ಮಾಹೇಶ್ವರನ ಜ್ಞಾನಿಸ್ಥಲ - ಭಕ್ತ
ಮೊನೆ ತಪ್ಪಿದ ಬಳಿಕ ಅಲಗೇನ ಮಾಡುವುದು?
ವಿಷ ತಪ್ಪಿದ ಬಳಿಕ ಹಾವೇನ ಮಾಡುವುದು?
ಭಾಷೆ ತಪ್ಪಿದ ಬಳಿಕ ದೇವ ಬಲ್ಲಿದ! ಭಕ್ತನೇನ ಮಾಡುವನಯ್ಯಾ?
ಭಾಷೆ ತಪ್ಪಿದ ಬಳಿಕ ಪ್ರಾಣದಾಸೆಯನು ಹಾರಿದರೆ
ಮೀಸಲ ಸೊಣಗ ಮುಟ್ಟಿದಂತೆ, ಕೂಡಲಸಂಗಮದೇವಾ!
Transliteration Monne tappida baḷika alagēna māḍuvudu?
Viṣa tappida baḷika hāvēna māḍuvudu?
Bhāṣe tappida baḷika dēva ballida! Bhaktanēna māḍuvanayyā?
Bhāṣe tappida baḷika prāṇadāseyanu hāridare
mīsala soṇaga muṭṭidante, kūḍalasaṅgamadēvā!
Manuscript
English Translation 2 What use a sword after its point is lost?
What use a serpent with its poison void?
What use a devotee
After his pledge is broken?
If after the pledge is broken, you still expect
The good of life, it's like a dog who licks
What's consecrate to God,
O Kūḍala Saṅgama Lord!
Translated by: L M A Menezes, S M Angadi
Hindi Translation धारहीन शस्त्र क्या कर सकता है?
विषहीन सर्प क्या कर सकता है?
वचनभंग होने पर-, हे देव, बलिष्ट भक्त क्या कर सकता है?
वचनभंग होने के पश्चात् प्राणों की आशा बनी रहे-,
तो, मिन्नत को कुत्ते के चाटने के समान है ।
कूडलसंगमदेव ॥
Translated by: Banakara K Gowdappa
Telugu Translation మొనముక్కబోవ అలుగేమి సేయును?
కోరలుడిగినంత పామేమి సేయును?
బాస తప్పెనేని దేవుడే బల్లి దుడు; భక్తుడేమి సేయునయ్యా?
బాస తప్పి మఱి ప్రాణేచ్ఛ తిరిగిన
ముడుపు ముట్టిన కుక్క యగు కూడల సంగమ దేవా!
Translated by: Dr. Badala Ramaiah
Tamil Translation கூர்முனை இல்லையெனின் கத்தி என்ன செய்யும்?
நஞ்சு இல்லையெனின் பாம்பு என்ன செய்யும்?
சொல் தவறிய பிறகு, இறைவா வல்லவனான பக்தன்
என்ன செய்வான் ஐயனே? சொல்தவறிய பிறகு
உயிர் மீதுள்ள ஆசையை விரும்பின்
படையலை நாய் தீண்டியதனையதாம்
கூடல சங்கம தேவனே.
Translated by: Smt. Kalyani Venkataraman, Chennai
Marathi Translation
धार नसलेल्या तलवारीचा काय उपयोग?
विष नसलेला साप काय करणार?
वचनभंग झाल्यावर भक्त कसा होईल देवा?
वचन भंगानंतरही प्राणाची आशा ठेवणे म्हणजे
देवार्पित वस्तूला कुत्र्याचा स्पर्श झाल्यासम
कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಅಲಗು = ಕತ್ತಿ; ಒಲ್ಲದ = ; ಮೀಸಲು = ; ಮೊನೆ = ; ವಿಷ = ; ಸೊಣಗ = ;
ಕನ್ನಡ ವ್ಯಾಖ್ಯಾನ ಸಾಣೆ ಹಿಡಿದು ಮಿರುಗುವ ಖಡ್ಗವನ್ನೆತ್ತಿ ಯೋಧನು ಮೇಲೆರಗಲು ನುಗ್ಗಿದಾಗ –ಮೊನಚಿಲ್ಲದ ಖಡ್ಗವೊಂದನ್ನು ಹಿಡಿದ ಪ್ರತಿಯೋಧನೇನು ಮಾಡಿಯಾನು ? ವಿಷದ ಹಲ್ಲನ್ನೆಲ್ಲ ಕಳೆದುಕೊಂಡ ಸರ್ಪ -ಹೆಸರಿಗೆ ಮಾತ್ರ ಭಯಂಕರ –ಆಕ್ರಮಣದಲ್ಲಿ ನಿಷ್ಪ್ರಯೋಜಕ. ಹೀಗೆ ಒಬ್ಬ ಭಕ್ತನ ಹಿರಿಮೆಯಾದರೂ ಇರುವುದು ಅವನ ಛಲದಲ್ಲಿ ಪ್ರತಿಜ್ಞೆಯಲ್ಲಿ ಮತ್ತು ಅದರ ಪರಿಪಾಲನೆಯಲ್ಲಿ. ಆ ಸತ್ಯಾಗ್ರಹ ಅವನಲ್ಲಿಲ್ಲದಿದ್ದರೆ ಅವನನ್ನು ದೇವರು ಶಿಕ್ಷಿಸದೆ ಬಿಡುವುದಿಲ್ಲ. ನಿಯತ್ತಿಲ್ಲದ ಮೆಹನತ್ತಿಲ್ಲದ ಭಕ್ತನು ಪ್ರಾಣದಾಶೆಯಿಂದ ಬದುಕಿದ್ದರೂ ಅವನ ಬಾಳು ನಾಯಿ ಮುಟ್ಟಿದ ಮೀಸಲಂತೆ ಶಿವನಿಗೆ ಅರ್ಪಿತವಾಗುವುದಿಲ್ಲ.
ಜೀವನದಲ್ಲಿ ಮಾಡಿದ ಪ್ರತಿಜ್ಞೆಯನ್ನು ಭಕ್ತನೊಬ್ಬನು ಈಡೇರಿಸಲಾರನಾದರೆ –ಅವನು ಪ್ರಾಣದ ಮೇಲೆ ಆಶೆಯಿರಿಸಿಕೊಂಡು ಬದುಕಿರುವುದು ಶಿವನಿಗೆ ಪ್ರಿಯವಲ್ಲವಾಗಿ ಧರ್ಮಮರಣವನ್ನು ಅಪ್ಪಲು ಬಸವಣ್ಣನವರು ಹೇಳುತ್ತಿದ್ದಾರೆಯೇ ? (ನೋಡಿ ವಚನ 511)
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು