•  
  •  
  •  
  •  
Index   ವಚನ - 655    Search  
 
ಮಾಹೇಶ್ವರನ ಜ್ಞಾನಿಸ್ಥಲ - ಅರಿವು
ಕೇಳಿರೆ, ಕೇಳಿರೆ, ಹಿರಿಯರು ಗುರುವಿನುಪದೇಶವನು: ಒಂದು ಗೀಜಗನ ಉಪದೇಶದಿಂದ ಪೌಲಸ್ತ್ಯನಂದು ಹಡೆಯನೆ ದಶಮುಖನ? ಶಿರವ ಹರಿದಿಕ್ಕೆ, ಪರಮನಿದ್ದೆಡೆಯು ಕಾಣದೇನಿಳೆಯಲ್ಲಿ? ಕರುಳ ತಂತಿಯುಪದೇಶದಿಂದೆ ಅಸುರನಂದು ಹಡೆಯನೆ ಸುರಪದವ? ತರುಣಿ ಹರಿಣಿಯುಪದೇಶದಿಂದೆ ಗತಿ ಪಥ ಮುಕ್ತಿಯ ಪಡೆದು ಬಟ್ಟಿಯ ಹತ್ತನೆ ವಿನಾಶಕ್ತಿರಾಯನು? ರಂಭೆಯುಪದೇಶದಿಂದ ಶಂಭುವಿನೋಲಗದಲ್ಲಿ ಕುಳ್ಳಿರನೆ ಶ್ವೇತನು? ನಮ್ಮ ಕೂಡಲಸಂಗನ ಶರಣರ ಉಪದೇಶವ ಕೇಳಿದವರಿಗೆ ದುರಿತ ಪಾಪಂಗಳು ಬಿಟ್ಟುಹೋಗಿ, ಮನನಿರತರಾಗಿಪ್ಪರು ಲಿಂಗದಲ್ಲಿ.
Transliteration Kēḷire, kēḷire, hiriyaru guruvinupadēśavanu: Ondu gījagana upadēśadinda paulastyanandu haḍeyane daśamukhana? Śirava haridikke, paramaniddeḍeyu kāṇadēniḷeyalli? Karuḷatantiya upadēśadinde asuranandu haḍeyane surapadava? Taruṇi hariṇiyupadēśadinda gati patha muktiya paḍedu baṭṭeya hattane vināśaktirāyanu? Rambheyupadēśadinda śambhuvinōlagadalli kuḷḷirane śvētanu? Nam'ma kūḍalasaṅgana śaraṇara upadēśava kēḷidavarige durita pāpagaḷu biṭṭuhōgi, mana niratarāgipparu liṅgadalli.
Manuscript
English Translation 2 Hearken, O hearken, O Great ones To the Guru's advice:did not Paulastya,once upon a time, By taking counsel from a bottle-bird, Obtain Rāvaṇa? If you tore off and gave your head, Would not the place be seen on earth Where the Supreme abides? Did not, through a gut-string'"s advice, A demon win angelic rank? Did not King Vinasakti find the Path By learning Freedom's way and goal From a young doe? Was not Svēta qualified to sit In Sambhu's court ,by Rambha's advice? For those who listen to the advice Of our Kūḍala Saṅga's Śaraṇās, All wickedness and all sin take flight And their hearts are in Liṅga lost! Translated by: L M A Menezes, S M Angadi
Hindi Translation सुनिए, सुनिए महाशयों, गुरुपदेश एक खंजन के उपदेश से उस दिन पौलस्त्य ने दशकंठ को नहीं पाया? सिर फाडकर रखने से पृथ्वी पर परमात्मा का स्थान दिखाई नहीं पड़ता? आंत की तंत्रियों के उपदेश से असुर ने सुरपद नहीं पाया? युवा हरिणी के उपदेश से विनाशक्तिराय मुक्तिपथगामी नहीं हुआ? रंभा के उपदेश से श्वेत शंभु की सभा में नहीं बैठा? मम कूडलसंगमदेव के शरणों का उपदेश सुननेवाले दुरित पापों से मुक्त होकर लिंगदेव में मन लीन करते हैं ॥ Translated by: Banakara K Gowdappa
Telugu Translation ఆలింపు డాలింపుడో అయ్యలారా! గురూపదేశము పౌలస్త్యుడొక గిజగాని యుపదేశమున పడయడే పదితలల బిడ్డను? వాడు తలలిచ్చి శివుడున్న చోటును చూడడే? పేగుల తంతిగ మీటి అసురుడు సురపథము తొక్కడే హరిణి యుప దేశమున ముక్తి నందడే వినాశ క్తి రాయుడు? రంభ యుపదేశమున శ్వేతుడు నిల్వడే శంభుసభాస్థలిని? సంగని శరణుల యుపదేశము విన్న! పాపములు బాయు; భవుడు భావమున నిల్చునయ్యా! Translated by: Dr. Badala Ramaiah
Tamil Translation குரு உபதேசத்தைப் பெரியோரே கேண்மின் கேண்மின் ஒரு கீசகனின் அறிவுரையால் புலத்தியன் அன்று இராவணனைப் பெற விலையோ? இரக்கம் மிக்க அறிவுரையால் அசுரன் அன்று சுரபதவியைப் பெறவிலையோ? இளம் மங்கையனரின் அறிவுரையால் அன்று வினாசசக்திராயன் தன் வழியில் சென்று முக்தியைப் பெறவில்லையோ? இரம்பையின் அறிவுரையால் சம்புவின் ஓலக்கத்தில் சுவேதன் அமரவில்லையோ? நம் கூடல சங்கனின் அடியாரின் அறிவுரைகளைச் செவிமடுத்தோர் கெட்ட பாவங்கள் விலகி இலிங்கத்தில் மனமொன்றி இருப்பர் ஐயனே. Translated by: Smt. Kalyani Venkataraman, Chennai
Marathi Translation गुरुपदेश महिमा, ऐकवितो तुम्हा त्यास नसे सिमा, असिम तो गुरु, त्यास नसे सिमा कवडा उपदेश, पौलस्थाशी ती दशानन प्राप्ती, पुत्र रूपे, दशानन प्राप्ती शिवभक्तासाठी, पेशि तंतू वाद्य रावण करि साध्य, प्रसन्न तो शिव, रावण करि साध्य हरिणी उपदेशे, विनाशक्तिराय मुक्ताची ती होय, उपदेशे, मुक्ताची ती होय रंभा उपदेशं पवित्र तो श्वेत कैलासी जात, शिवकृपेने, कैलासी जात कूडलसंगमेशा, जाण शरण भावा पाप रहित व्हावा, शरणुपदेश, पाप रहित व्हावा गुरुपदेश गाठी, लिंगैक्यासाठी तल्लीनता मोठी, शिवशरणांची, तल्लीनता मोठी. अर्थ - सद्गुरुची महिमा अतर्कीय व असीम असते ते महामहीम असतात. ते सदैव सद्उपदेश करून भवसागरातून पार करण्यासाठी नेहमी सतर्क असतात सद्गुरु कोणत्या वेषात काम करतील हेही सांगणे असमर्थ होय. सुग्रणी पक्ष्याच्या उपदेशाने पौलस्थाला शिवभक्त रावणासारखा पुत्र प्राप्त झाला. पुढे रावणाने आपल्या हृदय तंतूची वीणा करुन संगिताने शिवास आपलेसे केले. त्याचप्रमाणे हरिणीच्या उपदेशाने विनाशक्तिराय मुक्त झाला. रंभेच्या उपदेशाने श्वेत कैलासाला गेला. हे कूडलसंगमदेवा ! पाप रहित होण्यासाठी शरणांची संगती व शरणभाव गती प्राप्तविणे आवश्यक असते. Translated by Rajendra Jirobe, Published by V B Patil, Hirabaug, Chembur, Mumbai, 1983 ऐका हो ऐका वयोवृध्दांनो, गुरु उपदेशाचा महिमा. पूर्वी एका विणकर पक्ष्याच्या उपदेशाने पौलस्याला पुत्ररुपात दशानन मिळाला नाही का? शिरार्पण केल्याने परमात्माच्या स्थलाचे दर्शन झाले नाही का या धरतीवर, आर्तनादाच्या तंतूवाद्य उपदेशाने सूरपद असूर रावणाला मिळाले नाही का? तरुण हरिणीच्या उपदेशाने मुक्ती मिळाली नाही का विनाशक्तीरायाला? रंभेच्या उपदेशाने कैलास सिंहासनावर बसला नाही का श्वेत? आमच्या कूडलसंगाच्या शरणांचा उपदेश ऐकता पाप नष्ट होते, मन निरत होईल लिंगदेवामध्ये. Translated by Shalini Sreeshaila Doddamani
ಶಬ್ದಾರ್ಥಗಳು ಅಸುರ = ರಾಕ್ಷಸ; ಇಳೆ = ; ಉಪದೇಶ = ; ಕುರುಳ = ; ಗತಿ = ಸ್ಥಿತಿ; ಗೀಜಗ = ಪಕ್ಷಿ; ತರುಣೆ = ; ಪಥ = ; ಪರಮ = ; ಪೌಲಸ್ತ್ಯ = ; ಬಟೆ = ; ಮುಕ್ತಿ = ; ಸುರಪದ = ; ಹಡೆ = ; ಹತ = ; ಹರಿ = ; ಹರಿಣಿ = ;
ಕನ್ನಡ ವ್ಯಾಖ್ಯಾನ ಹಿಂದಿನ ವಚನದಲ್ಲಿ “ಗುರುವಿನುಪದೇಶ”ವೆಂಬೊಂದು ಮಾತು ಬಂದಿದೆ. ಅದರ ಸ್ವರೂಪವನ್ನಿಲ್ಲಿ ಕಾಣಬಹುದು, ಗುರು ಎಂಬುದು ತತ್ತ್ವಶಃ ಒಂದು ಮಹಾ ವ್ಯಕ್ತಿಯೇ ಆಗಬೇಕಾಗಿಲ್ಲ-ಅದು ಪಕ್ಷಿಯಾಗಬಹುದು. ಒಂದು ಮೃಗವಾಗಬಹುದು. ಒಂದು ಕೋತಿಯೂ ಆಗಬಹುದು. ಒಬ್ಬ ಸೂಳೆಯೂ ಆಗಬಹುದು. ಗುರುವೆನ್ನುವುದೊಂದು ಪಿಂಡವಲ್ಲ-ಎತ್ತಣಿಂದಲಾದರೂ ಬಂದು ನಮ್ಮನ್ನು ತಟ್ಟಿದೊಂದು ಪ್ರಬಲವಾದ ಭಾವಸಂಚಾರ. ಇದರ ಸಮರ್ಥನೆಗಾಗಿ ಪುಲಸ್ತ್ಯ ಮುಂತಾದವರು ಚಮತ್ಕಾರವಾದ ರೀತಿಗಳಲ್ಲಿ ಉದ್ದೀಪಿತರಾಗಿ ಲೌಕಿಕ ಇಷ್ಟಾರ್ಥಗಳನ್ನೇ ಅಲ್ಲ ಅಲೌಕಿಕ ಮೋಕ್ಷಾದಿಗಳನ್ನೂ ಪಡೆಯುವಂತಾದುದನ್ನು ಈ ವಚನದಲ್ಲಿ ಪ್ರಸ್ತಾಪಿಸಿ ತನ್ನದೇ ಆದೊಂದು ನಿಲುವನ್ನೂ ಸ್ಪಷ್ಟಪಡಿಸಲಾಗಿದೆ. ಪುಲಸ್ತ್ಯನು ತನ್ನ ತಪದ ಭರದಲ್ಲಿ ಮೈನೆರೆದ ಹೆಂಡತಿಯನ್ನು ಹತ್ತ ವರ್ಷವಾದರೂ ನೆರೆಯಲಿಲ್ಲವೆಂದು -ಹೆಣ್ಣುಗೀಜಗನ ಪಕ್ಷಿಯೊಂದು ತನ್ನ ಗಂಡನ್ನು ಒಲಿಸಿಕೊಳ್ಳುವಾಗ ಆಡಿದ ಮಾತನ್ನು ಸ್ವತಃ ಪುಲಸ್ತ್ಯನೇ ಕೇಳಿಸಿಕೊಂಡು –ತಪದಿಂದ ಎದ್ದು ಬಂದು ಹೆಂಡತಿಯನ್ನು ಸಂತೋಷಪಡಿಸಿದನು. ಮತ್ತು ಆ ಹೆಂಡತಿ ಮಾಡಿದ ಶಿವಪೂಜೆಯ ಬಲದಿಂದ ಪುಲಸ್ತ್ಯನ ತಪ ಕಳೆಯೇರಿ ಅವನು ಶಿವನ ಕೃಪೆಗೆ ಪಾತ್ರನಾಗಿ ಶಿವಭಕ್ತನಾದ ರಾವಣನನ್ನು ಪುತ್ರನನ್ನಾಗಿ ಪಡೆದನು. ರಾವಣನು ತನ್ನ ತಲೆಯನ್ನು ಕಡಿದಿಕ್ಕಿಯೂ ಶಿವನನ್ನು ಒಲಿಸಿಕೊಳ್ಳಲಾಗಲಿಲ್ಲ. ಆಗ ಕೋತಿಯೊಂದು ಮರಿಯನ್ನು ಈದು-ಮರದಿಂದ ಮರಕ್ಕೆ ನೆಗೆಯುವಾಗ -ದಾಂಗುಡಿಯಿಟ್ಟ ಅದರ ಮಾಸು ಒಣಗಿ ತಂತಿಯಂತಾಗಿ -ಬೀಸಿದ ಗಾಳಿಗೆ ಮಧುರನಾದವನ್ನು ಹೊಮ್ಮಿಸುತ್ತಿತ್ತು. ಆ ಅದ್ಭುತವನ್ನು ಕಂಡ ರಾವಣನು –ತನ್ನ ಕಡಿದ ತಲೆಯನ್ನು ಬುರುಡೆ ಮಾಡಿ, ಕೈಯನ್ನು ಕಡಿದು ಪೋಳಮಾಡಿ, ನರವನ್ನು ಕಿತ್ತುಕೊಂಡು ತಂತಿಮಾಡಿ, ಬೆರಳನ್ನು ಕಡಿದು ಬಿರಡೆ ಮಾಡಿ ತಯಾರಾದ “ರಾವಣ ಹಸ್ತ”ವೆಂಬ ವೀಣೆಯನ್ನು ಬಾಜಿಸಿ ಶಿವನ ಕೃಪೆಗೆ ಪಾತ್ರನಾದನು. ವಿನಾಶಕ್ತಿರಾಯನು ಯಾರ ಅನ್ನಕ್ಕೋ ಕಂಟಕನಾಗಿ –ತಿನ್ನುವ ಅನ್ನವೆಲ್ಲಾ ಹುಳುವಾಗುವ ಶಾಪದಿಂದ ಕಂಗೆಟ್ಟನು. ಆ ಸಮಯಕ್ಕೆ ಬೇಡನ ಬಲೆಗೆ ಬಿದ್ದ ಹೆಣ್ಣು ಜಿಂಕೆಯೊಂದು ತನ್ನ ಮರಿಗೆ ಹಾಲು ಕುಡಿಸಿ ಬಂದು ನಿನಗೆ ಆಹಾರವಾಗುವೆನೆಂದು ಬೇಡನನ್ನು ಬೇಡಿಕೊಂಡಿತು. ಆ ಬೇಡನು ಸಂಶಯಪಟ್ಟಾಗ –ತಾನೆಂದಿಗೂ ವಿನಾಶಕ್ತಿರಾಯನಂತೆ ಯಾರ ಅನ್ನಕ್ಕೂ ಕಂಟಕವಾಗುವುದಿಲ್ಲವೆಂದು ಭರವಸೆಕೊಟ್ಟಿತು. ಇದನ್ನೆಲ್ಲ ಕಂಡು ಕೇಳಿದ ವಿನಾಶಕ್ತಿರಾಯನು ವೈರಾಗ್ಯದಿಂದ ಮೊಸಳೆಯ ಬಾಯಿಗೆ ಬೀಳಲು ಶಿವನ ಕೃಪೆ ದೊರಕಿ ಶಾಪವಿಮುಕ್ತಿಯನ್ನು ಪಡೆದನು (ನೋಡಿ ವಚನ 625). ಶ್ವೇತನು ಒಂದು ಕಾಲಕ್ಕೆ ವೇಶ್ಯಾಲಂಪಟನಾಗಿದ್ದು ಆಮೇಲೆ ಪ್ರಸಿದ್ದ ಶಿವಭಕ್ತನಾದವನು. ಅವನು ವೇಶ್ಯಾಲಂಪಟನಾಗಿದ್ದಾಗ ಒಂದು ಸಲ ಸೂಳೆಗೆ ಹೂ ಕೊಂಡೊಯ್ಯುವಾಗ ಹೇಸಿಗೆಯ ಮೇಲೆ ಜಾರಿಬಿದ್ದ ಹೂವೊಂದನ್ನು ಶಿವಾರ್ಪಣವಾಗಲೆಂದು ಮುಂದೆಹೋದ. ಆ ಪುಣ್ಯದ ಫಲವಾಗಿ ರಂಭೆಯೊಡನೆ ರಮಿಸುವ ಒಂದು ಸದವಕಾಶವನ್ನು ಪಡೆದು -ಸ್ವರ್ಗದಲ್ಲಿ ಆ ರಂಭೆಯ ಮುಂದೆ ನಿಂತಾಗ –ಅವಳು ಅವನನ್ನು ಗೇಲಿ ಮಾಡಿ -ಶಿವಪೂಜಾಫಲವನ್ನು ವೇಶ್ಯಾಗಮನಕ್ಕಾಗಿ ವೆಚ್ಚಿಸುವ ನೀನು ಮುರ್ಖನಲ್ಲದೆ ಮತ್ತೇನೆಂದು ಜರಿದು ಬುದ್ಧಿ ಹೇಳಿದಳು. ಆಗ ಜ್ಞಾನೋದಯವಾದ ಶ್ವೇತನು ಮುಂದೆ ಮಹಾಶಿವಭಕ್ತನಾಗಿ ಅಮರತ್ವವನ್ನು ಪಡೆದನು. ಹೀಗೆ ಒಬ್ಬ ವೇಶ್ಯೆಯ ಅಣಕದ ಬುದ್ಧಿವಾದ, ಜಿಂಕೆಯ ಆಕ್ಷೇಪಣೆಯ ಮಾತು, ಕೋತಿಯ ಕರುಳಿನ ತಂತಿಯ ನಾದ, ಒಂದು ಗೀಜಗನ ಸರಸಸಲ್ಲಾಪ –ಮನುಷ್ಯರ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರಿ ಅವರ ಜೀವನವನ್ನು ಉದಾತ್ತವಾದ ಕಡೆ ತಿರುಗಿಸಿದವೆಂದಮೇಲೆ -ಸರ್ವಜೀವ ದಯಾಪರರೂ, ವಿಶ್ವಹಿತೈಷಿಗಳೂ ಆದ ಶಿವಶರಣರ ಉಪದೇಶವನ್ನು ಪಡೆದ ಯಾರಿಗೆ ತಾನೇ ಪಾಪಪೂರಿತ ಚಂಚಲಚಿತ್ತತೊಲಗಿ ಶಿವನಲ್ಲಿ ಏಕಾಗ್ರತೆ ಸಮನಿಸದು ? ಶಿವನಿಗೆ ಶರಣಾಗತರಾದ ಶರಣರಿಗೆ ಶರಣೆಂದು ಅವರಿಂದ ಉಪದೇಶ ಪಡೆದವರಿಗೆ ಪರಮ ಪದವಿ ದೊರೆಯುವುದು ನಿಶ್ಚಯವೆಂದು ಪತಿತರಿಗೂ ಪಾಪಿಗಳಿಗೂ ಬಸವಣ್ಣನವರು ಸಾರಿ ಹೇಳಿ ಕರೆಕೊಡುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು