ಮಾಹೇಶ್ವರನ ಜ್ಞಾನಿಸ್ಥಲ - ಡಾಂಭಿಕತೆ
ಸದಾಚಾರ ಸದ್ಭಕ್ತಿಯಿಲ್ಲದವರನೊಲ್ಲನಯ್ಯಾ:
ಅವರಾರಾಧನೆ ದಂಡ!
ನಿಚ್ಚ ನಿಚ್ಚ ಪ್ರಾಯಶ್ಚಿತ್ತರನೊಲ್ಲ,
ಕೂಡಲಸಂಗಮದೇವ, ಭೂಭಾರಕರ!
Transliteration Sadācāra sadbhaktiyilladavaranollanayyā:
Avarārādhane daṇḍa!
Nicca nicca prāyaścittaranolla,
kūḍalasaṅgamadēva, bhūbhārakara!
Manuscript
English Translation 2 Lord Kūḍala Saṅgama disdains
The worship empty of true piety:
It only brings down punishment!
Nor does he like
The penance done from day to day
By such as are a burden to the earth!
Translated by: L M A Menezes, S M Angadi
Hindi Translation सदाचार, सद्भक्ति हीनों को नहीं चाहते
उनकी आराधना व्यर्थ है!
नित्य नित्य प्रायश्चित्त करनेवालों को
कूडलसंगमदेव नहीं चाहते, वे भूभार हैं ॥-
Translated by: Banakara K Gowdappa
Telugu Translation సదాచారము సద్భక్తి లేని వారిని మెచ్చడయ్యా
వారి పూజలు వ్యర్థమయ్యా; వారు భూమికి భారము
వారు దినదినము చేయు ప్రాయశ్చిత్తము
వారి కేగాని శివుడు మెచ్చడయ్యా!
Translated by: Dr. Badala Ramaiah
Tamil Translation நன்னெறி, உயர்ந்தபக்தியற்றவரை ஏலான் ஐயனே
அவர்களின் ஆராதனை பயனற்றது
நாள்தோறும் கழுவாய் செய்யும்
பூமிக்குச் சுமையானோரை ஏலான் கூடலசங்கமதேவன்.
Translated by: Smt. Kalyani Venkataraman, Chennai
Marathi Translation
सदाचार हीन, नकोत ती मज
भक्तिहीन द्विज, काय कीजे ?
नित्य प्रायश्चित, करावे किमर्थ ?
आराधना व्यर्थ, तयांची ती
कूडलसंगम देवा ! भूमार हे जन
सत्य हे वचन, आबाधित
अर्थ - सदाचार सद्भक्तीहीन लोकांची आराधना व्यर्थ होय असे लोक इहलोकी दुःखी व परलोकीही दुःखीच असतात. असे लोक अपराध करतात व त्यांचे प्रायश्चित घेतात. त्यात पण पळवाट काढतात. गंगेला, तिर्थयात्रेला, देव दर्शनाला जातात. देवाच्या नावाने दानधर्म करतात, आणि पुण्य मिळविले असे असजून पुन्हा अपराध करण्यास मोकळे होतात. म्हणजे अपराध करणे आणि त्याचे प्रायश्चित घेणे व पुन्हा अपराध करणे हे कर्म त्यांचे जीवनभर चालले असते. असे ढोंगी लोक समाजातील इतर लोकांनाही बिघडवितात. वारंवार प्रायश्चित घेणारे व त्यांना प्रोत्साहन देणारे पंडीत पुजारी हे दोघेही समाजात कलंक आहेत. असे लोक भूमीला भार समजावेत.
Translated by Rajendra Jirobe, Published by V B Patil, Hirabaug, Chembur, Mumbai, 1983
सदाचारी सद्भक्तीहीनांना पसंत करीत नाही लिंगदेव.
त्यांची उपासना निरर्थक आहे.
नित्य नित्य प्रायश्चित करणारे आवडत नाहीत.
कूडलसंगमदेवा भूमीला भार असणारे हे लोक
Translated by Shalini Sreeshaila Doddamani
ಶಬ್ದಾರ್ಥಗಳು ಆರಾಧನೆ = ಪೂಜೆ; ಒಲ್ಲ = ; ದಂಡ = ; ಪ್ರಾಯಶ್ಚಿತ = ; ಭಾರಕ = ; ಸದಾಚಾರ = ; ಸದ್ಭಕ್ತಿ = ;
ಕನ್ನಡ ವ್ಯಾಖ್ಯಾನ ಯಾರಾಗಲಿ ಶಿವದೀಕ್ಷೆಯನ್ನು ಕೈಗೊಂಡು ಶಿವಪಂಥಕ್ಕೆ ಸೇರಿದ ಮೇಲೆಯಾದರೂ ಸದಾಚಾರದಿಂದ ಸದ್ಭಕ್ತಿಯಲ್ಲಿ ತೊಡಗಬೇಕು. ಹಾಗಲ್ಲದೆ ನಿತ್ಯಪಾಪದಲ್ಲಿ ಯಥಾಪ್ರಕಾರ ತೊಡಗಿದರೆ ಅವರು ನಿತ್ಯವೂ ಮಾಡುವ ಶಿವಪೂಜೆ ಅವರು ಅಂದಂದು ಮಾಡಿದ ಪಾಪಕ್ಕೆ ಅಂದಂದು ತೆತ್ತ ದಂಡವಾಗುವುದು. ಇಂಥ ನಿತ್ಯ ಪ್ರಾಯಶ್ಚಿತ್ತರನ್ನು ಶಿವನು ಮೆಚ್ಚುವುದಿಲ್ಲ. ಅವರು ಶಿವಧರ್ಮಕ್ಕೆ ಸೇರಿದವರಾದರೂ ಈ ಭೂಮಿಗೆ ಭಾರವಷ್ಟೆ.
ವಿ : ಸದಾಚಾರವು ಪಂಚಾಚಾರಗಳಲ್ಲಿ ಒಂದು ಸದ್ಭಕ್ತಿಯು ಷಡ್ವಿಧಭಕ್ತಿಗಳಲ್ಲಿ ಒಂದು. ಈ ಸದ್ಭಕ್ತಿಯನ್ನು ಶ್ರದ್ಧಾಭಕ್ತಿಯೆಂದೂ ಕರೆಯುವುದುಂಟು. ಕೈಗೊಳ್ಳುವ ಕೆಲಸಗಳು ಏಕಪ್ರಕಾರವಾಗಿ ಒಳ್ಳೆಯವಾಗಿದ್ದು ಶಿವಧರ್ಮದಲ್ಲಿ ಶ್ರದ್ಧೆಯನ್ನು ಬೆಳೆಸಿಕೊಳ್ಳುವಂತಾಗಬೇಕೆಂಬುದೇ ಈ ಸದಾಚಾರ-ಸದ್ಭಕ್ತಿಯ ಉದ್ದೇಶ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು