•  
  •  
  •  
  •  
Index   ವಚನ - 657    Search  
 
ಮಾಹೇಶ್ವರನ ಜ್ಞಾನಿಸ್ಥಲ - ಜಾತಿ
ಶ್ವಪಚನಾದರೇನು? ಲಿಂಗಭಕ್ತನೇ ಕುಲಜನು. ನಂಬಿ ನಂಬದಿದ್ದರೆ ಸಂದೇಹಿ, ನೋಡಾ! ಕಟ್ಟಿದರೇನು, ಮುಟ್ಟಿದರೇನು, ಹೂಸಿದರೇನು ಮನಮುಟ್ಟದನ್ನಕ್ಕ? ಭಾವಶುದ್ಧವಿಲ್ಲದವಂಗೆ ಭಕ್ತಿ ನೆಲೆಗೊಳ್ಳದು, ಕೂಡಲಸಂಗಯ್ಯ ನೊಲಿದಂಗಲ್ಲದೆ.
Transliteration Śvapacanādarēnu? Liṅgabhaktanē kulajanu. Nambi nambadiddare sandēhi, nōḍā! Kaṭṭidarēnu, muṭidarēnu, hūsidarēnu manamuṭṭadannakka? Bhāvaśud'dhavilladavaṅge bhakti nelegoḷḷadu, kūḍalasaṅgayya nolidaṅgallade.
Manuscript
English Translation 2 What if he be a low- born man Provided he is A Liṅga- bhakta, he is well- born. The man who, once believing,does not believe Is but a doubting soul. What if you tie, and touch, smear ash, Unless your heart is touched? Devotion takes no root In one whose heart’s impure, Unless he is one Who Lord Kūḍala Saṅga loves. Translated by: L M A Menezes, S M Angadi
Hindi Translation श्वपच होने से क्या? लिंगभक्त ही कुलीन है। जो अपूर्ण विश्वास रखता है वह संदेही है लिंगधारण से क्या, स्पर्श करने से क्या, विभूति लगाने से क्या, यदि मन का स्पर्श न हो? भाव शुद्दि हीन में भक्ति टिक नहीं सकती , यदि कूडलसंगमदेव की कृपा न हो ॥ Translated by: Banakara K Gowdappa
Telugu Translation శ్వపచుడై ననేమి శివభక్తుడే కులజుడు నమ్మి నమ్మని వాడు సందేహికదరా! కట్టిన యేమి? ముట్టిన యేమి? పూసిననేమి? మదిముట్టనంతగాక! భావశుద్ధి లేక భక్తి పట్టుపడదు సంగడు మెచ్చకే పట్టువడదయ్యా! Translated by: Dr. Badala Ramaiah
Tamil Translation கீழ்க்குலத்தவனாயினென்ன? இலிங்கபக்தனே நற்குலத்தவன், நம்பியும் நம்பாதிருப்பின் ஜயமுற்றவன், காணாய், கட்டிலானென்ன? தீண்டினாலென்ன? பூசினாலென்ன? மனத்திலே உணராதவரை தூய எண்ணமற்றோனுக்கு பக்திநிலை கொள்வதில்லை, கூடல சங்கமதேவன் அருளியவனுக்கின்றி ஐயனே. Translated by: Smt. Kalyani Venkataraman, Chennai
Marathi Translation श्वपच असो हीन, जाती लिंग भक्त तो कुलीन ससंदेही भक्ती करीतो अभद्र कुलहीन एकाग्रतेविणा पूजा लिंगस्पर्श व्यर्थ भावशुद्धीवीणा भक्ती त्रिपुंड्रा न अर्थ कूडलसंगमदेव जाणे सहज तो स्वभावी अर्थ - कोणत्याही जाती, पंथ व मतवाद्याने लिंगधारणा केली तर त्यास मी कुलीन समजेन. लिंगधारी अशा कुलीनांना एकदा आपले केल्यानंतर त्यांच्यावर संशय करु नये. मन एकाग्र करुन भक्तिभावाने लिंगपूजा केली तरच लिंगैक्य सहजपणे साधू शकेल. हे कूडलसंगमदेवा (परशिवा) भावशुद्धीविणा हीन भक्ति करणाऱ्या भक्तांना गळ्यात इष्टलिंग धारण करून, कपाळाला विभूती चर्चून, लिंगास स्पर्श केल्यास त्यांचा तो स्पर्श त्यांच्याच ऱ्हासास कारणीभूत होईल. Translated by Rajendra Jirobe, Published by V B Patil, Hirabaug, Chembur, Mumbai, 1983 अस्पृश्य असला तरी काय झाले ? लिंगभक्त श्रेष्ठ कुलीन आहे. श्रध्दा ठेवून संदेह करणे योग्य नाही पहा. गळ्यात बांधले, स्पर्श केला, विभूती लेपन केले. तरी काय प्रयोजन ? मन शुध्द नसेल तर? भावशुध्दीविना भक्ती होणार नाही कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಕುಲಜ = ; ನೆಲೆ = ; ಭಾವ = ; ಶ್ವಪಚ = ; ಸಂದೇಹಿ = ; ಹೂಸಿ = ;
ಕನ್ನಡ ವ್ಯಾಖ್ಯಾನ “ಭಾವಶುದ್ಧವಿಲ್ಲದವನಿಗೆ ಭಕ್ತಿ ನೆಲೆಗೊಳ್ಳದು” –ಎಂಬುದೊಂದು ಭಕ್ತಿಸೂತ್ರ. ಪ್ರಸ್ತುತ ಆ ನಂಬಿಕೆಯ ಸ್ವರೂಪವೆಂದರೆ -ಶಿವಧರ್ಮಕ್ಕೆ ಸೇರಿದವನು ಯಾವನೇ ಆಗಲಿ ಅವನು ಶ್ರೇಷ್ಠನೆಂದು ಪರಿಗಣಿಸಲ್ಪಡಬೇಕು. ಶ್ರೇಷ್ಠತೆಗೆ ಸಾಕ್ಷಿ ಲಿಂಗಭಕ್ತಿಯೇ ಹೊರತು –ಇತರೇತರವಾದ ಜಾತೀಯ ಪ್ರತಿಷ್ಠೆಯಲ್ಲ. ಮತ್ತು ಶಿವಧರ್ಮಕ್ಕೆ ಸೇರಿದ ಶ್ವಪಚನೂ ಪೂಜ್ಯನೆಂಬ ಭಾವತೀವ್ರತೆ ಸ್ವತಃ ಶ್ವಪಚನಾಗಿ ಹುಟ್ಟಿದವನಿಗೂ ಅಳವಟ್ಟಿರಬೇಕು. ಹೀಗಲ್ಲದೆ ಕೇವಲ ಶಿವಧರ್ಮಕ್ಕೆ ಸೇರಿದ ಮಾತ್ರದಿಂದಲೇ ಬಂದ ಭಾಗ್ಯವೇನೂ ಇಲ್ಲ. ಲಿಂಗವನ್ನು ಕಟ್ಟಿಯೂ ವಿಭೂತಿಯನ್ನು ಬಳಿದೂ ಪ್ರಯೋಜನವಿಲ್ಲ. ಲಿಂಗವನ್ನು ಕಟ್ಟುವುದೆಂದರೆ ಎಲ್ಲರೂ ಒಂದು ಕುಟುಂಬದವರೆಂದೂ, ವಿಭೂತಿಯನ್ನು ಬಳಿಯುವುದೆಂದರೆ ಒಬ್ಬರೊಬ್ಬರ ನಡುವಣ ಜಾತಿಭೇದವನ್ನು ಸೀಟಿ ಕಳೆಯುವುದೆಂದೂ ಅರ್ಥ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು