ಮಾಹೇಶ್ವರನ ಜ್ಞಾನಿಸ್ಥಲ - ಭಕ್ತಿಮಾರ್ಗ
ಕಲಿತನ ತನಗುಳ್ಳರೆ ಸೂಜಿ-ಬಾಳು ಮೊದಲಾಗಿ ಕಾದಲೇಬೇಕು.
ಶರಣಪಥ ತನಗುಳ್ಳರೆ ಶಿವಭಕ್ತರ ಮನೆಯಲ್ಲಿ ಶಿವರಸವ
ಪಂಚಾಮೃತವ ಮಾಡಿಕೊಳ್ಳಬೇಕು.
ಭ್ರಾಂತುವಿಡಿದು ಲಿಂಗಕ್ಕೋಗರವನರಸುವ
ಪಾತಕರ ಮೆಚ್ಚ ಕೂಡಲಸಂಗಮದೇವಾ.
Transliteration Kalitana tanaguḷḷare sūji-bāḷu modalāgi kāḍalēbēku.
Śaraṇapatha tanaguḷḷare śivabhaktara maneyalli śivarasava
pan̄cāmr̥tava māḍikoḷḷabēku.
Bhrāntuviḍidu liṅgakkōgaravanarasuva
pātakara mecca kūḍalasaṅgamadēvā.
Manuscript
English Translation 2 The valorus man must fight
With sword or needle or whatever alse.
The man who knows the Śaraṇa path
Must change to a celestial dish
The butter-milk
Collected at a Śivabhakta's house.
Lord Kūḍala Saṅgama rejects
The sinners who go about
Asking for food for Liṅga while
Clinging to their illusions still!
Translated by: L M A Menezes, S M Angadi
Hindi Translation शौर्य हो, तो सूई, तलवार आदि से लडो
तुम शरण पथगामी हो,
तो शिवभक्तों के घर की छाछ
पंचामृत मानो
भ्राँति से लिंगार्थ भोजन ढूंढनेवाले
पापियों पर प्रसन्न नहीं होते कूडलसंगमदेव ॥
Translated by: Banakara K Gowdappa
Tamil Translation வீரமிருப்பின் சிறுஆயுதமிருப்பினும் போரிடல் வேண்டும்
அடியார் வழியில் செல்வோன் சிவனடியார்களின்
இல்லங்களில் கஞ்சியெனும் பஞ்சாமிர்தத்தைச்
செய்து கொள்ள வேண்டும். மருள் அடைந்து
இலிங்கப்பிரசாதத்தைத் தேடும் பாதகரைக்
கூடல சங்கமதேவன் மெச்சுவனோ?
Translated by: Smt. Kalyani Venkataraman, Chennai
Marathi Translation
कोणतेही शस्त्र हाती असो त्याने शौर्याने लढले पाहिजे.
शरण पथावरील शरणानों
शिवभक्ता घरच्या ताकाला पंचामृत
म्हणून समजून सेवन केले पाहिजे.
नैवेद्य अर्पण करण्याच्या भ्रमाने
लिंगार्पणासाठी दुसरे भोजन पाहिजे
असे म्हणणाऱ्या पातकीला स्वीकार
नाही करत कूडलसंगमदेव.
Translated by Shalini Sreeshaila Doddamani
ಶಬ್ದಾರ್ಥಗಳು ಅರಸು = ಹುಡುಕು; ಓಗರ = ; ಕಲಿತನ = ; ಕಾದು = ; ಘಾತಕ = ; ಪಂಚಾಮೃತ = ; ಶರಣಪದ = ; ಶಿವರಸ = ;
ಕನ್ನಡ ವ್ಯಾಖ್ಯಾನ ಯಾವನಾದರೊಬ್ಬನು ನಿಜವಾದ ವೀರನಾದರೆ ಕೈಗೆ ಸಿಕ್ಕಿದೊಂದು ಕ್ಷುದ್ರಾಯುಧವನ್ನೇ ಎತ್ತಿಕೊಂಡು ಹೋರಾಡಿಗೆಲ್ಲುವನು. ಹಾಗೆಯೇ ಶರಣಪಂಥದವನು (ತನ್ನ ಕಷ್ಟಕಾಲದಲ್ಲಿ) ಶಿವಭಕ್ತರ ಮನೆಯ ಮಜ್ಜಿಗೆ ಸಿಕ್ಕಿದರೂ ಅದನ್ನೇ ಲಿಂಗಕ್ಕರ್ಪಿಸಿ -ಅಷ್ಟರಿಂದಲೇ ತೃಪ್ತನಾಗುತ್ತಾನೆ. ಕೂಳುಬಡುಕ ಶರಣನು ಮಾತ್ರ ತನ್ನ ಲಿಂಗದ ನೈವೇದ್ಯಕ್ಕೆ ನೆಪ ಮಾಡಿ ಅನ್ನಬೇಕೆಂದು ಬವಣೆಗೊಳ್ಳುತ್ತಾನೆ.
ಶರಣನು ಭಕ್ತರ ಮನೆಯಿಂದಲೂ ಬಂದುದನ್ನು ಲಿಂಗಾರ್ಪಿತ ಮಾಡಿ ಪ್ರಸಾದಸ್ವೀಕರಿಸುತ್ತಿದ್ದ ರೂಢಿಯೊಂದನ್ನು ಬಸವಣ್ಣನವರು ಈ ವಚನದಲ್ಲಿ ಪ್ರಸ್ತಾಪಿಸಿರುವುದನ್ನು ಗಮನಿಸಿರಿ.
ಸೂಜಿಬಾಳು : ಸೂಜಿಯಂತೆ ಚೂಪೂ ಉರುಟೂ ಅದೊಂದು ಸಾಮಾನ್ಯವಾದ (ಆಯುಧ) ವಸ್ತು.
ಅಥವಾ : ಲಿಂಗದೇವರಿಗೆ ಸವಿಸವಿಯಾದ ನೈವೇದ್ಯ ಬೇಕೆಂದು ನೆಪ ಮಾಡಿ ಮನೆಮನೆಗೆ ತಿರುಪೆ ತಿರುಗಿ ಹಂಗಿನ ಹಾಲು ತುಪ್ಪ ಅನ್ನ ತಂದು ಎಡೆಮಾಡಿ ಪೂಜೆ ಮುಗಿಸಿದರೆ -ಹೊಟ್ಟೆ ಹೊರೆಯಿತೇ ಹೊರತು ಭಕ್ತಿಯಾಗಲಿಲ್ಲ. ಶರಣನಾದವನಿಗೆ ನಿರನ್ನನಿರ್ಗತಿಯೊದಗಿದ ಪಕ್ಷಕ್ಕೆ –ಅವನು ಭಕ್ತರ ಮನೆಗೆ ಹೋಗಿ ಅಲ್ಲಿ ದೊರೆಯುವ ಅಂಬಲಿಯನ್ನೇ ತಂದು ಭರಿತಾರ್ಪಣ ಮಾಡಿದರೆ ಶಿವನಿಗೆ ತೃಪ್ತಿಯಾಗುವುದು.
ಶೂರನಾದವನು -ನನಗೆ ಗದೆಯಿಲ್ಲ ಬಿಲ್ಲುಬಾಣವಿಲ್ಲ ಬ್ರಹ್ಮಾಸ್ತ್ರವಿಲ್ಲವೆಂದೂ –ಅವಿಲ್ಲದಿದ್ದರೆ ಹೋರಲಾರೆನೆಂದೂ –ಎಂದಿಗೂ ಮುಂದಕ್ಕಿಟ್ಟ ಹೆಜ್ಜೆಯನ್ನು ಹಿಂದಕ್ಕೆ ಸರಿಸನು –ಇರುವೊಂದು ಸೂಜಿಬಾಳಿನಂಥ ಚಿಕ್ಕ ಆಯುಧವನ್ನೇ ಹಿಡಿದು ಹರಹರಮಹಾದೇವ ಎಂದು ರಣರಂಗವನ್ನು ಹೊಕ್ಕು ಹೋರಾಡಿ ಶರಶಯ್ಯೆಯಲ್ಲಿ ತನ್ನ ಮೈಯನ್ನು ಚೆಲ್ಲುವನು.
ಭಕ್ತಿಯೆಂಬುದಾದರೂ ಅಂಥದೊಂದು ಸಾಹಸವೇ ಹೊರತು-ಸಬೂಬುಗಳನ್ನು ಹೇಳಿ ಸುಪ್ಪತ್ತಿಗೆಯ ಮೇಲೊರಗುವುದಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು