•  
  •  
  •  
  •  
Index   ವಚನ - 660    Search  
 
ಮಾಹೇಶ್ವರನ ಜ್ಞಾನಿಸ್ಥಲ - ಶರಣರು
ಅಡಿಗಡಿಗೆ ದೇವರಾಣೆ, ಅಡಿಗಡಿಗೆ ಭಕ್ತರಾಣೆ, ಅಡಿಗಡಿಗೆ ಗುರುವಿನಾಣೆ ಎಂಬ ವಚನವೇ ಹೊಲ್ಲ! ಮುಂದೆ ಶಿವಪಥಕ್ಕೆ ಸಲ್ಲರು. ಆದಿಯಿಂದ ಬಂದ ವಚನವೆಂದು ಶರಣರ ಕೂಡೆ ಸರಸವಾಡಿದರೆ- ನಗುತಲಿರಿದುಕೊಂಡರೆ ಅಲಗು ನೆಡದಿಹುದೆ, ಕೂಡಲಸಂಗಮದೇವಾ?
Transliteration Aḍigaḍige dēvarāṇe, aḍigaḍige bhaktarāṇe, aḍigaḍige guruvināṇe emba vacanave holla! Munde pathakke sallaru. Ādiyinda banda vacanavendu śaraṇara kūḍe sarasavāḍidare- nagutaliridukoṇḍare alagu neḍadihude, kūḍalasaṅgamadēvā?
Manuscript
English Translation 2 You swear, at every step, By gods and devotees; By Gurus, too, at every step: Worthless such language is! Henceforth they don't deserve The Śiva-path! If you Should trifle with the Śaraṇās and claim These words come down from immemorial times-, Should you, in jest Plunge a dagger into yourself, Will it not pierce, O Kūḍala Saṅgama Lord? Translated by: L M A Menezes, S M Angadi
Hindi Translation पग पग पर ईश्वर की सौगंध पग पग पर भक्तों की सौगंध पग पग पर गुरु की सौगंध लेना अनिश्चित है। आगे वे शिवपथ के योग्य नहीं होंगे । आदि से आगत वचन कहकर, शरणों के साथ परिहास करे, तो हँसते हुए कुठार भोंक लें तो वह चुभता नहीं कूडलसंगमदेव? Translated by: Banakara K Gowdappa
Telugu Translation మండలం అడుగడుగున దేవుడే సాక్షి; అడుగడుగున భక్తుడే సాక్షి; అడుగడుగున గురుడేసాక్షి అనుటయే తప్పు; వారు శివపథమునకు చెల్లరు సంప్రదాయమని కలిసి శరణులతో సరసమాడిన; నవ్వుచూ పొడుచుకొన’ కోయకమానునే కత్తి కూడల సంగమదేవా! Translated by: Dr. Badala Ramaiah
Tamil Translation அடிக்கடி கடவுள் மீதாணை, அடிக்கடி பக்தர் மீதாணை அடிக்கடி குருவின் மீதாணை எனும் சொல்லை ஏலான் பின்பு அவர்கள் சிவநெறியில் செல்லார் முதலிலிருந்து மொழியப்பட்ட வசனம் என்று அடியாரைக் கூடிக்களித்து நகையாடின் அலகு குத்தாமலிருக்குமோ, கூடல சங்கமதேவனே Translated by: Smt. Kalyani Venkataraman, Chennai
Marathi Translation पावलागणी देवाशपथ, पावलागणी भक्ताशपथ, पावलागणी गुरुशपथ म्हणणे चांगले नाही. शपथ घेणे भक्तीपथावर योग्य नाही. पूर्वीपासून हे चालत आले आहे म्हणून शरणांशी खेळ केला तर हसत हसत चाकूचा वार केल्यासम होणार नाही का कूडलसंगमदेवा? Translated by Shalini Sreeshaila Doddamani
ಶಬ್ದಾರ್ಥಗಳು ಅಡಿ = ಹೆಜ್ಜೆ ಪಾದ; ಅಲಗು = ಕತ್ತಿ; ಆಣೆ = ಪ್ರಮಾಣ; ಶಿವಪಥ = ; ಸರಸ = ; ಸಲ್ಲ = ; ಹೊಲ್ಲ = ;
ಕನ್ನಡ ವ್ಯಾಖ್ಯಾನ ತೀರು ನೀಲಕಂಠನೆಂಬ ಪುರಾತನ ಭಕ್ತನೊಮ್ಮೆ ಹೆಂಡತಿಯನ್ನು ಮುಟ್ಟಲು ಹೋದಾಗ –ಅವನ ಶೀಲವನ್ನು ಶಂಕಿಸಿದ ಆಕೆ ಮುನಿಸಿಕೊಂಡು ಮುಟ್ಟಬೇಡವೆನ್ನುತ್ತ –ಮುಟ್ಟಿದರೆ ಶಿವನಾಣೆ ಎನ್ನುತ್ತಾಳೆ. ಶಿವನಾಣೆಯೆಂದರೆ -ಶಿವನ ಆಜ್ಞೆ ಎಂದರ್ಥ. ಆ ಶರಣನು ಆ ಶಿವನಾಜ್ಞೆಯನ್ನು ಹೇಗೆ ತಾನೆ ಮೀರಿಯಾನು ? ಯೌವನವಿಡೀ ಅವನು ಹೆಂಡತಿಯನ್ನು ಸೋಕಲೇ ಇಲ್ಲ. 70-80ರ ಮುಪ್ಪಿನವರೆಗೂ ಆ ಮುಟ್ಟದ ವ್ರತವನ್ನು ಪರಿಪಾಲಿಸಿದ. ಅದಕ್ಕೆ ಮೆಚ್ಚಿದ ಶಿವನು ವೇಷಾಂತರದಿಂದ ಬಂದು ಉಪಾಯಾಂತರದಿಂದ ಹೆಂಡತಿಯ ಕೈಯನ್ನು ತಿರುನೀಲಕಂಠನು ಹಿಡಿಯುವಂತೆ ಮಾಡಿ ಮರಳಿ ಅವನಿಗೆ ಯೌವನವನ್ನು ದಯಪಾಲಿಸುತ್ತಾನೆ. ಅಂದರೆ ಶಿವನಾಣೆಯೆಂಬುದು ಅಷ್ಟು ಅನುಲ್ಲಂಘನೀಯ –ಮತ್ತು ಪರಿಪಾಲಿಸಿದರೆ ಅಷ್ಟೂ ಫಲಪ್ರದ. ಆದುದರಿಂದಲೇ ಅದು ಅಸತ್ಯಕ್ಕೆ ಅವಸರಕ್ಕೆ ಸಿಕ್ಕಿದವರ ಸಂಬಂಧವಾಗಿ ಎಂದಿಗೂ ಬಳಕೆಯಾಗತಕ್ಕದ್ದಲ್ಲ. ಮಣ್ಣುಕಲ್ಲಿನ ರಾಜನೊಬ್ಬನ ಆಜ್ಞೆಯನ್ನೇ ಮನುಷ್ಯನು ಅವಜ್ಞೆಯಿಂದ ಕಾಣಲಾಗದೆಂದ ಮೇಲೆ -ಶಿವನ ಮೇಲೆ. ಭಕ್ತನ ಮೇಲೆ. ಶರಣನ ಮೇಲೆ. ಗುರುವಿನ ಮೇಲೆ ಆಣೆಯಿಟ್ಟುಕೊಳ್ಳುವುದು ಅಷ್ಟು ಸದರವಲ್ಲ. ಇಟ್ಟುಕೊಂಡ ಆಣೆಗೆ ತಪ್ಪಿದವನು ಅಪರಾಧಿಯಾಗುತ್ತಾನೆ –ಎಂಬುದು ಬಸವಣ್ಣನವರ ಅಭಿಪ್ರಾಯ. ಹಿಂದಿನವರೆಲ್ಲಾ ಬಳಸಿದ ರೂಢಿಯ ಮಾತೆಂದು ಹಗುರವಾಗಿ ಭಾವಿಸಿ ಮಹನೀಯರ ಹೆಸರನ್ನು ಆಣೆಗಾಗಿ ಬಳಸಬಾರದೆಂದು ಎಚ್ಚರಿಸುತ್ತ ಬಸವಣ್ಣನವರು ಕೊಟ್ಟಿರುವ –“ನಗುತಲಿರದುಕೊಂಡರಲಗು ನಡದಿಹುದೇ” ಎಂಬ ಉಪಮಾನ ಮನಸ್ಸಿಗೆ ನಾಟುವಂತಿದೆ. “ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದು ಕ್ರೀಯ ಮಾಡೆನು, ನಿಮ್ಮ ಸೊಮ್ಮಿಂಗೆ ಸಲಿಸುವೆನು ನಿಮ್ಮಾಣೆ” (ನೋಡಿ ವಚನ 711) ಎಂದೂ, “ನೀನೊಲ್ಲದವರ ಹಿಡಿದೆನಾದರೆ ನಿಮ್ಮ ಪಾದದಾಣೆ” (ನೋಡಿ ವಚನ 787) ಎಂದು ಮುಂತಾಗಿ ಬಸವಣ್ಣನವರು ಕೆಲವೊಮ್ಮೆ ಶಿವನ ಮೇಲೆ ಆಣೆಯಿಟ್ಟು ಕೊಂಡಿರುವರು –ಅದಕ್ಕೆ ತಕ್ಕಂತೆ ಅವರು ಸದಾಕಾಲ ಭಕ್ತಿವಂತರಾಗಿ ತಮ್ಮ ಸಕಲೈಶ್ವರ್ಯವನ್ನೂ ಶಿವಕಾರ್ಯಕ್ಕಾಗಿಯೇ ವೆಚ್ಚಮಾಡುತ್ತ, ಶಿವಶರಣರ ಆಜ್ಞಾನುವರ್ತಿಗಳಾಗಿಯೇ ಘನತರವಾದೊಂದು ಜೀವನವನ್ನು ನಡೆಸಿಯೂ ಇರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು