•  
  •  
  •  
  •  
Index   ವಚನ - 647    Search  
 
ಮಾಹೇಶ್ವರನ ಜ್ಞಾನಿಸ್ಥಲ - ಭಾವಶುದ್ಧಿ
ತನು ಶುಚಿಯಿಲ್ಲದವನ ದೇಹಾರವೇಕೆ? ದೇವರು ಕೊಡನೆಂಬ ಭ್ರಾಂತದೇಕೆ? ಮನಕ್ಕೆ ಮನವೆ ಸಾಕ್ಷಿ; ಸಾಲದೆ, ಲಿಂಗತಂದೆ? ಹೇಂಗೆ ಮನ ಹಾಂಗೆ ನಿಮ್ಮ ಘನ, ತಪ್ಪದು, ಕೂಡಲಸಂಗಮದೇವ.
Transliteration Tanu śuciyilladavana dēhāravēke? Dēvaru koḍanemba bhrāntadēke? Manakke manave sākṣi; sālade, liṅgatande? Heṅge mana hāṅge nim'ma ghana, tappadu, kūḍalasaṅgamadēva.
Manuscript
Music Courtesy:
English Translation 2 What means the worship of a man Whose body is not pure? What means this fancy that the Lord Is not munificent? The mind bears witness to the mind: Is Father Liṅga not enough? As our mind is, so Thy glory is: This never fails, O Kūḍala Saṅgama Lord! Translated by: L M A Menezes, S M Angadi
Hindi Translation जिसका देह मलिन है उसकी पूजा क्यों? देव नहीं देगा यह भ्राँति क्यों? मन का साक्षी मन ही है, यह पर्याप्त नहीं, लिंग प्रभो? जैसा मन है वैसी तव महिमा ; यह अनिवार्य है, कूडलसंगमदेव ॥ Translated by: Banakara K Gowdappa
Telugu Translation దేహశుద్ధి లేని దేవతార్చనమేల? దేవుడిచ్చునను భ్రాంతి యేల? మనసుకు మనసే సాక్షి; చాలదే మహాదేవః మనసుకు తగినంతఘనత తప్పదురా సంగమదేవా! Translated by: Dr. Badala Ramaiah
Tamil Translation உடல் தூய்மையற்றோனுக்கு உடலிற்கு உணவு எதற்கு? இறைவன் அளியான் எனும் மருள் எதற்கு? மனத்திற்கு மனமே சாட்சி, போதாதோ இலிங்க தேவனே? மனமெப்படியோ, பெருமையும் அவ்விதமே, தப்பாது கூடல சங்கமதேவனே. Translated by: Smt. Kalyani Venkataraman, Chennai
Marathi Translation देहशुद्ध जाण, तोचि बाह्यात्कार अंतरशुद्ध थोर, देवत्व ते मना साक्षी मन, येर सर्व भ्रांती दंभाचारी येतो, ऐसे भाव मनाचा स्वभाव, देवाचे धनत्व जैसा मनोभाव, तैसा देव कूडलसंगमदेवा! मनाचे घनत्व देवाचे देवत्व, तैशापरी अर्थ - शूचिर्भूतता, देहशुद्धी हे बाह्याचार होत. यास महत्व देणे म्हणजे बाह्यअवडंबर होय. ज्ञानयुक्त किया हेच (भक्तीमार्गातील) अंतरशुद्धीचे मार्ग होत. यालाच देवत्व प्राप्त करुन घेण्याचे साधन म्हणतात. बाह्य शूचिर्भूतता लोकांना दाखविणारे तर अंतरशुद्धता हे मनाला घनत्व प्राप्त करुन देणारे होत. त्यात दंभाचार नसतो. कारण मनोव्यापाराशी साक्ष एकमेव मनच असते. म्हणून शूचिर्भूतता एक मानसिक भ्रांती होय. हे कूडलसंगमदेवा (परमेश्वरा) जैसे ज्याचे मन त्याला तसाच देव! Translated by Rajendra Jirobe, Published by V B Patil, Hirabaug, Chembur, Mumbai, 1983 देह शुध्दी विना पूजा अर्चनेचा काय उपयोग? देव देणार नाही ही भ्रांती कशाला ? मनाला मनच साक्षी पुरेसे नाही लिंगदेवा? जसे मन तसा आपला घन महिमा कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಘನ = ; ತನು = ; ಭ್ರಾಂತ = ; ಶುಚಿ = ; ಸಾಕ್ಷಿ = ;
ಕನ್ನಡ ವ್ಯಾಖ್ಯಾನ ದೇವರ ಪೂಜೆ ಮಾಡುವವನು ದೇಹಗುಣಗಳನ್ನು ಕಳೆದು ದೇಹವನ್ನು ದಿವ್ಯ ಮಾಡಿಕೊಳ್ಳಬೇಕು –ಆಗ ದೇವರು ಸದ್ಗತಿಯನ್ನು ಕೊಡುವನು. ದೇಹವನ್ನು ದಿವ್ಯ ಮಾಡಿಕೊಳ್ಳದೆ –ಎಷ್ಟು ಪೂಜಿಸಿದರೂ ದೇವರು ಸದ್ಗತಿಯನ್ನು ಕೊಡಲಿಲ್ಲ ಎನ್ನುವುದು ಭ್ರಾಂತಿಯೇ ಸರಿ. ಶುಚಿಯಿಲ್ಲದ ಸದ್ಗತಿ ಸಿದ್ಧಿಸುವುದಿಲ್ಲ. ತನುಗುಣ ಕಳೆದು ಆ ಮೂಲಕ ಮನ ಶುಚಿಯಾಗಿದೆ ಎಂಬುದಕ್ಕೆ ಪ್ರಸನ್ನತೆಯಾವರಿಸಿರುವುದೇ ಸಾಕ್ಷಿ. ಹೇಗೆ ಮನವೋ ಹಾಗೆ ಮಹಾದೇವ. ಮನ ತಿಳಿಯಾದರೆ ಅಲ್ಲಿ ಹೊಳೆಯುವನು ಶಿವ ಬಿಂಬಿಸಿ-ಕದಡಾದರೆ ಅಲ್ಲಿ ತಲೆದೋರುವುದಿಲ್ಲ ಅವನು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು