ಮಾಹೇಶ್ವರನ ಜ್ಞಾನಿಸ್ಥಲ - ಸತ್ವಪರೀಕ್ಷೆ
ಮುನ್ನಿನ ಕಲಿ ವೀರಧೀರರು ಕಾದಿದ ರಣಗಳನು
ಪರಿಪರಿಯಲಿ ಬಣ್ಣಿಸಿ ಹೇಳಬಹುದಲ್ಲದೆ,
ಆ ದಳವಿದಿರಾದಲ್ಲಿ ಬಿರಿದುಪಚಾರಿಸಿ, ಕಾದಿ ತೋರಲುಬಾರದು.
ಮುನ್ನಿನ ಪುರುಷವ್ರತಿಯರು ಓಲಿಸಿದ ಆಯತವ
ಪರಿಪರಿಯಲು ಬಣ್ಣಿಸಲು ಬಹುದಲ್ಲದೆ,
ಪುರುಷನಿರ್ವಾಣಕ್ಕುರಿವಗ್ನಿಯ
ಬಂದು ಹೊಕ್ಕು ತೋರಲುಬಾರದು.
ಮುನ್ನಿನ ಪುರಾತನರೆಲ್ಲರು ತನುಮನಧನವನಿತ್ತು
ಮಾಡಿ, ನೀಡಿ ಲಿಂಗವ ಕೂಡಿದ ಪರಿಗಳನು
ಅನುಭಾವದಲರ್ಥೈಸಿ ಹೇಳಬಹುದಲ್ಲದೆ,
ಮಾಡಿ, ನೀಡಿ ತೋರಲುಬಾರದು.
ಇಂತೀ ಅರೆಬಿರುದಿನ ಬಂಟರು,
ಪುರುಷವ್ರತಿಯರು, ಪುರಾತನರು
ಬರಿಯ ಮಾತನಾಡಿ ಹೊರಗೆ ಮೆರೆವರಲ್ಲಾ ;
ಪರೀಕ್ಷೆಯುಂಟಾಗಿಯಿದ್ದರೆ ಒಳಗಣವರ ಹೆಸರ ಹಿಡಿದು,
ಪರಿಪರಿಯಲು ಹೊಗಳುವರು.
ಶರೀರ-ಅರ್ಥ-ಪ್ರಾಣ ಗುರು-ಲಿಂಗ-ಜಂಗಮಕ್ಕೆ ಪರೀಕ್ಷೆ ಉಂಟಾಗಿಯೆ
ʼಆಗ ಮಾಹೇಶ್ವರ ಪುರಾತವಳಿ'-ಯೆಂಬ
ಪರಮಬಂಧುಗಳಾತನ ನೆನೆನೆನೆದು ಬದುಕುವರು.
ಇಂತೀ ಅನುಭಾವದ ಓದಿನ ಅಕ್ಷರಾಭ್ಯಾಸವ
ಸಾಧಿಸಿ ತರ್ಕಿಸಿ ನಿಂದಿಸಲಾಗದು.
ಕೂಡಲಸಂಗನ ಶರಣರಿಗಲ್ಲದೆ ಅನುಭಾವವಿಲ್ಲಾ!
Transliteration Munnina kali vīradhīraru kādida raṇagaḷanu
paripariyali baṇṇisi hēḷabahudallade,
ā daḷavidirādadalli birida pacārisi, kādi tōralubāradu.
Munnina puruṣavratiyaru ōlisida āyatava
paripariyalu baṇṇisalu sādhyavillade,
puruṣanirvāṇakkurivagniya
bandu hokku tōralubāradu.
Munnina purātanarellaru tanumanadhanavannittu
māḍi, nīḍi liṅgava kūḍida parigaḷanu
Anubhāvadalarthaisi hēḷabahudallade,
māḍi, nīḍi tōralubāradu.
Intī arebirudina baṇṭaru,
puruṣavratiyaru, purātanaru
bariya mātanāḍi horage merevarallā;
parīkṣeyuṇṭāgi iddare oḷagaṇavara hesara hiḍidu,
paripariyalu hogaḷuvaru.
Śarīra-artha-prāṇa guru-liṅga-jaṅgamakke parīkṣeyuṇṭāgiye
ʼāga mahēśvara purātavaḷi'-yemba
paramabandhugaḷātana nenenenedu badukuvaru.
Intī anubhāvada ōdina akṣarābhyāsava
sādhisi tarkisi nindisalāgadu.
Kūḍalasaṅgana śaraṇarigallade anubhāvavilla!
Manuscript
English Translation 2 Easy to picture and extol,
In various ways, the battles fought
By valiant heroes of the past;
But when the host confronts you,
That is another story!
Actually to fight and exhibit the valour well.
Easy to picture and extol,
In various ways, the practices
Of women in the past who kept
Their wifely vows; but when the husband burns,
Actually to go into the blazing fire,
That is another story!
Easy to token on authority
The various ways wherein
The Śaraṇās of long ago did give
Their body, mind and wealth
And, by assiduous service, gained
Union with Liṅga; but then,
To render that assioudous service, well,
That is another story!
Thus, heroes stuck with badges,
The dedicated wives, the Śaraṇās ,
Lo, make an exhibition to the world;
With words devoid of meaning and stand outside:
When brought actually to trial, they cite
Familiar names of those inside and praise
In various names.
The man who stands the test
By yielding all he has-
His body, mind and wealth
To Guru,Liṅga and Jaṅgama
Is Mahēśvara.
Our early brethren saved themselves
By calling him to mind.
So, one should not disdain
The knowledge born of self-experience,
Through bookish learning and guesswork...
Except for Kūḍala Saṅga's Śaraṇās,
There's no Experience!
Translated by: L M A Menezes, S M Angadi
Hindi Translation प्राचीन वीरधीरों के युद्धों का-
विविध प्रकार से वर्णन कर सकते हैं
किंतु सेना का सामना होने पर
वीरता से लड कर दिखाना कठिन है ।
प्राचीन पतिव्रताओं को प्रसन्न करने की विधि का
विविध प्रकार से वर्णन कर सकते हैं।
किंतु पति की मुक्ति के लिए जलति ज्वाला में
कूदकर दिखाना कठिन है ।
प्राचीन महापुरुष जिस प्रकार तन, मन, धन से
सेवा समर्पित कर लिंगैक्य हुए उनकी विविध रीतियाँ
अनुभाव से समझ सकते हैं ।
किंतु उन्हें आचरण द्वारा दिखाना कठिन है ।
यों अपूर्ण उपाधि-धारी भट, पतिव्रताएँ तथा पूर्वपुरुष
निरर्थक की बातें कर बाहर प्रदर्शित होते हैं न!
परीक्षा के समय भूतकालों के नाम लेकर
नाना प्रकार से प्रशंसा करते हैं ।
परीक्षा के समय गुरु, लिंग, जंगम को
शरीर-अर्थ-प्राण अर्पित करनेवाला माहेश्वर है।
पुरातन-परंपरा के परम बंधु
बारंबार उनका नामस्मरण कर जीवित रहते हैं ।
यों अनुभाव के अक्षराभ्यास की साधना कर
तर्क से निंदा नहीं करनी चाहिए ।
कूडलसंग के शरणों के सिवा
औरों को अनुभाव लभ्य नहीं है ॥
Translated by: Banakara K Gowdappa
Telugu Translation భక్తుల సమర్ధులు; అసమర్ధులనుటగలదే?
ఎక్కడి చెన్నుడు? ఎక్కడి చోళుడు?
చెన్నునితో చేరి శివుడు భుజించె. ఔరౌరా!
చోళుని యింటిపనివాడు చెన్నుడయ్యా!
సంగమదేవుడు భక్తి లంపటుడయ్యా!
Translated by: Dr. Badala Ramaiah
Tamil Translation முந்தைய போர்வீரர்கள் போரிட்ட போர்க்களங்களை
வகைவகையாக விவரிக்கவியலுமே தவிர போர்க்களம்
எதிராயின் பகுத்து, இகழ்ந்து போரிட்டுக் காட்டவியலாது
முன்பு சதி மேற்கொண்ட பதிவிரதைகளைக் குறித்து
வகைவகையாக விவரிக்கவியலுமே தவிர
அவர் கணவர் இறப்பின் சதியை மேற்கொள்ள வியலாது
முன்னோரனைவரும் உடல், மனம், செல்வத்தை அளித்து
செய்து இலிங்கத்துடன் இணைந்தமுறைகளை
அனுபவத்தில் உணர்ந்து கூறவியலுமே தவிர
செய்து, அளித்துக் காட்டவியலாது
இவ்வாறு அற்ப புகழுடைய பகட்டினர்
செருக்குற்று வெளியிலே வரிதே உடையாடுவரையனே
பரீட்சைக்கு ஆட்பட்டோரின் பெயரைக் கூறி
வகை வகையாகப் புகழ்வர் ஐயனே
உடல், பொருள், உயிர் குருலிங்க ஜங்கமத்திற்கு
என்பதை பரிசீலித்தே
அவன் மஹேச்வர பரம்பரையினன் எனும்
மேலான உறவினர் அவனை நினைந்து நினைந்து வாழ்வர்
இத்தகைய அனுபாவத்தை ஓதி, அரிச்சுவடியைச்
சாதித்து, வாதிட்டு இகழ்தலாகாது
கூடல சங்கனின் சரணர் பெறாத அனுபவம் என்பது இல்லை ஐயனே
Translated by: Smt. Kalyani Venkataraman, Chennai
Marathi Translation
पूर्वीच्या वीरांच्या पराक्रमाचे युध्दाचे वर्णन खूप तऱ्हेने करतात पण
तशी वेळ आपल्यावर येताच युध्द करु शकत नाहीत.
पूर्वीच्या पतिव्रतांचा महिमा अनेक तऱ्हेने वर्णन करतील.
पण स्वतः पतिव्रता होऊन दाखवित नाहीत.
पूर्वीच्या पुरातनांनी तन-मन- धन अर्पण करुन,
लिंगात समरस झाल्याचा महिमा खूप तऱ्हेने वर्णन करु शकत नाही,
समरस होत नाही.
असे पोकळ वीर, पतिव्रता, पुरातन पोकळ गप्पाच मारतात.
परिक्षेची वेळ येताच त्यांचेच वर्णन खूप करतात.
अनेक तऱ्हेने स्तुती करतात.
तनमनधन हे योग्य समयी गुरुलिंग
जंगमाला अर्पण करणारे परिक्षेत सफल होतील.
त्यांनाच माहेश्वर पुरातन म्हणतो.
परम बंधू त्यांचे होऊन स्मरण करीत जगतात.
अशांचा अनुभाव वाचून, अक्षराभ्यास साधूनी, तर्काने
त्यांची निंदा करता येत नाही.
अनुभाव नसे कूडलसंगाच्या शरणाविना
Translated by Shalini Sreeshaila Doddamani
ಶಬ್ದಾರ್ಥಗಳು ಅಕ್ಕು = ಅರಗು, ಜೀರ್ಣವಾಗು; ಆಯುತ = 1) ಯೋಗ್ಯವಾದದ್ದು, ಕ್ರಮವಾದದ್ದು, ಸರಿಯಾದದ್ದು
2) ವೀರಶೈವರಲ್ಲಿ ಗುರುವು ಭಕ್ತನಲ್ಲಿ ಇಷ್ಟಲಿಂಗವನ್ನು ಕೊಡುವ ದೀಕ್ಷೆ; ಕಲಿ = ; ಕಾದು = ; ತನು = ಶರೀರ; ನಿರ್ವಾಣ = ; ಪರಿ = ; ಪುರಾತನರು = ; ಬಣ್ಣಿಸು = ; ಬಿರಿದ = ; ಮುನ್ನ = ; ಮುನ್ನಿನ = ; ವ್ರತಿ = ; ಹೊಕÀÄ್ಕ = ;
ಕನ್ನಡ ವ್ಯಾಖ್ಯಾನ ಅನುಭಾವವೆಂದರೆ ಹಿಂದಿನ ಕಾಲದ ಮಹೇಶ್ವರ(ಶರಣ)ರ ಜೀವನಸಾಧನೆ ಸಿದ್ಧಿಗಳನ್ನು ಕುರಿತ ಪ್ರವಚನ. ಇಂಥ ಪ್ರವಚನಗಳನ್ನು ಕೇವಲ ಓದಿನ ಬಲದಿಂದ ಶಬ್ದಾರ್ಥವಾಗಿ ಮಾಡುವ ಅವಸರದಲ್ಲಿ ಆ ಮಹನೀಯರ ಅರೆಕೊರೆಗಳನ್ನು ಎತ್ತಿ ದೊಡ್ಡದು ಮಾಡಬಾರದು. ಟೀಕಿಸುವುದು ನಿಂದಿಸುವುದು ಸುಲಭ. ಆದರೆ ಅವರಂತೆ ಶರೀರ-ಅರ್ಥ-ಪ್ರಾಣಗಳನ್ನು ಗುರು-ಲಿಂಗ-ಜಂಗಮಸೇವೆಗೆ ಮೀಸಲಿಡುವುದು ಸುಲಭವಲ್ಲ. ಆ ಅರ್ಪಿತ ಜೀವನವನ್ನು ತಮ್ಮದಾಗಿಸಿಕೊಳ್ಳಲು ಯಾರು ಆಕಾಂಕ್ಷಿಸುವರೋ ಅವರು ಮಾತ್ರ ಅನುಭಾವ ಮಾಡಲು (ಕೇಳಲು) ಅರ್ಹರು –ಉಳಿದ ಮಾತಿನ ಮಲ್ಲರಲ್ಲವೆಂಬುದೇ ಈ ವಚನದ ತಾತ್ಪರ್ಯ.
ಹಿಂದಿನ ಕಾಲದ ಯುದ್ಧ ವೀರರು ತೋರಿದ ದಿಟ್ಟತನವನ್ನೂ ಶೌರ್ಯವನ್ನೂ ಪರಾಕ್ರಮವನ್ನೂ ಕವಿತೆಕಟ್ಟಿ ಪದಹಾಡಿ ನೃತ್ಯಮಾಡಿ ವರ್ಣಿಸಬಹುದು –ಆದರೆ ತನ್ನ ಊರನ್ನೇ ಶತ್ರುಗಳು ಬಂದು ಮುತ್ತಿದಾಗ ಪ್ರಾಣದ ಹಂಗನ್ನೂ ತೊರೆದು ಅವರ ಮೇಲೆ ಬಿದ್ಧು ಹೋರಾಡುವುದು ಸುಲಭವಲ್ಲ. ಮತ್ತು ಗತಕಾಲದಲ್ಲಿ ಸತಿಹೋದವರ ಪರುಷವ್ರತ (ಸತಿವ್ರತ)ವನ್ನು ಯಾವಳಾದರೂ ಹೊಗಳಬಹುದು –ಆದರೆ ತನ್ನ ಗಂಡನೇ ಸತ್ತಾಗ –ತಾನು ಅಗ್ನಿಗೆ ಆಹುತಿಯಾಗುವುದು ಸುಲಭವಲ್ಲ (ಎಚ್ಚರಿಕೆ ! ಇಂದು ಈ ಸತೀಪದ್ದತಿ ನಿಷಿದ್ಧ.)
ಮುನಿದ ಪ್ರಿಯತಮೆಯು ತನ್ನನ್ನು ಮುಟ್ಟಬೇಡವೆಂದು ಶಿವನ ಮೇಲೆ ಆಣೆಯಿಟ್ಟುದ್ದರಿಂದ –ತಿರುನೀಲಕಂಠ ಕುಶವನು ಯೌವನ ಕಾಲವೆಲ್ಲಾ ಕಳೆದುಹೋಯಿತಾದರೂ ಅವಳನ್ನು ಮುಟ್ಟಲೇ ಇಲ್ಲ.
ಅವನು ಶಿವನಾಣೆಯನ್ನು ಅನುಲ್ಲಂಘನೀಯವೆಂದು ಭಾವಿಸಿದ್ದನು. ಅವನೆ ಆ ನಿಷ್ಠೆಯನ್ನು ಅಸದೃಶವೆಂದು ಯಾರಾದರೂ ಕೊಂಡಾಡಬಹುದು. ಆದರೆ ತಿರುನೀಲಕಂಠನ ಜಿತೇಂದ್ರಿಯತ್ವವನ್ನು ಮೆರೆಯುವುದು ಸುಲಭವಲ್ಲ. ಹಸಿದು ಬಂದವರಿಗೆ ಅನ್ನನೀಡುವ ನೇಮಹಿಡಿದ ಎಳೆಯಾಂಡ ಗುಡಿಮಾರನೆಂಬ ಬಡರೈತ ಶಿವ ಭಕ್ತನೊಬ್ಬನು ದುರ್ಭಿಕ್ಷದ ಅಪರ ರಾತ್ರಿಯಲ್ಲಿ ತನ್ನ ಮನೆಯ ಬಾಗಿಲಿಗೆ ಬಂದು ಅನ್ನ ಎಂದ ಅತಿಥಿಗೆ ತನ್ನ ಹೊಲದಲ್ಲಿ ಬಿತ್ತಿ ಆಗತಾನೇ ಮೊಳಕೆಯೊಡೆಯುತ್ತಿದ್ದ ಕಾಳನ್ನೇ ಆಯ್ದು ತಂದು ಪಕ್ವಮಾಡಿ ಬಡಿಸಿದನು. ಅವನ ದಾಸೋಹವನ್ನು ಮೆಚ್ಚಿ ಯಾರಾದರೂ ಮಾತನಾಡಬಹುದು –ಆದರೆ ಆ ತ್ಯಾಗವನ್ನು ಸ್ವಂತ ಜೀವನದಲ್ಲಿ ಅಳವಡಿಸಿಕೊಳ್ಳುವುದು ಸುಲಭವಲ್ಲ.
ಪ್ರಾತಃಸ್ಮರಣೀಯರಾದ ಆ ವೀರರಲ್ಲಿ ಮಹಾತ್ಮರಲ್ಲಿ ಯಾರೊಬ್ಬರೂ ಸಿಕ್ಕಾಬಟ್ಟೆ ಮಾತನಾಡಿ -ಸಮಯಬಂದಾಗ ತಲೆತಪ್ಪಿಸಿಕೊಂಡು ಹೋದವರಲ್ಲ. ಅಂಥವರ ಕತೆಗಳನ್ನು ಕೇಳಿ ತಮ್ಮಲ್ಲಿರುವ ನೈಜಭಕ್ತಿ ಭಾವವನ್ನು ಇತೋಪ್ಯತಿಶಯವಾಗಿ ಊರ್ಜಿತಗೊಳಿಸಿಕೊಳ್ಳಬೇಕೆಂಬುದೇ ಪುರಾತನರನ್ನು ಸ್ಮರಿಸುತ್ತಿರುವ ಉದ್ದೇಶ -ಹೊಟ್ಟೆಪಾಡಿಗಾಗಿಯಲ್ಲ ; ಪ್ರತಿಷ್ಠೆಗಾಗಿಯಲ್ಲ ಪಾಂಡಿತ್ಯಪ್ರದರ್ಶನಕ್ಕಾಗಿಯಲ್ಲ. ಜನ ತಮ್ಮ ಘನತೆಯ ಉಳಿಮೆಗಾಗಿ ತಮ್ಮ ವಂಶೀಕರನ್ನು ನೆನೆಯುವಂತೆ -ಶಿವಭಕ್ತರಿಗೆ ಈ ಅನುಭಾವ.
ಇದು ಬಹಳ ಉದ್ದವಾದ ವಚನ, ಮೇಲಾಗಿ ಇದರಲ್ಲಿ ಸತೀಪದ್ಧತಿಯನ್ನು ಪತಿವ್ರತೆಯ ಒಂದು ಮೌಲ್ಯವೆಂಬಂತೆ ಪ್ರಶಂಸಿಸಲಾಗಿದೆ. ಆದರೆ ಬಸವಣ್ಣನವರ ಹೆಂಡಿರಾದ ನೀಲಲೋಚನೆಯಮ್ಮನವರು ಲಿಂಗೈಕ್ಯವಾದ ಪ್ರಸಂಗದ ಪ್ರಕಾರ ಆಕೆ ಬಸವಣ್ಣನವರ ಜೊತೆಯಲ್ಲಿ ಸಹಗಮನ ಅಥವಾ ಅನುಗಮನ ಮಾಡಲಿಲ್ಲವೆಂಬುದು ಸ್ಪಷ್ಟವಿದೆ. ಬಸವಣ್ಣನವರು ಹೆಣ್ಣಿಗೆ ಒಬ್ಬನೇ ಗಂಡನೆಂದು ಹೇಳಿರುವರೇ ಹೊರತು ಗಂಡ ಸತ್ತಾಗ ಅವಳು ಸಹಗಮನವನ್ನು ಆಚರಿಸಬೇಕೆಂದು ಮತ್ತೆಲ್ಲಿಯೂ ಹೇಳಿಲ್ಲ. ಈ ಎಲ್ಲ ಕಾರಣದಿಂದ ಈ ವಚನ ಬಸವಣ್ಣನವರ ನಿಜವಚನವಲ್ಲವೆನಿಸುವುದು.
ಸತೀಪದ್ದತಿಯನ್ನು ಕುರಿತಂತೆ ಯಾರದೋ ಮತ್ತೊಂದು ಅಥವಾ ಎರಡು ವಚನಗಳನ್ನು ನೋಡಿರುವ ನೆನಪಿದೆ, ಆದರೆ ಉಲ್ಲೇಖಿಸಲು ಅವೀಗ ನನಗೆ ಲಭ್ಯವಾಗಲಿಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು