•  
  •  
  •  
  •  
Index   ವಚನ - 664    Search  
 
ಮಾಹೇಶ್ವರನ ಜ್ಞಾನಿಸ್ಥಲ - ನಂಬಿಕೆ
ಕೋಣನ ಹೇರಿಂಗೆ ಕುನ್ನಿ ಬಸುಗುತ್ತ್ತ ಬಡೆವಂತೆ ತಾವು ನಂಬರು, ನಂಬುವವರ ನಂಬಲೀಯರು; ತಾವು ಮಾಡರು, ಮಾಡುವವರ ಮಾಡಲೀಯರು! ಮಾಡುವ ಭಕ್ತರ ಕಂಡು ಸೈರಿಸಲಾರದವರ, ಕೂಗಿಡೆ ಕೂಗಿಡೆ, ನರಕದಲ್ಲಿಕ್ಕುವ ಕೂಡಲಸಂಗಮದೇವ!
Transliteration Kōṇana hēriṅge kunni basegutta baḍevante tāvu nambaru, nambuvavara nambalīyaru; tāvu māḍaru, māḍuvavara māḍalīyaru! Māḍuva bhaktaru kaṇḍu sairisalāradavara, kūgide kūgide, narakadallikkuva kūḍalasaṅgamadēva!
Manuscript
English Translation 2 Like a puppy-dog who yelps And snaps at a loaded buffalo, They have no faith themselves, nor will Let others have it! They will not do a thing, Nor will let others do it! They can't bear To see the practice of the devotees! Them Lord Kūḍala Saṅgama will thrust To hell, even as they hoot! Translated by: L M A Menezes, S M Angadi
Hindi Translation भैंसे पर का बोझ देख जैसे श्वान ईर्ष्या करता है वे स्वयं विश्वास नहीं करते, विश्वास करनेवालों को भी करने नहीं देते! वे स्वयं नहीं करते और करनेवालों को भी करने नहीं देते । आचारशील भक्तों को देख जो सह नहीं सकते उनके चिल्लाने पर भी कूडलसंगमदेव नरक में गिरा देंगे ॥ Translated by: Banakara K Gowdappa
Telugu Translation పులిపాలు పులిపిల్లకే గాని; పొలము జింకకు పోయరాదు; గండపెండేరము శూరులకేగాని పరులకు తొడుగరాదు! క్షణక్షణము చలియించు చపలుల ముక్కు కోయకమానునే కూడల సంగమదేవుడు? Translated by: Dr. Badala Ramaiah
Tamil Translation எருமையின் சுமைக்கு நாய் ஏளன நகை ஆடுவதனைய தாங்களும் நம்பார், நம்புவோரையும் நம்பவிடார் தாங்களும் செய்யார், செய்வோரையும் செய்யவிடார் செய்யும் பக்தரைக் கண்டு பொறுக்கவியலாதோரைக் கூவக் கூவ, நரகத்திலிடுவான் கூடல சங்கமதேவன் Translated by: Smt. Kalyani Venkataraman, Chennai
Marathi Translation गज चाले अपुल्या गती श्वान भुंकत राहती ॥१॥ आपण करीती न विश्वास करुन न देती दुजियास ॥२॥ ईश भक्ति करवेना भक्त करिता देखवेना ॥३॥ कूडलसंगमदेवा ! त्यांना घोर नरक कधी चुकेना ॥ ४॥ अर्थ - हत्ती चालत असतो आणि कुत्रे भुंकत असतात. त्याने हत्तीच्या चालीतकाही फरक पडत नसतो. त्याचप्रमाणे निर्भय असे शिवशरण निंदा किंवा स्तुतीमुळे आपल्या साधनेत कसलाही खंड पडू देत नसतात. नास्तिक लोक स्वतःही विश्वास करीत नाहीत वा इतरांनाही करू देत नाहीत. हे कूडलसंगमदेवा! (परशिवा) सद्भक्तांचा मत्सर करणारे लोक स्वतःच्याच विचाररूपी अग्नीत भस्म होत असतात. Translated by Rajendra Jirobe, Published by V B Patil, Hirabaug, Chembur, Mumbai, 1983 रेडा ओझे वाहताना कुत्रे भुंकत राहते तैसे आपण विश्वास ठेवत नाहीत, दुसऱ्यांना ठेवू देत नाही. आपण करत नाही, दुसऱ्यांना करु देत नाहीत. भक्ती करणाऱ्या भक्ताबरोबर इर्ष्या करणाऱ्यांना, घोर नरकात ठेवतील कूडलसंगमदेव. Translated by Shalini Sreeshaila Doddamani
ಶಬ್ದಾರ್ಥಗಳು ಈಯರು = ; ಕುನ್ನಿ = ; ನರಕ = ; ಬಸುಕು = ; ಸೈರಿಸು = ; ಹೇರು = ;
ಕನ್ನಡ ವ್ಯಾಖ್ಯಾನ ಕೋಣನೊಂದು ಶಕ್ತಿಶಾಲಿಯಾದ ದೊಡ್ಡಪ್ರಾಣಿ. ಅದು ದೊಡ್ಡ ಹೊರೆಯನ್ನು ಹೊತ್ತು ನಿರಾಯಾಸವಾಗಿ ನಿಡುದಾರಿಯನ್ನು ನಡೆಯಬಲ್ಲದು. ಆದರೆ ಅದಕ್ಕೆ ಎದುರುಬಿದ್ದ ನಾಯಿ-ತನ್ನ ಅಲ್ಪತೆಗೆ ಅನುಗುಣವಾಗಿ –ಆ ಮಹಾಕಾಯನ ಸಾಹಸವನ್ನೂ ಪ್ರಗತಿಯನ್ನೂ ಸಹಿಸದೆ ದಾರಿಗಡ್ಡನಿಂತು ಬೊಗಳುವುದು, ತಾನೂ ಜೊತೆಗೂಡಿ ನಡೆಯದು, ನಡೆಯುವರನ್ನೂ ನಡೆಯಬಿಡದು. ಈ ಒಂದು ನೈಜಚಿತ್ರವನ್ನು ಬಸವಣ್ಣನವರು ಒಂದು ಸಾಮಾಜಿಕ ಪರಿಸರದ ಹಿನ್ನೆಲೆಗೆ ತೂಗುಬಿಟ್ಟು -ಹೊಸದಿನ್ನೊಂದು ಅರ್ಥಶೋಭೆಯನ್ನು ಹೊಮ್ಮಿಸುತ್ತಿರುವರು : ಜೀವಲೋಕದ ಸೇವೆಗೆ ಗಟ್ಟಿಮುಟ್ಟಾಗಿ ದುಡಿಯುತ್ತಿರುವ ಭಕ್ತರನ್ನು ಕಂಡು ಯಥಾಶಕ್ತಿ ಸಹಕರಿಸದೆ –ಆ ಭಕ್ತರ ನಂಬಿಕೆಗಳನ್ನೇ ಅಲುಗಾಡಿಸುವ ಅವಾಂತರದಲ್ಲಿ ಉತ್ಸಾಹಿಸುವರು ಕ್ಷುದ್ರಜನರು. ಇನ್ನೊಬ್ಬರ ಕ್ರಿಯಾಶೀಲವನ್ನು ಕುರಿತಂತೆ ಅವರು ಪಡುವ ಹೊಟ್ಟೆಯ ಕಿಚ್ಚನ್ನೂ, ಮಾಡುವ ವಿಘಟನಾತ್ಮಕ ನಿಂದೆಯನ್ನೂ ಬಸವಣ್ಣನವರು ಕಂಡು ಬೇಸರಗೊಂಡಿರುವರು, ಕೋಪಗೊಂಡಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು

C-603 

  Wed 05 Feb 2025  

 Telugu translation was wrong with the above said Vachana
  Sateesh
Karnataka