•  
  •  
  •  
  •  
Index   ವಚನ - 677    Search  
 
ಮಾಹೇಶ್ವರನ ಜ್ಞಾನಿಸ್ಥಲ - ಛಲ
ಛಲಬೇಕು ಶರಣಂಗೆ ʼಪರಧನವನೊಲ್ಲೆನೆಂಬʼ ಛಲಬೇಕು ಶರಣಂಗೆ ʼಪರಸತಿಯನೊಲ್ಲೆನೆಂಬʼ ಛಲಬೇಕು ಶರಣಂಗೆ ʼಪರದೈವವನೊಲ್ಲೆನೆಂಬʼ ಛಲಬೇಕು ಶರಣಂಗೆ ʼಲಿಂಗಜಂಗಮ ಒಂದೆʼ ಎಂಬ ಛಲಬೇಕು ಶರಣಂಗೆ ʼಪ್ರಸಾದ ದಿಟವೆಂಬʼ ಛಲವಿಲ್ಲದವರ ಮೆಚ್ಚ ನಮ್ಮ ಕೂಡಲಸಂಗಮದೇವ.
Transliteration Chalabēku śaraṇaṅge ʼparadhanavanollenembaʼ chalabēku śaraṇaṅge ʼparasatiyanollenembaʼ chalabēku śaraṇaṅge ʼparadaivavanollenembaʼ chalabēku śaraṇaṅge ʼliṅgajaṅgama ondeʼ emba chalabēku śaraṇaṅge ʼprasāda diṭavembaʼ chalavilladavara mecca nam'ma kūḍalasaṅgamadēva.
Manuscript
Music Courtesy: Vachana Vaibhava ℗ Super Cassettes Industries Limited, Singer: Puttru Narsinha Nayak, Released on: 2001-02-09
English Translation 2 TheŚaraṇa must have the constancy to say, 'I will not have another's wealth'; The Śaraṇa must have the constancy to say, 'I will not have another's wife'; TheŚaraṇa must have the constancy to say, 'I will not have another god: The Śaraṇa must have the constancy to say, 'Liṅga and Jaṅgama are one'; The Śaraṇa must have the constancy to say, Prasāda' is the Truth': Lord Kūḍala Saṅgama disdains Such men as have no constancy. Translated by: L M A Menezes, S M Angadi
Hindi Translation दृढ व्रत हो शरण का, हठ हो शरण में कि परधन नहीं चाहिए; हठ हो, शरण में कि परस्त्री नहीं चाहिए; हठ हो, शरण में कि परदैव नहीं चाहिए; हठ हो, शरण में कि लिंग और जंगम एक ही है; हठ हो, शरण में कि प्रसाद सत्य है दृढ व्रत हीनों को कूडलसंगमदेव नहीं चाहते ॥ Translated by: Banakara K Gowdappa
Telugu Translation ఛలముండవలె శరణునకు పరధన మొల్లనని; ఛలముండవలె శరణునకు పరసతి నొల్లనని; ఛలముండవలె శరణునకు పరదైవ మొల్లనని; ఛలముండవలె శరణునకు లింగజంగమ మొకటేయని; ఛలముండవలె శరణునకు ప్రసాదమే నిజమని; ఛలము లేనివారల సంగయ్య మెచ్చడయ్యా! Translated by: Dr. Badala Ramaiah
Tamil Translation சரணனுக்குப் பிறர் செல்வம் வேண்டாமெனும் உறுதி வேண்டும் சரணனுக்குப் பிறன்மனை நயப்பதில்லை எனும் உறுதி வேண்டும் சரணனுக்குப் பிறதெய்வத்தை ஏற்பதில்லை எனும் உறுதி வேண்டும் சரணனுக்கு இலிங்க ஜங்கமர் ஒன்று எனும் உறுதி வேண்டும் சரணனுக்குத் திருவமுது உண்மையானதெனும் உறுதி வேண்டும் உறுதியற்றோரை கூடல சங்கமதேவன் மெச்சுவதில்லை. Translated by: Smt. Kalyani Venkataraman, Chennai
Marathi Translation धरावा आग्रह, शरण खास परधनाची आस, नको मनी धरावा आग्रह, शरण खास परस्त्रीची आस, नको नको धरावा आग्रह, शरण तोचि परदेवतेचे, नको ध्यान धरावा आग्रह, शरण तोचि लिंग जंगम एकचि, नोहे भेद धरावा आग्रह, शरण तोचि प्रसादाविण नच, श्रेष्ठ कांही कूडलसंगमदेवा ! सत्याग्रहाविण नच होई प्रसन्न, कदा काळी अर्थ - शिवशरण सदा शांत आणि समाधानी असतात. पण प्रवृतीनुसार त्यांच्यामध्ये आग्रहाची तीव्र इच्छा निर्माण झाल्यास वरील गोष्टीसाठीच त्यांनी आग्रह धरावा. बसवेश्वर येथे हट्टी प्रवृत्तीला किंवा आग्रह धरण्याच्या मनोभावनेला चांगल्या गोष्टीकडे कलाटणी देण्यास सांगत आहे. आग्रह आवश्य धरावा पण तो सत्यासाठी असावा तरच माझा कूडलसंगमदेव (परमेश्वर) अशांना पावेल. शरणांनी परधन मला नको आहे, असा आग्रह धरावा. परस्त्री मला नको, ती मातेसमान आहे असा हट्ट करावा. परदैवत (अनेक) मी मानणारा नाही. लिंगदेव व जंगमाना एकच समजेन त्यात भेदाभेद करणार नाही. श्रम करून मिळविलेले अन्न शिवाला अर्थात जंगमाना अर्पण करुन मगच प्रसादमय अन्न सेवन करीन. असा सत्याचा आग्रह धरल्याशिवाय परमेश्वर पावणार नाही यावर माझा संपूर्ण विश्वास आहे. Translated by Rajendra Jirobe, Published by V B Patil, Hirabaug, Chembur, Mumbai, 1983 निग्रह असावा शरणाला परधन नाकारण्याचा, निग्रह असावा शरणाला परसती नाकारण्याचा, निग्रह असावा शरणाला परदैव नाकारण्याचा, निग्रह असावा शरणाला लिंग-जंगम एक मानण्याचा, निग्रह असावा शरणाला प्रसादाला सत्य मानण्याचा, निग्रहाविना जवळ घेत नाही कूडलसंगमदेव. Translated by Shalini Sreeshaila Doddamani
Urdu Translation شرن کےعَزم ہوں محکم ہمیشہ کسی بھی پل نہ ان کے قلب میں ہو پرائے دَھن کی ہلکی سی تمنّا شرن کےعَزم ہوں محکم ہمیشہ پرائی عورتوںپردل نہ لپکے شرن کےعَزم ہوں محکم ہمیشہ کسی کواُس سےکوئی دُکھ نہ پہنچے شرن کےعَزم ہوں محکم ہمیشہ وہ سمجھیں لِنگ جنگم ایک ہی ہیں شرن کےعَزم ہوں محکم ہمیشہ کبھی پرساد کی برکت نہ بھولے شرن میں جب نہ ہوں ایسےعزائم توپھر یہ کوڈلا سنگا یہ آقا کبھی زحمت نہ برسائیں گےاُن پر Translated by: Hameed Almas
ಶಬ್ದಾರ್ಥಗಳು ಜಂಗಮ = ; ದಿಟ = ; ಪರದೈವ = ; ಪರಧನ = ; ಪರಸತಿ = ; ಪ್ರಾಸದ = ; ಫಲ = ;
ಕನ್ನಡ ವ್ಯಾಖ್ಯಾನ ಮನುಷ್ಯನ ಮನಸ್ಸು ಸಾಮಾನ್ಯವಾಗಿ ಚಂಚಲವೇ –ಕಾಕಂಬಿಯಂತೆ –ಎಳೆದತ್ತೆಲ್ಲ ಈಚುವುದು. ಆದರೆ ಶರಣನ ಮನಸ್ಸು ಉಕ್ಕಿನಂತೆ ಬಿಗಿ. ಅವನ ಅಂದ ಆ ಬಿಗುವಿನಲ್ಲಿಯೇ ಚಂದವಾಗುವುದಾಗಿದೆ. ಈಚುವುದು ಆಕರ್ಷಕ, ಬಿಗಿಯುವುದು ವಿಕರ್ಷಕ. ಮರಳಿ : ಆಕರ್ಷಕವೆಂದರೆ –ಎಲ್ಲಕ್ಕೂ ಬಾಯಿ ನೀರಾಡಿಸಿ ಎಳೆದತ್ತೆಲ್ಲಾ ಈಚುವುದು. ವಿಕರ್ಷವೆಂದರೆ ಆತ್ಮೋನ್ನತಿಗೆ ಒಗ್ಗದುದಕ್ಕೆಲ್ಲ ಬಗ್ಗದೆ ಬಿಗಿಯಾಗಿರುವುದು. ಇದಕ್ಕಾಗಿಯೇ ಶರಣನು ಅಸ್ತೇಯ, ಬ್ರಹ್ಮಚರ್ಯ, ಶಿವೈಕೋಪಾಸನೆ, ಜೀವಜಾಲವನ್ನೆಲ್ಲ ಶಿವರೂಪದಲ್ಲಿ ಕಾಣುವ ಪೂರ್ಣದೃಷ್ಟಿ, ಅಂತರಂಗದಲ್ಲಿ ಆವರಿಸಿರುವ ಪ್ರಸನ್ನಭಾವ –ಇವನ್ನು ಛಲದಿಂದ ನಿರಂತರವಾಗಿ ನಿಬಿಡವಾಗಿ ಆಚರಿಸುವನು. ಇದಕ್ಕೆಲ್ಲ ಸಾಕ್ಷಿಯಾಗಿ ಅವನು ಪರಧನವನ್ನು ಒಲ್ಲ –ಅವನೇನು ಬಡವನೆ ? ಆತ್ಮಶ್ರೀನಿವಾಸ ! ಪರಸತಿಯರನ್ನು ಕಾಮಿಸ –ಅವನೇನು ಲಂಪಟನೆ ? ರುಚಿಶುದ್ಧ ! ಆತ್ಮೀಯ ಪ್ರತೀಕರವಲ್ಲದ ಅನ್ಯದೈವವನ್ನು ಉಪಾಸಿಸ –ಅವನೇನು ಮೂಢನೆ ? “ವಿದ್ಯಾ” ಪಾರಂಗತ ! ತಾನೊಬ್ಬನೇ ಭಕ್ತನಾಗಿ “ಮರ್ತ್ಯಲೋಕದೊಳಗಣ ಭಕ್ತರೆಲ್ಲರೂ ಜಂಗಮಲಿಂಗ ನೀನೇ ಅಯ್ಯ”ಎಂದು ಲೋಕಪಾರವಾರವನ್ನು ತಬ್ಬಿ ಈಸಿದವನು ಶರಣ. ಆದುದರಿಂದಲೇ ಶರಣನಿಗೆ ಇಂದ್ರಿಯ ವಿಷಯೋಪಭೋಗವೆಲ್ಲಾ ವಿಷವಾಗದೆ ಪ್ರಸಾದರೂಪದಲ್ಲಿ ಪರಿಣಮಿಸುವುದು, ಈ ಪ್ರಸಾದ ಪರಿಪಾಕಕ್ಕಾಗಿಯೇ ಶರಣನ ಪುರುಷಾರ್ಥ ಪರಮಾರ್ಥಗಳೆಲ್ಲಾ ನಿಯೋಜಿತ. ಶರಣನು ತನ್ನೆಲ್ಲ ಘನತೆಯನ್ನು ಅರಳಿಸಿಕೊಳ್ಳಬಲ್ಲ ಜೀವಧಾತುವನ್ನು ಪಡೆಯುವ ಬಗೆಯೂ ಇದೇ ಆಗಿದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು