•  
  •  
  •  
  •  
Index   ವಚನ - 659    Search  
 
ಮಾಹೇಶ್ವರನ ಜ್ಞಾನಿಸ್ಥಲ - ಅರಿವು
ನಿಧಾನವನರಸಿಹೆವೆಂದು ಹೋದರೆ, ವಿಘ್ನ ಬಪ್ಪುದು ಮಾಣ್ಬುದೆ? ಸದಾಶಿವನೆಂದರೆ, ಬೆದರಟ್ಟಿ ಸುಡುವುದು ಮಾಣ್ಬುದೆ? ಹದುಳಿಗನಾಗಿ ಉಳಿದರೆ ಪದವಿಯನೀವ, ಕಾಣಾ, ಕೂಡಲಸಂಗಮದೇವ.
Transliteration Nidhānavanarasihenendu hōdare, vighna bappudu māṇbude? Sadāśivanendare, bedaraṭṭi suḍuvudu māṇbude? Haduḷiganāgi uḷidare padaviyanīva, kāṇā, kūḍalasaṅgamadēva.
Manuscript
English Translation 2 Whenever you go in quest of hidden hoard, Adversities are bound to come. If you just say Sadāśiva'', Will they not still Pursue and harry you? Mark you, Lord Kūḍala Saṅgama will Confer on you a rank Provided you remain content. Translated by: L M A Menezes, S M Angadi
Hindi Translation निधि की खोज में जाने पर विघ्न आये बिना रह सकते हैं? ‘सदाशिव’ कहने से वे पीछा कर नहीं जलाते? देखो, तुम संतुष्ट रहो तो कूडलसंगमदेव पद प्रदान करेंगे ॥ Translated by: Banakara K Gowdappa
Telugu Translation నిధి నెత్తబోవ విఘ్నములురాక తప్పవురా! సదా శివుడని బోవ వెన్నంటి కాల్పక మానడురా! మా కూడల సంగమ దేవుడు పదవి నీయక మానడురా పరిపక్వజీవికి! Translated by: Dr. Badala Ramaiah
Tamil Translation புதையலைத்தேடுழி, தடை வராமலிக்குமோ? சதாசிவன் எனின் அச்சம் தொற்றி சுடாது விடுமோ? நல்லவனாகி இருப்பின் பதவியை அளிப்பான் கூடல சங்கமதேவன், காணாய் Translated by: Smt. Kalyani Venkataraman, Chennai
Marathi Translation गुप्त धनाच्या शोधात विघ्न येणार नाही का? सदाशिवाच्या अनुग्रहात सत्त्व परिक्षा होणार नाही का? त्या सत्त्व परिक्षेत विचलीत न होणाऱ्यास शाश्वतपद देतील कूडलसंगमदेव. Translated by Shalini Sreeshaila Doddamani
ಶಬ್ದಾರ್ಥಗಳು ಅಟ್ಟ = ತಲೆ ಇಲ್ಲದ ದೇಹ, ಮುಂಡ; ಅರಸು = ಹುಡುಕು; ನಿಧಾನ = ; ಪದವಿ = ; ಬಪ್ಪುದು = ; ಬೆದರು = ; ಮಾಣ್ಬು = ; ವಿಘ್ನಾ = ; ಸದಾಶಿವ = ; ಹದುಳಿಗ = ;
ಕನ್ನಡ ವ್ಯಾಖ್ಯಾನ ಆರ್ಥಿಕವಾದ ನಿಧಿಯೊಂದನ್ನು ಪಡೆಯಬೇಕಾದರೆ –ಮೊದಲದು ಎಲ್ಲಿದೆಯೆಂಬುದನ್ನು ಕಾಗೆಗೂಗೆಯ ನರ ಕೋಲತೈಲಾದಿಗಳನ್ನು ಉರಿಸಿ ತಯಾರಿಸಿದ ಕಾಡಿಗೆಯನ್ನು ಕಣ್ಣಿಗೆ ಹಚ್ಚಿಕೊಂಡು ಹುಡುಕಿ ಪತ್ತೆ ಹಚ್ಚಬೇಕು. ಭೂತವೇತಳಾದಿಸಹಿತ ಕ್ಷೇತ್ರಪಾಲಾದಿ ದೇವತೆಗಳನ್ನು ಒಲಿಸಿಕೊಳ್ಳಬೇಕು –ಮೈಮೇಲೆ ಬರುವ ಸರ್ಪವೃಶ್ಚಿಕಾದಿಗಳನ್ನು ಪರಿಹರಿಸಿಕೊಳ್ಳಬೇಕು –ಆ ಮೇಲೆಯೇ ಆ ನಿಧಿ ಅವನ ವಶವಾದೀತು. ಅಂದಮೇಲೆ ಪಾರಮಾರ್ಥಿಕವಾದ ಭಕ್ತಿನಿಧಿಯನ್ನು ಪಡೆಯಬೇಕೆಂಬವರು ಮಾಡಬೇಕಾದ ಸಾಧನೆ ಅಲ್ಪಸ್ವಲ್ಪವಲ್ಲ –ಮಾನಸ ಚಾಂಚಲ್ಯ ಐಂದ್ರಿಯಿಕ ಉಪಟಳಾದಿಗಳನ್ನು ಎದುರಿಸಿ ನಿಸ್ಸೀಮನಿಶ್ಚಿಲವಾಗಿ ಶಿವಧ್ಯಾನದಲ್ಲಿ ನಿಲ್ಲಬೇಕು. ಅಂಥ ಅಕ್ಷತಧರ್ಮವೀರನಿಗೆ ಮಾತ್ರ ಶಿವಭಕ್ತಿನಿಧಿ ಸೂರೆಯಾದೀತು, ಉಳಿದವರಿಗೆ ಅದು ಕೇವಲ ಕನಸಿನ ಗಂಟು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು