•  
  •  
  •  
  •  
Index   ವಚನ - 665    Search  
 
ಮಾಹೇಶ್ವರನ ಜ್ಞಾನಿಸ್ಥಲ - ಅಳಿಮನಸ್ಸು
ಚೇಳಿಂಗೆ ಬಸುರಾಯಿತ್ತೆ ಕಡೆ; ಬಾಳೆಗೆ ಫಲವಾಯಿತ್ತೆ ಕಡೆ, ನೋಡಾ! ರಣರಂಗದಲ್ಲಿ ಕಾದುವ ಓಲೆಯಕಾರಂಗೆ ಓಸರಿಸಿತ್ತೆ ಕಡೆ! ಮಾಡುವ ಭಕ್ತಂಗೆ ಮನಹೀನವಾದರೆ ಅದೇ ಕಡೆ, ಕೂಡಲಸಂಗಮದೇವಾ!
Transliteration Cēḷiṅge basurāyitte kaḍe; bāḷege phalavāyitte kaḍe, nōḍā! Raṇaraṅgadalli kāḍuva ōleyakāraṅge osarisitte kaḍe! Māḍuva bhaktaṅge manahīnavādare adē kaḍe, kūḍalasaṅgamadēvā!
Manuscript
English Translation 2 Conception is the scorpion's end; To bear fruit, the banana-plant's; To falter is the warrior's end, However armed, upon the battlefield; For a bhakta's heart to stoop and droop Is for him the end, O Kūḍala Saṅgama Lord! Translated by: L M A Menezes, S M Angadi
Hindi Translation गर्भधारण ही बिच्छू का अंत है, फल लगना ही कदली का अंत है युद्धभूमि में लडनेवाले योद्धा का विमुख होना ही अंत है! आचारशील भक्त की मनहीनता ही- उसका अंत है, कूडलसंगमदेव ॥ Translated by: Banakara K Gowdappa
Telugu Translation చూలగు టే తుది తేలునకు ఫలించుటే తుది అరటికి; వేన్నిచ్చుటే తుది రణమున పోరు భటునకు; మనసు చెదురుటే తుది భక్తునకు సంగమదేవా! Translated by: Dr. Badala Ramaiah
Tamil Translation தேளிற்குச் சூலுறுவது இறுதி, வாழைக்குக் குலை தள்ளுவது இறுதி களத்தில் போராடும் வீரனுக்குப் பின்னடைவது இறுதி செய்யும் பக்தனுக்கு மனம் கீழ்மை அடையின் அதே இறுதியாம் கூடலசங்கமதேவனே. Translated by: Smt. Kalyani Venkataraman, Chennai
Marathi Translation विंचू व्याला आणि टोकर तो झाला फळे येता केळीस, तिचा अंत रणा माजी वीर, राहता असावध तयाचा तो वध, निश्चितची कूडलसंगमदेवा, साधनी जो चळे तया नच टळे, मरण ते अर्थ - विंचू पिलांना जन्म देताच मरण पावतो. केळी फळे देताच मरून जाते. रणभूमीत असावध असलेल्या वीराचा अंत होतो अगदी त्याचप्रमाणे हे कूडलसंगमदेवा (परशिव) भक्ताचे मन हीन-दीन झाल्यास तोच त्याचा मृत्यु होय. Translated by Rajendra Jirobe, Published by V B Patil, Hirabaug, Chembur, Mumbai, 1983 विंचूची गर्भधारणा हा अंत आहे ! केळीची फळधारणा हा अंत आहे! वीराची रणांगणात असावधानता हाच अंत आहे ! भक्ताची मनहीनता हाच अंत आहे कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಓಲೆಕಾರ = ; ಓಸರಿಸು = ; ಕಾದು = ; ಬಸುರು = ; ರಣರಂಗ = ; ಹೀನ = ;
ಕನ್ನಡ ವ್ಯಾಖ್ಯಾನ ಚೇಳು ಬಸುರಾಯಿತೋ –ಅದು ಸತ್ತಂತೆಯೇ –ಮುಂದೆ ಅವರ ಮರಿಗಳು ಅದರ ಹೊಟ್ಟೆಯನ್ನೇ ಸೀಳಿಕೊಂಡು ಹೊರಬರುವವೆಂಬುದರಿಂದ, ಬಾಳೆ ಗೊನೆ ಬಿಟ್ಟಿತೋ –ಅದರ ಬಾಳು ಮುಗಿದಂತೆಯೇ –ಗೊನೆ ಬಲಿತಾಗ ಆ ಗಿಡವನ್ನೇ ಕಡಿಯುವರಾದ್ದರಿಂದ, ಯುದ್ಧಭೂಮಿಯಲ್ಲಿ ಹೋರಾಡಬೇಕಾದ ಯೋಧನು ಹಿಂಜರಿದನೋ –ಅವನು ಸತ್ತಂತೆಯೇ –ಅವನಿಗೆ ಮಾನಮರ್ಯಾದೆಯಿರುವುದಿಲ್ಲವಾದ್ದರಿಂದ. ಹಾಗೆಯೇ ಭಕ್ತನಾದವನು ದಾಸೋಹಮಾಡುವಲ್ಲಿ ಹಿಂದೆಗೆದನೋ –ಅಂದೇ ಆಗಲೇ ಅವನು ತನ್ನ ಭಕ್ತಿಪಟ್ಟವನ್ನು ಕಳೆದುಕೊಂಡು ಭವಿಯಾಗುತ್ತಾನೆ. ಯಾವನಾಗಲಿ ಲಿಂಗಧಾರಣೆಯಿಂದ ಭಕ್ತನೆನಿಸುವನಾದರೂ ಆ ತನ್ನ ಭಕ್ತತನವನ್ನು ಉಳಿಸಿಕೊಳ್ಳಲು ದಾಸೋಹಕಾರ್ಯದಲ್ಲಿ ನಿರಂತರವಾಗಿ ದುಡಿಯುತ್ತಿರಬೇಕು –ಇಲ್ಲವೋ ಅವನು ಭವಿ. ಲಿಂಗಧರಿಸಿ ಅಡ್ಡಾದಿಡ್ಡಿ ಅಡ್ಡಾಡುವರೆಲ್ಲಾ ಲಿಂಗಾಯತರಾಗುವುದಿಲ್ಲವೆಂಬುದು ಬಸವಣ್ಣನವರ ಅಭಿಪ್ರಾಯ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು