•  
  •  
  •  
  •  
Index   ವಚನ - 658    Search  
 
ಮಾಹೇಶ್ವರನ ಜ್ಞಾನಿಸ್ಥಲ - ನಡೆ-ನುಡಿ
ಅವರ ನಡೆಯೊಂದು ನುಡಿಯೊಂದಾದರೆ ಶಿವಾಚಾರಕ್ಕವರು ಸಲ್ಲರಯ್ಯಾ : ಬಲ್ಲನು, ಸಾತ್ವಿಕರಲ್ಲದವರನೊಲ್ಲನು; ಶಿವಾಚಾರವ ಬಲ್ಲನು, ಅಲ್ಲಿ ನಿಲ್ಲನು, ಪ್ರಪಂಚಿಯ ಮನವನೊಲ್ಲನು ಕೂಡಲಸಂಗಮದೇವನು.
Transliteration Avara naḍeyondu nuḍiyondādare śivācārakkavaru sallarayya: Ballanu, sātvikaralladavaranollanu; śivācārava ballanu, alli nillanu, prapan̄cada manavanollanu kūḍalasaṅgamadēvanu.
Manuscript
English Translation 2 They do not qualify For Śiva-discipline, whose word and deed Are not at one... Because He knows, He shuns men void of righteousness: Because he's versed in Śiva-discipline He'll not be found where they are found; Lord Kūḍala Saṅgama will have no truck With worldly men! Translated by: L M A Menezes, S M Angadi
Hindi Translation उनकी करनी और कथनी एक न हो, तो वे शिवाचार के योग्य नहीं हैं । वे जानते हैं, जो असात्विक हैं उन्हें नहीं चाहते; शिवाचार जानते हैं, अतः वे वहाँ नहीं ठहरते कूडलसंगमदेव प्रपंची का मन नहीं चाहते ॥ Translated by: Banakara K Gowdappa
Telugu Translation నుడికితగిన నడత లేనిచో వారు శివాచారమునకు చెల్లరయ్యా! సాధువులుగాకున్న స్వామి మెచ్చడు శివాచారము లేకున్న శివుడు నిల్వడు ప్రాపంచకుల భావ మొల్లడు సంగమదేవుడు. Translated by: Dr. Badala Ramaiah
Tamil Translation அவருடைய நடையொருவிதம், சொல்ஒருவிதமெனின் சிவநெறியில் அவர்கள் செல்லார் ஐயனே நல்லியல்பற்றோரை அறிந்தவன் ஏலான் ஐயனே சிவநெறியை அறிந்தவன் அங்கு நிற்பதில்லை உலகியல் சார்ந்தோரின் மனத்தை ஏற்பதில்லை கூடலசங்கமதேவன் Translated by: Smt. Kalyani Venkataraman, Chennai
Marathi Translation बोली एक आणि चालीत आगळा दंभाचारी सोवळा, कैसा होय करीतो अमान्य, शिवाचार तया तैशाच्या वारीया, घेईना तो सत्वहिनाचे त्या तोंड नच पाही शिवाचार ग्वाही, हीच सत्य कूडलसंगमदेवा ! ऐसा भ्रष्टाचारी नावडे संसारी, तुज लागी अर्थ - ज्याचे वोलणे एक व चालणे दुसरेच आणि जो सत्वापासून दूर झालेला असा भ्रष्टाचारी शिवाचारास अमान्य होय. शिवाचारी अशाच्या वाऱ्यासही थांबत नाही. माझ्या कूडलसंगमदेवांना असा भ्रष्टाचारी संसारी कदापि आवडत नाही. Translated by Rajendra Jirobe, Published by V B Patil, Hirabaug, Chembur, Mumbai, 1983 ज्यांच्या आचार विचारात एकता नसेल तर ते शिवाचाराला योग्य नाहीत हे जाणतात. सात्त्चिका विना इतरांना प्रसन्न होत नाही. जेथे शिवाचार तेथे परशिव राहतो. संसारींना प्रसन्न होत नाही कूडलसंगमदेव. Translated by Shalini Sreeshaila Doddamani
ಶಬ್ದಾರ್ಥಗಳು ಪ್ರಪಂಚಿ = ; ಶಿವಾಚಾರ = ; ಸಲ್ಲರು = ; ಸಾತ್ವಿಕ = ;
ಕನ್ನಡ ವ್ಯಾಖ್ಯಾನ ಶಿವಧರ್ಮದಲ್ಲಿ ಎಲ್ಲರೂ ಸಮಾನರೆಂದು ಬಾಯಲ್ಲಿ ಮಾತನಾಡುತ್ತ -ಶಿವಭಕ್ತರಲ್ಲಿ ತಾರತಮ್ಯವನ್ನು ಆಚರಿಸುವವರು ಆ ಶಿವಧರ್ಮ(ಶಿವಾಚಾರ)ಕ್ಕೆ ಯೋಗ್ಯರಲ್ಲ. ಸರ್ವಸಮಾನತೆಯ ಸದ್ಗುಣ ರಕ್ತಗತವಾಗದವರನ್ನು ಶಿವನು ಮೆಚ್ಚುವುದಿಲ್ಲವಾಗಿ -ಶಿವಭಕ್ತರಲ್ಲಿ ಭೇದವೇಣಿಸುವ ಪ್ರಾಪಂಚಿಕರನ್ನು ಗುರುತಿಸಿ ತಿರಸ್ಕರಿಸಬೇಕು – ಎಂದು ಬಸವಣ್ಣನವರು ಅಭಿಪ್ರಾಯಪಡುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು