•  
  •  
  •  
  •  
Index   ವಚನ - 649    Search  
 
ಮಾಹೇಶ್ವರನ ಜ್ಞಾನಿಸ್ಥಲ - ಕೋಪ
ಪಾಪಿಗೆ ಕೋಪಿಗೆ ಭಕ್ತಿಯಾಗೆಂದರಪ್ಪುದೆ? ನಾರಿವಾಣವಕ್ಕುವುದೆ ನಾಯಿಗೆ? ಕೂಡಲಸಂಗಮದೇವಾ, ನಿಮ್ಮ ನಂಬಿಯೂ ನಂಬದ ಡಂಭಕಂಗೆ?
Transliteration Pāpige kōpige bhaktiyāgendarappude? Nārivāṇavakkuvude nāyige? Kūḍalasaṅgamadēvā, nim'ma nambiyū nambada ḍambhakaṅge?
Manuscript
English Translation 2 If you talk of devotion to a man Who yields to sin and anger, what is the point? The dog does not digest the cocoanut, Nor does the fraud of little faith, O Kūḍala Saṅgama Lord, Believe in Thee. Translated by: L M A Menezes, S M Angadi
Hindi Translation पापी और कोपी से भक्ति होगी? श्वान नारियल पचा लेगा? कूडलसंगमदेव, तुम पर अपूर्ण विश्वास रखनेवाले दंभियों से भक्ति होगी? Translated by: Banakara K Gowdappa
Telugu Translation రమ్మన్న వచ్చునే భక్తి పాపికి కోపికి? జీర్ణమగునే నారికేళము నాయికి? దేవా నిన్ను నమ్మియూ నమ్మని డాంభికులకు వచ్చునేభక్తి? Translated by: Dr. Badala Ramaiah
Tamil Translation பாவிக்கும், சினப்பவனுக்கும் பக்தி எங்ஙனம் அரும்பும்? நாய்க்குத் தேங்காய் சரியாகுமோ? கூடல சங்கமதேவனே உம்மை நம்பாத பகட்டினர்க்கு ஐயனே Translated by: Smt. Kalyani Venkataraman, Chennai
Marathi Translation पापीला कोपीला भक्ती करता येईल? नारळ कुत्रे खाऊ शकेल का? कूडलसंगमदेवा, तुमच्यावर विश्वास ठेवून तसे न वागणारे दांभिक आहेत. Translated by Shalini Sreeshaila Doddamani
ಶಬ್ದಾರ್ಥಗಳು ಡಂಭಕ = ; ನಾರಿವಾಣ = ;
ಕನ್ನಡ ವ್ಯಾಖ್ಯಾನ ಪಾಪಿಗೆ ಮತ್ತು ಪಾಪವನ್ನು ಮತ್ತಷ್ಟು ಮುಂದೆಯೂ ಅರ್ಜಿಸಲು ಸಿದ್ದವಾಗಿರುವ ಕೋಪಿಗೆ -ಭಕ್ತಿಯಾಗಲಿ ಎಂದರೆ ಹೇಗಾದೀತು ? ಭಕ್ತಿಯೆನ್ನುವುದು ತೆಂಗಿನ ಕಾಯಂತೆ –ಅದು ಮಾಂಸತಿನ್ನುವ ನಾಯಿಗೆಂದಿಗೂ ಸಗ್ಗದು. ಅದು ಗಂಭೀರವೂ ಬಲಿಷ್ಠವೂ ಆದ ಆನೆಗೆ ಮಾತ್ರ ಸಾಧ್ಯ. ತೆಂಗಿನಕಾಯನ್ನು ಇಡಿಯಾಗಿ ನುಂಗಿ ಇದ್ದಂತೆಯೇ ಜೀರ್ಣಿಸಿಕೊಳ್ಳುವುದು ಆನೆಗೇ ಮೀಸಲಾದೊಂದು ಚಮತ್ಕಾರ. ಅಂದರೆ -ಭಕ್ತಿಯೆನ್ನುವುದು ತೆಂಗಿನ ಕಾಯಂತೆ ಅಖಂಡವಾಗಿರುವುದು. ಅದನ್ನು ಅಖಂಡವಾಗಿಯೇ ಅರಗಿಸಿಕೊಳ್ಳಬಲ್ಲನೆಂದರೆ-ಪಾಪಬುದ್ಧಿಯಿಲ್ಲದ, ಪ್ರಶಾಂತಸ್ವಭಾವದ ಮಹನೀಯನು ಎಂಬುದು ಈ ವಚನದ ಒಂದು ಗಮನಾರ್ಹವಾದ ಅಂಶ. ಪಲ್ಲಕ್ಕಿಯಲ್ಲಿ ಕುಳಿತ ನಾಯಂತೆ-ವಿಷಯಾಮಿಷಾದಿಗಳನ್ನು ಕಂಡೊಡನೆಯೇ ಕೆಳಕ್ಕೆ ನೆಗೆಯುವ ಬರೀ ಬಾಯಿಬಡುಕ ಡಂಬಾಚಾರಿಗಳಿಗೆ ಭಕ್ತಿಯೆನ್ನುವುದು ದಕ್ಕದ ಮಾತೆನ್ನುವುದು ಈ ವಚನದ ಮತ್ತೊಂದು ಗಮನಾರ್ಹವಾದ ಅಂಶ (ನೋಡಿ ವಚನ 31)

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು