•  
  •  
  •  
  •  
Index   ವಚನ - 646    Search  
 
ಮಾಹೇಶ್ವರನ ಜ್ಞಾನಿಸ್ಥಲ - ನಡೆ-ನುಡಿ
ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ದ ಲಿಂಗವು ಘಟಸರ್ಪನಂತೆ! ನುಡಿಯಲು ಬಾರದು, ನಡೆಯಲು ಬಾರದು, ಲಿಂಗದೇವನೆ ದಿಬ್ಯವೊ, ಅಯ್ಯಾ! ಬಡವನ ಕೋಪ ಅವುಡಿಗೆ ಮೃತ್ಯುವಾದಂತೆ ಕಡೆದಾಂಟದು, ಕಾಣಾ, ಕೂಡಲಸಂಗಮದೇವಾ.
Transliteration Nuḍiyalli eccattu naḍeyalli tappidare hiḍidirda liṅgavu ghaṭasarpanante! Nuḍiyalū bāradu, naḍeyalū bāradu, liṅgadēvane dibyavo, ayyā! Baḍavana kōpa avuḍige mr̥tyuvādante kaḍedantadu, kāṇā, kūḍalasaṅgamadēvā.
Manuscript
Music Courtesy:
English Translation 2 Alert in word if you play false in deed, The Liṅga that you hold Is like a monstrous snake! You cannot talk or act But God is your ordeal, good Sir! Mark you, Kūḍala Saṅgama Lord, One cannot get anywhere, Even as a poor man's rage That ruins his own jaws! Translated by: L M A Menezes, S M Angadi
Hindi Translation वचन में जागृत रहकर आचरण में चूक जाओ, तो करस्थललिंग घटसर्प होगा। कहना कठिन है, करना कठिन है, लिंगदेव ही प्रमाण है, महाशय। जैसे निर्धन का कोप उसके जबडे के लिए मृत्यु है, वैसे कोई पार नहीं पाता, कूडलसंगमदेव ॥ Translated by: Banakara K Gowdappa
Telugu Translation నుడుల మేల్కొని నడల దప్పిన అరచేతి లింగము ఘట సర్పమై పోవురా! పలుకరాదు ప్రవర్తింపరాదు లింగదేవుడే దివ్యమయ్యా! పేదకోపము పెదవికి చేటగునట్టు లీచేత తుదిముట్టదురా కూడల సంగమదేవా! Translated by: Dr. Badala Ramaiah
Tamil Translation அழகுற உரைத்து, நடையில் தவறினால் இலிங்கம், குடப்பாம்பனைய பிடித்திடுவான் கூறவும் இயலாது, நடக்கவும் இயலாது இலிங்கதேவனே சிறந்தவனையனே ஏழையின் சினம் கன்னத்திற்கு அழிவாவதனைய இறுதியில் தாண்டாது காணாய் கூடல சங்கமதேவனே. Translated by: Smt. Kalyani Venkataraman, Chennai
Marathi Translation दाखविती जागृतवाणी चुकती आचार तैसायाची लिंगपुजा नाटकी व्यवहार ॥ १ ॥ तैसियाचे हाती लिंग बचनागापरी जाण घातक तथा होईल घेईल तयाचा प्राण ॥२॥ बोल-चाल एक होई तोचि लिंग भक्त काळीमाच दिव्यत्वाला फासितो अभक्त ॥३॥ लिंगदेव दिव्य म्हणूनी नको मिथ्याचार गरीबाचा तांप कोप तया भक्षिणार ॥४॥ कूडलसंगम देवा ऐसे कैसा तरणार भ्रांत आडमार्गे जाता कोण रक्षणार ? ॥५॥ अर्थ - तोंडात दिव्यत्वाची भाषा आणि अंतरात संशय आणि खोट अशाने आपल्या हाती घेतलेले इष्टलिंग साक्षात बचनाग जाणावे. तो त्यांचा घात केल्याशिवाय राहणार नाही. असे अभक्त स्वतःबरोवर इतरांचाही घात करतात. आणि लिंगाच्या दिव्यत्वाला काळीमा फासतात. हे अशा कूडलसंगमदेवा! (परशिवा) त्यांच्या आशा वागण्यामुळे त्रस्त गरीबांचा कोप त्यांना भक्षिल्याशिवाय राहणार नाही. माझ्या शिवशरणींचे मात्र बोलणे व चालणे एकच असते म्हणून ते तुला प्रिय असतात. Translated by Rajendra Jirobe, Published by V B Patil, Hirabaug, Chembur, Mumbai, 1983 बोलणे गोड, आचरण वाईट असेल तळहातावरील लिंग घटसर्प होईल देवा. असत्य बोलू नये, दुराचार करू नये. म्हणून लिंगदेव हेच साक्षी आहे देवा. गरीबाचा राग त्याच्या दाढेला घातक आहे. भवसागर असा पार होणार नाही कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅವುಡಿ = ಮೆಲಕು, ದವಡೆ; ಎಚ್ಚೆತ್ತು = ; ಘಟಸರ್ಪ = ; ದಾಂಟು = ; ದಿಬ್ಯ = ; ಮೃತ್ಯು = ;
ಕನ್ನಡ ವ್ಯಾಖ್ಯಾನ ನಡೆ-ನುಡಿ ಒಂದಾಗಿರಬೇಕು ಕಲ್ಯಾಣದಲ್ಲಿ ಬಸವಣ್ಣನವರ ದಿವ್ಯ ನೇತೃತ್ವದಲ್ಲಿ ನಿರ್ಮಿತವಾದ ಅನುಭವಮಂಟಪ ನುಡಿಗೆ ಎಷ್ಟೊಂದು ಪ್ರಾಧಾನ್ಯವನ್ನಿತ್ತಿತ್ತೋ ಅಷ್ಟೆ ಪ್ರಾಧಾನ್ಯವನ್ನು ನಡೆಗೂ ಕೊಟ್ಟಿತ್ತು. ಅದು ಕೇವಲ ಮಾತಿನ ಮಂಟಪವಾಗಿರಲಿಲ್ಲ. ಮಾತನ್ನು ಕೃತಿಗಿಳಿಸುವ ಮಹಾ ಮಂಟಪವಾಗಿತ್ತು. ಆದ್ದರಿಂದಲೇ ಜಾತಿ-ವಯ-ಲಿಂಗಾತೀತವಾಗಿ ಅಲ್ಲಿ ಸೇರಿದ್ದ ಶರಣ ಶರಣೆಯರು ನಡೆನುಡಿಗಳೊಳಗೊಂದಾಗಿದ್ದರು. ತದ್ವಿರುದ್ಧವಾಗಿ, ನೀತಿ-ನಿಯಮಗಳನ್ನು ವಿಧಿಸುವ ಇಂದಿನ ಮುಖಂಡರು ‘ಅವು ಇರುವುದು ಸಾಮಾನ್ಯ ಜನರಿಗಾಗಿ, ಅವುಗಳನ್ನು ಪಾಲಿಸಬೇಕಾದವರೂ ಅವರೇ, ನಾವಲ್ಲ; ನಾವಿರುವುದು ಅವುಗಳನ್ನು ಉಪದೇಶಿಸುವುದಕ್ಕೆ ಮಾತ್ರ’ ಎಂದು ತಿಳಿಯುತ್ತಾರೆ. ಆದರೆ ಒಬ್ಬ ಶ್ರೀಸಾಮಾನ್ಯನೇ ಆಗಲಿ, ಅಥವಾ ಅಸಮಾನ್ಯ ಶ್ರೀಯೇ ಆಗಲಿ ನೀತಿ ನಿಯಮಗಳೆಂದರೆ ಎಲ್ಲರಿಗೂ ಒಂದೇ. ಹಾಗಿರದೆ ಸಾಮಾನ್ಯನಿಗೇ ಒಂದು, ಮುಖಂಡನಿಗೇ ಒಂದು ಆದರೆ, ಅದು ನೀತಿನಿಯಮಗಳ ನೀತಿಗೇ ವಿರುದ್ಧ. ನುಡಿಯಲ್ಲಿ ಎಚ್ಚರವಹಿಸಿ ನಡೆಯಲ್ಲಿ ಎಡವಿದ್ದ ಇಂತಹ ಜನರನ್ನು ಕಂಡೇ ಬಸವಣ್ಣನವರು ಎಚ್ಚರಿಕೆ ನೀಡುತ್ತಿದ್ದಾರೆ. ‘ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ದ ಲಿಂಗ ಘಟಸರ್ಪ ನೋಡಾ.......’ ನಮ್ಮ ನುಡಿ, ನಮ್ಮ ನಡೆಯಲ್ಲಿ ಮೂಡಿಬರಬೇಕು. ಹಾಗಲ್ಲದೆ ನುಡಿಯಲ್ಲಿ ಜಾಗ್ರತರಾಗಿ ನಡೆಯಲ್ಲಿ ತಪ್ಪಿದೆವೆಂದರೆ, ನಮ್ಮಕರಸ್ಥಲದೊಳಗಿರುವ ಲಿಂಗವೇ ಘಟಸರ್ಪ. ಬಸವಣ್ಣನವರ ಈ ಮಾತು ಧಾರ್ಮಿಕ, ಆರ್ಥಿಕ, ರಾಜಕೀಯ ಮುಖಂಡರೆಲ್ಲರಿಗೂ ಅಷ್ಟೇ ಏಕೆ, ನಡೆಯಲ್ಲಿ ತಪ್ಪುವವರೆಲ್ಲರಿಗೂ ಅನ್ವಯಿಸುವುದು. ಈ ಎಲ್ಲಾರಂಗಗಳ ಮುಖಂಡರು ಹೇಳುವುದೇ ಒಂದಾದರೆ ಮಾಡುವುದೇ ಒಂದು. ಆದುದರಿಂದಲೇ ಅವರು ಹೇಳುವುದು ಒಮ್ಮೊಮ್ಮೆ ಸರಿಯೇ ಆಗಿದ್ದರೂ ಜನತೆಗೆ ಅದರಲ್ಲಿ ವಿಶ್ವಾಸವಿಲ್ಲದಂತಾಗುತ್ತದೆ. ಆದ್ದರಿಂದ ಮುಖಂಡನಾದವನು ತನ್ನ ನುಡಿಯಲ್ಲಿನ ಆದರ್ಶವನ್ನು ಮೊದಲು ತನ್ನ ನಡೆಯಲ್ಲಿ ತಂದು ತೋರಿಸಿದರೆ ಅಂತಹ ನುಡಿ, ಜನತೆಯ ಮೇಲೆ ಪರಿಣಾಮಕಾರಿಯಾಗಬಲ್ಲದು. ಜನತೆ ಅಂತಹದರಲ್ಲಿ ವಿಶ್ವಾಸವಿಡುವುದು. ಬಸವಣ್ಣ ಇಂತಹ ಒಂದು ಆದರ್ಶವನ್ನು ತನ್ನ ನಡೆನುಡಿಗಳಲ್ಲಿ ತೋರಿಸಿದ. ಆದುದರಿಂದಲೇ ನುಡಿಜಾಣ ನಡೆಧೀರನೆಂದು ಅಣ್ಣ ಪ್ರಶಂಸೆಗೆ ಪಾತ್ರನಾದ. ‘....... ಬಡವನ ಕೋಪ ಅವುಡಿಗೆ ಮೃತ್ಯುವಾದಂತೆ ಕಡೆದಾಂಟದು ಕಾಣಾ ಕೂಡಲಸಂಗಮದೇವಾ’ ನುಡಿದಂತೆ ನಡೆಯದವನು ಬಡವನಿದ್ದಂತೆ. ಬಡವನ ಕೋಪಕ್ಕೆ ಹೇಗೆ ಬೆಲೆಯಿಲ್ಲವೋ ಹಾಗೆ ನಡೆಯಲ್ಲಿ ದುರ್ಬಲನಾದವನ ನುಡಿಗೂ ಬೆಲೆಯಿಲ್ಲ. ಬಡವ ಕೋಪಿಸಿದರೂ ಅದು ಅವನ ಅವುಡಿಗೆ (ದವಡೆಗೆ) ಮೃತ್ಯು ಅಂದರೆ ವಿನಾಶಕ್ಕೆ ಕಾರಣವೇ ಹೊರತು ಬೇರೆ ಯಾವ ಪ್ರಯೋಜನವೂ ಇಲ್ಲ. ನಡೆನುಡಿಗಳಲ್ಲಿ ಒಂದಾಗದವನ ಭಕ್ತಿ ಬಡಭಕ್ತಿ. ಇಂತಹ ಬಡಭಕ್ತಿಯಿಂದ ಯಾವ ಫಲವೂ ಉಂಟಾಗದು. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.