ಮಾಹೇಶ್ವರನ ಜ್ಞಾನಿಸ್ಥಲ - ಲಿಂಗನಿಷ್ಠೆ
ಶರಣರ ನಿಚ್ಚನಿಚ್ಚ ಪೂಜಿಸುವಂಗೆ: ಇದಕ್ಕಿದೆ ದೃಷ್ಟ ದೀವಿಗೆ-
ಪಾದೋದಕ ಕೋಶಪಾನವಲ್ಲದೆ ಏನೂ ಇಲ್ಲವಯ್ಯಾ.
ಮಜ್ಜನಕ್ಕೆರೆವುದು ಲಿಂಗ:
ಅದು ಲಿಂಗ ಕರಸ್ಥಲದ ದಿಬ್ಯ-
ಗುರುವಚನ ಭಾಷಾಪತ್ರ ಶಿವಕರದಲ್ಲಿ!
ಸತ್ಯದಿಂದ ನಡೆವಂಗೆ ನಿತ್ಯನೇಮವಾಗಿ ಸಲಿಸುವನಲ್ಲದೆ,
ಹುಸಿವಂಗೆ ಮಡಿಲ ಕಿಚ್ಚಾಗಿ ಸುಡುವ!
ಲಿಂಗವ ಪೂಜಿಸಿ ಮರಳಿ ಅನ್ಯಕ್ಕೆರಗಿದಡೆ
ಕೂಡಲಸಂಗಮದೇವನವರ ಹಲ್ಲ ಕಳೆವ!
Transliteration Śaraṇara niccanicca pūjisuvaṅge: Idakkide dr̥ṣṭadīvige-
pādōdaka kōśapānavallade ēnū illavayya.
Majjanakkerevudu liṅga: Adu karasthaladibya-
guruvacana bhāṣāpatra śivakaradalli!
Satyadinda naḍevaṅge nityanēmavāgi salisuvanallade,
husivaṅge maḍila kiccāgi suḍuva!
Liṅgava pūjisi maraḷi an'yakkeragidaḍe
kūḍalasaṅgamadēvanavara halla kaḷeva!
Manuscript
English Translation 2 To one who does
Daily obeisance to theŚaraṇās ,
This is the evidential test:
Pādōdaka is nothing more
Than drinking water in cupped hands:
Pouring of water on the feet is Liṅga.
This Liṅga is a test
Of what is on the palm;
A Guru's utterance is a written pledge
In Śiva's hand!
From one who walks in truth
He takes as if it were a daily thing:
To the hypocrite he is
As fire within his lap!
If once you worship Liṅga and then
Bow down to any other, Lord
Kūḍala Saṅgama will knock off your teeth!
Translated by: L M A Menezes, S M Angadi
Hindi Translation जो शरणों को नित्यनित्य पूजता है -
उसके लिए यही प्रमाणदीपिका है-;
पादोदक अंजलिपान के सिवा कुछ नहीं है ।-
नहलाना लिंगमज्जन है-
वह लिंग करस्थल का प्रमाण है;
गुरु वचन शिव कर का प्रतिज्ञापत्र है-
सत्यव्रती को नियमित रूप से देते है-
असत्यवादी को गोद की आग बन जलाते हैं ।
लिंगपूजा कर फिर अन्य को प्रणाम करो,
तो कूडलसंगमदेव दाँत तोडेंगे ।
Translated by: Banakara K Gowdappa
Telugu Translation బుద్ది చెప్పుచు తండ్రి బిడ్డల కోపించుగాని
కోపించునే వారి ప్రాణములపై
శివభక్తుడు శివభక్తులకు
బుద్ది గరపుచు నవగుణములకలుగునే గాని
లాంఛనములకలుగుడయ్యా!
భక్తులు భక్తి పథము తెలుప మెచ్చని జనుల
మెచ్చడయ్యా సంగమదేవుడు!
Translated by: Dr. Badala Ramaiah
Tamil Translation நாள்தோறும் பூசிக்கும் சரணனுக்கு அதே சாட்சி விளக்கு
திருவடித்திருநீர் திருமஞ்சன நீரன்றி வேறு இல்லை ஐயனே
நிலைத்து கரத்தலத்திலுள்ள இலிங்கத்திற்குத்
திருமஞ்சனம் செய்வது பெரும் அழகு
குருமொழி என்பது மங்கலகரத்தால்
எழுதி அளித்த உறுதிமொழியாகும்
உண்மையாக இருப்பவன் தினநியமமாகிச் செய்வானன்றி
பிறழ்ந்தவனுக்கு மடியிலுள்ள தீயாகத் சுடுவான்
இலிங்கத்தைப் பூசித்து, பிறகு முறையற்றதைச் செய்யின்
பல்லை அகற்றுவான் கூடல சங்கமதேவன்.
Translated by: Smt. Kalyani Venkataraman, Chennai
Marathi Translation
रोज रोज पूजा करणाऱ्यांना
लिंगोदक प्रसादाविना काहीही नाही.
लिंगाभिषेक करस्थली केली पाहिजे, ते करस्थल प्रमाण आहे.
गुरुवचन वचनांचे प्रमाणपत्र दिव्यहस्तामध्ये.
सत्यावर अढळ श्रध्दा असणाऱ्यांचे सदा रक्षण करतो.
असत्यमार्गावर जाणाऱ्यांच्या पदरातील अग्नी होऊन जाळतो.
लिंगपूजा करुन अन्य देवांच्या समोर नतमस्तक झाला तर
त्यांचे दात पाडतील कूडलसंगमदेव.
Translated by Shalini Sreeshaila Doddamani
ಶಬ್ದಾರ್ಥಗಳು ಎರಗು = ; ಎರೆ = ; ಕರ = ; ಕರಸ್ಥಲ = ; ಕಿಚ್ಚು = ; ಕೋಶ = ; ದಿಬ್ಯ = ; ದೀವಿಗೆ = ; ದೃಷ್ಟ = ; ನಿಚ್ಚ = ; ನೇಮ = ; ಪಾದೋದಕ = ; ಪಾನ = ; ಮಜ್ಜನ = ; ಹುಸಿ = ;
ಕನ್ನಡ ವ್ಯಾಖ್ಯಾನ ಶರಣನು ನಿತ್ಯವು ಶಿವಪೂಜೆ ಮಾಡುವನು-ಅದಕ್ಕೆ ಅದೇ ದಿಷ್ಟದೀವಿಗೆ. ಅವನು ಕುಡಿಯುವ ಪಾದೋದಕವೇ ಕೋಶಪಾನ, ಅವನು ಅಭಿಷೇಕ ಮಾಡುವ ಆ ಲಿಂಗವೇ ಕರಸ್ಥಲದ ದಿವ್ಯ. ಗುರುವಚನವೇ ಕೈಯಲ್ಲಿ ಹಿಡಿದ ಭಾಷಾಪತ್ರ.
ಸತ್ಯವಂತನಿಗೆ ಕೇಳಿದ್ದನ್ನು ಶಿವನು –ತನ್ನದೊಂದು ನಿತ್ಯನೇಮವೆಂಬಂತೆ –ಅನುಗ್ರಹಿಸುತ್ತಿರುವನು. ಸುಳ್ಳು ಹೇಳುವವನಿಗಾದರೋ –ಎದೆಯ ಮೇಲೆ ಕಟ್ಟಿದ ಲಿಂಗವೇ ಮಡಿಲಲ್ಲಿ ಕಟ್ಟಿದ ಬೆಂಕಿಯಂತಾಗಿ ಸುಟ್ಟುಹಾಕುವನು.
ಲಿಂಗವನ್ನು ಪೂಜಿಸಿ ಮರಳಿ ಅನ್ಯಾಯಕ್ಕೆ ಬಿದ್ದರೆ ಶಿವನು ಅವರ ಹಲ್ಲುಗಳನ್ನು ಉದುರಿಸುವನು.
ಬಸವಣ್ಣನವರು ಭಕ್ತನು ಮಾಡುವ (ಜಂಗಮ)ಪಾದೋದಕಸ್ವೀಕಾರ ಮತ್ತು ಲಿಂಗಪೂಜೆಗಳನ್ನು ಕ್ರಮವಾಗಿ ಕೋಶಪಾನ ಮತ್ತು ಫಾಲದಿವ್ಯಕ್ಕೆ ಹೋಲಿಸಿರುವರು. ಆ ಭಕ್ತನು ಅಸತ್ಯವಂತನಾದರೆ ಅವನು ಕುಡಿದ ಆ ಪಾದೋಕ ಮತ್ತು ಕೈಯಲ್ಲಿ ಹಿಡಿದ ಆ ಲಿಂಗ ಅವನಿಗೆ ಕುಡಿದ ವಿಷವಾಗಿ ಮತ್ತು ಹಿಡಿದ ಕಾದ ಕಬ್ಬಿಣವಾಗಿ ತಕ್ಕ ಶಾಸ್ತಿಯನ್ನು ಮಾಡುವವೆನ್ನುತ್ತಿರುವರು ಬಸವಣ್ಣನವರು.
ತಾನು ಸಾಚಾ ಎಂದು ರುಜುವಾತು ಪಡಿಸುವ ಅಥವಾ ತನ್ನ ಮಾತು ನಿಜ ಎಂದು ಸಾಬೀತುಪಡಿಸುವ(ದಿವ್ಯನಡೆಸುವ)ವನು ತನ್ನ ಕುರಿತ ಪ್ರತಿಜ್ಞೆಯನ್ನು ಬರೆದು ದಿವ್ಯಸ್ಥಾನದಲ್ಲಿ ಧರ್ಮಾಧಿಕರಣದವರೆದುರು ಸಾದರಪಡಿಸಿ-ಈ ವಿಷವನ್ನು ಕುಡಿಯುತ್ತೇನೆ. ನಾನಾಡುವುದು ಸುಳ್ಳಾದರೆ-ಇದು ನನ್ನನ್ನು ಕೊಲ್ಲಲಿ ಇತ್ಯಾದಿಯಾಗಿ ಹೇಳಿ ಕುಡಿಯಬೇಕಾಗಿತ್ತು. ಕುಡಿದೂ ಅವನು ಸಾಯದಿದ್ದರೆ ಆತ ಸತ್ಯವಂತನೆಂದು ಎಲ್ಲರೂ ಒಪ್ಪಲೂ ಬೇಕಾಗಿತ್ತು. ಹಾಗೆಯೇ ಕಾಸಿದ ಕಬ್ಬಿಣದ ಪಟ್ಟಿಯನ್ನು ಅಂಗೈಯಲ್ಲಿ ಹಿಡಿದಾಗ ಸುಡಬಾರದು. ಸೊನ್ನಲಿಗೆಯು ಮಿಕ್ಕೆಲ್ಲ ದಿವ್ಯಕ್ಷೇತ್ರಗಳಿಗಿಂತ ಘನತರವೆಂದು ಸಾಧಿಸಲು ಸಿದ್ಧರಾಮನು ತೋರಿದ ಇಂಥ ಒಂದು ದೃಷ್ಟ ಅಥವಾ ನಡೆಸಿದ ಒಂದು ದಿವ್ಯದ ಸ್ವಲ್ಪ ವಿವರವನ್ನು ನೋಡಿ ಈ ಮುಂದೆ :
ನೆರೆಹೊರೆಯ ಹಳ್ಳಿಗಳ ಹಿರಿಯೂರ ಪಟ್ಟಣದ ಪುರದಗ್ರಹಾರದ ಸಮಸ್ತ ಭಕ್ತರನ್ನು ಹಿರಿಯರನಜ್ಞತಜ್ಞರಂ ಶೂನ್ಯ ಹೃದಯರನನ್ಯ ಸಮಯದೊಳಗಾದೆಲ್ಲರಂ || ಕರೆಸೆ ದೆಸೆ ಬೆಸಲಾಯಿತೆನಲು ಲಿಂಗದ ಮುಂದೆ | ನೆರೆದ ಸಭೆ ನಡನಡುಗೆ ಪಂಚಲೋಹದ ಗುಂಡನರರೆ ತಿದಿ ಮಸಿಯಿಕ್ಕುಳಂ ತರಿಸಿ ಭಾಷೆಯಂ ಬರೆಸಿದನದೇ ವೊಗಳ್ವೆನು ||7|| ನುಡಿಯ ನುಡಿದಾಲಿಪುದು ನಾನೀವ ಭಾಷೆಗಳ-ಗಡಿಯನೀ ಯೆಕ್ಕವಿಂಡಂ ಪೊಕ್ಕುವೇಷಮಂ ಪಡೆದು ತಂತಮ್ಮ ಬೇಪಾರದೊಳು ಸವಿಸವಿದು ಸಂದು ಮೈಮರೆದಿರ್ದೊಡಂ || ಕಡೆಗೆ ಕೈಲಾಸವಹುದೀ ಭಾಷೆ ಹುಸಿದೊಡೆ | ನ್ನೆಡೆಗೈಯ ನಡುತಳವು ಸುಡುವುದೀ ಗುಂಡು ಬಿಡೆ | ಸುಡದಿರಲ್ಕಿನ್ನಾದೊಡಂ ನಂಬಿರೇ ಕಪಿಲಸಿದ್ಧ ಮಲ್ಲೇಶ್ವರನನು ||8|| ಎಂದು ಮುಂತಾಗಿ ಪ್ರತಿಜ್ಞೆ ಮಾಡಿ “ದಿವ್ಯದ ಗುಂಡನಿರ್ಕೈಯೊಳಾಂತನಚಳಿತ ಸಿದ್ಧನು” ||20|| ತಮತಮಗೆ ನಡನಡುಗಿ ಸಾಕಿಳುಹು ಸಮಯದಾ | ಶ್ರಮ ಸತ್ಯ ಶುಚಿ ಶೂರ ಸಹಜಯೆಂದೆಲ್ಲರಾ | ಕ್ರಮಿಸೆ-ಹೋ ಅನಿತ್ತ ಭಾಷೆಗಳು ಸಂದುವೇ ಎಂದು...ಗುಂಡನಿಳುಕಿದನು ||21|| ಗುಂಡುಬಿದ್ದೆಡೆ ಹೊತ್ತಿ ಹೊಗೆದು ದಳ್ಳುರಿ ಮಸಗೆ | ಕಂಡು ಮಝ ಭಾಪು ಭಾಪಪ್ರತಿಮ ನುಡಿದಂತೆ | ಗಂಡ ಭೂಲೋಕ ಭಾಳಾಕ್ಷ ಮಹಿಮಾಶರಧಿಯೆಂದಂದು ಮಂದಿಯೈದೆ | ಕೊಂಡಾಡುತಿರೆ ||22|| (ಸಿದ್ಧರಾಮಚಾರಿತ್ರ -ಸಂದಿ 7).
ಇಷ್ಟೆಲ್ಲಾ ಹೇಳಿಯಾದ ಮೇಲೆ ಗಮನಿಸಬೇಕಾದ ಮುಖ್ಯ ವಿಷಯವೆಂದರೆ-ಬಸವಣ್ಣನವರು ಲಿಂಗವಂತರನ್ನೇ ಕುರಿತು : ಅನ್ಯಾಯ ಮಾಡಿದರೆ ನೀವು ಕಟ್ಟಿದ ಲಿಂಗ ನಿಮ್ಮನ್ನೇ ಸುಡುವುದು, ನೀವು ಕೊಳ್ಳುವ ಪಾದೋದಕ ನಿಮ್ಮನ್ನೇ ಕೊಲ್ಲುವುದು –ಎಂದು ಜಬರಿಸಿ ಎಚ್ಚರಿಸುತ್ತಿರುವರೆಂಬುದನ್ನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು