ಮಾಹೇಶ್ವರನ ಜ್ಞಾನಿಸ್ಥಲ - ಅಳಿಮನಸ್ಸು
ಹುಲಿಯ ಹಾಲು ಹುಲಿಗಲ್ಲದೆ ಹೊಲದ ಹುಲ್ಲೆಗೆ ಉಣಿಸಬಾರದು;
ಕಲಿಯ ಕಾಲ ತೊಡರು ಛಲದಾಳಿಗಲ್ಲದೆ ಇಕ್ಕಬಾರದು;
ಅಳಿಮನದಾಸೆಯವರ ಮೂಗ ಹಲುದೋರ ಕೊಯ್ವ
ಕೂಡಲಸಂಗಮದೇವ.
Transliteration Huliya hālu huligallade holada hullege uṇasabāradu;
kaliya kāla toḍaru chaladāḷigallade ikkabāradu;
aḷimanadāseyavara mūga hāludōra koyva
kūḍalasaṅgamadēva.
Manuscript
English Translation 2 A tiger's milk is for the tiger's cub;
A wild deer will not drink it.
A warrior's anklets are only for
The daughty man...Lord Kūḍala Saṅgama
Shall chop the nose of those
Who entertain a sordid greed,
Until their teeth show out!
Translated by: L M A Menezes, S M Angadi
Hindi Translation व्याघ्र का दूध व्याघ्र – शावक पीता है,
वन के हरिण नहीं पीता है।
योद्धा के पैर का कड़ा वीर को छोड,
औरों को नहीं पहनाना चाहिए ।
हीन मना लोभी की नाक
आदंत काटेंगे कूडलसंगमदेव ॥
Translated by: Banakara K Gowdappa
Telugu Translation పులిపాలు పులిపిల్లకే గాని; పొలము జింకకు పోయరాదు;
గండపెండేరము శూరులకేగాని పరులకు తొడుగరాదు!
క్షణక్షణము చలియించు చపలుల ముక్కు
కోయకమానునే కూడల సంగమదేవుడు?
Translated by: Dr. Badala Ramaiah
Tamil Translation புலியின் பால் புலிக்கல்லது வயலிலுள்ள மானால் அருந்தவியலாது
கீழ்மையான விருப்பம் உடையோரின் மூக்கை
பல் தெரியுமாறு கொய்வான் கூடல சங்கமதேவன்
Translated by: Smt. Kalyani Venkataraman, Chennai
Marathi Translation
वाघाचे दूध वाघाच्या पिल्लासाठी, हरणासाठी नाही.
वीराचा घाव वीरच सहन करतात, अन्य कोणी नाही.
क्षुद्र आशा करणाऱ्यांचे नाक कापेल कूडलसंगमदेव.
Translated by Shalini Sreeshaila Doddamani
ಶಬ್ದಾರ್ಥಗಳು ಅಳಿಮನ = ; ಕಲಿ = ; ಕಾಲ = ; ಛಲದಾಳಿ = ; ತೊಡರು = ; ಹಲುದೋರೆ = ; ಹುಲ್ಲೆ = ;
ಕನ್ನಡ ವ್ಯಾಖ್ಯಾನ ಶಿವಧರ್ಮವೆನ್ನುವುದು ಶೂರಸಾಹಸಿಗಳಿಗೆ ಮಾತ್ರ ಸ್ವೀಕಾರಾರ್ಹವಾದುದು. ಅದೆಂದಿಗೂ ಹೇಡಿಗಳಿಗೆ ದಕ್ಕದು.
ಸರ್ವಸಮಾನತೆ-ಕಾಯಕ-ದಾಸೋಹವೆಂಬ ಮೂರು ಶಿಖರಗಳಿಂದ ಘಟ್ಟ ಘಟ್ಟವಾಗಿ ಸರಿಮಿಗಿಲಾಗಿ ಸುಂದರವಾಗಿರುವ ಶಿವಧರ್ಮಶ್ರೀಗಿರಿಯನ್ನು ಅಂತರಂಗ ಬಹಿರಂಗ ಬಲಿಷ್ಠವಲ್ಲದವನು ಹೇಗೆ ತಾನೇ ಆರೋಹಣಮಾಡಿಯಾನು ?
ಹುಲಿಯ ಹಾಲು ಹುಲಿಯ ಮರಿಗಳಿಗೆ ಹೇಗೆ ಮೀಸಲೋ ಅಳ್ಳೆದೆಯ ಜಿಂಕೆಯ ಮರಿಗಳಿಗಲ್ಲವೋ ಹಾಗೆ, ಮತ್ತು ಕಡುಗಲಿಯ ಕಾಲಿನ ಬಿರುದಿನ ಕಡಗ ಹೇಗೆ ಮಹಾವೀರನಿಗೇ ಅಲಂಕಾರವೋ ಹೇಡಿಗಲ್ಲಿವೋ ಹಾಗೆ-ಗುರು ಕೊಟ್ಟ ಲಿಂಗವು ಶಿವಧರ್ಮನಿಷ್ಠನೂ ತ್ಯಾಗವೀರನೂ ಆದವನ ಅಂಗದ ಮೇಲೆ ರಾರಾಜಿಸುವುದು –ದುರಾಶೆಯ ದುಷ್ಕರ್ಮಿಯ ಮಾಂಸಮಯನ ಅಂಗದ ಮೇಲಲ್ಲ.
ಬಸವಣ್ಣನವರಿಗೆ ಲಿಂಗದ ಬಗ್ಗೆ ಪೂಜ್ಯಭಾವವೂ, ಲಿಂಗಧಾರಣೆಯ ಬಗ್ಗೆ ವಿಶ್ವಾಸವೂ ಅಪರಿಮಿತವಾಗಿಯೇ ಇದ್ದಿತಾದರೂ –ಆ ಲಿಂಗವನ್ನು ಧರಿಸಿದವರು ಧರ್ಮವೀರರಲ್ಲದಿದ್ದರೆ –ಆ ಬಗ್ಗೆ ಅವರಿಗೆ ಜಿಗುಪ್ಸೆ ಅಪರಿಮಿತವಾಗಿಯೇ ಇತ್ತು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು