•  
  •  
  •  
  •  
Index   ವಚನ - 672    Search  
 
ಮಾಹೇಶ್ವರನ ಜ್ಞಾನಿಸ್ಥಲ - ನಡೆ-ನುಡಿ
ವೀರ ವ್ರತಿ ಭಕ್ತನೆಂದು ಹೊಗಳಿಕೊಂಬಿರಿ ಕೇಳಿರಯ್ಯಾ; ವೀರನಾದರೆ ವೈರಿಗಳು ಮೆಚ್ಚಬೇಕು, ವ್ರತಿಯಾದರೆ ಅಂಗನೆಯರು ಮೆಚ್ಚಬೇಕು, ಈಶ ಭಕ್ತನಾದರೆ ಜಂಗಮ ಮೆಚ್ಚಬೇಕು. ನುಡಿಯೊಳಗೆ ತನ್ನ ಬಗೆಯಿರೆ ಬೇಡಿದ ಪದವಿಯನೀವ ಕೂಡಲಸಂಗಮದೇವಾ.
Transliteration Vīra vrati bhaktanendu hogaḷikombiri kēḷirayya; vīranādare vairigaḷu meccabēku, vr̥ttiyādare aṅganeyaru meccabēku, īśa bhaktanādare jaṅgama meccabēku. Nuḍiyoḷage tanna bageyire bēḍida padaviyanīva kūḍalasaṅgamadēvā.
Manuscript
English Translation 2 Listen, good Sirs: You boast to be Heroes, ascetics, devotees.. If heroes, then your foes Ought to admire you; Or, if ascetics, then maid’s Ought to approve of you; If devotees,then Jaṅgama Must take you to his heart. If, when you say this word, Your heart is in it, then Lord Kūḍala saṅgama will grant Whatever rank you ask. Translated by: L M A Menezes, S M Angadi
Hindi Translation वीरव्रती भक्त कहकर आत्मस्तुति करनेवालो, सुनो; शत्रुओं से प्रशंसा पानी चाहिए वीर हो, तो शत्रुओं से प्रशंसित होना चाहिए व्रती हो, तो अंगनाओं से प्रशंसित होना चाहिए भक्त हो, तो जंगम से प्रशंसित होना चाहिए वचनानुसार विचार हो तो कूडलसंगमदेव वाँछित पद प्रदान करेंगे ॥ Translated by: Banakara K Gowdappa
Tamil Translation வீர நோன்புடையோன் பக்தன் என்று புகழ்ந்து கொள்வீர், கேளீர், ஐயனே வீரரெனின், பகைவர் மெச்சவேண்டும் நோன்பு நூற்பவனெனின் மகளிர் மெச்ச வேண்டும் பக்தனெனின் ஜங்கமன் மெச்ச வேண்டும் இவற்றிற்கு ஏற்ப விளங்கின், வேண்டிய பதவியை ஈவன் கூடல சங்கமதேவன். Translated by: Smt. Kalyani Venkataraman, Chennai
Marathi Translation आपुली आपण, करावी न स्तुती भ्रमलेली मती, म्हणू आम्ही प्रसंसेशि पात्र, वीर म्हणविता वैरी प्रसंशिता, खरे वीर वीरक्त ती वृत्ती, स्त्रीया प्रसंशीती नाटक न करिती, तैशापुढे वीरक्त जो खरा, जंगमा आवडे जंगम पोवाडे, गाती ज्याचे कूडलसंगमदेवा ! बोले तैसा चाले देशी मागितले, तया तूचि अर्थ - सर्वइंद्रियावर ताबा मिळविलेला असा जितेंद्रिय वीर पुरुष तोच होऊ शकतो. ज्याची वैरी आणि परस्त्रिया-देखील प्रसंशा करतात भक्त तोच जो जंगममूर्तीनाही आवडतो. बोलल्याप्रमाणे चालणाऱ्यांस, माझा कूडलसंगमदेव मागेल ते सहर्ष पुरवील. Translated by Rajendra Jirobe, Published by V B Patil, Hirabaug, Chembur, Mumbai, 1983 विरक्त भक्त म्हणवून घेणाऱ्यांनो ऐका. वीर तोच आहे ज्याला शत्रूही मानतो. विरक्त तोच आहे ज्याला स्त्रीयाही मानतात. भक्त तोच आहे ज्याला जंगमही मानतात. असे वागतो त्याला मागेल ते पद देतात कूडलसंगमदेव. Translated by Shalini Sreeshaila Doddamani
Urdu Translation کوئی دلیرکوئی پارسا بھگت کوئی کبھی خود اپنےمحاسن بیاں نہیں کرتا دلیروہ ہےثنا خواں ہوجس کا خود دشمن وہ پارسا ہے کہ زن جس کی خود کرے تعریف بھگت تو وہ ہےکہ جنگم ہوجس کا مدح سرا جب اپنےآپ کوتم اس طرح بنالو گے دلوںمیںجوبھی تمنّا ہےجوبھی خواہش ہے ہمارےکوڈلا سنگم کریں گےسب پوری Translated by: Hameed Almas
ಶಬ್ದಾರ್ಥಗಳು ಅಂಗನೆ = ಮಹಿಳೆ; ಈವ = ; ಜಂಗಮ = ; ಪದವಿ = ; ಪ್ರತಿ = ; ಬಗೆ = ; ಮೆಚ್ಚು = ; ವೈರಿ = ; ವ್ರತಿ = ;
ಕನ್ನಡ ವ್ಯಾಖ್ಯಾನ ವೀರರೆಂದು ವ್ರತಿಗಳೆಂದು ಭಕ್ತರೆಂದು ಹೊಗಳಿದರೆ -ಹೊಗಳಿಸಿಕೊಂಡು ಬೀಗುವ ಕೀರ್ತಿರತಿಯವರನ್ನು ಕುರಿತು ಬಸವಣ್ಣನವರು ಅವರಿಗೆ ಕೆಲವು ಸವಾಲುಗಳನ್ನು ಹಾಕಿರುವರು : ಯಾವನಾದರೊಬ್ಬನು ವೀರನಾದರೆ –ಅವನ ವೀರದ ಸವಿಯನ್ನು ಕಂಡ ಶತ್ರು ಅವನನ್ನು ವೀರನೆನ್ನಬೇಕು. ಯಾವನಾದರೊಬ್ಬನು ವ್ರತಿಯಾದರೆ –ಅವನಿಂದ ಅಕ್ಕತಂಗಿಯರಂತೆ ನಡೆಸಿಕೊಂಡ ಹೆಂಗಸರು ಅವನನ್ನು ವ್ರತಿ ಎನ್ನಬೇಕು. ಯಾವನಾದರೊಬ್ಬ ಭಕ್ತನಾದರೆ –ಧರ್ಮಪರೀಕ್ಷೆಯಲ್ಲಿ ಶತಾಂಶ ತೇರ್ಗಡೆಯಾದುದನ್ನು ಕಂಡು ಮೆಚ್ಚಿದ ಜಂಗಮ ಅವನನ್ನು ಭಕ್ತನೆನ್ನಬೇಕು. ಉಳಿದಂತೆ ಹೊಗಳುಭಟ್ಟರು ಏನಾದರೂ ಹೊಗಳಬಹುದು –ಆ ಮಾತ್ರಕ್ಕೇ ಅವನು ವೀರ-ವ್ರತಿ-ಭಕ್ತನೇನೂ ಆಗುವುದಿಲ್ಲ. ವೀರವೂ ವ್ರತವೂ ಭಕ್ತಿಯೂ –ಮೂರು ಸೇರಿ ಸಮರಸವಾದೊಂದು ಪರಿಪಾಕವೇ ಧರ್ಮ. ಅಂಥ ಧರ್ಮನಿಷ್ಠನಿಗೇ ಶಿವನು ಕರುಣಿಸುವನೆಂಬುದು ಬಸವಣ್ಣನವರ ಬೋಧೆಯ ಸಾರ. ಭಕ್ತನೆಂದು ಡಂಗುರಹೊಯ್ಸಿಕೊಳ್ಳುತ್ತ ಹೇಡಿಯೂ ಹೆಂಗುಳಿಯೂ ಸಾಧನವಿಮುಖನೂ ಆದವನಿಗೆ ಇಹವಿಲ್ಲ ಪರವಿಲ್ಲ. ಭಕ್ತನ ಜೀವನಸಾರಾಂಶ ನಿಹಿತವಾಗಿರುವುದು ಉತ್ಸಾಹದಲ್ಲಿ. ಸಂಯಮದಲ್ಲಿ ಮತ್ತು ಸವಿನಯ ಸಾಧನೆಯಲ್ಲಿ ! (ಜಂಗಮವಾಗುವುದಿರಲಿ -ಭಕ್ತನಾಗುವುದೂ ಒಂದು ಮಹತ್ತರ ಸಿದ್ಧಿಯೆನ್ನುತ್ತಿರುವ ಬಸವಣ್ಣನವರ ಮಾತನ್ನು ಗಮನಿಸಿರಿ.) (511ನೇ ವಚನವನ್ನೂ ನೋಡಿ).

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು