•  
  •  
  •  
  •  
Index   ವಚನ - 667    Search  
 
ಮಾಹೇಶ್ವರನ ಜ್ಞಾನಿಸ್ಥಲ - ಭಕ್ತಿ
ಅರ್ಥಪ್ರಾಣಾಭಿಮಾನ ನಿಮ್ಮದೆಂಬಿರಿ: ಒತ್ತಿ ನೋಡಿದರೆ ಮುಟ್ಟಲೀಯಿರಿ: ಮುಟ್ಟೆ ಬಂದಲ್ಲಿ ಕಠಾರಿಯ ಕಾಳಗವ ನಿವಾಡಿಸುವಿರಲ್ಲದೆ, ಲಿಂಗ-ಜಂಗಮವಂತನಾಗಬಾರದು! ಕೂಡಲಸಂಗಮದೇವಾ, ವೇಷಡಂಭಕರಿಗೆ ಭಕ್ತಿ ಎಂತಪ್ಪುದಯ್ಯಾ?
Transliteration "Arthaprāṇābhimāna nim'madembiri": Otti nōḍidare muṭṭalīyiri: Muṭṭe bandalli kaṭhāriya kāḷagava nivāḍisuvirallade, liṅga-jaṅgamavantanāgabāradu! Kūḍalasaṅgamadēvā, vēṣaḍambhakarige bhakti entappudayyā?
Manuscript
English Translation 2 You say, "Life, honour, wealth are Thine": But you shrink from an actual test; When one draws near to test you, You choose to fight with swords. You cannot be a follower Of Liṅga and Jaṅgama !... O Kūḍala Saṅgama Lord, How is it possible to have Devotion in such hypocrites Who are worth their garb alone? Translated by: L M A Menezes, S M Angadi
Hindi Translation कहते हो, अर्थप्राणाभिमान तुम्हारे हैं । परीक्षा के लिए स्पर्श करने नहीं देते । स्पर्श करने पर खङ्ग युद्द करते हो, लिंगवंत जंगमवंत बनना कठिन है कूडलसंगमदेव, वेषधारी दंभियों से भक्ति कैसे होगी? Translated by: Banakara K Gowdappa
Telugu Translation అర్థ ప్రాణాభిమానము లెల్లా నీదేయుందురు గాని; పట్టిచూడ ముట్టనీరు; ముట్టగముందుబడ కత్తి యుద్ధమున కే సిద్ధమగుదురు లింగజంగములు, కాలేరు యీ వేషధారుల డంబాచారుల నేమందునయ్యా! దేవా! Translated by: Dr. Badala Ramaiah
Tamil Translation பொருள், உயிர், அபிமானம் உம்மது என்பீர் அழுத்திக் காணின் தொடுவதற்கு விடுவதில்லை தொடுவதற்கு வரின் கத்தியுடன் போரிடுவீரன்றி இலிங்க ஜங்கமருக்கு ஈவதற்கில்லை கூடல சங்கமதேவனே, பகட்டு வேடதாரிகளுக்குப் பக்தி எங்ஙனம் அரும்பும் ஐயனே? Translated by: Smt. Kalyani Venkataraman, Chennai
Marathi Translation अर्थ, प्राण, अभिमान तुम्हाला अर्पण असे म्हणतात. पारखले तर हात लावू देत नाहीत. स्पर्श करण्यास गेलो तर तलवार चालवितात. असे लोक लिंग जंगम भक्ती करु शकत नाही. कूडलसंगमदेवा, वेषधारीची भक्ती कसली देवा? Translated by Shalini Sreeshaila Doddamani
ಶಬ್ದಾರ್ಥಗಳು ಅಭಿಮಾನ = ಪ್ರೀತಿ, ಗೌರವ; ಅರ್ಥ = ಹಣ; ಕಠಾರಿ = ; ಕಾಳಗ = ; ಜಂಗಮ = ; ಡಂಭಕ = ; ಪÁ್ರಣ = ; ಮುಟ್ಟೆ = ;
ಕನ್ನಡ ವ್ಯಾಖ್ಯಾನ ಬಸವಣ್ಣನವರ ಮಹಿಮೆಯಿಂದಾಗಿ ಅವರು ಬೋಧಿಸಿದ ಶೈವಧರ್ಮಕ್ಕೆ ಬಂದು ಸೇರುವ ಜನರ ಸಂಖ್ಯೆಯಲ್ಲೇನೂ ಕಡಿಮೆಯಿರಲಿಲ್ಲ. ಅವರಲ್ಲಿ ಕೆಲವರು ಶಿವಭಕ್ತರಂತೆ ನಟಿಸುತ್ತಿದ್ದುದೂ ಉಂಟು, ಅಂಥವರಿಗೆ ಬಸವಣ್ಣನವರು ಈ ಮುಂದಿನಂತೆ ಹೇಳಿರುವರು : “ನಿಮ್ಮ ಅರ್ಥ-ಪ್ರಾಣ-ಅಭಿಮಾನ ಎಲ್ಲವೂ ನಮ್ಮದೆಂದು ಹೇಳುವಿರಿ. ಅರ್ಥವೆಂದರೆ ಭಕ್ತರಿಗೆ ಒದಗುವ ಸಹಾಯಾರ್ಥಧನವೋ, ಪ್ರಾಣವೆಂದರೆ ಶರಣರ ಸೇವೆಗೆ ಬಳಕೆಯಾಗುವ ಶಕ್ತಿಸಾಮರ್ಥ್ಯವೋ, ಅಭಿಮಾನವೆಂದರೆ ಶಿವಧರ್ಮಪಂಥದ ಪ್ರಗತಿಗೆ ಮೀಸಲಾದ ಮಮತೆಯೋ ಮುಟ್ಟಿ ನೋಡೋಣವೆಂದರೆ ಕೈಗೇ ಸಿಗದಂತಿರುವಿರಿ. ಒತ್ತಾಯಿಸಿದರೆ ಆ ನಿಮ್ಮ ಅರ್ಥಪ್ರಾಣಾಭಿಮಾನಗಳನ್ನು ನಿಮ್ಮಲ್ಲಿಯೇ ಬಿಗಿಹಿಡಿದುಕೊಂಡು ಕೊಸರಾಡುವಿರಿ. ನಿಮಗೆ-ಲಿಂಗಸ್ವರೂಪಿಯಾದ ಜಂಗಮದಾಸೋಹವಿಲ್ಲವಾಗಿ -ಭಕ್ತಿಯೆಂಬುದು ಅಳವಟ್ಟೀತು ಹೇಗೆ ?” ಎಂದು –ಧರ್ಮದೊಡನೆ ಕಳ್ಳಾಟವಾಡುತ್ತ ಧರ್ಮಿಷ್ಠರಂತೆಯೇ ನಟಿಸುತ್ತಿದ್ದ ದೊಡ್ಡ ಕುಳಗಳನ್ನು ತರಾಟೆಗೆ ತೆಗೆದುಕೊಂಡಿರುವರು ಬಸವಣ್ಣನವರು. ಡಾಂಭಿಕತೆಯ ಗೂಢವನ್ನು ಬಯಲು ಮಾಡುವ ಬಸವಣ್ಣನವರ ಈ ವಿಧವಾದ ನಿರ್ದಾಕ್ಷಿಣ್ಯದ ಮಾತಿನ ಅವಶ್ಯಕತೆ ಇಂದಿಗೆ-ಎಂದಿಗಿಂತಲೂ ಅಧಿಕವಾಗಿಯೇ ಇದೆ. ವಿ : ಕಠಾರಿಯ ಕಾಳಗ : ಶತ್ರು ತೀರ ಹತ್ತಿರವಾಗಿ ನುಗ್ಗಿ ಬಂದಾಗ ಹೋರಾಡಲು ಬಳಸುವ ಚೂರಿಯಂಥ ಚಿಕ್ಕ ಆಯುಧ. ನಿವಾಡಿಸು : ಓಡಿಸು, ನಿವಾರಿಸು, ಪ್ರಯೋಗಿಸು ? ನೋಡಿ ವಚನ 286, 932.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು