ಮಾಹೇಶ್ವರನ ಜ್ಞಾನಿಸ್ಥಲ - ಭಾವಶುದ್ಧಿ
ಗುರೂಪದೇಶ ಮಂತ್ರವೈದ್ಯ; ಜಂಗಮೋಪದೇಶ ಶಸ್ತ್ರವೈದ್ಯ, ನೋಡಾ:
ಭವರೋಗವ ಗೆಲುವ ಪರಿಯ ನೋಡಾ.
ಕೂಡಲಸಂಗನ ಶರಣರ ಅನುಭಾವ
ಮಡಿವಾಳನ ಕಾಯಕದಂತೆ!
Transliteration Gurūpadēśa mantravaidya; jaṅgamōpadēśa śastravaidya, nōḍā:
Bhavarōgava geluva pariya nōḍā.
Kūḍalasaṅgana śaraṇara anubhāva
maḍivāḷana kāyakadante!
Manuscript
English Translation 2 The Guru's counsel is magic medicine;
The Jaṅgama's, behold, is surgery:
Mark you the way to overcome
The malady of this world
The experience of
Kūḍala Saṅga's Śaraṇās
Is as a washerman's work!
Translated by: L M A Menezes, S M Angadi
Hindi Translation गुरुपदेश मंत्रवैद्य है, जंगमोपदेश शस्त्रवैद्य है,
देखो, भवरोग निवारण की यही प्रणाली है ।
कूडलसंगमेश के शरणों का अनुभाव
रजक के व्यवसाय सा है ॥
Translated by: Banakara K Gowdappa
Telugu Translation గురూపదేశము మంత్రవైద్యము
జంగమోపదేశము శస్త్రవైద్యము
భవరోగమును గెల్చు విధమరయుడో
శరణుల అనుభావము మడివాలుని కాయకమువలె నుండునయ్యా!
Translated by: Dr. Badala Ramaiah
Tamil Translation குருவின் அறிவுரை மந்திர மருத்துவம்
ஜங்கம அறிவுரை அறுவைச் சிகிச்சை காணாய்
பிறவிப் பிணியைக் களையும் வழியைக் காணாய்
கூடல சங்கனின் அடியாரின் ஆன்மீக அனுபவம்
மடிவாளனின் உழைப்பைப் போன்றதாம்
Translated by: Smt. Kalyani Venkataraman, Chennai
Marathi Translation
मंत्र वैद्यापरी, गुरु उपदेश
जंगम उपदेश, शस्त्र वैद्य
भवरोगावरी, करावया मात
हेचि मार्ग होत, एकमेव
कूडलसंगमदेवा ! शरण अनुभाव
धोबी माचिदेव, जाणतसे
कायक तयांचा, शिकवी शुद्धत्व
तोचि शरणत्व, अनुभाव
अर्थ - गुरू उपदेश म्हणजे मंत्र वैद्य होय आणि जंगम उपदेश म्हणजे शस्त्रवैद्य होय. भवरोग निवारणार्थ हेच थोर मार्ग होत. अशा प्रकारे जंगममूर्ति आणि गुरुजनांचे उपदेश तसेच शिवशरणगणांचे शुद्ध कायक (उद्योग) आणि त्यांनी मिळविलेल्या अनुभाव या भवरोगातून मुक्त करणारे व परमेश्वरी प्रसन्नता मिळवून देणारे आहेत. म्हणून हे कूडलसंगमदेवा (परशिवा) शिवशरण धोबी माचय्याने अनुभाव आणि त्यांचे कायक (उद्योग) मंत्रवैद्य आणि शस्त्रवैद्यच होत. शिवशरण धोबी माचय्या लोकांच्या कपड्यातील घाण काढून स्वच्छ करुन देतो तसेच त्यांच्या मन, बुद्धी अंतरातील अवगुण आपल्या अनुभाव व आचाराने नाहीसे करून टाकीत असे.
Translated by Rajendra Jirobe, Published by V B Patil, Hirabaug, Chembur, Mumbai, 1983
गुरु उपदेश मंत्रवैद्य आहे, जंगम उपदेश शस्त्रवैद्य आहेत.
भवरोग दूर करण्याची ही रीत पहा.
कूडलसंगाच्या शरणांचा अनुभाव
धोबी माचय्याच्या कायकासम आहे.
Translated by Shalini Sreeshaila Doddamani
ಶಬ್ದಾರ್ಥಗಳು ಅನುಭಾವ = ; ಉಪದೇಶ = ; ಕಾಯಕ = ; ಜಂಗಮ = ; ಪರಿ = ; ಪರಿ = ; ಭವರೋಗ = ;
ಕನ್ನಡ ವ್ಯಾಖ್ಯಾನ ಮಂತ್ರ ಹಾಕಿ ರೋಗಕ್ಕೆ ಚಿಕಿತ್ಸೆ ಮಾಡುವುದು ಮಂತ್ರೆವೈದ್ಯ, ಮಾತ್ರೆ ಚೂರ್ಣ ಕಷಾಯ ಭಸ್ಮಾದಿಗಳನ್ನು ಕೊಟ್ಟು ಚಿಕಿತ್ಸೆ ಮಾಡುವುದು ಔಷಧ ವೈದ್ಯ, ದೇಹಭಾಗವನ್ನು ಕೊಯ್ದು ಸರಿಪಡಿಸುವುದು ಶಸ್ತ್ರವೈದ್ಯ, ಈ ಚಿಕಿತ್ಸಾವಿಧಾನತ್ರಯದಲ್ಲಿ ಮೊದಲನೆಯದು ಪ್ರಾರಂಭಿಕಾವಸ್ಥೆಯಲ್ಲಿ, ಎರಡನೆಯದು ವಿಷಮಾವಸ್ಥೆಯಲ್ಲಿ. ಮೂರನೆಯದು ವಿಪನ್ನಾವಸ್ಥೆಯಲ್ಲಿ ಪ್ರಯೋಗಿಸಲ್ಪಡುವುದು.
ಗುರುವಾದವನು ಶಿವಧರ್ಮವನ್ನು ಸ್ವೀಕರಿಸಬೇಕೆಂಬ ಯಾವನಿಗಾದರೂ ದೀಕ್ಷೆಯನ್ನು ಕೊಟ್ಟು ಮಂತ್ರವನ್ನು ಉಪದೇಶಿಸಿ ಭಕ್ತಿವಂತನಾಗೆಂದು ನಿರ್ದೇಶನ ಮಾಡುವನು. ಆದರೆ ಆ ಭಕ್ತನು ಆ ಗುರುವಿನ ನಿರ್ದೇಶಕನಕ್ಕೆ ತಕ್ಕಂತೆ ನಡೆಯದೆ ಸುಳ್ಳುಭಕ್ತನಾಗಿ ಡಾಂಬಿಕ(ಭವ)ರೋಗಕ್ಕೆ ತುತ್ತಾಗಿದ್ದರೆ-ಅಂಥವನನ್ನು ಶರಣನು ಪರೀಕ್ಷಿಸಿ ಎಚ್ಚರ ಹೇಳಿ ತಿದ್ದಿ ಸರಿಪಡಿಸಲು ಯತ್ನಿಸುವನು. ಅದಕ್ಕೂ ಭಕ್ತನ ಭವರೋಗ ಜಗ್ಗದಿದ್ದರೆ –ಅವನನ್ನು ಜಂಗಮನು ಶಿಕ್ಷಿಸಿಯಾದರೂ ಸನ್ಮಾರ್ಗಕ್ಕೆ ತರುವನು.
ಬಟ್ಟೆಯಲ್ಲಿರುವ ಕೊಳೆಯನ್ನು ಕಳೆಯಲು ಆ ಬಟ್ಟೆಯನ್ನು ನೀರಲ್ಲಿ ನೆನಸಿ ಕೈಯಲ್ಲಿ ಕಸುಕಿ ಕಲ್ಲಮೇಲೆ ಘಟ್ಟಿಸುವಂತೆ ಗುರುಗಳೋ ಶರಣರೋ ಜಂಗಮರೋ ಭಕ್ತರನ್ನು ಸರಿದಾರಿಗೆ ತರಲು ಶ್ರಮವಹಿಸಬೇಕು.
ಏನೇ ಆದರೂ ಈ ಮೂವರೂ ಭಕ್ತರನ್ನು ತಿದ್ದಲು ಸಹಜ-ಕಠಿಣ-ನಿರ್ದಾಕ್ಷಿಣ್ಯ ಧೋರಣೆಗಳನ್ನು ಕೇವಲ ಉಪದೇಶಾತ್ಮಕವಾಗಿ ತಳೆಯುತ್ತಿದ್ದರೇ ಹೊರತು-ದೈಹಿಕವಾಗಿ ದಂಡಿಸುವ ಅಥವಾ ಬಹಿಷ್ಕರಿಸುವ ಅತಿರೇಕದ ಮಾರ್ಗ ಹಿಡಿಯುವಂತಿರಲಿಲ್ಲವೆಂಬುದನ್ನು ಗಮನಿಸಬೇಕು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು