•  
  •  
  •  
  •  
Index   ವಚನ - 663    Search  
 
ಮಾಹೇಶ್ವರನ ಜ್ಞಾನಿಸ್ಥಲ - ಶರಣರು
ಉರಿವ ಕೊಳ್ಳಿಯ ಮಂಡೆಯಲಿಕ್ಕಿದೊಡುರಿವುದು ಮಾಣ್ಬುದೆ? ಕಲ್ಲ ಗುಗ್ಗರಿಯ ಮೆಲಿದರೆ ಹಲ್ಲು ಹೋಹುದು ಮಾಣ್ಬುದೆ? ಶರಣರೊಡನೆ ಸರಸವಾಡಿದರೆ ನರಕ ತಪ್ಪದು, ಕಾಣಾ, ಕೂಡಲಸಂಗಮದೇವಾ!
Transliteration Uriva koḷḷiya maṇḍeyalikkidoḍurivudu māṇbude? Kalla guggariya mēlidare hallu hōhudu māṇbude? Śaraṇaroḍane sarasavāḍidare naraka tappadu, kāṇā, kūḍalasaṅgamadēvā!
Manuscript
English Translation 2 If you put a burning torch upon your head, Will it not burn? If you chew pebbles instead of maize, Will you not lose your teeth? If you would triffle with Śaraṇas, You can not, mark you, escape hell! Translated by: L M A Menezes, S M Angadi
Hindi Translation लुआठी सिर पर रखने से जलाना छोडेगी? पत्थर की घुंघनी चबाने से दाँत नहीं टूटेंगे? शरणों के साथ परिहास करे, तो देख नरक अवश्यभावी होगा कूडलसंगमदेव ॥ Translated by: Banakara K Gowdappa
Telugu Translation మండుకొఱవితో గోకుకొన తల కాలకమానునే రాతి గుగ్గిళ్ళు నమిలిన పండ్లు పడిపోక నిలుచునే? శరణులతో సరసమాడిన నరకము రాకతప్పదురా సంగా Translated by: Dr. Badala Ramaiah
Tamil Translation எரியும் கொள்ளியைத் தலையிலிடின் எரியாதிருக்குமோ? கல் உருண்டையை மென்றால் பல் போகாமலிருக்குமோ? சரணருடன் வெற்றுரையாடின் நரகம் தப்புமோ காணாய் கூடலசங்கமதேவனே. Translated by: Smt. Kalyani Venkataraman, Chennai
Marathi Translation जळते लाकूड शिरावर ठेवले तर जळणार नाही? दगडाच्या घुगऱ्या खाल्या तर दात तुटणार नाही ? शरणांच्या बरोबर चेष्टा केली तर नरक चुकणार नाही कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಕೊಳ್ಳಿ = ; ಗುಗ್ಗರಿ = ; ನರಕ = ; ಮಂಡೆ = ; ಮಾಣ್ಬು = ; ಮೆಲು = ; ಸರಸು = ; ಹೋಹುದು = ;
ಕನ್ನಡ ವ್ಯಾಖ್ಯಾನ ಈ ವಚನವು ಪ್ರತ್ಯೇಕವಾದೊಂದು ಮೂಲವಚನವಾಗಿರದೆ ಹಿಂದಿನೆರಡು ವಚನಗಳ ಸ್ವೇಚ್ಛಾ ಸಂಗ್ರಹವೇ ಆಗಿದೆ. ಪಠಿಸುವವನ ಬಾಯ್ತಪ್ಪಿಂದ ಕುಂದುಕೊರತೆಯಾಗಿ ಒಂದರಲ್ಲೊಂದು ಕಲಸಿಹೋಗಿ ಈ ವಚನ ರೂಪತಾಳಿದೆ. “ಕಲ್ಲ ಗುಗ್ಗರಿಯ ಮೆಲಿದರೆ ಹಲ್ಲು ಹೋಹುವುದು ನೋಡ ಎಂಬ ಈ ವಚನದ ಉಕ್ತಿಯು –“ಬೆಣ್ಣೆಯ ಬೆನಕಂಗೆ ಕೆಂಡಮದ್ದುಡಲಿಗೆಯ ಮಾಡಿ ಚೆಲ್ಲವಾಡಿದರೆ ಹಲ್ಲು ಹೋಹುದು” ಎಂಬ 662ನೇ ವಚನದ ಉಕ್ತಿಯನ್ನೇ ಆಶ್ರಯಿಸಿದೆಯೆಂಬುದನ್ನು ಗಮನಿಸಿರಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು