•  
  •  
  •  
  •  
Index   ವಚನ - 674    Search  
 
ಮಾಹೇಶ್ವರನ ಜ್ಞಾನಿಸ್ಥಲ - ಶರಣ
ಕಟ್ಟಿ ಬಿಡುವನೆ ಶರಣನು? ಬಿಟ್ಟು ಹಿಡಿವನೆ ಶರಣನು? ನಡೆದು ತಪ್ಪುವನೆ ಶರಣನು? ನುಡಿದು ಹುಸಿವನೆ ಶರಣನು? ಸಹಜ ಸಜ್ಜನಿಕೆ ತಪ್ಪಿದರೆ, ಕೂಡಲಸಂಗಯ್ಯ ಮೂಗ ಹಲುದೋರ ಕೊಯ್ವ!
Transliteration Kaṭṭi biḍuvane śaraṇanu? Biṭṭu hiḍivane śaraṇanu? Naḍedu tappuvane śaraṇanu? Nuḍidu husivane śaraṇanu? Sahaja sajjanike tappidare, kūḍalasaṅgayya mūga hāludōra koyva!
Manuscript
English Translation 2 Does a Śaraṇa once made fast Break loose? Does a Śaraṇa once more hold fast After he has left? Does a Śaraṇa who has walked In the right path, go then astray? Does a Śaraṇa who has pledged his word Play false to it? If you should lapse from the real good Lord Kūḍala Saṅgama will chop your nose Translated by: L M A Menezes, S M Angadi
Hindi Translation ग्रहण कर त्याग देता है शरण? त्याग कर ग्रहण करता है शरण? आचरण से चूकता है शरण? वचन से मुँह मोडता है शरण? सहज सज्जनता त्यागने पर कूडलसंगमेश आदंत नाक काटेंगे ॥ Translated by: Banakara K Gowdappa
Telugu Translation కట్టువిడుచునే శరణుడు: చెట్టపట్టునే శరణుడు! నడత తప్పునే శరణుడు? చెప్పి తప్పునే శరణుడు? సహజ సజ్జనత తప్పిన కూడల సంగయ్య పలుదోప ముక్కు కోయక మానడయ్యా! Translated by: Dr. Badala Ramaiah
Tamil Translation சரணன் ஏற்றபின் விடுவனோ? சரணன் விட்டபின் ஏற்பனோ? நெறி பிறழ்வனோ சரணன்? கூறியதை இல்லை என்பனோ சரணன்? நன்னெறி தவறின் கூடல சங்கமதேவன் எலும்பு தெரியுமாறு மூக்கைக் கொய்வனன்றோ Translated by: Smt. Kalyani Venkataraman, Chennai
Marathi Translation कैसा तो शरण, धरी त्यास सोडी त्यागी त्यास जोडी, कैसा भक्त? कैसा तो शरण, आचार चुकेल होकारी मुकेल कैसा भक्त ? सहजता तैसी, सज्जनता थोर आवडतो पात्र, संगम देवा कूडलसंगमदेवा! सज्जनता हवी नसता तो भवि, दंडनिय अर्थ - धरसोड वृत्ती असणारे शिवशरण होऊ शकत नाहीत. तसेच आचार चुकणारे, वचन देऊन वचनभंग करणारा देखिल शिवशरण वा सद्भक्त होऊ शकत नाही. हे कूडलसंगमदेवा! सद्भक्तांच्या अंगी सहजता व सज्जनता न दिसून आल्यास तू त्यास शासन केल्याशिवाय राहणार नाहीस. Translated by Rajendra Jirobe, Published by V B Patil, Hirabaug, Chembur, Mumbai, 1983 आपलेसे करुन त्यागणारा शरण कसला? त्याग करुन आपलेसे करणारा शरण कसला? आचरणात चुकणारा शरण कसला? बोलून तोंड फिरविणारा शरण कसला? सज्जनता सहजता नसेल तर कूडलसंगमदेव नाक कापेल, दात पाडेल. Translated by Shalini Sreeshaila Doddamani
ಶಬ್ದಾರ್ಥಗಳು ಸಜ್ಜನಿಕೆ = ; ಹಲುದೋರೆ = ; ಹುಸಿ = ;
ಕನ್ನಡ ವ್ಯಾಖ್ಯಾನ ಧರ್ಮಕ್ಕೆ ಬದ್ಧನಾದ ಶರಣನ ಮುಖ್ಯ ಲಕ್ಷಣವೆಂದರೆ -ಸಜ್ಜನಿಕೆ. ಅವನೆಂದಿಗೂ ತೋರಿಕೆಗೆ ಮಾತ್ರ ಸಜ್ಜನನಾಗಿರುವುದಿಲ್ಲ. ಅವನ ಸಜ್ಜನಿಕೆ ರಕ್ತಗತವಾಗಿ ಭಾವಗತವಾಗಿ ಸಹಜಸಜ್ಜನಿಕೆಯಾಗಿರುವುದು. ಸಜ್ಜನವೆಂದರೆ ಪತಿವ್ರತೆ (ಕೂಡ) –ಅವಳ ಪಾತಿವ್ರತ್ಯ ಅತ್ಯಂತ ಸಹಜ ಹೇಗೋ ಹಾಗೆ ಶರಣನ ಲಿಂಗಧರ್ಮದ ಸಂಬಂಧ ಸಹಜಸಂಬಂಧವಾಗಿರುವುದು. ಆ ಶರಣನೆಂದಿಗೂ ಕಟ್ಟಿಕೊಂಡ ಲಿಂಗಾದರ್ಶನಗಳನ್ನು ಸಮಯಸಾಧನೆಗಾಗಿ ಬಿಟ್ಟುಕೊಡುವುದಿಲ್ಲ. ಬಿಟ್ಟ ದುರಾಚಾರ ದುಸ್ಸಹವಾಸ ಮಾರ್ಗವನ್ನೆಂದಿಗೂ ಮರಳಿ ಹಿಡಿಯುವುದಿಲ್ಲ. ಅವನು ನಡೆದು ತಪ್ಪುವುದಿಲ್ಲ, ನುಡಿದು ಹುಸಿಯುವುದಿಲ್ಲ. ಅವನಿಗಿರುವುದು ಒಂದು ಶಿವಮಾರ್ಗ, ಒಂದು ಸತ್ಯವಾಕ್ಯ. ಗೌರವಾಸ್ಪದವಾದ ಪೂಜ್ಯಸ್ಥಾನದಲ್ಲಿರುವ ಇಂಥ ಶರಣನು ತಪ್ಪಿದರೆ –ಅದರ ಪರಿಣಾಮ ಸಮಾಜದ ಮೇಲೆ ವ್ಯಾಪಕವಾಗಿ ಮುಸುಕುವುದಾಗಿ ಅವನ ತಪ್ಪಿಗೆ ಶಿವನು ಘೋರವಾದ ಶಿಕ್ಷೆಯನ್ನು ನಿಗದಿ ಮಾಡಿರುವನು. ವಿ : ಪಾತಿವ್ರತ್ಯಕ್ಕೆ ತಪ್ಪಿದ ಸ್ತ್ರೀಗೆ ಮತ್ತು ರಣರಂಗದಲ್ಲಿ ನೀಸಲಾರದೆ ಓಡಿ ಬಂದ ಯೋಧನಿಗೆ ಮೂಗುಕೊಯ್ಯುವುದೊಂದು ಶಿಕ್ಷೆ ವಿಧಿಸಲಾಗುತ್ತಿತ್ತೆಂಬುದನ್ನು ಇಲ್ಲಿ ನೆನೆಯಬೇಕು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು