ಮಾಹೇಶ್ವರನ ಜ್ಞಾನಿಸ್ಥಲ - ಶರಣರು
ಅರಗಿನ ಪುತ್ಥಳಿಯನುರಿಯ ನಾಲಗೆ ಹೊಯಿದು
ಮಾತಾಡುವ ಸರಸ ಬೇಡ !
ಬೆಣ್ಣೆಯ ಬೆನಕಂಗೆ ಕೆಂಡದುಂಡಲಿಗೆಯ ಮಾಡಿ
ಚಲ್ಲವಾಡಿದರೆ ಹಲ್ಲು ಹೋಹುದು!
ಕೂಡಲಸಂಗನ ಶರಣರೊಡನೆ ಸರಸವಾಡಿದರೆ
ಅದು ವಿರಸ ಕಾಣಿರಯ್ಯಾ!
Transliteration Aragina put'thaḷiyanuriya nālage hoyidu
mātāḍuva sarasa bēḍa!
Beṇṇeya benakaṅge keṇḍaduṇḍaligeya māḍi
callavāḍidare hallu hōhudu!
Kūḍalasaṅgana śaraṇaroḍane sarasavāḍidare
adu virasa kāṇirayya!
Manuscript
English Translation 2 What time a waxen doll has truck
A tongue of flame,
A truce to frivolous talk!
If your jest is to make a pie
Of live-coal for a butter Gaṇapati,
You'll have your teeth knocked out!
Take heed! It well may be
Unpleasant to make sport
With Kūḍala Saṅga's Śaraṇās!
Translated by: L M A Menezes, S M Angadi
Hindi Translation लाक्षापुथली को ज्वाला – जिह्वा पर रख
उससे बातें करने का विनोद मत करो
मक्खन के गणेशार्थ अंगार का मोदक बनाकर
परिहास करो, तो, दाँत नष्ट होंगे!
कूडलसंगमेश के शरणों के साथ परिहास करें,
तो देखो वह विरस होगा ॥
Translated by: Banakara K Gowdappa
Telugu Translation లక్కబొమ్మను మంటల గురిసేయుమాట తగదురా!
వెన్న వెనకయ్యను నిప్పులకు చూపు సరసము తగదురా!
సంగని శరణులతో సరసమాడ
విరసమై నోటిపండ్లు పడిపోవురా!
Translated by: Dr. Badala Ramaiah
Tamil Translation அரக்கு பொம்மையின் வெப்பத்தை
நாக்கிலே சொரிந்து
சுவைபடப் பேசுதல் வேண்டாம்
வெண்ணெய்ப் பிள்ளையாருக்கு தணல்
பணியாரம் செய்து, களித்துப் பேசின் பல்போகும்
கூடல சங்கனின் அடியாருடன் வெற்றுரையாடின்
அது சுவைக்காது காணீரோ.
Translated by: Smt. Kalyani Venkataraman, Chennai
Marathi Translation
लाखेच्या पुतळीला आगीच्या ज्वाळा दाखविणे म्हणजे मूर्खासारखे बोलणे.
लोण्याच्या गणेशाला अग्नीचा लाडू चारण्याचा खेळ केला तर दात पाडील.
कूडलसंगाच्या शरणाबरोबर चेष्टा केली तर विरस करील पहा देवा.
Translated by Shalini Sreeshaila Doddamani
ಶಬ್ದಾರ್ಥಗಳು ಅರಗು = ; ಉಂಡಲಿಗೆ = ; ಉರಿ = ; ಚಲ್ಲ = ; ಪುತ್ಥಳಿ = ; ಬೆನಕ = ; ವಿರಸ = ; ಸರಸ = ; ಹೊಯಿದು = ; ಹೋಹುದು = ;
ಕನ್ನಡ ವ್ಯಾಖ್ಯಾನ ಅರಗಿನ ಗೊಂಬೆಗೆ ಉರಿಯ ನಾಲಗೆಯನ್ನು ಜೋಡಿಸಿದರೆ ಆ ಗೊಂಬೆ ಕರಗಿ ಮುದ್ದೆಯಾಗುವುದು, ಬೆಣ್ಣೆಯಲ್ಲಿ ತಿದ್ದಿದ ಬೆನಕ(ವಿನಾಯಕ)ನ ಮುಂದೆ ಕೆಂಡದ ಉಂಡಲಿಗೆ(ಹುಗ್ಗಿ)ಯ ನೈವೇದ್ಯವನ್ನು ಹಿಡಿದರೆ –ಇರುವ ಅದರ ಒಂದು ಹಲ್ಲೂ ಇಲ್ಲದಾಗುವುದು -ಹೇಗೋ ಹಾಗೆ –ಮೊದಲೇ ವಿರಸವಾದ ಸಂಸಾರದಲ್ಲಿ ಸಿಕ್ಕಿಬಿದ್ದಿರುವ ಮಾನವನು ಶರಣಮಹನೀಯರನ್ನು ಕಂಡು ಕುರಿತು ಅಪಹಾಸ್ಯಮಾಡಿದರೆ -ಸುತ್ತುವರಿದ ಸಂಸಾರ ಮತ್ತಷ್ಟು ವಿರಸವಾದೀತು, ವಿಷಮವಾದೀತು, ವಿಷವಾದೀತು.
ಗಾಜಿನ ಮನೆಯಲ್ಲಿರುವವನು ಅಕ್ಕಪಕ್ಕದ ಗಚ್ಚಿನ ಮನೆಯಕಡೆ ಕಲ್ಲೆಸೆಯಬಾರದೆಂಬಂಥ ಬಸವಣ್ಣನವರ ಈ ಬುದ್ಧಿಮಾತು ಕಿವುಡುಗೇಳಬಹುದಾದ ವೇದಾಂತವಲ್ಲ-ಗಟ್ಟಿಮುಟ್ಟಾದ ವ್ಯಾವಹಾರಿಕ ವಿವೇಕದ ಮಾತು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು