ಮಾಹೇಶ್ವರನ ಜ್ಞಾನಿಸ್ಥಲ - ಭಕ್ತಿ
ಹರಬೀಜವಾದರೆ ಹಂದೆ ತಾನಪ್ಪನೆ?
ಒರೆಗಟ್ಟಿ ಇರಿಯದವರ ಲೋಕ ಮೆಚ್ಚುವುದೆ?
ಉಟ್ಟ ಚಲ್ಲಣ ಕೈಯ ಪಟ್ಟೆಯವಿಡಿದು,
ಗರುಡಿಯ ಕಟ್ಟಿ ಶ್ರವವ ಮಾಡುವಂತೆ
ತನ್ನ ತಪ್ಪಿಸಿಕೊಂಡರೆ ಶಿವ ಮೆಚ್ಚುವನೆ?
ಅರಿಯದವರಿಗೆ ಒಳ್ಳೆ ಹೆಡೆಯನೆತ್ತಿಯಾಡುವಂತೆ
ಬೊಳ್ಳಗನ ಭಕ್ತಿ ಕೂಡಲಸಂಗಮದೇವಾ.
Transliteration Harabījavādare haṇḍe tānappane?
Oregaṭṭi iriyadavara lōka meccuvude?
Uṭṭa callaṇa kaiya paṭṭeyaviḍidu,
garuḍiya kaṭṭi śravava māḍuvante
tannannu tappisikoṇḍare śiva meccuvane?
Ariyadavarige oḷḷe heḍeyanettiyāḍuvante
boḷḷagana bhakti kūḍalasaṅgamadēvā.
Manuscript
English Translation 2 If one born of Hara's seed,
Why should one be of feeble heart?
Do folks admire the men
Who, sword at side, refuse to fight?
Does Śiva love the man
Who, breeched and sword in hand,
Plays false, as though he were
But drilling on a drilling-ground?
O Kūḍala Saṅgama Lord,
It is just as a water-snake with its hood erect
Before the ignorant;
It's rank hypocrisy!
Translated by: L M A Menezes, S M Angadi
Hindi Translation हर-बीज से भीरु उप्तन्न होगा?
म्यान बाँधकर नहीं लडें तो लोक प्रसन्न होगा?
जांघियाँ पहने का खङ्ग धारण कर
अखाडे में व्यायाम करता हुआ सा
वह भाग जाय, तो शिव प्रसन्न होगा?
अपरिचितों के सामने जैसे जलसर्प फन उठाकर खेलता है
वैसे धूर्तों की भक्ति है, कूडलसंगमदेव ॥
Translated by: Banakara K Gowdappa
Telugu Translation హర ;జమైన పిరికి యగునే? ఒర నుండి కత్తిని
పెరికి పొడవలేని వానిని మెచ్చునే యీ జగతి?
చల్లడముగట్టి; సాముచేసి; గరడిని కత్తిబట్టి
సమయమునకు జారుకొనమెచ్చునే శివుడు?
అజ్ఞుల యెదుట తలయెత్తు బురదపామువలె
డాంబికుని భక్తి కూడల సంగమదేవా!
Translated by: Dr. Badala Ramaiah
Tamil Translation சிவக் குலத்தில் தோன்றின்
பேடி ஆவானோ?
உறைவாளைப் பயன்படுத்தாதவரை
உலகம் மெச்சுமோ?
அணிந்துள்ள உடுப்பின் பட்டியைக்
கையினால் பிடித்துக்கொண்டு
உடற்பயிற்சிக் கூடத்தைக் கட்டி, உடற்
பயிற்சி செய்வதனைய, தான் தப்பித்தால்
சிவன் மெச்சுவனோ? அறியாதோருக்கு
நீர்பாம்பு படம் விரித்து ஆடுவதனையதாம்
கூடல சங்கமதேவனே, வஞ்சகனின் பக்தி
Translated by: Smt. Kalyani Venkataraman, Chennai
Marathi Translation
हराचे संतान भित्रे असू शकेल काय?
कुस्तीचे डाव न करणारांना जग आपलेसे करील का?
लंगोटी घातली, हाती दांडपट्टा घेतला.
आखाडा तयार केला.
कसरतीचे सोंग केले. एवढे करुन बाजूला जावून
बसला तर शिव पसंत करील?
भोळ्या लोकांच्यासमोर पाण्यातील नागाने फणा काढण्याप्रमाणे
कपटी भक्ती आहे कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಗರುಡಿ = ; ಚಲ್ಲಣ = ; ಪಟ್ಟೆ = ; ಬೊಳ್ಳೆಗ = ; ಶÀ್ರವ = ; ಹಂದೆ = ; ಹರ = ;
ಕನ್ನಡ ವ್ಯಾಖ್ಯಾನ ಶಿವಬೀಜಕ್ಕೆ ಹುಟ್ಟಿದ ಜೀವವೆಂದಿಗೂ ಹೇಡಿಯಾಗಿರದೆಂಬ ಬಸವಣ್ಣನವರ ಮಾತು -ಶಿವನಿಗೆ ಶರಣಾಗತವಾದ ಜೀವವೆಷ್ಟು ಗಟ್ಟಿಪಿಂಡವಾಗಿರಬೇಕೆಂಬುದನ್ನು ಧ್ವನಿಸುವುದು. ಅದು ಧರಿಸಿದ ದೇಹವೇ –ಅದಕ್ಕೆ ಕಟ್ಟಿದ ಚಲ್ಲಣ. ವಿವೇಕವೇ ಅದರ ಹಿಡಿದು ಝಳಪಿಸುವ ಖಡ್ಗ. ಈ ಸಜ್ಜಿನ ಸದ್ಭಕ್ತಜೀವನು ಲೋಕದ ವಿಕಾರಗಳನ್ನು ಎದುರಿಸಬೇಕು –ಈ ದೇಹದಲ್ಲೇ ಈ ವಿವೇಕದಿಂದಲೇ ಸಾಧನೆ ಮಾಡಿ ಗೆಲ್ಲಬೇಕು. ಇಲ್ಲವೆ –ಆ ಪ್ರಯತ್ನದಲ್ಲೇ ಪ್ರಾಣಾರ್ಪಣ ಮಾಡಬೇಕು.
ಹೇಡಿಯಾಗಿ ಈ ಲೋಕರಣರಂಗದಿಂದ ಹಿಮ್ಮೆಟ್ಟಿ –ಯಾರೂ ಸವಾಲೆಸೆಯದ, ಯಾರಿಗೂ ಸಂಪರ್ಕವೇರ್ಪಡದ ಅರ್ಚನೆ ಪೂಜಾದಿಗಳಲ್ಲಿ ದೊಡ್ಡ ಭಕ್ತನಂತೆ ಕಾಣಿಸಿಕೊಂಡರೆ –ಧರ್ಮಯುದ್ಧಕ್ಕಾಗಿ ಸಜ್ಜುಗೊಳಿಸಿ ಕಳಿಸಲ್ಪಟ್ಟ ಜೀವನ ಕ್ಲೈಬ್ಯಾವಸ್ಥೆಯನ್ನು ಕಂಡು ಶಿವನು ಅವನನ್ನು ಕಡೆಗಾಣಿಸುವನಲ್ಲವೆ ಕರುಣಿಸನು.
ಜೀವನ ಘನತೆ ಸಂಘರ್ಷದಲ್ಲಿದೆಯೆಂಬುದನ್ನು ತಿಳಿಯದ ಹುಂಬರು ಮಾತ್ರ ನೈಷ್ಕರ್ಮ್ಯದ ಈ ಆಧ್ಯಾತ್ಮವಿಯೋಗವನ್ನು ಶಿವಯೋಗವೆಂದು ಸಂಭ್ರಮಿಸುವರು. ಕೆರೆಯ ದಂಡೆಯಲ್ಲಿ ನುಲಿಯುವ ನೀರುಹಾವು -ಭಯಗ್ರಸ್ತ ದಡ್ಡರಿಗೆ ಮಾತ್ರ ಸರ್ಪದಂತೆ ತೋರುವುದು. ವಾಸ್ತವವಾಗಿ ಅದು ಹೆಡೆಯಿಲ್ಲದ ವಿಷವಿಲ್ಲದ ಹರಿತವಿಲ್ಲದ ಭೋರ್ಗರೆತವಿಲ್ಲದ ನೀರುಹುಳುವೊಂದರ ಕ್ಷುದ್ರಾಡಂಬರವಷ್ಟೆ. ಹಾಗೆಯೇ ತ್ಯಾಗವಿಲ್ಲದವನ ಭಕ್ತಿಯು ಕೂಡ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು