  
  •  
  •  
  •  
Index   ವಚನ - 645    Search  
 
ಮಾಹೇಶ್ವರನ ಜ್ಞಾನಿಸ್ಥಲ - ಕಪಟತನ
ಕುಳ್ಳಿರ್ದಲ್ಲಿ ಲಿಂಗವ ಪೂಜಿಸಿ ಅಲ್ಲದಾಟವನಾಡುವರಯ್ಯಾ: ಬೆಳ್ಳೆ ತ್ತಿನ ಮರೆಯಲ್ಲಿರ್ದು ಹುಲ್ಲೆಗಂಬ ತೊಡುವಂತೆ! ಕಳ್ಳ ಹಾದರಿಗರ ಕೈಯಲು, ಪೂಜೆಯ ಕೊಳ್ಳ ನಮ್ಮ ಕೂಡಲಸಂಗಮದೇವ!
Transliteration Kuḷḷirdalli liṅgava pūjisi alladāṭavanāḍuvarayya: Beḷḷe ttina mareyallirdu hullegamba toḍuvante! Kaḷḷa hādarigara kaiyalu, pūjeya koḷḷa nam'ma kūḍalasaṅgamadēva!
Manuscript
English Translation 2 Worshipping Liṅga where you sit, You merely do what is not agreeable Like shooting an arrow at a deer, Concealed behind a white ox! Our Lord Kūḍala Saṅgama Spurns worship at the hands of those Who're whoremongers and thieves! Translated by: L M A Menezes, S M Angadi
Hindi Translation उपविष्ट स्थान पर लिंगपूजा कर- अनुचित व्यवहार करते हैं; जैसे श्वेत बैल की आड में हरिण पर तीर चलाते हैं । मम कूडलसंगमदेव ऐसे धूर्तों और व्यभिचारियों से पूजा स्वीकार नहीं करते । Translated by: Banakara K Gowdappa
Telugu Translation కూర్చున్న కడ లింగము నర్చించి కూడని ఆటల కూడెదరయ్యా గడ్డిదూడ నడ్డమిడుకొని మృగమును గురి పెట్టినట్లగు తెరచాటు రంకుమగల చేతిపూజ నొల్ల డయ్యా మా శివుడు Translated by: Dr. Badala Ramaiah
Tamil Translation அமர்ந்த இடத்தில் இலிங்கத்தை வணங்கி இல்லாத ஆட்டம் ஆடுவர் ஐயனே வெள்ளை எருதின்பின் மறைந்து மான்மீது அம்பு விடுவதனைய கள்ளபரத்தமை செய்யும் கையினால் பூஜையைக் கொள்ளான் நம் கூடல சங்கமதேவன். Translated by: Smt. Kalyani Venkataraman, Chennai
Marathi Translation लिंगपूजा करीत असता दुष्ट कर्मात लीन होतात, श्वेत वृषभाच्या आडून हरणाची शिकार करण्यासम आहे. चोर लंपटाच्या पूजेने प्रसन्न होत नाही आमचे कूडलसंगमदेव. Translated by Shalini Sreeshaila Doddamani
ಶಬ್ದಾರ್ಥಗಳು ಅಲ್ಲದಾಟ = ; ಬೆಳ್ಳೆ = ; ಹಾದರಿ = ; ಹುಲ್ಲೆ = ;
ಕನ್ನಡ ವ್ಯಾಖ್ಯಾನ ಬೇಟೆಯಾಡುವ ಕಿರಾತರು ಜಿಂಕೆಗೆ ಬಾಣವನ್ನು ಬಿಡುವಾಗ ಅದರೆದುರಿಗೆ ತಾವು ಪ್ರತ್ಯಕ್ಷವಾಗಿ ನಿಲ್ಲದೆ -ಹುಲ್ಲುತುಂಬಿ ಮಾಡಿದ ಒಂದು ಎತ್ತಿನಾಕೃತಿಯ ಮರೆಯಲ್ಲಿ ನಿಲ್ಲುವರು. ಅಲ್ಲಿರುವುದು ಎತ್ತೆಂದು ನಿರ್ಭೀತಿಯಿಂದ ಜಿಂಕೆ ಬಳಿಬಳಿಯೇ ಸುಳಿದಾಡಿದಾಗ -ಬಿಟ್ಟ ಬಾಣ ನಟ್ಟು-ಅದು ಆ ಕಿರಾತರ ಬಾಯ ತುತ್ತಾಗುವುದು. ಲಿಂಗಪೂಜೆಯ ಮರೆಯಲ್ಲಿ ಮುಗ್ಧ ಭಕ್ತಜನರನ್ನು ಶೋಷಿಸುವ ನಿತ್ಯವೇಷಧಾರಿ(ಸ್ವಾಮಿ)ಗಳು ಮೇಲೆ ಹೇಳಿದ ಕಿರಾತರಿಗಿಂತ ಕುಟಿಲರಲ್ಲವೇನು, ಕ್ರೂರಿಗಳಲ್ಲವೇನು, ವಿಶ್ವಾಸಘಾತುಕರಲ್ಲವೇನು? ಇಂಥವರು ಮಾಡುವ ಪೂಜೆಯನ್ನೆಂದಿಗೂ ಶಿವನು ಸ್ವೀಕರಿಸುವುದಿಲ್ಲ, ಭಕ್ತರು ಯಾರಾದರೊಬ್ಬರನ್ನು ಪೂಜ್ಯರೆಂದು ಗಣನೆ ಮಾಡುವ ಮುನ್ನ –ಅವರನ್ನು ಶಿವಪೂಜಾಸಮಯದಲ್ಲಿ ಕಾಣದೆ-ಶಿವಪೂಜಾನಂತರ ನಿತ್ಯ ಜೀವನದಲ್ಲಿ ಸಹಜೀವಿಗಳೊಡನೆ ಅವರು ಹೇಗೆ ವರ್ತಿಸುವರೆಂಬುದನ್ನು ನೋಡಬೇಕು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು