•  
  •  
  •  
  •  
Index   ವಚನ - 676    Search  
 
ಮಾಹೇಶ್ವರನ ಜ್ಞಾನಿಸ್ಥಲ - ಅನುಗ್ರಹ
ಒಡನೆ ಹುಟ್ಟಿದುದಲ್ಲ, ಒಡನೆ ಬೆಳೆದುದಲ್ಲ: ಎಡೆಯಲಾದ ಒಂದು ಉಡುಗೆಯನುಟ್ಟು, ಸಡಿಲಿದರೆ ಲಜ್ಜೆ-ನಾಚಿಕೆಯಾಯಿತ್ತೆಂಬ ನುಡಿ ದಿಟವಾಯಿತ್ತು ಲೌಕಿಕದಲ್ಲಿ! ಹಡೆದ ಗುರುಕರುಣದೊಡನೆ ಹುಟ್ಟಿದ ನೇಮವನು ಬಿಡದಿರೆಲವೋ; ಬಿಟ್ಟರೆ ಕಷ್ಟ. ಕೂಡಲಸಂಗಮದೇವನಡಸಿ ಕೆಡಹುವ ನಾಯಕನರಕದಲ್ಲಿ!
Transliteration Oḍane huṭṭidadalla, oḍane beḷedadalla: Eḍeyalāda ondu uḍugeyanuṭṭu, saḍilidare lajje-nācikeyāyittemba nuḍi diṭavāyittu laukikadalli! Haḍeda gurukaruṇadoḍane huṭṭida nēmavanu biḍadirelavō; biṭṭare kaṣṭa. Kūḍalasaṅgamadēvanaḍasi keḍahuva nāyakanarakadalli!
Manuscript
English Translation 2 It was not born with us, It did not grow with us, And yet this garment that came casually, should it slip off, you hide your face in shame! And so the popular saying does come true O, do not break the vow, Born of the Guru's grace, that you have won! There's trouble if you do: Lord Kūḍala Saṅgama Will push and thrust you down Into arch-hell! Translated by: L M A Menezes, S M Angadi
Hindi Translation साथ पैदा नहीं हुआ; साथ बडा नहीं हुआ, बीच में प्राप्त वस्त्र धारण कर, ढीला होने पर लज्जा होती है यह उक्ति लोक में सत्य निकली। गुरु कृपा से प्राप्त नियम मत छोडो । छोड दो, तो दुःख है, कूडलसंगमदेव मारकर नायक नरक में गिरा देंगे ॥ Translated by: Banakara K Gowdappa
Telugu Translation పుట్టుకతో లేదు; పెరుగుచూ లేదు; మధ్యగట్టిన గోక, మధ్యలో జార సిగ్గు చేటని గర్తింతు వేటికో? ఈ మాటలే నిజమయ్యె జగతిలో! గురుకటాక్షమున బుట్టి పెరుగు పరమవ్రతమును వదలకురా; వదలిన కష్టము వదలదురా! నా స్వామి నరకమున దొక్కక మానడురా! Translated by: Dr. Badala Ramaiah
Tamil Translation உடனே பிறப்பிதில்லை. உடனே வளர்வதில்லை இடையிலே ஒரு உடையை உடுத்தித் தளர்ந்தால் நாணம் ஏற்படுகிறது எனும் கூற்று உலகியலிலே உறுதியாயிற்று, பெற்ற குருவின் கருணையுடன் மேற்கொண்ட நியமத்தை விடாதீர், விடின் துன்பமாம் கூடல சங்கமதேவன் கீழான நரகத்தில் தள்ளிவிடுவான் Translated by: Smt. Kalyani Venkataraman, Chennai
Marathi Translation जन्मता न असते । वाढता न वाढे । लज्जेस्तव जोडे । मध्येच वस्त्र । लज्जेस्तव जोडे । वाटतसे लज्जा । तेच वस्त्र गळता । नेमासि चळता । लाज न का ये । नेमासि चळता । गुरु कृपे लिंग, नेमाचार मिळे । त्यागिताचि काळे । तोंड तयाची । त्यागिताची काळे । कूडलसंगमेशा आचार तो थोर । सुटता तो घोर । नरकी जाय । सुटता तो घोर । अर्थ – वस्त्र जन्माबरोबर येत नाही किंवा वयाबरोबर वाढत नाही. पण तेच वस्त्र वयात आल्यानंतर अंगावरून गळताच लज्जा वाटते. तैसे गुरुकृपेने दीक्षा, गुरुमंत्र व इष्टलिंग नेमचारी सोडताना लज्जा का न वाटावी ? सामान्य लोकाचार म्हणून मधेच धारण केलेले वस्त्र सुटल्यास लज्जा वाटते आणि जीवनोद्धारक असा गुरुमंत्र, इष्टलिंग, इत्यादि नेमाचार सुटताच लज्जा का वाटत नाही? हे कूडलसंगमदेवा! असे मध्येच नियमानुसार सोडणारे दुराचारी निश्चित नरकाचे अधिकारी होत. Translated by Rajendra Jirobe, Published by V B Patil, Hirabaug, Chembur, Mumbai, 1983 बरोबर जन्म घेतला नाही, बरोबर वाढत नाही. नंतर मिळालेले वस्त्र वाढत्या वयानुसार अंगात घातला तर असा कपडा बाजूला सरकताच लजित होतात. ही गोष्ट जन प्रचलीत आहे. गुरु कृपेने मिळालेल्या इष्टलिंगबरोबर आलेले नियम कधीही सोडू नको. सोडला तर घोर नरकात टाकेल कूडलसंगमदेव. Translated by Shalini Sreeshaila Doddamani
ಶಬ್ದಾರ್ಥಗಳು ಅಡಸಿ = ಹೊಂದಿಕೊಳ್ಳು, ಸರಿಯಾಗು; ಉಡುಗೆ = ; ಎಡೆ = ; ಒಡನೆ = ; ಕೆಡಪು = ; ದಿಟ = ; ನÉÃಮ = ; ನರಕ = ; ಲಜ್ಜೆ = ; ಲೌಕಿಕ = ; ಸಡಿಲು = ; ಹಡೆದ = ;
ಕನ್ನಡ ವ್ಯಾಖ್ಯಾನ ಲಿಂಗದೀಕ್ಷಾ ಕಾಲದಲ್ಲಿ ಗುರು ಪಾಲಿಸೆಂದು ಕೊಟ್ಟು ನೇಮವನ್ನು ಬಿಡುವುದು ಭಕ್ತನಿಗೆ ಲಜ್ಜಾಸ್ಪದವೆಂಬುದು ಈ ವಚನದ ತಾತ್ಪರ್ಯ. ಲಿಂಗ ದೀಕ್ಷೆಯೆಂದರೆ ದಿವ್ಯವಾದೊಂದು ಹೊಸಜನ್ಮದ ಪ್ರಸವ. ಅಲ್ಲಿಂದಾರಂಭಿಸಿ ಆಮರಣ ಆಚರಿಸಬೇಕಾದ್ದು ಆ ನೇಮ. ಅಂಥದನ್ನು ಮಧ್ಯಂತರದಲ್ಲೇ ಕೈಬಿಡುವುದು ಲಜ್ಜಾಸ್ಪದವೆನ್ನುತ್ತಿರುವರು ಬಸವಣ್ಣನವರು. ಇದಕ್ಕೊಂದು ದಿನಬಳಕೆಯ ಮಾತಿನ ಹೋಲಿಕೆಯನ್ನೂ ಕೊಟ್ಟಿರುವರು : ಉಟ್ಟಬಟ್ಟೆ ಸಡಿಲಿ ಸ್ವಲ್ಪ ಓರೆಯಾದರೂ ಜಾರಿದರೂ ನಾಚಿಕೆ ನಾಚಿಕೆಗೇಡು ಎಂದು ಕೂಗಾಡುವರು ಜನ. ಆ ಬಟ್ಟೆ ಕರ್ಣಕವಚದಂತೆ ಹುಟ್ಟುವಾಗಲೇ ಉಟ್ಟು ಬಂದುದಲ್ಲ, ಜೊತೆ ಜೊತೆಗೇ ಬೆಳೆದು ಬಂದುದೂ ಅಲ್ಲ. ದಿನದಿನವೂ ಬದಲಾಗುವಂಥದು. ಆದರೂ ಅದನ್ನು ಬಿಚ್ಚಿಬಿಟ್ಟರೆ ತೀರ ಅವಮಾನ –ಜನ ಕಣ್ಣು ಮುಚ್ಚಿ ಮುಖಮುರಿದುಕೊಳ್ಳುವರು. ಅಂದಮೇಲೆ ಗುರುಕರುಣಿಸಿದ ಲಿಂಗದೀಕ್ಷೆಯ ಜೊತೆಜೊತೆಯಲ್ಲೇ ಬೆಳೆದ ಅತ್ಯಂತ ಅನರ್ಘ್ಯವಾದ ನೇಮವೆಂಬ ಚಿದಂಬರವನ್ನು ಜನ ಯಾವ ಕಾರಣಕ್ಕೇ ಆಗಲಿ ಬಿಡುವುದು ಅತ್ಯಂತ ನಾಚಿಕೆಗೇಡಿನ ಕೃತ್ಯವೆಂದು ತಿಳಿಯ ಹೇಳುತ್ತಿರುವರು ಬಸವಣ್ಣನವರು. ದೀಕ್ಷೆ ಕೊಡುವಾಗ ಗುರು ಶಿಷ್ಯನಿಗೆ ದಯೆ ಸತ್ಯ ಅಹಿಂಸೆ ಮುಂತಾದುದರಲ್ಲಿ ಯಾವುದಾದರೊಂದು ವ್ರತ್ಯವನ್ನು ಲಿಂಗದ ಜೊತೆಜೊತೆಗೇ ವಿಶೇಷವಾಗಿ ಕೊಡುವನು. ಮಾಂಸದ ಅಶ್ಲೀಲವನ್ನು ಮುಚ್ಚುವ ದಿವ್ಯಾಂಬರಗಳವು. ಅವಿಲ್ಲದವನು ಬತ್ತಲೆ ತಿರುಗುವ ನಾಯಿಕತ್ತೆಗಿಂತ ಲಜ್ಜಾಸ್ಪದ. ಲಿಂಗದೀಕ್ಷಾ ಕಾಲದಲ್ಲಿ ಗುರು ಶಿಷ್ಯನಿಗೆ ಕೊಡುವ ನೇಮದ ಸಂಬಂಧವಾಗಿ ರಾಘವಾಂಕನ ಈ ಮುಂದಿನ ಪದ್ಯವನ್ನು ಪರಿಶೀಲಿಸಿ : “ಉದಯವಪ್ಪಂದು ಕೂಡುತ್ತಮಾಂಗದಲಿ ಮೂ| ಡಿದ ಗೂಢಲಿಂಗಮಂತೋರಿ ಪಂಚಾಕ್ಷರಿಯ ಹೃದಯಮಂ ತಿಳಿಪಿ ನಿಜಭಕ್ತಿಯಂ ಗುರುಪೂಜೆಯಾಗಿ ಕೈಕೊಂಡು ಬಳಿಕ | ಮೊದಲ ನಾಮವನೆ ದೀಕ್ಷಾನಾಮವಿತ್ತು ಭೂ| ತ ದಯಾವಿಚಾರಮಂ ನೇಮಮಂ ಕೊಟ್ಟು ನೋ | ಡಿದಡೆ ಕನ್ನಡಿಗೆ ಕನ್ನಡಿ ದೋರಿದಂತೆರಡನಳಿದೊಂದುವಿಡಿದಿರ್ದನು”|| (ಸಿದ್ಧರಾಮ ಚಾರಿತ್ರ 3-14) (ನೋಡಿ ವಚನ 232).

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು