ಮಾಹೇಶ್ವರನ ಜ್ಞಾನಿಸ್ಥಲ - ಭಾವಶುದ್ಧಿ
ಹುಟ್ಟುವಲ್ಲಿ ಭವಿ, ಮರಳಿ ಭಕ್ತನ ಮಾಡಿ, ಪೂರ್ವಾಶ್ರಮವ ಕಳೆದು,
ಹೊಂದುವಲ್ಲಿ ಭವಿಯಾಗಿ ಹೋಹರೆ ಮುಟ್ಟಲಾಗದು.
ಅವನ ಮುಟ್ಟಿದವ ಮುನ್ನವೆ ವ್ರತಗೇಡಿ,
ಅವನ ಶ್ರಾದ್ಧಕಾಲವೆ ಶ್ವಾನಮಾಂಸ,
ಕ್ರಿಯಾಕಾಲವೆ ಕ್ರಿಮಿಗಳು; ತದ್ದಿನವೆ ಮದ್ಯಮಾಂಸ!
ಇದು ಕಾರಣ; ಕೂಡಲಸಂಗಮದೇವಾ,
ಅವನ ಮನೆಯ ವಿಚಾರಿಸದೆ ಹೊಕ್ಕವಂಗೆ ನಾಯಕನರಕ!
Transliteration Huṭṭuvalli bhāvi, maraḷi bhaktana māḍi, pūrvāśramava kaḷedu,
honduvalli bhāviyāgi hōre muṭṭalāgadu.
Avana muṭṭidava munnave vratagēḍi,
avana śrād'dhakālave śvānamānsa,
kriyākālave krimigaḷu; taddinave madyamānsa!
Idu kāraṇa; kūḍalasaṅgamadēvā,
avana maneya vicārisade hokkavaṅge nāyakanaraka!
Manuscript
English Translation 2 They are not to be touched
Who heaten at their birth
Turn holy afterwards,
Wash off the old impurities, and then
Are heathen once again at death!
Whoever touches him has broken vows;
His obsequies are flesh of dog;
The rites that he performs are worms;
His mourning is liquor and meat!
Therefore, O Kūḍala Saṅgama Lord,
For one who toughtlessly
Visits his house, sure arch-hell gapes!
Translated by: L M A Menezes, S M Angadi
Hindi Translation जन्मते भवि, फिर भक्त बन पूर्वाश्रय छोड
मृत्यु स्पर्शी समय भवि बननेवाले का स्पर्श नहीं करना चाहिए ।
उसका स्पर्श करनेवाला पहले ही व्रतभ्रष्ट है
उसका श्रद्धाकाल ही श्वान माँस है,
क्रिया – कर्म क्षुद्र कीट है, श्राद्ध, मद्य, माँस है
अतः कूडलसंगमदेव बिना विचारे
उसके घर में प्रविष्ट होनेवाले को नायक नरक मिलेगा ॥
Translated by: Banakara K Gowdappa
Telugu Translation పుట్టుకతో భవియయ్యు పూర్వాశ్రమము విడిచి
భక్తుడై పొందికతో మఱల భవిjైుపోయెనా!
వానిని ముట్టరాదు; వానిని ముట్టుటకు ముందే
వ్రతముచెడు వాని శ్రాద్ధపిండము కుక్క కండ
క్రియాకారమే క్రిములు తద్దినమే మద్యమాంసము!
కాన దేవా! విచారింపక వాని యింటబడ నరకమగు.
Translated by: Dr. Badala Ramaiah
Tamil Translation நெறியிலியாகப் பிறந்து, மீண்டும் பக்தனாகி
முந்தைய நிலையகன்ற நிலையில் மீண்டும்
நெறியற்று இருப்போருடன் கூடுதல் கூடாது
அவனுடன் சேரின் நோன்பிலியாவான்
அவன் திதி அளிக்கும் நேரம் நாயின் ஊன் ஆகும்
கர்மம் செய்யும் நேரம் கிருமிகளாம். திதியே கள், ஊன் ஆகும்
இதனால் கூடல சங்கம தேவனே, ஆராயாது அவன்
இல்லம் செல்வோனுக்குக் கீழான நரகமன்றோ.
Translated by: Smt. Kalyani Venkataraman, Chennai
Marathi Translation
जन्म घेतला भवी म्हणून, पूर्वाश्रय घालवून भक्त झाला.
पुन्हा तो भवी झाला तर त्यापासून दूर राहिले पाहिजे.
त्याच्या संग सहवासाने व्रतभंग होतो.
त्याच्या श्राध्दाचे भोजन श्वानमांसासम आहे.
त्याच्या क्रिया कर्माचे भोजन मद्य मांसासम म्हणून
कूडलसंगमदेवा, त्यांच्या घरात चुकून प्रवेश केला तर घोर नरक.
Translated by Shalini Sreeshaila Doddamani
ಶಬ್ದಾರ್ಥಗಳು ಕ್ರಿಯಾಕಾಲ = ; ತದ್ದಿನ = ; ನರಕ = ; ಪೂರ್ವಾಶ್ರಯ = ; ಭವಿ = ; ವ್ರತ = ; ಶÁ್ವನ = ; ಶ್ರಾದ್ಧ = ; ಹೊಕ್ಕು = ; ಹೋಹರ = ;
ಕನ್ನಡ ವ್ಯಾಖ್ಯಾನ ಹುಟ್ಟುತ್ತ ಎಲ್ಲರೂ ಭವಿಗಳೇ -ಲಿಂಗಧಾರಣೆಯಾದಮೇಲೆ ಭಕ್ತರಾಗುತ್ತಾರೆ. ಅಥವಾ ಮತಾಂತರವಾದವರಾದರೆ ಲಿಂಗಧಾರಣೆಯಾಗುವವರೆಗೆ ಭವಿಗಳು -ಲಿಂಗಧಾರಣೆಯಾದಮೇಲೆ ಲಿಂಗವಂತರು, ಹೇಗೂ ಈ ಶಿವಧರ್ಮದವರು ಯಾರೇ ಆಗಲಿ ಸಾಯು(ತ್ತಿರು)ವಾಗ ಭವಿಯಾಗಬಾರದೆಂಬುದು (ಅಂದರೆ ಲಿಂಗದಿಂದ ಅಗಲಬಾರದೆಂಬುದು) ಈ ವಚನದ ಅಭಿಪ್ರಾಯ.
ಈ ಅಭಿಪ್ರಾಯವನ್ನು ಸರಿಯಾಗಿ ಗ್ರಹಿಸಲು ಈ ಮುಂದಿನ ವಿವರವನ್ನು ಗಮನಿಸುವುದು ಒಳ್ಳೆಯದು :
ಭೂಗತದೇವಾಲಯವನ್ನು ಪ್ರವೇಶಿಸಿದ ಅಲ್ಲಮಪ್ರಭುವಿಗೆ ಅಲ್ಲಿದ್ದ ಅನಿಮಿಷನು ತನ್ನ ಕೈಯ ಲಿಂಗವನ್ನು ಕೊಟ್ಟು ಪ್ರಾಣಬಿಟ್ಟನೆಂಬುದು ಶೂನ್ಯಸಂಪಾದನೆಗಳಲ್ಲಿ ಪ್ರಭುಲಿಂಗಲೀಲೆಯಲ್ಲಿ –ಇತರ ಹಲವು ವೀರಶೈವ ಪುರಾಣಗಳಲ್ಲಿ ಪ್ರಸಿದ್ಧವೇ ಆಗಿದೆ.
ಅಂದರೆ (ಅನಿಮಿಷ)ಗುರು ಸಾಯುವಾಗ ತನ್ನ ಇಷ್ಟಲಿಂಗವನ್ನೇ ಶಿಷ್ಯ(ಅಲ್ಲಮ)ನಿಗೆ ಕೊಡುವಂಥ –ಅದನ್ನು ಆ ಶಿಷ್ಯನು ಇಷ್ಟಲಿಂಗವಾಗಿಯೇ ಸ್ವೀಕರಿಸುವಂಥ ಒಂದು ಸಂಪ್ರದಾಯ ಬಸವಾದಿ ಪ್ರಮಥರ ಕಾಲಕ್ಕೇ (ಕ್ವಚಿತ್ತಾಗಿಯಾಗಲಿ) ಇತ್ತೆಂಬುದು ಸ್ಪಷ್ಟ.
ಅಂತೆಯೇ ತಂದೆ ಸಾಯುವಾಗ ಅವನ ಲಿಂಗವನ್ನು ಮಗನೂ ಧರಿಸಿ ಪೂಜಿಸುವುದೂ ರೂಢಿಯಲ್ಲಿತ್ತು. (ನೋಡಿ ಮುಂದೆ ಉಲ್ಲೇಖಿಸುವ ವಚನವನ್ನು). ಇದನ್ನೆಲ್ಲಾ ಬಸವೋತ್ತರ ಕಾಲದಲ್ಲಿ ನಿಷೇಧಿಸಲಾಯಿತು. 15ನೇ ಶತಮಾನದ ಗುಬ್ಬಿ ಮಲ್ಲಣ್ಣನ ಕಾಲಕ್ಕಂತೂ ಈ ಸಂಪ್ರದಾಯ ಕಟುವಾದ ಟೀಕೆಗೆ ಒಳಗಾಯಿತು. ನೋಡಿ :
“ಪಿತನಾಚಾರವನುದ್ದರಿಸುವಾತ ಪುತ್ರನಲ್ಲದೆ ಗತಿಗೆಡಿಸುವಾತ ಪುತ್ರನಲ್ಲ. ಅದೆಂತೆಂದಡೆ –ತಂದೆಯಂಗದ ಮೇಲಣ ಲಿಂಗವ ಹಿಂಗಿಸಿ ತಾನು ಕಟ್ಟಿಕೊಂಡು ಆತನ ಸುಡುವ ಪ್ರಾಣಿಗಳು ನೀವು ಕೇಳಿರೇ -ಹೋದಾತ ಭೂತಪ್ರಾಣಿ. ಕಟ್ಟಿಕೊಂಡಾತ ಪ್ರೇತಲಿಂಗಸಂಸ್ಕಾರಿ. ಇದಕ್ಕೆ ಆಗಮಸಾಕ್ಷಿ : “ಪ್ರೇತಲಿಂಗಸ್ಯ ಸಂಸ್ಕಾರೀ ಭೂತಪ್ರಾಣಿಷು ಜಾಯತೇ | ಸುಪ್ರಭಾತೇ ಮುಖಂ ದೃಷ್ಟ್ವಾ ಕೋಟಿ ಜನ್ಮನಿ ಸೂಕರಃ” –ಎಂದುದಾಗಿ ಗುರುವಾಗಿ ಲಿಂಗಸಾಹಿತ್ಯವ ಮಾಡಿದಾತಂಗೆಯೂ ಮಾಡಿಸಿಕೊಂಡಾತಂಗೆಯೂ ಇವರಿಬ್ಬರ ಸಾಕ್ಷಿಯಾಗಿ ಕುಳ್ಳಿರ್ದು ಮಾಡಿಸಿದವರಿಗೆಯೂ ಇಂತೀ ತ್ರಿವಿಧಕ್ಕೆ ಕೋಟಿಜನ್ಮ ನರಕ ತಪ್ಪದು ಕೂಡಲಸಂಗಮದೇವ” (ಗಣಭಾಷಿತರತ್ನಮಾಲೆ -ಪುಟ 148,ಪ್ರಕಟಣೆ 1948),
ತಮಾಷೆಯೆಂದರೆ ಈ ಮೇಲಣ ವಚನ ಬಸವಣ್ಣನವರ ಹೆಸರಿನಲ್ಲಿಯೇ ಇದೆ. ಇದರ ಲಯಹೀನ ನೀರಸ ಭಾಷೆ ತನಗೆ ತಾನೆ ಹೇಳುತ್ತಿದೆ-ಇದು ಬಸವಣ್ಣನವರ ನಿಜವಚನವಲ್ಲವೆಂದು. ವೀರಶೈವರಲ್ಲಿ ಗುಬ್ಬಿ ಮಲ್ಲಣ್ಣನು ಮಹಾಪ್ರಕ್ಷೇಪಕನೆಂಬುದನ್ನು ಮರೆಯದಿರಿ, ಇವನು ಇನ್ನೊಬ್ಬ ಕೆಂಚವೀರಣ್ಣೊಡೆಯ.
ಈ ಹಿನ್ನಲೆಯಲ್ಲಿ ಪ್ರಸ್ತುತ 677ನೇ ವಚನವನ್ನು ವಿವೇಚಿಸಿದ್ದೇ ಆದರೆ-ಕೋಟಾವಚನವೆಂದೇ ಹೇಳದೆ ಗತ್ಯಂತರವಿಲ್ಲ. ಅಂದರೆ ಪ್ರೇತಲಿಂಗಸಂಸ್ಕಾರವನ್ನು ಬಸವಣ್ಣನವರು ಒಪ್ಪಿದ್ದರೆಂಬುದನ್ನು ಇದರ ಅರ್ಥವಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು