•  
  •  
  •  
  •  
Index   ವಚನ - 653    Search  
 
ಮಾಹೇಶ್ವರನ ಜ್ಞಾನಿಸ್ಥಲ - ವಿವೇಕ
ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ. ಲಿಂಗವಂತನು ಲಿಂಗವಂತರಿಗೆ ಬುದ್ಧಿಯ ಹೇಳುವಲ್ಲಿ ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ. ಲಿಂಗಭಕ್ತನು ಲಿಂಗಪಥವ ಹೇಳಿದರೆ ಮಚ್ಚರಿಸುವರ ಮೆಚ್ಚ ಕೂಡಲಸಂಗಮದೇವ.
Transliteration Tande makkaḷige bud'dhi hēḷuvalli tappiṅge munivanallade prāṇakke muniya. Liṅgavantanu liṅgavantarige bud'dhiya hēḷuvalli avaguṇakke munivanallade lān̄chanakke muniya. Liṅgabhaktanu liṅgapathava hēḷidaru maccarisuvara mecca kūḍalasaṅgamadēva.
Manuscript
Music Courtesy:
English Translation 2 Whenever a father gives his children counsel, He's angry with their slips and not with them. Whenever a Liṅgavant counsels another, He's angry with his fault, not with his garb. Lord Kūḍala Saṅgama does not like Such as are jealous when A Liṅga-bhakta shows the Liṅga-path. Translated by: L M A Menezes, S M Angadi
Hindi Translation जब पिता पुत्रों को शिक्षा देता है , अपराध से कुपित होता है न कि प्राणों से । जब लिंगवंत लिंगवंतों को शिक्षा देता है, अवगुण पर कुपित होता है न कि लांछन पर। लिंगभक्त लिंगपथ बता दे, तो मत्सर करनेवालों पर प्रसन्न नहीं होते कूडलसंगमदेव ॥ Translated by: Banakara K Gowdappa
Telugu Translation బుద్ది చెప్పుచు తండ్రి బిడ్డల కోపించుగాని కోపించునే వారి ప్రాణములపై శివభక్తుడు శివభక్తులకు బుద్ది గరపుచు నవగుణములకలుగునే గాని లాంఛనములకలుగుడయ్యా! భక్తులు భక్తి పథము తెలుప మెచ్చని జనుల మెచ్చడయ్యా సంగమదేవుడు! Translated by: Dr. Badala Ramaiah
Tamil Translation தந்தை குழந்தைகளுக்கு அறிவுறுத்தும்பொழுது தப்பிற்குச் சினப்பனன்றி அவர்மீது அன்று இலிங்கம் தரித்தவன், அதனைத் தரித்தவர்களுக்கு அறிவுறுத்தும்பொழுது தீய இயல்புகளுக்குச் சினப்பனன்றி, திருச்சின்னத்திற்கு அன்று இலிங்க பக்தன், இலிங்க நெறியைக் கூறுங்காலை பொறாமை கொள்வோரை கூடல சங்கமதேவன் மெச்சுவனோ? Translated by: Smt. Kalyani Venkataraman, Chennai
Marathi Translation पिता पुत्रांना समजावित असताना, त्यांच्या चुकीवर रागावतील पण जीव घेणार नाहीत. लिंगवंत लिंगवंतांना समजावित असताना, अवगुणावर रागावतील पण इष्टलिंगावर रागावणार नाही. लिंगदेवाचे भक्त लिंगपथाचा महिमा सांगत असताना पाहून इर्षा करणारावर प्रसन्न होत नाहीत कूडलसंगमदेव. Translated by Shalini Sreeshaila Doddamani
ಶಬ್ದಾರ್ಥಗಳು ಅವಗುಣ = ಕೆಟ್ಟಗುಣ; ಪಥ = ; ಪ್ರಾಣ = ; ಮಚ್ಚರಿಸು = ; ಮುನಿ = ; ಮೆಚ್ಚು = ;
ಕನ್ನಡ ವ್ಯಾಖ್ಯಾನ ಲಿಂಗವಂತರು ಧರ್ಮಬಾಂಧವರೆಂಬುದು ನಿಜವಾದರೆ ಪರಸ್ಪರ ವಿಮರ್ಶೆಯನ್ನೂ ಟೀಕೆಯನ್ನೂ ಖಂಡನೆಯನ್ನೂ ಸ್ವಾಗತಿಸಬೇಕು. ಈ ವಿಚಾರದಲ್ಲಿ ದೊಡ್ಡವರೆನಿಸಿಕೊಂಡವರು ಹೆಚ್ಚು ಉದಾರವಾಗಿರಬೇಕು. ತಂದೆಯಾದವನು ಮಕ್ಕಳಿಗೆ ಬುದ್ಧಿ ಹೇಳುವಾಗ ಬೈಯುವಾಗಲೂ –ಮಕ್ಕಳು ತಪ್ಪನ್ನು ತಿದ್ದಿಕೊಳ್ಳಲೆಂಬ ಆಗ್ರಹವಿರುವಂತೆ ಸಮಾಜದಲ್ಲಿ ಶರಣರು ಜಂಗಮರು ಎನಿಸಿಕೊಂಡವರು ಭಕ್ತರನ್ನು ಲಿಂಗವಂತರೆಂಬ ಮಮತೆ ವಾತ್ಸಲ್ಯಗಳಿಂದ ತಿದ್ದಬೇಕೇ ಹೊರತು ಅವರ ಮೇಲೆ ಪ್ರಾಣಾಂತಕವಾಗಿ ಮುನಿಯಬಾರದು ಮತ್ತು ಧರ್ಮದಿಂದ ಬಹಿಷ್ಕರಿಸಲೂ ಬಾರದು. ಭಕ್ತರಾದರೂ ಹಿರಿಯರು ಧಾರ್ಮಿಕವಾಗಿ ಹೇಳಿದ ಬುದ್ಧಿಯ ಮಾತನ್ನು ತಪ್ಪಾಗಿ ತಿಳಿದು ಅವರ ಮೇಲೆ ಮತ್ಸರವನ್ನೂ ತಾಳಬಾರದು. (ಲಾಂಛನವೆಂದರೆ ಲಿಂಗ).

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು